ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮) ರಿಯಲ್‌ಮಿ ಸಿ1

Saturday, November 24th, 2018
ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮)  ರಿಯಲ್‌ಮಿ ಸಿ1

ರಿಯಲ್‌ಮಿ ಸಿ1 ಕಡಿಮೆ ಬೆಲೆಗೆ ಉತ್ತಮ ಫೋನ್ ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು […]

ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

Tuesday, November 20th, 2018
ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮)  ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1   ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ   ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. […]

ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) – ರಿಯಲ್‌ಮಿ 2 ಪ್ರೊ

Wednesday, November 14th, 2018
ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) - ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್   ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ರಿಯಲ್‌ಮಿ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಹಲವು ಕಂಪೆನಿಗಳು ಇದೇ ರೀತಿ ಎರಡು ಹೆಸರಿನಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಹುವಾವೇ ಮತ್ತು ಹೋನರ್. ಒಪ್ಪೊ ಮತ್ತು ರಿಯಲ್‌ಮಿ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿವೆ. ರಿಯಲ್‌ಮಿ 1 ಫೊನಿನ […]

ಗ್ಯಾಜೆಟ್ ಲೋಕ ೩೫೩ (ನವಂಬರ್ ೦೩, ೨೦೧೮) – ಹುವಾವೇ ನೋವಾ 3

Saturday, November 3rd, 2018
ಗ್ಯಾಜೆಟ್ ಲೋಕ ೩೫೩ (ನವಂಬರ್ ೦೩, ೨೦೧೮) - ಹುವಾವೇ ನೋವಾ 3

ಹುವಾವೇ ನೋವಾ 3 ಉತ್ತಮ ವಿನ್ಯಾಸ ಮತ್ತು ಕ್ಯಾಮರ ಇರುವ ಫೋನ್ ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಹುವಾವೇಯವರದೇ ಇನ್ನೊಂದು ಬ್ರ್ಯಾಂಡ್ ಹೋನರ್ (ಆನರ್?). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು. ಹುವಾವೇ ಕಂಪೆನಿಯು ಸ್ವಲ್ಪ ಮೇಲ್ದರ್ಜೆಯ ಫೋನ್‌ಗಳನ್ನು ತಯಾರಿಸುತ್ತಿದೆ. ಇತ್ತೀಚೆಗಷ್ಟೆ ಅವರು ಭಾರತದಲ್ಲೂ ತಮ್ಮ ಫೋನ್‌ಗಳನ್ನು ಮಾರಾಟ ಮಾಡಲು ಪ್ರಾರಂಬಿಸಿದ್ದಾರೆ. ಈ ಸಲ ನಾವು ವಿಮರ್ಶಿಸುತ್ತಿರುವ ಗ್ಯಾಜೆಟ್ ಹುವಾವೇ ನೋವಾ 3 (Huawei Nova 3) ಗುಣವೈಶಿಷ್ಟ್ಯಗಳು ಪ್ರೋಸೆಸರ್ […]

ಗ್ಯಾಜೆಟ್ ಲೋಕ – ೦೨೮ (ಜುಲೈ ೧೨, ೨೦೧೨)

Sunday, July 15th, 2012
ಗ್ಯಾಜೆಟ್ ಲೋಕ - ೦೨೮ (ಜುಲೈ ೧೨, ೨೦೧೨)

ಎಲ್ಲ ಮಾಡಬಲ್ಲ ಅಗ್ಗದ ಫೋನ್ ನೋಕಿಯ ಸಿ೨-೦೦   ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ನಾವು ಆಶಿಸುವ ಬಹುತೇಕ ಎಲ್ಲ ಗುಣವೈಶಿಷ್ಟ್ಯಗಳನ್ನು ಒಳಗೊಂಡ ಫೋನ್ ನೋಕಿಯ ಸಿ೨-೦೦. ಈ ಸಲ ಅದರ ಗುಣಾವಗುಣಗಳನ್ನು ಪರಿಶೀಲಿಸೋಣ.   ಫೋನ್ ಇಲ್ಲದವರ‍್ಯಾರು? ಫೋನ್ ಯಾರಿಗೆ ಬೇಡ ಹೇಳಿ? ಎಲ್ಲರಿಗೂ ಬೇಕು ಫೋನ್. ಫೋನ್ ಅಂದರೆ ಮಾಮೂಲಿ ಸ್ಥಿರವಾಣಿ ಅಲ್ಲ, ನಾನು ಇಲ್ಲಿ ಹೇಳಹೊರಟಿರುವುದು ಚರವಾಣಿ ಅರ್ಥಾತ್ ಮೊಬೈಲ್ ಫೋನ್ ಬಗ್ಗೆ. ಫೋನಂತೂ ಎಲ್ಲರಿಗೂ ಬೇಕು. ಅದಕ್ಕೆ ಸರಿಯಾಗಿ ಹಲವಾರು ಟೆಲಿಫೋನ್ […]

ಗ್ಯಾಜೆಟ್ ಲೋಕ – ೦೨೭ (ಜುಲೈ ೦೫, ೨೦೧೨)

Sunday, July 15th, 2012
ಗ್ಯಾಜೆಟ್ ಲೋಕ - ೦೨೭ (ಜುಲೈ ೦೫, ೨೦೧೨)

ನಿಕಾನ್ ೧ ಜೆ1 – ಹೊಸ ನಮೂನೆಯ ಕ್ಯಾಮರ   ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಲೆನ್ಸ್ ಬದಲಾಯಿಸುವ ಸವಲತ್ತಿನ ಹೊಸ ಮಾದರಿಯ ಕ್ಯಾಮರಾವನ್ನು ನಿಕಾನ್ ತಯಾರಿಸಿದೆ. ಅಂತಹ ಕ್ಯಾಮರಾದ ಬಗ್ಗೆ ಈ ಸಲ ತಿಳಿದುಕೊಳ್ಳೋಣ.   ಮೈಕ್ರೋ ಫೋರ್ ಥರ್ಡ್   ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಲೆನ್ಸ್ ಬದಲಾಯಿಸಲು ಆಗುವುದಿಲ್ಲ. ಅದು ಏನಿದ್ದರೂ ಎಸ್‌ಎಲ್‌ಆರ್ ಕ್ಯಾಮರಾಗಳ ಸವಲತ್ತು. ಆದರೆ ಎಂದೆಂದಿಗೂ ಹಾಗೆಯೇ ಆಗಬೇಕಾಗಿಲ್ಲ. ಕೆಲವು ಕ್ಯಾಮರಾ ತಯಾರಕರು ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಲೆನ್ಸ್ […]

ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)

Sunday, July 15th, 2012

ಇನ್ನೊಂದಿಷ್ಟು ಕಿರುತಂತ್ರಾಂಶಗಳು   ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಜನಪಿಯವಾಗಿರುವ ಆಂಡ್ರೋಯಿಡ್ ಫೋನ್‌ಗಳಿಗೆ ಇರುವ ಲಕ್ಷಗಟ್ಟಲೆ ತಂತ್ರಾಂಶಗಳಲ್ಲಿ ಇನ್ನೊಂದಿಷ್ಟು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.   ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೋಯಿಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವು ಕಿರುತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಪ್ (app) ಎನ್ನುತ್ತಾರೆ. ಇಂತಹ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು ಮೇ ೧೭ರ ಸಂಚಿಕೆಯಲ್ಲಿ ಗಮನಿಸಿದ್ದೆವು. ಇವುಗಳನ್ನು play.google.com ಜಾಲತಾಣದಿಂದ ಅಥವಾ ಗೂಗ್ಲ್ ಪ್ಲೇ ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಸುಮಾರು ಆರು ಲಕ್ಷ ಚಿಲ್ಲರೆ […]

ಗ್ಯಾಜೆಟ್ ಲೋಕ – ೦೨೫ (ಜೂನ್ ೨೧, ೨೦೧೨)

Tuesday, June 26th, 2012
ಗ್ಯಾಜೆಟ್ ಲೋಕ - ೦೨೫ (ಜೂನ್ ೨೧, ೨೦೧೨)

ಕಿಸೆಯಲ್ಲಿ ವೈಫೈ ಹಾಗೂ ಹೆಚ್ಚಿಗೆ ಪವರ್   ನಿಮ್ಮ ಐಪ್ಯಾಡ್‌ಗೆ ಸಿಮ್ ಕಾರ್ಡ್ ಸೌಲಭ್ಯ ಇಲ್ಲ. ಮೊಬೈಲಲ್ಲೂ ಇಲ್ಲ. ಆದರೆ ನಿಮ್ಮಲ್ಲಿ ೩ಜಿ ಸಿಮ್ ಕಾರ್ಡ್ ಇದೆ. ಇಂತಹ ಸಂದರ್ಭದಲ್ಲಿ ಬಳಕೆಯಾಗುವುದು ಹುವೇಯವರ ವೈಫೈ ಡಾಟಾ ಕಾರ್ಡ್   ಬಸ್ಸಿನಲ್ಲಿ ಕುಳಿತಾಗಿದೆ. ಅಷ್ಟರಲ್ಲಿ ನಿಮ್ಮ ಸಹೋದ್ಯೋಗಿಯ ಫೋನ್ ಬರುತ್ತದೆ. ತಾನು ಒಂದು ಇಮೈಲ್ ಮಾಡಿದ್ದೇನೆ. ತುಂಬ ಅರ್ಜೆಂಟ್. ಯಾವುದೋ ಒಂದು ಕೆಲಸಕ್ಕೆ ನಿಮ್ಮ ಒಪ್ಪಿಗೆ ಆತನಿಗೆ ಇಮೈಲ್ ಮೂಲಕ ಬೇಕಾಗಿದೆ. ನಿಮ್ಮ ಮೊಬೈಲ್‌ನಲ್ಲಿರುವ ಸಿಮ್‌ಗೆ ಅಂತರಜಾಲ ಸಂಪರ್ಕ […]

ಗ್ಯಾಜೆಟ್ ಲೋಕ – ೦೨೪ (ಜೂನ್ ೧೪, ೨೦೧೨)

Monday, June 18th, 2012
ಗ್ಯಾಜೆಟ್ ಲೋಕ - ೦೨೪ (ಜೂನ್ ೧೪, ೨೦೧೨)

ಡಿಎಸ್‌ಎಲ್‌ಆರ್ ಲೆನ್ಸ್ ಕೊಳ್ಳುವ ಮುನ್ನ   ಡಿಎಸ್‌ಎಲ್‌ಆರ್ ಕ್ಯಾಮರ ಕೊಳ್ಳುವ ಮುನ್ನ ಏನೇನೆಲ್ಲ ಗಮನಿಸಬೇಕು ಎಂಬುದನ್ನ ಎರಡು ವಾರಗಳ ಹಿಂದೆ ನೋಡಿದೆವು. ಈಗ ಆ ಕ್ಯಾಮರಾಕ್ಕೆ ಲೆನ್ಸ್ ಕೊಳ್ಳುವ ಮುನ್ನ ಏನೇನೆಲ್ಲ ಗಮನಿಸಬೇಕು ಎಂದು ನೋಡೋಣ.   ಎಲ್‌ಎಲ್‌ಆರ್ ಕ್ಯಾಮರಾಗಳು ದೇಹ ಮತ್ತು ಲೆನ್ಸ್ ಪ್ರತ್ಯೇಕವಾಗಿ ದೊರೆಯುತ್ತವೆ. ಕ್ಯಾಮರಾ ಕೊಳ್ಳುವುದು ಹೇಗೆ ಎಂಬುದನ್ನು ನೋಡಿ ಆಯಿತು. ಈಗ ಲೆನ್ಸ್ ಕಡೆ ಗಮನ ಹರಿಸೋಣ.   ಭಾರತದಲ್ಲಿ ಸಾಮಾನ್ಯವಾಗಿ ಕ್ಯಾಮರ ಜೊತೆ ಒಂದು ಲೆನ್ಸ್ ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು […]

ಗ್ಯಾಜೆಟ್ ಲೋಕ – ೦೨೩ (ಜೂನ್ ೦೭, ೨೦೧೨)

Thursday, June 7th, 2012
ಗ್ಯಾಜೆಟ್ ಲೋಕ - ೦೨೩ (ಜೂನ್ ೦೭, ೨೦೧೨)

ಮನೆಯಲ್ಲೇ ಮಾಡಿ -ಸಿಗ್ನಲ್ ಬೂಸ್ಟರ್   ಬೆಂಗಳೂರಿನಿಂದ ಕೇವಲ ೫ ಕಿ.ಮೀ. ಹೊರಗಡೆ ಹೋದರೆ ಸಾಕು ಮೊಬೈಲ್, ಅಂತರಜಾಲ, ೩ಜಿ, ಎಲ್ಲ ಸಿಗ್ನಲ್‌ಗಳೂ ಅಂಬೆಗಾಲಿಡುತ್ತವೆ. ಇಂತಹ ಸಂದರ್ಭಗಳಲ್ಲಿ ೩ಜಿ ಡಾಟಾಕಾರ್ಡ್ ಜೊತೆ ಗುದ್ದಾಡಿ ಅದಕ್ಕೊಂದು ಸಿಗ್ನಲ್ ಬೂಸ್ಟರ್ ಅನ್ನು ಮನೆಯಲ್ಲೆ ತಯಾರಿಸಿ ಬಳಸಿದರೆ ಹೇಗೆ?   ಅಂತರಜಾಲಕ್ಕೆ ಮಾಹಿತಿಹೆದ್ದಾರಿ (information superhighway) ಎಂಬ ಹೆಸರಿದೆ. ಈ ಹೆಸರು ಬೆಂಗಳೂರಿನಂತಹ ಮಾಹಾನಗರಕ್ಕೆ ಮಾತ್ರ ಅನ್ವಯ. ಬೆಂಗಳೂರಿನಿಂದ ಹೊರಗೆ ಕಾಲಿಟ್ಟೊಡನೆ ಅದು ಮಾಹಿತಿಯ ಕಾಲುದಾರಿ ಆಗುತ್ತದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಿಂದ […]