ಗ್ಯಾಜೆಟ್ ಲೋಕ – ೦೨೨ (ಮೇ ೩೧, ೨೦೧೨)

Thursday, May 31st, 2012
ಗ್ಯಾಜೆಟ್ ಲೋಕ - ೦೨೨ (ಮೇ ೩೧, ೨೦೧೨)

ಡಿಎಸ್‌ಎಲ್‌ಆರ್ ಕ್ಯಾಮರ ಕೊಳ್ಳುವುದು ಹೇಗೆ?   ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮರಾಗಳು ಕೈಗೆಟುಕುವ ಬೆಲೆಯಲ್ಲಿ ದೊರೆಯತೊಡಗಿವೆ. ಜನಸಾಮಾನ್ಯರೂ ಈ ಕ್ಯಾಮರಾಗಳನ್ನು ಕೊಳ್ಳುವಂತೆ ಮಾಡಿವೆ. ಆದರೆ ಅವುಗಳನ್ನು ಕೊಳ್ಳುವ ಮುನ್ನ ಏನೇನು ಚಿಂತನೆ ಮಾಡಬೇಕು? ಯಾವುದರ ಕಡೆ ಸ್ವಲ್ಪ ಗಮನ ಹರಿಸಬೇಕು?   ಕ್ಯಾಮರಾದಲ್ಲಿ ಚಿತ್ರ ತೆಗೆಯುವ ವಸ್ತುವನ್ನು ನೋಡಲು ಮತ್ತು ಚಿತ್ರೀಕರಣ ಮಾಡಲು ಒಂದೇ ಮಸೂರ (ಲೆನ್ಸ್) ಬಳಸುವ ಕ್ಯಾಮರಾಗಳನ್ನು ಎಸ್‌ಎಲ್‌ಆರ್ ಕ್ಯಾಮರಾ ಎನ್ನುತ್ತಾರೆ. ಅವುಗಳ ಡಿಜಿಟಲ್ ಅವತಾರಗಳೇ ಡಿಎಸ್‌ಎಲ್‌ಆರ್ ಕ್ಯಾಮರಾಗಳು. ಇವುಗಳ ಬೆಲೆ ಅತಿ ಕಡಿಮೆ ಎಂದರೆ […]

ಗ್ಯಾಜೆಟ್ ಲೋಕ – ೦೨೧ (ಮೇ ೨೪, ೨೦೧೨)

Thursday, May 31st, 2012
ಗ್ಯಾಜೆಟ್ ಲೋಕ - ೦೨೧ (ಮೇ ೨೪, ೨೦೧೨)

ಟಾಟಾ ಫೋಟೋನ್ ಮ್ಯಾಕ್ಸ್   ಯುಎಸ್‌ಬಿ ಡಾಟಾ ಕಾರ್ಡ್ ಬಳಸಿ ಅಂತರಜಾಲ ಸಂಪರ್ಕ ಸೇವೆ ನೀಡುವವರು ತುಂಬ ಮಂದಿ ಇದ್ದಾರೆ. ಅಂತಹವುಗಳಲ್ಲಿ ಟಾಟಾ ಫೋಟೋನ್ ಮ್ಯಾಕ್ಸ್ ಒಂದು. ಅದರ ಬಗ್ಗೆ ಒಂದು ವಿಮರ್ಶೆ.   ಗಣಕವನ್ನು ಅಂತರಜಾಲಕ್ಕೆ ಸಂಪರ್ಕಿಸಲು ಅಂತರಜಾಲ ಸಂಪರ್ಕ ಸೇವೆ ನೀಡುವವರು ಹಲವು ಮಂದಿ ಇದ್ದಾರೆ. ಅವರುಗಳಲ್ಲಿ ಪ್ರಮುಖರು -ಬಿಎಸ್‌ಎನ್‌ಎಲ್, ರಿಲಯನ್ಸ್, ಟಾಟಾ, ಇತ್ಯಾದಿ. ಅಂತರಜಾಲ ಸಂಪರ್ಕದಲ್ಲಿ ಹಲವು ವಿಧ. ಮನೆಗೆ ಕೇಬಲ್ ಮೂಲಕ, ಸಾಮಾನ್ಯವಾಗಿ ದೂರವಾಣಿ ಕೇಬಲ್ ಮೂಲಕ, ಬ್ರ್ಯಾಡ್‌ಬ್ಯಾಂಡ್ ಸಂಪರ್ಕ ಒಂದು […]

ಗ್ಯಾಜೆಟ್ ಲೋಕ – ೦೨೦ (ಮೇ ೧೭, ೨೦೧೨)

Monday, May 28th, 2012

ಕಿರುತಂತ್ರಾಂಶಗಳ ಹಿರಿಯಲೋಕದಲ್ಲಿ   ಸ್ಮಾರ್ಟ್‌ಫೋನ್‌ಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್ ಫೋನ್‌ಗಳು. ಅವುಗಳಿಗೆ ಸುಮಾರು ಆರು ಲಕ್ಷ ತಂತ್ರಾಂಶಗಳು ಲಭ್ಯವಿವೆ. ಅವುಗಳಲ್ಲಿ ಕೆಲವು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.   ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಗಣಕದಂತೆಯೇ. ಅವುಗಳಿಗೂ ಒಂದು ಕಾರ್ಯಾಚರಣ ವ್ಯವಸ್ಥೆ (operating system) ಇರುತ್ತದೆ. ಇವುಗಳಲ್ಲಿ ಪ್ರಮುಖವಾದವು ಆಪಲ್‌ನವರ ಐಓಎಸ್, ಆಂಡ್ರೋಯಿಡ್ ಮತ್ತು ಮೈಕ್ರೋಸಾಫ್ಟ್‌ನವರ ವಿಂಡೋಸ್ ಫೋನ್. ಇವುಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್. ಸ್ಮಾರ್ಟ್‌ಫೋನ್‌ಗಳು ಗಣಕದಂತೆಯೇ ಎಂದು ಹೇಳಿದೆನಲ್ಲ? ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ತಂತ್ರಾಂಶಗಳು […]

ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

Sunday, May 13th, 2012
ಗ್ಯಾಜೆಟ್ ಲೋಕ - ೦೧೯ (ಮೇ ೧೦, ೨೦೧೨)

ಎಚ್‌ಸಿಎಲ್ ಮಿ ಟ್ಯಾಬ್ಲೆಟ್   ತುಂಬ ದುಬಾರಿಯೂ ಅಲ್ಲದ, ಅತಿ ಅಗ್ಗದ್ದೂ ಅಲ್ಲದ ಒಂದು ಮಧ್ಯಮ ಬೆಲೆಯ ಟ್ಯಾಬ್ಲೆಟ್ HCL ME X1. ಅದರ ಗುಣಾವಗುಣಗಳನ್ನು ಸ್ವಲ್ಪ ನೋಡೋಣ.   ಅತ್ತ ಲ್ಯಾಪ್‌ಟಾಪೂ ಅಲ್ಲದ, ಇತ್ತ ದೊಡ್ಡ ಫೋನ್ ಎಂದೂ ಅನಿಸಿಕೊಳ್ಳಲಾರದ ಮಧ್ಯಮ ದರ್ಜೆಯ ಗ್ಯಾಜೆಟ್‌ಗಳೆ ಈ ಟ್ಯಾಬ್ಲೆಟ್‌ಗಳು. ಇವುಗಳನ್ನು ಬಳಸಿ ಅಂತರಜಾಲ ವೀಕ್ಷಣೆ, ಇಮೈಲ್, ಸಂಗೀತ ಆಲಿಸುವುದು, ವೀಡಿಯೋ ವೀಕ್ಷಣೆ, ಕಡತಗಳ ವೀಕ್ಷಣೆ ಹಾಗೂ ಚಿಕ್ಕಪುಟ್ಟ ಸಂಪಾದನೆ -ಎಲ್ಲ ಮಾಡಬಹುದು. ಆದರೆ ಇವು ಪೂರ್ಣಪ್ರಮಾಣದ ಗಣಕ […]

ಗ್ಯಾಜೆಟ್ ಲೋಕ – ೦೧೮ (ಮೇ ೦೩, ೨೦೧೨)

Thursday, May 3rd, 2012

ಏಮ್ ಆಂಡ್ ಶೂಟ್ ಕ್ಯಾಮರ ಕೊಳ್ಳುವುದು ಹೇಗೆ   ಸುಮ್ಮನೆ ನೋಡುವುದು ಮತ್ತು ಕ್ಲಿಕ್ ಮಾಡುವುದು -ಇಂತಹ ಕ್ಯಾಮರಾಗಳಿಗೆ ಏಮ್ ಆಂಡ್ ಶೂಟ್ ಕ್ಯಾಮರ ಎನ್ನುತ್ತಾರೆ. ಅಂತಹ ಕ್ಯಾಮರಗಳನ್ನೆ ಬಹುಪಾಲು ಜನರು ಕೊಳ್ಳುವುದು. ಇಂತಹ ಕ್ಯಾಮರ ಕೊಳ್ಳುವುದಕ್ಕೊಂದು ಕಿರು ಕೈಪಿಡಿ ನೀಡಲು ಸಣ್ಣ ಪ್ರಯತ್ನ.   ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಇವುಗಳ […]

ಗ್ಯಾಜೆಟ್ ಲೋಕ – ೦೧೭ (ಎಪ್ರಿಲ್ ೨೬, ೨೦೧೨)

Friday, April 27th, 2012
ಗ್ಯಾಜೆಟ್ ಲೋಕ - ೦೧೭ (ಎಪ್ರಿಲ್ ೨೬, ೨೦೧೨)

ಮೆಗಾಪಿಕ್ಸೆಲ್ ಎಂಬ ಮಾಯೆ   ಡಿಜಿಟಲ್ ಕ್ಯಾಮರ ಕೊಳ್ಳುವಾಗ ಎದುರಾಗುವ ಒಂದು ಬಹುಮುಖ್ಯ ಪದ ಮೆಗಾಪಿಕ್ಸೆಲ್. ಹೆಚ್ಚು ಮೆಗಾಪಿಕ್ಸೆಲ್ ಆದಷ್ಟು ಕ್ಯಾಮರ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ವ್ಯಾಪಾರಿಗಳೂ ಅದಕ್ಕೆ ನೀರೆರೆಯುತ್ತಾರೆ. ಆದರೆ ಈ ಮೆಗಾಪಿಕ್ಸೆಲ್ ಎಷ್ಟು ಮಹತ್ವವುಳ್ಳದ್ದು?   ಸಂಖ್ಯಾಮಟ್ಟಕ್ಕಿಂತ ಗುಣಮುಟ್ಟ ಮುಖ್ಯ. ಒಪ್ಪುತ್ತೀರಿ ತಾನೆ? ಇದು ಹಲವು ಕ್ಷೇತ್ರಗಳಿಗೆ ಅನ್ವಯವಾಗುತ್ತದೆ. ಇದು ನಮ್ಮ ಗ್ಯಾಜೆಟ್‌ಗಳ ಲೋಕಕ್ಕೂ ಒಪ್ಪುತ್ತದೆ.   ಕ್ಯಾಮರಾ ಕೊಳ್ಳುವಾಗ ಮೊಟ್ಟಮೊದಲನೆಯ ಪ್ರಶ್ನೆಯೇ ಮೆಗಾಪಿಕ್ಸೆಲ್‌ಗಳದು. “ಸ್ವಾಮಿ ಇದು ನೋಡಿ 12 ಮೆಗಾಪಿಕ್ಸೆಲ್, ಇದಕ್ಕೆ […]

ಗ್ಯಾಜೆಟ್ ಲೋಕ – ೦೧೬ (ಎಪ್ರಿಲ್ ೧೯, ೨೦೧೨)

Tuesday, April 24th, 2012
ಗ್ಯಾಜೆಟ್ ಲೋಕ - ೦೧೬ (ಎಪ್ರಿಲ್ ೧೯, ೨೦೧೨)

ಎರಡು ಫೋನ್‌ಗಳು   ಈ ಸಲ ಒಂದು ಆಂಡ್ರೋಯಿಡ್ ಮತ್ತು ಒಂದು ವಿಂಡೋಸ್ ಫೋನ್ ಕಡೆ ಗಮನ ಹರಿಸೋಣ   ಎಲ್‌ಜಿ ಒಪ್ಟಿಮಸ್ ಸೋಲ್   LG Optimus Sol E730 ಒಂದು ಆಂಡ್ರೋಯಿಡ್ ತಂತ್ರಾಂಶಾಧಾರಿತ ಫೋನ್. ಅಂದ ಮೇಲೆ ಆಂಡ್ರೋಯಿಡ್ ಫೋನಿನ ಎಲ್ಲ ವೈಶಿಷ್ಟ್ಯಗಳೂ ಇವೆ. ಮೊದಲು ಇದರ ಯಂತ್ರಾಂಶಗಳ ಅರ್ಥಾತ್ ಗುಣವೈಶಿಷ್ಟ್ಯಗಳ ಕಡೆ ಗಮನ ಹರಿಸೋಣ.   ಗುಣವೈಶಿಷ್ಟ್ಯಗಳು: 1 ಗಿಗಾಹರ್ಟ್ಸ್ ಕ್ವಾಲ್‌ಕಂ ಪ್ರೋಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮೆಮೊರಿ (RAM), 1 ಗಿಗಾಬೈಟ್ […]

ಗ್ಯಾಜೆಟ್ ಲೋಕ – ೦೧೫ (ಎಪ್ರಿಲ್ ೧೨, ೨೦೧೨)

Thursday, April 12th, 2012
ಗ್ಯಾಜೆಟ್ ಲೋಕ - ೦೧೫ (ಎಪ್ರಿಲ್ ೧೨, ೨೦೧೨)

ಚಿತ್ರವಿಚಿತ್ರ ಗ್ಯಾಜೆಟ್‌ಗಳು   ಕೆಲವು ವಾರಗಳಿಂದ ಅವ್ಯಾಹತವಾಗಿ ಬೇರೆ ಬೇರೆ ಗ್ಯಾಜೆಟ್‌ಗಳ ವಿಮರ್ಶೆ ಓದಿ ಸ್ವಲ್ಪ ಮಂಡೆಬಿಸಿಯಗಿದೆಯೇ? ಯಾಕೆ ಈ ವಾರ ಹೀಗೆ ಸುಮ್ನೆ ಒಂದಿಷ್ಟು ಮಸಾಲಾ ಗ್ಯಾಜೆಟ್‌ಗಳ ಕಡೆ ಗಮನಹರಿಸಬಾರದು? ಇಷ್ಟೆಲ್ಲ ಗ್ಯಾಜೆಟ್ ಕೊಳ್ಳಲು ನಮ್ಮಲ್ಲಿ ಹಣವಿಲ್ಲ ಎನ್ನುತ್ತೀರಾ? ಚಿಂತಿಸಬೇಡಿ. ಇವು ಯಾವುವೂ ಭಾರತದಲ್ಲಿ ಲಭ್ಯವಿಲ್ಲ!   ಗೋಡೆಯಲ್ಲಿ ಯುಎಸ್‌ಬಿ ಚಾರ್ಜರ್   ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ೩ ಪ್ಲೇಯರ್, ಬ್ಲೂಟೂತ್ ಹೆಡ್‌ಸೆಟ್ -ಹೀಗೆ ಹಲವಾರು ಗ್ಯಾಜೆಟ್‌ಗಳಿಗೆ ಚಾರ್ಜ್ ಮಾಡಲು ಬಳಕೆಯಾಗುವುದು ಯುಎಸ್‌ಬಿ ಚಾರ್ಜರ್. ಈ […]

ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)

Monday, April 9th, 2012
ಗ್ಯಾಜೆಟ್ ಲೋಕ - ೦೧೪ (ಎಪ್ರಿಲ್ ೦೫, ೨೦೧೨)

ಎಸ್‌ಎಲ್‌ಆರ್ ಫೋಟೋಗ್ರಾಫಿಗೆ ಪ್ರವೇಶ   ಫೋಟೋಗ್ರಾಫಿ ಎಂದರೆ ಎಸ್‌ಎಲ್‌ಆರ್ ಕ್ಯಾಮರ ಬಳಸಿ ಫೊಟೋ ತೆಗೆಯುವುದು. ಏಮ್ ಆಂಡ್ ಶೂಟ್ ಕ್ಯಾಮರ ಬಳಸಿ ತೆಗೆಯುವುದು ಏನಿದ್ದರೂ ಮಕ್ಕಳಾಟ, ವೃತ್ತಿನಿರತರಿಗೆ ಎಸ್‌ಎಲ್‌ಆರ್ ಕ್ಯಾಮರವೇ ಎಂದು ಯಾವುದೇ ವೃತ್ತಿನಿರತ ಛಾಯಾಗ್ರಾಹಕ ಹೇಳುತ್ತಾರೆ. ಈ ಲೋಕಕ್ಕೆ ಪ್ರವೇಶಿಸಬಯಸುವವರಿಗೆ ಒಂದು ಎಂಟ್ರಿ ಲೆವೆಲ್ ಎಸ್‌ಎಲ್‌ಆರ್ ಕ್ಯಾಮರ.   ಕೆಲವೇ ವರ್ಷಗಳ ಹಿಂದೆ ಎಸ್‌ಎಲ್‌ಆರ್ ಕ್ಯಾಮರಗಳ ಬೆಲೆ ಅತಿ ಕನಿಷ್ಠ ಎಂದರೂ ರೂ.80 ಸಾವಿರದಿಂದ ಒಂದು ಲಕ್ಷದ ತನಕ ಇರುತಿದ್ದವು. ಆ ಸಂದರ್ಭದಲ್ಲಿ ಕ್ಯಾನನ್ ಕಂಪೆನಿ […]

ಗ್ಯಾಜೆಟ್ ಲೋಕ – ೦೧೩ (ಮಾರ್ಚ್ ೨೯, ೨೦೧೨)

Thursday, April 5th, 2012
ಗ್ಯಾಜೆಟ್ ಲೋಕ - ೦೧೩ (ಮಾರ್ಚ್ ೨೯, ೨೦೧೨)

ನಿಸ್ತಂತು ಕಿವಿಗಿಂಪು   ಸಂಗೀತ ಹೊರಡಿಸುವ ಯಾವುದೇ ವಿದ್ಯುನ್ಮಾನ ಉಪಕರಣದ ಕೊನೆಯ ಕೊಂಡಿ ಅಥವಾ ಸಾಧನ ಸ್ಪೀಕರ್ ಅಥವಾ ಇಯರ್‌ಫೋನ್ (ಹೆಡ್‌ಸೆಟ್). ಅದು ಉತ್ತಮವಾಗಿದ್ದಷ್ಟೂ ಧ್ವನಿ ಉತ್ತಮವಾಗಿರುತ್ತದೆ. ಈ ಸಾಧನವನ್ನು ತಂತಿ ಅಥವಾ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಿಸಬಹುದು. ಈ ಸಲ ಅಂತಹ ಎರಡು ನಿಸ್ತಂತು ಸಾಧನಗಳ ಪರಿಚಯ ಮಾಡಿಕೊಳ್ಳೋಣ.   ಆಡಿಯೋ ಕ್ಷೇತ್ರದಲ್ಲಿ ಕ್ರಿಯೇಟಿವ್ ಕಂಪೆನಿ ದೊಡ್ಡ ಹೆಸರು. ಅವರ ಉತ್ಪನ್ನಗಳು ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಗಣಕಗಳ ಜೊತೆ ಬಳಸುವ ಕ್ರಿಯೇಟಿವ್ ಸ್ಪೀಕರ್‌ಗಳನ್ನು ನಿಮ್ಮಲ್ಲಿ ಬಹುಮಂದಿ ನೋಡಿಯೇ […]