Press "Enter" to skip to content

Posts published in “ಬ್ಲಾಗ್”

Blogs by Dr Pavanaja U B, editor of Vishva Kannada

ಮೋದಿಯ ಜನಪ್ರಿಯತೆ

ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು…

ತೆರೆದ ಪುಸ್ತಕ ಪರೀಕ್ಷೆ (Open book exam)

ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು…

ಪವನಜ – ಈ ಹೆಸರಿನಲ್ಲೇನಿದೆ?

ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ…

ಭೈರಪ್ಪನವರ ಯಾನ

ಭೈರಪ್ಪನವರ “ಯಾನ” ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ…

ಪಿತ್ತ ಸಚಿವ!?

ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)

ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ

ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ -

ಕನ್ನಡ ಬ್ಲಾಗೋತ್ತಮರ ಸಭೆ

ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.

ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್

- ಡಾ. ಯು. ಬಿ. ಪವನಜ

ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.

ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು

ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.

ಮೈಕ್ರೋಸಾಫ್ಟ್ ಲೇಸರ್ ಮೌಸ್ – ಲಾಪ್‌ಟಾಪ್‌ಗೋಸ್ಕರ

- ಡಾ. ಯು. ಬಿ. ಪವನಜ

ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು.