ಗ್ಯಾಜೆಟ್ ಲೋಕ – ೦೧೨ (ಮಾರ್ಚ್ ೨೨, ೨೦೧೨)

Monday, March 26th, 2012

ಮೊಬೈಲ್ ತಂತ್ರಾಂಶ   ಹಿಂದಿನ ಸಂಚಿಕೆಯಲ್ಲಿ ನಾವು ಮೊಬೈಲ್ ಯಂತ್ರಾಂಶವನ್ನು ಮತ್ತು ಅದರ ಅಂಗಾಂಗಳನ್ನು ನೋಡಿದೆವು. ಈ ಸಲ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಹಲವು ವಿಧದ ತಂತ್ರಾಂಶಗಳನ್ನು ಮತ್ತು ಅವುಗಳ ಗುಣವೈಶಿಷ್ಟ್ಯಗಳನ್ನು ತಿಳಿಯೋಣ.   ಮೊಬೈಲ್ ಒಂದು ಕಿಸೆಗಣಕವೇ ಸರಿ. ಅಂತೆಯೇ ಅದರಲ್ಲೂ ಕಾರ್ಯಾಚರಣೆಯ ವ್ಯವಸ್ಥೆ ಇರುತ್ತದೆ. ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗಳು ಹಲವಿವೆ. ಅವು ಆಪಲ್‌ನ ಐಓಎಸ್, ಆಂಡ್ರೋಯಿಡ್, ಬ್ಲ್ಯಾಕ್‌ಬೆರ್ರಿ ಮತ್ತು ವಿಂಡೋಸ್ ಫೋನ್. ಐಓಎಸ್ ಆಪಲ್ ಫೋನ್‌ಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ಅಂದರೆ ಐಫೋನ್ ಕೊಳ್ಳುವಾಗ ಯಾವ […]

ಗ್ಯಾಜೆಟ್ ಲೋಕ – ೦೧೧ (ಮಾರ್ಚ್ ೧೫, ೨೦೧೨)

Thursday, March 15th, 2012

ಮೊಬೈಲ್ ಯಂತ್ರಾಂಶ   ಮೊಬೈಲ್ ಫೋನ್ ಎಲ್ಲರಿಗೂ ಬೇಕಾದ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಮೊಬೈಲ್ ಫೋನ್‌ಗಳಿವೆ. ಯಾವುದನ್ನು ಕೊಳ್ಳುವುದು? ಈ ಬಗ್ಗೆ ಕಂತುಗಳಲ್ಲಿ ವಿವರಿಸಲಾಗುವುದು. ಇದು ಮೊದಲನೆಯದು.   ಮೊಬೈಲ್ ಫೋನ್‌ಗಳನ್ನು ಕೊಳ್ಳಲು ಹೊರಟಾಗ ಎದುರಾಗುವ ಪ್ರಶ್ನೆ ಯಾವುದನ್ನು ಕೊಳ್ಳುವುದು, ಹೇಗೆ ತೀರ್ಮಾನ ಮಾಡುವುದು, ಎಂದು. ಮೊದಲನೆಯದಾಗಿ ಎಲ್ಲ ವಸ್ತುಗಳನ್ನು ಕೊಳ್ಳುವಾಗ ಮಾಡುವಂತೆ ಇಲ್ಲಿಯೂ ನನಗೆ ಏನೇನು ಸವಲತ್ತುಗಳು ಬೇಕು, ಏನೇನು ಮಾಡಬೇಕು, ಎಂಬುದು ಮುಖ್ಯವಾಗಿರುತ್ತದೆ. ಮೊಬೈಲ್ ಫೋನ್ ಒಂದು ಪುಟಾಣಿ ಗಣಕದಂತೆಯೇ. ಅದರಲ್ಲೂ ಯಂತ್ರಾಂಶ […]

ಗ್ಯಾಜೆಟ್ ಲೋಕ – ೦೧೦ (ಮಾರ್ಚ್ ೦೮, ೨೦೧೨)

Saturday, March 10th, 2012
ಗ್ಯಾಜೆಟ್ ಲೋಕ - ೦೧೦ (ಮಾರ್ಚ್ ೦೮, ೨೦೧೨)

ಸ್ಯಾಮ್‌ಸಂಗ್ ಎಸ್‌ಬಿಎಚ್650 ಬ್ಲೂಟೂತ್ ಹೆಡ್‌ಸೆಟ್   ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆ. ಕುತ್ತಿಗೆಗೆ ನೇತುಹಾಕುವಂತಹವು ಒಂದು ವಿಧ. ಅಂತಹವುಗಳಲ್ಲಿ ಒಂದು ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಹೆಡ್‌ಸೆಟ್. ಬ್ಲೂಟೂತ್ ಸ್ಟೀರಿಯೋ ಹೆಡ್‌ಸೆಟ್ ಆಗಿದೆ. ಅದರ ಬಗ್ಗೆ ಸ್ವಲ್ಪ ಗಮನ ಕೊಡೋಣ.   ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಸ್ಸು ರೈಲಿನಲ್ಲಿ ಪ್ರಯಾಣಿಸುವಾಗ, ಕಾರು ಚಲಾಯಿಸುವಾಗ, ಕೆಲವರಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಲೇ ಇರುವ ಅಭ್ಯಾಸವಿದೆ. ಇನ್ನು ಕೆಲವರಿಗೆ ಸಂಗೀತ ಆಲಿಸುವ ಅಭ್ಯಾಸವಿದೆ. ಆದರೆ ಕಿವಿಗೆ ಮೊಬೈಲ್ ಫೋನನ್ನು ದೀರ್ಘಕಾಲ ಅಂಟಿಸಿಕೊಂಡು ಇರುವುದು […]

ಗ್ಯಾಜೆಟ್ ಲೋಕ – ೦೦೯ (ಮಾರ್ಚ್ ೦೧, ೨೦೧೨)

Friday, March 2nd, 2012
ಗ್ಯಾಜೆಟ್ ಲೋಕ - ೦೦೯ (ಮಾರ್ಚ್ ೦೧, ೨೦೧೨)

ನೋಕಿಯ ಲುಮಿಯ -ಅನುಭವಿಸಿಯೇ ತಿಳಿಯಬೇಕು   ಕನ್ಯಾಕುಮಾರಿ ಎಷ್ಟು ಅದ್ಭುತವಾಗಿದೆ ಎಂಬುದನ್ನು ಲೇಖನಗಳನ್ನು ಓದಿ, ಚಲನಚಿತ್ರ ನೋಡಿ ಪೂರ್ತಿ ತಿಳಿಯಲು ಅಸಾಧ್ಯ. ಹಾಗೆಯೇ ನೋಕಿಯ ಲುಮಿಯ ಫೋನನ್ನು ಬಳಸಿ ಅನುಭವಿಸಿಯೇ ತಿಳಿಯಬೇಕು. ಪರದೆಯ ಮೇಲೆ ಐಕಾನ್‌ಗಳನ್ನು ಜಾರಿಸುವುದು ಒಂದು ಪ್ರತ್ಯೇಕ ಅನುಭವವೇ ಸರಿ.   ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮೊಬೈಲ್ ಫೋನ್ ತಯಾರಿಸುವ ಕಂಪೆನಿ ನೋಕಿಯ. ಸಾಮಾನ್ಯವಾಗಿ ರಸಪ್ರಶ್ನೆಗಳಲ್ಲಿ ಕೇಳುವ ಒಂದು ಪ್ರಶ್ನೆ ಹೀಗಿದೆ “ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡಿಜಿಟಲ್ ಕ್ಯಾಮರ ತಯಾರಿಸುವ ಕಂಪೆನಿ […]

ಗ್ಯಾಜೆಟ್ ಲೋಕ – ೦೦೮ (ಪೆಬ್ರವರಿ ೨೩, ೨೦೧೨)

Thursday, February 23rd, 2012
ಗ್ಯಾಜೆಟ್ ಲೋಕ - ೦೦೮ (ಪೆಬ್ರವರಿ ೨೩, ೨೦೧೨)

ಕೇಳಿದ್ದೀರಾ ಕೋವೋನ್ ಸಿ2 ಪ್ಲೇಯರ್?   ವೈಯಕ್ತಿಕ ಮನರಂಜನೆಯ ಉಪಕರಣಗಳಲ್ಲಿ ಕೋವೋನ್ ಅಷ್ಟು ಪ್ರಚಲಿತವಲ್ಲದ ಹೆಸರು. ಆದರೆ ಇದರ ಗುಣಮಟ್ಟವನ್ನು ಒಮ್ಮೆ ಅನುಭವಿಸಿದರೆ ಇದು ಇತರೆ ಯಾವುದೇ ಬ್ರಾಂಡ್‌ಗೆ ಕಡಿಮೆಯಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಅಂತೆಯೇ ನೀಡುವ ಹಣಕ್ಕೆ ದೊರೆಯುವ ಸವಲತ್ತುಗಳೂ ಅಧಿಕವೇ.   ನಡೆದಾಡುವಾಗ, ಪ್ರಯಾಣಿಸುವಾಗ, ಸುಮ್ಮನೆ ಕುಳಿತಿದ್ದಾಗ, ಪುಸ್ತಕ ಓದುವಾಗ -ಹೀಗೆ ಹಲವು ಸಂದರ್ಭಗಳಲ್ಲಿ ಸಂಗೀತ ಅಥವಾ ಹಾಡು ಕೇಳುವುದು ಹಲವರ ಹವ್ಯಾಸ. ನನಗೂ ಸಹ. ಹೀಗೆ ಮಾಡಲು ಅನುವು ಮಾಡಿಕೊಡುವ ಹಲವು ಉಪಕರಣಗಳಿವೆ. ಇವುಗಳಲ್ಲಿ […]

ಗ್ಯಾಜೆಟ್ ಲೋಕ – ೦೦೭ (ಪೆಬ್ರವರಿ ೧೬, ೨೦೧೨)

Thursday, February 16th, 2012
ಗ್ಯಾಜೆಟ್ ಲೋಕ - ೦೦೭ (ಪೆಬ್ರವರಿ ೧೬, ೨೦೧೨)

ಜನಸಾಮಾನ್ಯರ ಕ್ಯಾಮರ – ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್   ಕೈಗೆಟುಕುವ ಬೆಲೆಯಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದ ಒಂದು ಕ್ಯಾಮರಾ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್. ಕಾಂಪಾಕ್ಟ್ ಎಂದರೆ ಎಸ್‌ಎಲ್‌ಆರ್ ಅಲ್ಲದ ಕ್ಯಾಮರಾಗಳಲ್ಲಿ ೮೦೦೦ರೂ. ಒಳಗೆ ದೊರೆಯುವ ಕ್ಯಾಮರಾಗಳಲ್ಲಿ ಒಂದು ಉತ್ತಮ ಕ್ಯಾಮರ ಎನ್ನಬಹುದು. ವೃತ್ತಿನಿರತಲ್ಲದವರಿಗೆ ತೃಪ್ತಿನೀಡಬಲ್ಲ ಕ್ಯಾಮರ.   ಕ್ಯಾಮರಾಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸುಮ್ಮನೆ ನೋಡಿ ಫೊಟೋ ತೆಗೆಯುವಂತಹದು (ಏಮ್ ಆಂಡ್ ಶೂಟ್) ಮತ್ತು ಎಸ್‌ಎಲ್‌ಆರ್‌ಗಳು. ಈ ಬಗ್ಗೆ ನಾವು ಈಗಾಗಲೇ […]

ಗ್ಯಾಜೆಟ್ ಲೋಕ – ೦೦೬ (ಪೆಬ್ರವರಿ ೦೯, ೨೦೧೨)

Tuesday, February 14th, 2012
ಗ್ಯಾಜೆಟ್ ಲೋಕ - ೦೦೬ (ಪೆಬ್ರವರಿ ೦೯, ೨೦೧೨)

ಬಾಗುವ ಮೌಸ್   ಇದೊಂದು ವಿಶಿಷ್ಟ ಮಾದರಿಯ ಮೌಸ್. ಪೆಟ್ಟಿಗೆಯಿಂದ ತೆಗೆಯುವಾಗ ಇದು ನೇರ. ಕೆಲಸ ಮಾಡುವಾಗ ಇದು ವಕ್ರ. ಇದುವೇ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್. ಆಕಾರದಲ್ಲಿ ಮಾತ್ರ ವಕ್ರ. ಕೆಲಸದಲ್ಲಲ್ಲ! ಗಣಕ ಬಳಸಲು ಬೇಕಾಗುವ ಒಂದು ಅತಿ ಮುಖ್ಯ ಸಾಧನ ಮೌಸ್. ಗಣಪನಿಗೆ ಇಲಿ ಎಷ್ಟು ಮುಖ್ಯವೋ ಹಾಗೆಯೇ ಗಣಕಕ್ಕೆ ಈ ಮೂಷಿಕ ಅತಿ ಮುಖ್ಯ. ಇದೊಂದು ಮಾಹಿತಿಯ ಊಡಿಕೆಯ (input) ಸಾಧನ. ವಿಂಡೋಸ್ ಬಳಕೆಗೆ ಬಂದ ನಂತರ ಮೌಸ್ ಇಲ್ಲದೆ ಕೆಲಸ ಮಾಡುವುದೇ […]

ಗ್ಯಾಜೆಟ್ ಲೋಕ – ೦೦೫ (ಪೆಬ್ರವರಿ ೦೨, ೨೦೧೨)

Friday, February 3rd, 2012
ಗ್ಯಾಜೆಟ್ ಲೋಕ - ೦೦೫ (ಪೆಬ್ರವರಿ ೦೨, ೨೦೧೨)

ದೊಡ್ಡ ಕಿಸೆಯುಳ್ಳವರಿಗಾಗಿ “ದೊಡ್ಡ” ಫೋನು   ಇಂಗ್ಲಿಶಿನಲ್ಲಿ peerson with deep pocket ಎಂಬ ಮಾತು ಚಾಲ್ತಿಯಲ್ಲಿದೆ. ಅದನ್ನು ಕನ್ನಡೀಕರಿಸಿದಾಗ ದೊಡ್ಡ ಕಿಸೆಯುಳ್ಳವರು ಎಂದಾಗುತ್ತದೆ. ಅಂದರೆ ತುಂಬ ಹಣವಿರುವವರು. ಇಲ್ಲಿ ನಾವು ಆ ಮಾತಿನ ಇನ್ನೂ ಒಂದು ಅರ್ಥ ಎಂದರೆ ಗಾತ್ರದಲ್ಲಿ ದೊಡ್ಡ ಕಿಸೆ ಎಂಬುದನ್ನೂ ತೆಗೆದುಕೊಳ್ಳೋಣ. ಗಾತ್ರದಲ್ಲಿ ದೊಡ್ಡ ಕಿಸೆ ಮತ್ತು ತುಂಬ ಹಣವಿರುವವರಿಗಾಗಯೇ ಬಂದಿರುವ ದೊಡ್ಡ ಫೋನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್.   ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಂಬುದು ಒಂದು ಫೋನು ಎಂದು ಅವರು […]

ಗ್ಯಾಜೆಟ್ ಲೋಕ – ೦೦೪ (ಜನವರಿ ೨೬, ೨೦೧೨)

Friday, February 3rd, 2012
ಗ್ಯಾಜೆಟ್ ಲೋಕ - ೦೦೪ (ಜನವರಿ ೨೬, ೨೦೧೨)

ಕ್ರಿಯೇಟಿವ್ ಇಪಿ ೬೩೦ – ಕಿವಿಯೊಳಗೆ ಅವಿತು …   ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಗಳಿಗಂಜಿದೊಡೆಂತಯ್ಯಾ? ಗದ್ದಲದೊಳಗಡೆಯೇ ಇದ್ದು ಸಂಗೀತ ಕೇಳಬೇಕೆಂದರೆ ಎಂತಯ್ಯಾ? ಅದಕೆಂದೇ ಬಂದಿದೆ ಕ್ರಿಯೇಟಿವ್ ಇಪಿ೬೩೦ ಮಾದರಿಯ ಇಯರ್‌ಬಡ್‌ಗಳು.   ಯಾವುದೇ ಸಂಗೀತ ಉಪಕರಣದಿಂದ ಸಂಗೀತ ಆಲಿಸಲು ಇರುವ ಸಾಧನಗಳ ಸಾಲಿನಲ್ಲಿ ಕೊನೆಯ ಹಂತ ಸ್ಪೀಕರ್. ಇದನ್ನು ಎಲ್ಲರೂ ನೋಡಿಯೇ ಇರುತ್ತೀರಾ. ಸ್ಪೀಕರ್ ಮೂಲಕ ಹೊಮ್ಮುವ ಧ್ವನಿಯನ್ನು ಕೋಣೆಯಲ್ಲಿರುವ ಅಥವಾ ಹಾಲ್‌ನಲ್ಲಿರುವ ಎಲ್ಲರೂ ಆಲಿಸಿ ಆನಂದ ಪಡಬಹುದು. ಒಬ್ಬರಿಗೆ ಮಾತ್ರ ಸಂಗೀತ ಕೇಳಬೇಕಾದಾಗ? ಅಥವಾ […]

ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

Thursday, January 19th, 2012
aim and shoot camera

ಕ್ಯಾಮರಾಗಳು ಸಾರ್ ಕ್ಯಾಮರಾಗಳು   ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ನೀಡಲಾಗುವುದು. ಇದು ಈ ಮಾಲಿಕೆಯಲ್ಲಿ ಮೊದಲ ಕಂತು.   ಒಂದಾನೊಂದು ಕಾಲದಲ್ಲಿ ಕ್ಯಾಮರಾಗಳು ಈಗಿನಷ್ಟು ಪ್ರಚಲಿತವಾಗಿರಲಿಲ್ಲ. ಕ್ಯಾಮರಾಕ್ಕೆ ಫಿಲ್ಮ್ ರೀಲು ತುಂಬಿಸಿ ಅದರಲ್ಲಿ ತೆಗೆಯಬಹುದಾದಷ್ಟು ಎಲ್ಲ ಫೋಟೋಗಳನ್ನು ಕ್ಲಿಕ್ ಮಾಡಿ, ಫಿಲ್ಮನ್ನು ತೆಗೆದು ಸ್ಟುಡಿಯೋಗೆ ಸಂಸ್ಕರಿಸಲು ಕೊಟ್ಟು ನಂತರ […]