Press "Enter" to skip to content

Posts published in “ಸುದ್ದಿ ಸಮಾಚಾರ”

ಎಲ್ಲೆಲ್ಲಿ ಏನೇನು

"ರಮ್ಯ"ದವರ ಧ್ವನಿಸುರುಳಿ-ಸಿಡಿ. ಬಿಡುಗಡೆ

ಬೆಂಗಳೂರು, ಜನವರಿ ೯, ೨೦೦೬: ರಮ್ಯ ಕಲ್ಚರಲ್ ಅಕಾಡೆಮಿ (ರಿ) ಬೆಂಗಳೂರು ಇವರು ಹೊರತಂದಿರುವ "ತರಂಗ ಲೀಲೆ" ಭಾವಗೀತೆಗಳ ಧ್ವನಿಸುರುಳಿ ಮತ್ತು ಸಿ.ಡಿ.ಗಳ ಬಿಡುಗಡೆ ನಗರದ ಸುಚಿತ್ರ ಫಿಲ್ಮ್ ಸೊಸೈಟಿಯ ಆವರಣದಲ್ಲಿರುವ ಪೀರ್ ಬಯಲುರಂಗ ಮಂದಿರದಲ್ಲಿ ಜರುಗಿತು. ಧ್ವನಿಸುರುಳಿ ಮತ್ತು ಸಿಡಿಗಳನ್ನು ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಮಾ. ಹಿರಣ್ಣಯ್ಯ, ಸಿ.ಡಿ.-ಧ್ವನಿಸುರುಳಿಯಲ್ಲಿ ಅಳವಡಿಸಿರುವ ಹಾಡುಗಳನ್ನು ರಚಿಸಿದ ಕವಿ ಡಾ. ಲಕ್ಷ್ಮೀನಾರಾಯಣ ಭಟ್ಟ, ಮಿಮಿಕ್ರಿ ದಯಾನಂದ, ರಮ್ಯ ಅಕಾಡೆಮಿಯ ಬಾಲಿ ಉಪಸ್ಥಿತರಿದ್ದರು.

ನವಕರ್ನಾಟಕ ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು, ಜನವರಿ ೦೧, ೨೦೦೬ : ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ೧೮ ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ಇಂದು ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ನೆರವೇರಿತು. ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಪ್ರಕಟಿಸುತ್ತಿರುವ ಹೊಸತು ಪತ್ರಿಕೆಯಲ್ಲಿ ಪ್ರಕಟವಾದ ಪ್ರಾತಿನಿಧಿಕ ಲೇಖನಗಳನ್ನು ಆಯ್ದು ಈ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಪುಸ್ತಗಳಿಗೆ ಹೊಸತು ವಾಚಿಕೆ ಎಂದು ಹೆಸರಿಸಲಾಗಿದೆ. 'ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ', 'ಬಾನಿಗೊಂದು ಕೈಪಿಡಿ', 'ಪ್ರಚಲಿತ ವಿದ್ಯಮಾನ', 'ವೈದ್ಯಲೋಚನ', 'ಇದು ನಮ್ಮ ಕರ್ನಾಟಕ' -ಇತ್ಯಾದಿ ಶೀರ್ಷಿಕೆಗಳಲ್ಲಿ ಈ ಪುಸ್ತಕಗಳು ಸಾಹಿತ್ಯಾಸಕ್ತರಿಗೆ ಲಭ್ಯವಿವೆ. ಹೊಸತು ಪತ್ರಿಕೆಯ ಸಂಪಾದಕ ಡಾ. ಜಿ. ರಾಮಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿ ಹೊಸತು ಪತ್ರಿಕೆಯ ಹೊಸತನ ಏನು ಎಂಬುದನ್ನು ವಿವರಿಸಿದರು. ಹಲವಾರು ಪತ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಹೊಸತು ಯಾವ ರೀತಿಯಲ್ಲಿ ತನ್ನದೇ ವಿಚಾರಧಾರೆಗೆ ಖ್ಯಾತವಾಗಿದೆ ಎಂದು ಅವರು ವಿವರಿಸಿದರು. ಬರಗೂರು ರಾಮಚಂದ್ರಪ್ಪ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಭಾಷಣ ಮಾಡಿದರು. ನಮಗೆ ಅಕ್ಷರಗಳ ಆತ್ಮವಿಶ್ವಾಸ ಬೇಕು ಆದರೆ ಅಕ್ಷರದ ಅಹಂಕಾರ ಇರಬಾರದು ಎಂದು ಅವರು ನುಡಿದರು. ಸಂಪಾದಕರುಗಳ ಪರವಾಗಿ ಚಂದ್ರಶೇಖರ ನುಂಗಲಿ ಮತ್ತು ಡಾ. ಬಿ. ಎಸ್. ಶೈಲಜ ಮಾತನಾಡಿದರು. ಡಾ. ಚೆನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು.

ವಿಪ್ರೊ ಕಂಪೆನಿಯಲ್ಲಿ ರಾಜ್ಯೋತ್ಸವ

ವಿಪ್ರೊ ಕಂಪೆನಿಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ನವಂಬರ್ ೩೦, ೨೦೦೫ ರಂದು ಎಲೆಕ್ಟ್ರೋನಿಕ್ ಸಿಟಿಯಲ್ಲಿ ಇರುವ ವಿಪ್ರೊ ಕಚೇರಿಯಲ್ಲಿ "ವಿಸ್ಮಯ" ಎಂಬ "ನಾಡು ನುಡಿ ಕಲೆ ಭಾಷೆ ಸಾಹಿತ್ಯ ಸಂಸ್ಕೃತಿ ಸಂಗೀತಗಳ ವೈವಿಧ್ಯಮಯ ರಸಸಂಜೆ" ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು ೨೫೦೦ಕ್ಕು ಹೆಚ್ಚು ಕನ್ನಡಾಭಿಮಾನಿಗಳು ಮತ್ತು ಕನ್ನಡೇತರರು ಈ ಕಾರ್ಯಕ್ರಮದ ಆನಂದವನ್ನು ಸವಿದರು.

ಗುರು ಸೇವಾ ಸಮಿತಿ ಬಹ್ರೈನ್ ದ್ವಿತೀಯ ವಾರ್ಷಿಕೋತ್ಸವ

ಬಹ್ರೈನ್: "ಗುರು ಸೇವಾ ಸಮಿತಿ"ಯ ಎರಡನೆಯ ವಾರ್ಷಿಕೋತ್ಸವು "ರಮದ ಪ್ಯಾಲೆಸ್" ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಬಹ್ರೈನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉಧ್ಘಾಟಿಸಿ, ಸಮಿತಿಯು ಹೊರ ತಂದ ಪ್ರಥಮ ಸ್ಮರಣ ಸಂಚಿಕೆ "ತುಡಾರ್ ೨೦೦೫" ಇದರ ಬಿಡುಗಡೆಗೊಳಿಸಿದರು. ಅವರು ತಮ್ಮ ಭಾಷಣದಲ್ಲಿ ಸಮಿತಿಯು ಕಳೆದೆರಡು ವರುಷಗಳಲ್ಲಿ ನಡೆಸಿದ ಸಾಧನೆ ಮತ್ತು ಚಟುವಟಿಕೆಗಳನ್ನು ಕೊಂಡಾಡಿದರು. ವಿಶೇಷ ಅತಿಥಿಗಳಾಗಿ ಆಹ್ವಾನಿತರಾದ ಖ್ಯಾತ ನಾಟಕಕಾರ, ನಿರ್ದೇಶಕ, ಶ್ರೀ ಸದಾನಂದ ಸುವರ್ಣ ಆವರು "ಶ್ರೀ ನಾರಾಯಣ ಗುರು" ಸಾಕ್ಷ್ಯ ಚಿತ್ರದ ವಿಡಿಯೊ ಕ್ಯಾಸೆಟ್ ಬಿಡುಗಡೆ ಮಾಡಿದರು. ಶ್ರೀ ಸದಾನಂದ ಸುವರ್ಣ ಅವರನ್ನು ಭಾರತದ ರಾಯಭಾರಿ ಶ್ರೀ ಶೆಟ್ಟಿಯವರು ಹಾಗು ಇನ್ನೋರ್ವ ಅತಿಥಿ ಕರ್ನಾಟಕದ ಖ್ಯಾತ ಸಾಂಸ್ಕೃತಿಕ ಮತ್ತು ಸಂಗೀತ ಕಲಾವಿದ ಶ್ರೀ ತೋನ್ಸೆ ಫುಶ್ಕಲ್ ಕುಮಾರ್ ಅವರನ್ನು ಬೆಹರಿನ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿಯ ಮುಖ್ಯಸ್ಥರಾದ ಶ್ರೀ ಎನ್. ಓ. ರಾಜನ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿಗಳು ಸಮಿತಿಯು ನಡೆಸುತ್ತಿರುವ ಕಾರ್ಯವನ್ನು ಪ್ರಶಂಶಿಸಿದರು. ಶ್ರೀ ಸುವರ್ಣ ಹಾಗು ಶ್ರೀ ಪುಶ್ಕಲ್ ಅವರನ್ನು ಶ್ರೀಮತಿ ಸುನೀತಾ ಜಯಕುಮಾರ್ ಮತ್ತು ಶ್ರೀಮತಿ ಯಶೋದ ಎಸ್. ಪೂಜಾರಿ ಅನುಕ್ರಮವಾಗಿ ಸಭೆಗೆ ಪರಿಚಯಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಿಶ್ವನಾಥ ಅಮಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಸ್ವಾಗತ ಭಾಷಣ ಮಾಡಿ, ಸಮಿತಿಯ ಏಳಿಗೆಗಾಗಿ ದುಡಿದ ಪ್ರತಿಯೊಬ್ಬ ಸದಸ್ಯರಿಗೂ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾರಂಭದ ಯಶಸ್ಸಿಗೆ ಪ್ರಾಯೋಜಕರಾಗಿ, ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಸಮಿತಿಯ ಪರವಾಗಿ ವಂದನೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಶ್ರೀ ಕೃಷ್ಣ ಸಿ. ಸುವರ್ಣ ಮುಂಬಯಿ, ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಎಸ್. ಸಾಲ್ಯನ್ ಕಲ್ಲಡ್ಕ ಉಪಸ್ಥಿತರಿದ್ದರು.

ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಧಾರವಾಡದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಸ್ಥಾಪಿಸಿರುವ ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ೨೦೦೫ನೇ ಸಾಲಿಗಾಗಿ ಶಿರಸಿಯ ಸುಬ್ರಹ್ಮಣ್ಯ ಎಮ್. ಹೆಗಡೆ ಹಾಗೂ ಬೆಂಗಳೂರಿನ ವಿ. ಗಾಯತ್ರಿ ಆಯ್ಕೆಯಾಗಿದ್ದಾರೆ.

ಏಡಿಯಾ ಸೊಲ್ಯೂಶನ್ಸ್ ಕಂಪೆನಿಯಲ್ಲಿ ರಾಜ್ಯೋತ್ಸವ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಏಡಿಯ ಸೊಲೂಶನ್ಸ್ ಎಂಬ ಹೆಸರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ನವಂಬರ್ ೨೨, ೨೦೦೫ ರಂದು ರಾಜ್ಯೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಏನಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕೆಲಸ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಗ್ಗದ ಭಟ್ಟರೆಂದೇ ಖ್ಯಾತಿ ಪಡೆದ ಡಾ. ಲಕ್ಷ್ಮೀನಾರಾಯಣ ಭಟ್ಟರು, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕಾರದ ಶ್ರೀ ದು. ಗು. ಲಕ್ಷ್ಮಣ ಮತ್ತು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ವಿಶ್ವ ಕನ್ನಡದ ಸಂಪಾದಕರಾದ ಡಾ. ಯು. ಬಿ. ಪವನಜರು ಭಾಗವಹಿಸಿದ್ದರು.

ವಿಶ್ವ ಕನ್ನಡ ಸಂಪಾದಕರಿಗೆ ಸನ್ಮಾನ

ಕನ್ನಡದ ಪ್ರಪ್ರಥಮ ಕಾಗದರಹಿತ ಪತ್ರಿಕೆ "ವಿಶ್ವ ಕನ್ನಡ"ದ ಸಂಪಾದಕರಾದ ಡಾ. ಯು. ಬಿ. ಪವನಜ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ನವಂಬರ್ ೨೧, ೨೦೦೫ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಾಜಿನಗರ ಹಬ್ಬದಲ್ಲಿ ಶಾಸಕ ನೆ. ಲ. ನರೇಂದ್ರಬಾಬು ಅವರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ನಿಡುಮಾಮಿಡಿ ಸ್ವಾಮೀಜಿಯವರು ಪವನಜರಿಗೆ ಸನ್ಮಾನಿಸಿದರು.

ರಾಜಾಜಿನಗರ ಹಬ್ಬ – ೨೦೦೫

ರಾಜಾಜಿನಗರದಲ್ಲಿ ಕಳೆದ ಬಾರಿ ಜನಮನ್ನಣೆಗೆ ಪಾತ್ರವಾದ ‘ರಾಜಾಜಿನಗರ ಹಬ್ಬ’ ಬರಿ ಕನ್ನಡ ರಾಜೋತ್ಸವವೆಂಬ ಒಣ ಆಚರಣೆಗೆ ಮಾತ್ರ ಮೀಸಲಾಗಿರದೆ ಸಾಂಸ್ಕೃತಿಕವಾಗಿ, ಗ್ರಾಮೀಣ ಸೊಗಡನ್ನು ಜನಮನಗಳಿಗೆ ತಲುಪಿಸುವ ಸಲುವಾಗಿ ಈ ವಾರದಲ್ಲಿ ಅಂದರೆ ದಿನಾಂಕ ೧೯-೧೧-೨೦೦೫ ರಿಂದ ೨೫-೧೧-೨೦೦೫ರ ವರೆಗೆ ಜಾನಪದ ಲೋಕದ ದಿಗ್ಗಜ ಶ್ರೀ ಎಚ್ .ಎಲ್ . ನಾಗೇಗೌಡ ರ ಸ್ಮರಣಾರ್ಥ ‘ಜಾನಪದ ಜಾತ್ರೆ’ಯನ್ನು ಶಾಸಕರಾದ ಅದಕ್ಕಿಂತ ಹೆಚ್ಚಾಗಿ ರಾಜಾಜಿನಗರದ ಹೆಮ್ಮೆಯ ಮಗನಾದ ನೆ.ಲ. ನರೇಂದ್ರಬಾಬು ರವರ ನೇತೃತ್ವದಲ್ಲಿ ಹಮ್ಮಿಕೋಳ್ಳಲಾಗಿದೆ.

ಅನನ್ಯ ದಿನದರ್ಶಿಕೆ ಲೋಕಾರ್ಪಣೆ

ಬೆಂಗಳೂರು, ನವಂಬರ್ ೨೦, ೨೦೦೫: [http://www.ananyaculture.org/|ಅನನ್ಯ ಸಾಂಸ್ಕೃತಿಕ] ಸಂಸ್ಥೆಯವರು ಹೊರತಂದಿರುವ [http://vishvakannada.com/node/59|ಹನ್ನೆರಡನೆಯ ದಿನದರ್ಶಿಕೆ] ಅನನ್ಯ ಕ್ಯಾಲೆಂಡರ್ ೨೦೦೬ನ್ನು ಎಸ್. ರಾಜಾರಾಂ ಅವರು ಲೋಕಾರ್ಪಣೆ ಮಾಡಿದರು. ಅವರು ಮಾತನಾಡುತ್ತಾ 'ಭಗವಾನ್ ಶ್ರೀಕೃಷ್ಣನು ಅಕ್ಷರಾಣಾಂ ಅಕರೋಸ್ಮಿ ಎಂದಿದ್ದಾನೆ. ಅನನ್ಯದಲ್ಲಿ "ಅ" ಅಕ್ಷರವಿದೆ, ಅಥವಾ "ಅ" ಅಕ್ಷರದಿಂದ ಅದು ಪ್ರಾರಂಭವಾಗುತ್ತದೆ. ಆದುದರಿಂದ ಅದು ಭಗವಂತನಿಗೆ ಪ್ರಿಯ. ಹಾಗೆಯೆ ನಮಗೂ ನಿಮಗೂ ಪ್ರಿಯ' ಎಂದರು. ಡಾ. ಟಿ. ಎಸ್. ಸತ್ಯವತಿಯವರ ನಿರ್ದೇಶನದಲ್ಲಿ ಕೊಳಲುವಾದನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ರಾಘವೇಂದ್ರ ಅವರು ಎಲ್ಲರನ್ನು ಸ್ವಾಗತಿಸಿದರು. 'ವಿಜ್ಞಾನದ ಹಲವು ವಿಭಾಗಗಳು ಒಂದಕ್ಕೊಂದು ಜೊತೆ ಸೇರುತ್ತಿವೆ. ಜೊತೆ ಸೇರಿ ಕೆಲಸ ಮಾಡುತ್ತಿವೆ. ಇದರಿಂದ ವಿಜ್ಞಾನ ಮುಂದುವರಿಯುತ್ತಿದೆ. ಆದರೆ ಕಲೆಯಲ್ಲಿರುವ ಹಲವು ಪ್ರಕಾರಗಳು ಯಾವಾಗ ಜೊತೆ ಸೇರಿ ಮುಂದುವರಿಯುವುದು?' ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು. ಈ ಸಲದ ಕ್ಯಾಲೆಂಡರ್‌ಗೆ ಬಳಸಿದ ಛಾಯಾಚಿತ್ರಗಳನ್ನು ತೆಗೆದ ರಾಘವೇಂದ್ರ ರಾವ್ ಅವರು ತಮ್ಮ ಅನುಭವಗಳನ್ನು ಹೇಳಿದರು. ಬಿ. ಭಾನುಮತಿಯವರ ನಿರ್ದೇಶನದ ಭರತಾಂಜಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸಿ ಆರ್ ಚಂದ್ರಶೇಖರ್ ಜೊತೆ ಮನೆಯಂಗಳದಲ್ಲಿ ಮಾತುಕತೆ

ಬೆಂಗಳೂರು,ನವಂಬರ್ ೧೯, ೨೦೦೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರತಿ ತಿಂಗಳು ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಭಾಗವಹಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಯಿಂದ ಉತ್ತರಿಸಿದರು. ಅವರು ಇದು ತನಕ ಹಲವು ಕಡೆ ಹೇಳಿದ ಮತ್ತು ತಮ್ಮ ಲೇಖನಗಳಲ್ಲಿ ಬರೆದ ವಿಷಯಗಳನ್ನೇ ಮತ್ತೊಮ್ಮೆ ವಿಶದೀಕರಿಸಿದರು. ಅವರ ಎಲ್ಲ ಲೇಖನಗಳನ್ನು ಓದಿದವರಿಗೆ ಹೊಸದೇನೂ ಸಿಕ್ಕಿರಲಿಕ್ಕಿಲ್ಲ. ಆದರೆ ಆಸಕ್ತಿಯಿಂದ ಭಾಗವಹಿಸಿದ ಜನರಿಗೆ ತಮ್ಮ ಹಲವು ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿರಬಹುದು. ಕೆಲವು ಮಾತುಗಳು-