ಸಿ ಆರ್ ಚಂದ್ರಶೇಖರ್ ಜೊತೆ ಮನೆಯಂಗಳದಲ್ಲಿ ಮಾತುಕತೆ

Saturday, November 19th, 2005

ಬೆಂಗಳೂರು,ನವಂಬರ್ ೧೯, ೨೦೦೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರತಿ ತಿಂಗಳು ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಭಾಗವಹಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಯಿಂದ ಉತ್ತರಿಸಿದರು. ಅವರು ಇದು ತನಕ ಹಲವು ಕಡೆ ಹೇಳಿದ ಮತ್ತು ತಮ್ಮ ಲೇಖನಗಳಲ್ಲಿ ಬರೆದ ವಿಷಯಗಳನ್ನೇ ಮತ್ತೊಮ್ಮೆ ವಿಶದೀಕರಿಸಿದರು. ಅವರ ಎಲ್ಲ ಲೇಖನಗಳನ್ನು ಓದಿದವರಿಗೆ ಹೊಸದೇನೂ ಸಿಕ್ಕಿರಲಿಕ್ಕಿಲ್ಲ. ಆದರೆ ಆಸಕ್ತಿಯಿಂದ ಭಾಗವಹಿಸಿದ ಜನರಿಗೆ ತಮ್ಮ ಹಲವು ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿರಬಹುದು. ಕೆಲವು ಮಾತುಗಳು-

ಅನನ್ಯ ದಿನದರ್ಶಿಕೆ ೨೦೦೬ ಲೋಕಾರ್ಪಣೆ

Wednesday, November 16th, 2005

ಅನನ್ಯವು ಹನ್ನೊಂದು ವರ್ಷಗಳಿಂದ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಾಧಾರಿತ ಕ್ಯಾಲೆಂಡರನ್ನು ಹೊರತರುತ್ತಿದೆ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡದ ಖ್ಯಾತ ಕವಿಗಳ ಕವನಗಳಿಗೆ ಎಸ್.ಜಿ. ವಾಸುದೇವ್ರವರ ರೇಖಾ ಚಿತ್ರಗಳು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹೆಸರಾಂತ ಕಲಾವಿದರು, ಸ್ವರಮಾಲಾ, ರಾಗಮಾಲಾ ಚಿತ್ರಗಳು, ಯಕ್ಷಗಾನ ಕಲಾವಿದರ ಚಿತ್ರಗಳು, ನೃತ್ಯ ಕ್ಷೇತ್ರದ ಪ್ರಬುದ್ಧರ ಮಾಹಿತಿಯೊಂದಿಗಿನ ಭಾವ ಚಿತ್ರಗಳು, ಹೀಗೆ ಹತ್ತು ಹಲವು ವಿಷಯಗಳನ್ನು ಆಯ್ದು ಅವುಗಳ ಬಗ್ಗೆ ವಿವರಣೆಯೊಂದಿಗೆ, ದೃಶ್ಯ ರೂಪದಲ್ಲಿಯೂ ಆಸಕ್ತರನ್ನು ತಲುಪಿಸುವ ಪ್ರಯತ್ನ ನಡೆದಿದೆ. ಕಲೆ ಹಾಗೂ ಕಲೆಯ ಸಾಂಸ್ಕೃತಿಕ ರಾಯಭಾರಿಗಳನ್ನು ಪರಿಚಯಿಸುವುದನ್ನೂ ಈ ಮೂಲಕ ಅನನ್ಯ ಮಾಡುತ್ತಿದೆ.
2006ರ ಸಾಲಿಗೆ ಭರತನಾಟ್ಯದ ‘ಮುದ್ರೆ’ ಗಳನ್ನು ಒಳಗೊಂಡಿರುವ ಕಪ್ಪು-ಬಿಳುಪಿನ 16 ಪುಟದ ಕ್ಯಾಲೆಂಡರನ್ನು ಹೊರತರುತ್ತಿದ್ದು, ಇದಕ್ಕೆ ಮೂಲ ಸಾಮಗ್ರಿಯಾಗಿ ಹಿರಿಯ ಛಾಯಾಚಿತ್ರ-ಪತ್ರಕರ್ತರಾದ ಕೆ.ಎನ್. ರಾಘವೇಂದ್ರರಾಯರು ಚೆನ್ನೈನ ಕಲಾಕ್ಷೇತ್ರದಲ್ಲಿ ಸೆರೆಹಿಡಿದ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಲೋಕಾರ್ಪಣೆಯು ನವೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಕಲಾಕ್ಷೇತ್ರದ ನಿವೃತ್ತ ನಿರ್ದೇಶಕರಾದ ಶ್ರೀ ರಾಜಾರಾಂ ರವರು ಮುಖ್ಯ ಅತಿಥಿಗಳಾಗಿದ್ದು ಹಿರಿಯ ನೃತ್ಯಗುರು ಭಾನುಮತಿಯವರು ಪ್ರಥಮ ಪ್ರತಿಯನ್ನು ಸ್ವೀಕರಿಸುವರು. ಅನನ್ಯದ ಅಧ್ಯಕ್ಷರಾದ ಡಾ. ಯು. ಆರ್. ಅನಂತ ಮೂರ್ತಿಗಳು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.
ಇದೇ ಸಂದರ್ಭದಲ್ಲಿ ಡಾ. ಟಿ. ಎಸ್. ಸತ್ಯವತಿಯವರ ಮಾರ್ಗದರ್ಶನದಲ್ಲಿ ವೃಂದ ವೇಣುವಾದನ ಹಾಗೂ ಗುರು ಭಾನುಮತಿಯವರ ನಿರ್ದೇಶನದ ‘ಭರತಾಂಜಲಿ’ ಮತ್ತು ಶ್ರೀಮತಿ ಅನುರಾಧಾ ವಿಕ್ರಾಂತ್ ರವರಿಂದ ನೃತ್ಯ ಕಾರ್ಯಕ್ರಮವಿದೆ. ಕ್ಯಾಲೆಂಡರ್ನ ಮಾರಾಟದಿಂದ ಬರುವ ಸಂಪೂರ್ಣ ಹಣವನ್ನು ‘ಅನನ್ಯ ಸಂಗ್ರಹ’ದ ಅಭಿವೃದ್ಧಿಗೆ ಉಪಯೋಗಿಸಲಾಗುವುದು. ಎಲ್ಲಾ ಕಲಾರಸಿಕರಿಗೂ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ.


ಅನನ್ಯ ದಿನದರ್ಶಿಕೆ – ೨೦೦೪