India has made a mark in world software scene. This is largely due to the fact that Indians are good at English. Expatriate Indians working in USA also have made mark in the Information and Communication Technology (ICT) arena. But the true Indian lives in the villages of India. These people are totally cut-off from the benefits of ICT. This is due to the fact that computers still speak English. Only 5% of the population in India are comfortable with English. If we have to take the benefits of ICT to rural India, computers should use Indian languages (ILs). Kannada being an IL, the situation is not different. Karnataka Govt has taken many initiatives for taking ICT for common man.
Taking ICT for common man has to be done at multiple levels. First step is to implement our languages in computers. Recently lot of effort is being devoted to create applications in Kannada and to localize the operating systems into Kannada. Govt of Karnataka has taken the initiative to standardize the implementation of Kannada in computers. It has also released a free software, which has been developed as per these standards. Next step is to create many application software in Kannada. These include database applications (revenue, banking, salary packages, etc.), web-sites and web-based based applications, documentation, e-books, etc. Bhumi software is the best example here.
Another important area where ICT can make a difference is in the field of education. Use of ICT in education in Kannada context involves three categories. They are: –
1. Teaching about computers in Kannada.
2. Teaching science, maths, languages, etc. using computers.
3. Teaching the programming logic in Kannada and thereby developing programming skills.
Item numbers 1 and 2 are taken care by Mahiti Sindhu program. Item number 3 can be implemented by using Kannada version of LOGO program. All over the world people use LOGO to teach programming logic to kids (please read the separate document provided to know the educational benefits of LOGO). LOGO stands for Logic Oriented and Graphic Oriented. LOGO has been localized into many languages of the world (German, French, Italian, Spanish, Japanese, etc.). English version of LOGO is already being taught in most schools. Kannada medium students will be benefited by Kannada version of LOGO. Students will develop the thinking and anlysing powers in Kannada as the program uses the keywords in Kannada. The user interface, help and error messages are also in Kannada. Thus the Kannada medium students need not think in Kannada, translate it into English mentally, and then write the program. All thinking and writing happens in Kannada itself. Development of logic at young ages is not hampered by the lack of understanding of English language.
Development of Kannada version of LOGO has been completed. This is the first IL version of LOGO. Kannada Logo project is part of the action plan announced by Karnataka Govt for using Kannada on computers.
Click here to download Kannada Logo (1 MB ZIP file)
A startup guide is available on using Kannada Logo. Click here to get it (416 KB PDF file)
Please send the feedbacks to U B Pavanaja – pavanaja AT vishvakannada DOT com.
System requirements
1. Pentium-III or above PC with min 500 MHz speed, 128 MB RAM, 5MB Hard disk space for installing the application.
2. Windows 98 or above
3. Nudi font (Fontname: Nudi Akshara, Filename: N-AKSHARA.TTF). Nudi Akshara font can be downloaded from here. Put this file in WindowsFonts folder.
Some links:
1. Report in Financial Express about Kannada Logo.
2. Report in Vijay Times about Kannada Logo.
3. Article about Kannada Logo in Prajavani Kannada Daily.
4. Letters by readers of Prajavani appreciating Kannada Logo.
5. MSW Logo.
Acknowledgements: I would like to acknowledge the help rendered by A Sathyanarayana in translations and N K Smitha in programming.
Kannada Logo has been blessed with Manthan Award 2006
ಕನ್ನಡ ಲೋಗೋ
ಕರ್ನಾಟಕ ರಾಜ್ಯವು ದೇಶದ ಮಾಹಿತಿ ತಂತ್ರಜ್ಞಾನ ನಕ್ಷೆಯಲ್ಲಿ ಮುಂಚೂಣಿಯಲ್ಲಿದೆ. ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಲೇ ನಮ್ಮ ಕನ್ನಡ ಭಾಷೆಯನ್ನು ಗಣಕಗಳಲ್ಲಿ ಅಳವಡಿಸುವ ಕಾರ್ಯವನ್ನೂ ಕರ್ನಾಟಕ ಸರಕಾರವು ಮಾಡಿಕೊಂಡು ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಅಳವಡಿಕೆ ಮತ್ತು ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಹಲವು ವಿಭಾಗಗಳಲ್ಲಿ ನಡೆಯಬೇಕಾಗಿದೆ, ನಡೆಯುತ್ತಿದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಒಂದು ಬಹುಮುಖ್ಯ ವಿಭಾಗ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಕಾರ್ಯಪ್ರವೃತ್ತವಾಗಿದ್ದು ಈಗಾಗಲೇ ನುಡಿ ಎಂಬ ಗಣಕ ತಂತ್ರಾಂಶವನ್ನು ಜನತೆಗೆ ಉಚಿತವಾಗಿ ನೀಡುತ್ತಿದೆ.
ಗಣಕಗಳಲ್ಲಿ ಕನ್ನಡದ ಆನ್ವಯಿಕ ತಂತ್ರಾಂಶಗಳ ತಯಾರಿ ಮತ್ತು ಕನ್ನಡದ ಬಳಕೆ ಇನ್ನೊಂದು ವಿಭಾಗ. ಈ ವಿಭಾಗದಲ್ಲಿ ಕನ್ನಡದ ದತ್ತಸಂಸ್ಕರಣೆಯ ತಂತ್ರಾಂಶಗಳು (data processing software), ಪದ ಸಂಸ್ಕರಣೆ (word-processing), ಲೆಕ್ಕ ವ್ಯವಹಾರ (accounting), ಅಂತರಜಾಲ ತಾಣಗಳು (web-sites), ವಿ-ಅಂಚೆ (email), ಶೈಕ್ಷಣಿಕ, ಇತ್ಯಾದಿಗಳು ಸೇರಿವೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ ಬಳಕೆ ಇನ್ನೊಂದು ಬಹುಮುಖ್ಯ ವಿಭಾಗ. ರಾಜ್ಯ ಸರಕಾರವು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಕಲಿಸುತ್ತಿದೆ. ಈ ಶಾಲೆಗಳು ರಾಜ್ಯಾದ್ಯಂತ ಚದುರಿಹೋಗಿರುವ ಸರಕಾರಿ ಶಾಲೆಗಳು. ಇವುಗಳು ಕನ್ನಡ ಮಾಧ್ಯಮದ ಶಾಲೆಗಳು. ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಕಲಿಸಲು ಇಂಗ್ಲಿಷ್ ಭಾಷೆಯಲ್ಲಿ ಬೇಕಾದಷ್ಟು ತಂತ್ರಾಂಶಗಳು ಲಭ್ಯವಿವೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಶಿಕ್ಷಣದ ನೆಪದಲ್ಲಿ ಇಂಗ್ಲೀಷನ್ನು ಹಿಂದಿನ ಬಾಗಿಲಿನಿಂದ ತರಬಾರದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷಿನಲ್ಲಿ ಪಾಠ ಹೇಳಿದರೆ ಅವರಿಗೆ ಅರ್ಥವಾಗುವ ಸಾಧ್ಯತೆಗಳೂ ಕಡಿಮೆ. ಇದನ್ನೆಲ್ಲಾ ಯೋಚಿಸಿಯೇ ಕರ್ನಾಟಕ ಸರಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಲು ತೀರ್ಮಾನಿಸಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲೂ ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು. ಇವೆರಡನ್ನು ಮಾಹಿತಿ ಸಿಂಧು ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ. ಗಣಕ ಕ್ರಮವಿಧಿ (programming language) ತಯಾರಿಯ ಮೂಲ ಸಿದ್ಧಾಂತ (ತರ್ಕ, programming logic) ವನ್ನು ಕನ್ನಡ ಭಾಷೆಯಲ್ಲೇ ಕಲಿಸುವುದು ಮೂರನೆಯದು.
ಪ್ರಪಂಚಾದ್ಯಂತ ಶಾಲೆಗಳಲ್ಲಿ ೫ ರಿಂದ ೮ ನೇ ತರಗತಿಳಿಗೆ ಕಲಿಸುವುದು ಲೋಗೋ (LOGO) ಎಂಬ ಮಕ್ಕಳಿಗಾಗಿಯೇ ಸಿದ್ಧವಾಗಿರುವ ಗಣಕ ಕ್ರಮವಿಧಿ ತಯಾರಿಯ ತಂತ್ರಾಂಶ/ಭಾಷೆ (programming language for children). ಇದನ್ನು ಉಪಯೋಗಿಸಿ ಮಕ್ಕಳು ಗಣಕದಲ್ಲಿ ಕ್ರಮವಿಧಿ ತಯಾರಿಯ ಮುಖ್ಯ ಅಂಶಗಳನ್ನು ಕಲಿಯುತ್ತಾರೆ. ಹಾಗೆಂದು ಲೋಗೋವನ್ನು ಮಕ್ಕಳು ಮಾತ್ರ ಉಪಯೋಗಿಸಬೇಕಾಗಿಲ್ಲ. ಇದರ ಕೆಲವು ಮುಖ್ಯ ಸಾಧಕಗಳೆಂದರೆ:-
೧. ಸುಲಲಿತ -ಕಲಿಯಲು ಮತ್ತು ಉಪಯೋಗಿಸಲು ಬಹು ಸುಲಭ.
೨. ಲೀಲಾಜಾಲ -ಚಿತ್ರಗಳನ್ನು ಮಾಡುವ ಆದೇಶ ಕೊಡುವ ಮತ್ತು ಅದನ್ನು ಗಣಕವು ಪಾಲಿಸುವುದನ್ನು ಗಮನಿಸುವ ಮೂಲಕ ಮಕ್ಕಳಿಗೆ ಉತ್ಸಾಹಕರ.
೩. ಪ್ರತಿಸ್ಪಂದನಾತ್ಮಕ (interactive) -ಚಿಕ್ಕಪುಟ್ಟ ಸಂದೇಶಗಳ ಮೂಲಕ ತಪ್ಪುಗಳನ್ನು ತಿದ್ದಿಕೊಂಡು ಪ್ರಗತಿ ಸಾಧನೆ.
೪. ಹೊಂದಿಕೊಳ್ಳುವ -ಶಾಲಾ ಬಾಲಕ ಬಾಲಕಿಯರಿಂದ ಹಿಡಿದು ಪೂರ್ಣಪ್ರಮಾಣದ ತಂತ್ರಾಶ ತಯಾರಕರ ತನಕದ ಸವಲತ್ತುಗಳು.
೫. ಶಕ್ತಿಯುತ -ನಿಜಜೀವನದಲ್ಲಿ ಉಪಯೋಗಿಯಾಗಬಲ್ಲ ತಂತ್ರಾಂಶಗಳನ್ನು ಕೂಡ ಲೋಗೋ ಉಪಯೋಗಿಸಿ ತಯಾರಿಸಬಹುದು.
೬೦ರ ದಶಕದಿಂದಲೇ ಪ್ರಪಂಚಾದ್ಯಂತ ಉಪಯೋಗಲ್ಲಿರುವ ಲೋಗೋ ಮೂಲ ಇಂಗ್ಲೀಷ್ ಭಾಷೆಯಲ್ಲಿದೆ. ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್, ಇತ್ಯಾದಿ ಭಾಷೆಗಳಲ್ಲಿ ಲೋಗೋ ಲಭ್ಯವಿದೆ. ಭಾರತದ ಶಾಲೆಗಳಲ್ಲೂ ಇಂಗ್ಲಿಷ್ ಭಾಷೆಯ ಲೋಗೋವನ್ನು ಕಲಿಸುತ್ತಿದ್ದಾರೆ.
ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲು ಕನ್ನಡ ಭಾಷೆಯಲ್ಲಿ ಲೋಗೋವನ್ನು ಇದೀಗ ಸಿದ್ಧಪಡಿಸಲಾಗಿದೆ.
ಲೋಗೋದಲ್ಲಿ ಕ್ರಮವಿಧಿ ರಚಿಸುವ ಮೂಲಕ ಮಕ್ಕಳು ಮತ್ತು ಗಣಕ ತಂತ್ರಾಂಶ ತಯಾರಿಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ದೊಡ್ಡವರು ಗಣಿತ, ತರ್ಕಗಳಲ್ಲಿ ಪರಿಣತಿಯನ್ನು ಹೊಂದಬಹುದು. ಗಣಕ ಕ್ಷೇತ್ರದಲ್ಲಿ ಮುಂದೆ ಬರಲು ಇವೆರಡು ಬಹುಮೂಲ್ಯ ಪೂರಕಗಳು. ನಮಗೆ ಬೇಕಾದ ತಂತ್ರಾಂಶಗಳನ್ನು ನಮ್ಮ ಭಾಷೆಯಲ್ಲೇ ತಯಾರಿಸಲು ನಮ್ಮ ಭಾಷೆಯಲ್ಲೇ ತರ್ಕ ಮತ್ತು ವಿನ್ಯಾಸಗಳ ಅಭಿವೃದ್ಧಿಗೆ ಇವು ಸಹಾಯ ಮಾಡುವುವು. ನಮಗೆ ಬೇಕಾದ ತಂತ್ರಾಂಶಗಳನ್ನು ನಾವೇ ತಯಾರಿಸಿಕೊಳ್ಳುವುದು ಉತ್ತಮ. ಅಮೇರಿಕಾದವರು ಕೊಡಲು ಕಾಯುವುದು ಸರಿಯಲ್ಲ. ಕನ್ನಡ ಲೋಗೋ ಮೂಲಕ ಮೂಲ ಪರಿಣತಿಯನ್ನು ಮೈಗೂಡಿಸಿಕೊಂಡ ಮಕ್ಕಳು ದೊಡ್ಡವರಾದ ನಂತರ ಕನ್ನಡ ಭಾಷೆಯ ತಂತ್ರಾಂಶ ರಚಿಸಿ ರಾಜ್ಯ/ಭಾಷೆಯ ಪ್ರಗತಿಗೆ ಗಣನೀಯ ಕಾಣಿಕೆ ನೀಡಬಲ್ಲರು.
ಕನ್ನಡ ಲೋಗೋವು ಭಾರತೀಯ ಭಾಷೆಗಳಲ್ಲೇ ಪ್ರಥಮ. ಕನ್ನಡಿಗರು ಹಿಂಬಾಲಕರು, ಮುಂದಾಳುಗಳಲ್ಲ ಎಂಬ ಮಾತನ್ನು ನಾವು ಮತ್ತೊಮ್ಮೆ ಸುಳ್ಳು ಮಾಡಿ ತೋರಿಸಿದ್ದೇವೆ.