“ಶುಕ್ರಗ್ರಹದ ಸಂಕ್ರಮ” ವಿಶೇಷ ಕಮ್ಮಟಗಳು

Wednesday, April 25th, 2012

ಬೆಂಗಳೂರು, ಏಪ್ರಿಲ್ ೨೫ (ಕರ್ನಾಟಕ ವಾರ್ತೆ) : ಜೂನ್ ೦೬ ರಂದು ನಡೆಯಲಿರುವ “ಶುಕ್ರಗ್ರಹದ ಸಂಕ್ರಮ “ ಎಂಬ   ವಿಶೇಷ ಖಗೋಳೀಯ ಘಟನೆ ಶತಮಾನಕ್ಕೆ ಒಮ್ಮೆ ನಡೆಯುವಂತಹುದು.   ಚಂದ್ರನ ಬದಲು ಶುಕ್ರಗ್ರಹ ಸೂರ್ಯನ ಮುಂದೆ  ಹಾದು ಹೋಗುವುದು.   ಮುಂದೆ ಬರಲಿರುವ ಶುಕ್ರ ಸಂಕ್ರಮ ೨೧೧೭ರಲ್ಲಿ.   ಈ ಘಟನೆಯ     ವೀಕ್ಷಣೆ ಮತ್ತು  ಇದರ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಲು ತಾರಾಲಯವು ಒಂದು ದಿನದ ವಿಶೇಷ ಕಮ್ಮಟವನ್ನು ಹಮ್ಮಿಕೊಂಡಿದೆ.  ಏಪ್ರಿಲ್ ೨೯ ಮತ್ತು ಮೇ ೧೩ ರಂದು ನಡೆಯುವ ಈ [...]

ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

Tuesday, March 20th, 2012
ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ “ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು – ಹವ್ಯಕ ಪಂಗಡದಿಂದ ಬಂದವರಿದ್ದಾರೆ.   ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ನಾಲ್ಕು ವರುಷಗಳಿಂದ ತನ್ನ ಸಾಹಿತ್ಯ ಕಾರ್ಯವನ್ನು ಮಾಡುತ್ತಿದೆ. http://oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಗಿ ಸರಕಾರೀ ಮಾನ್ಯತೆ ಪಡೆದಿದೆ. [...]

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

Tuesday, March 6th, 2012

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವೀಮಡೋಸ್ ಫೋನಿಗೆ ತಂತ್ರಾಂಶ ತಯಾರಿ [...]

ಪರಿಸರ ಪ್ರಶಸ್ತಿಗಾಗಿ ಅರ್ಜಿ-ನಾಮನಿರ್ದೇಶನ ಆಹ್ವಾನ

Tuesday, March 6th, 2012

ಬೆಂಗಳೂರು, ಮಾರ್ಚ್ ೦೬( ಕರ್ನಾಟಕ ವಾರ್ತೆ) :  ಪರಿಸರ ಸಂರಕ್ಷಣೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಲು ೨೦೧೧-೨೦೧೨ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಆಹ್ವಾನಿಸಲಾಗಿದೆ. ಈ ಪ್ರಶಸ್ತಿ ತಲಾ ೧.೦೦ ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಈ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳ (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ ಟ್ರಸ್ಟ್‌ಗಳು ಇತರೆ), ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡಲಾಗುವುದು. [...]

ಕನ್ನಡ ಬ್ಲಾಗೋತ್ತಮರ ಸಭೆ

Sunday, March 9th, 2008

ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.

ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ

Sunday, February 17th, 2008

ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ

ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು.

ಕಗ್ಗಲಿಪುರದಲ್ಲಿ ಸಮರ್ಪಣ – ೨೦೦೮

Sunday, January 27th, 2008

ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ – ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ. ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ.

ಮಾತೆಯರ ಮಹಾ ಸಂಗಮ ಕೋಟಿ ನೀರಾಜನ

Thursday, November 15th, 2007

ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋ ಸಂರಕ್ಷಣೆಯ ಇನ್ನೊಂದು ಹೆಜ್ಜೆ.
ಅರಮನೆ ಮೈದಾನದಲ್ಲಿ ನ. ೧೮ಕ್ಕೆ ಲಕ್ಷ ಮಹಿಳೆಯರಿಂದ ಗೋ ಮಾತೆಗೆ ಕೋಟಿ ಆರತಿ

ಜೆ.ಎಸ್.ಡಬ್ಲ್ಯು ಸ್ಟೀಲ್‌ಗೆ ಪ್ರಶಸ್ತಿ

Saturday, November 10th, 2007

ಬೆಂಗಳೂರು, ನವೆಂಬರ್‍ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ – ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.

ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ

Thursday, August 2nd, 2007

ಬೆಂಗಳೂರು, ಆಗಸ್ಟ್ ೨, ೨೦೦೭: ಸರಕಾರೇತರ ಸಂಸ್ಥೆ ಪರಿಸರದ ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ-೨೦೦೭ ನೀಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪ್ರಶಸ್ತಿಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಶ್ವರಪ್ರಸಾದರಿಗೆ ಈ ವರ್ಷ ಪರಿಸರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.