ಕನ್ನಡದಲ್ಲಿ .ಭಾರತ ಡೊಮೈನ್ ಹೆಸರು ಈಗ ಲಭ್ಯ

Friday, July 17th, 2020

ಜಾಲತಾಣಗಳ (websites) ವಿಳಾಸಗಳು ಇಂಗ್ಲಿಷಿನಲ್ಲೇ ಇರುವುದು ಗೊತ್ತಿರಬಹುದು. ಅವುಗಳನ್ನು ಪ್ರಪಂಚದ ಎಲ್ಲ ಭಾಷೆಗಳಲ್ಲೂ ಲಭ್ಯಗೊಳಿಸುವುದಕ್ಕೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಇವು ಕನ್ನಡದಲ್ಲಿ ಲಭ್ಯವಿರಲಿಲ್ಲ. ಕನ್ನಡದಲ್ಲಿ ಜಾಲತಾಣ ವಿಳಾಸ ಬಗ್ಗೆ ಹೆಚ್ಚಿನ ತಿಳಿವಳಿಕೆಗೆ ಈ ಲೇಖನ ಓದಬಹುದು. ಭಾರತೀಯ ಭಾಷೆಗಳಲ್ಲಿ .in ಡೊಮೈನ್ ಹೆಸರುಗಳಿಗೆ ಪರ್ಯಾಯವಾದ ಜಾಲತಾಣ ಹೆಸರುಗಳ ಉಸ್ತುವಾರಿಯನ್ನು ನೋಡಿಕೊಳ್ಳುವ NIXI ಯವರ ಜಾಲತಾಣದಲ್ಲಿ ಈಗ ಯಾವ ಯಾವ ಭಾರತೀಯ ಭಾಷೆಗಳಲ್ಲಿ ಇವುಗಳು ಲಭ್ಯ ಎಂಬ ವಿವರವಿದೆ. ಅದರ ಪ್ರಕಾರ […]

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ

Thursday, November 14th, 2013

ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮ ವಿವರ ೯:೩೦-೧೦:೦೦ ನೋಂದಣಿ ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ ಪ್ರಸ್ತಾವನೆ – ಡಾ. ಯು. ಬಿ. ಪವನಜ ಮುಖ್ಯ ಅತಿಥಿಗಳ ಮಾತು ಡಾ. ಯು. ಆರ್. ಅನಂತಮೂರ್ತಿ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ ಹತ್ತು […]

ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ

Thursday, November 14th, 2013

ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಗಳು ಶೈಕ್ಷಣಿಕ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವ ಧ್ಯೇಯೋದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾಗಿವೆ.  ಇದೀಗ ಆಕಾಶದಲ್ಲಿ ಕಾಣಿಸಿಕೊಂಡಿರುವ ಆಕಾಶಕಾಯ ಐಸಾನ್ ಧೂಮಕೇತುವಿನ ವೀಕ್ಷಣೆಗೆ ಆ ಮೂಲಕ ಖಗೋಳದ ಬಗೆಗಿನ ಮೂಢನಂಬಿಕೆಗಳನ್ನು ತೊಡೆದು ಹಾಕಲು ಬೃಹತ್ ವೈಜ್ಞಾನಿಕ ಆಂದೋಲನವನ್ನು […]

ಕೊನೆಗೂ ಯುನಿಕೋಡ್ ಜಾರಿ

Wednesday, December 12th, 2012
ಕೊನೆಗೂ ಯುನಿಕೋಡ್ ಜಾರಿ

ಕರ‍್ನಾಟಕ ಸರಕಾರವು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ಕನ್ನಡ ತಂತ್ರಾಂಶ ಸಲಹಾ ಸಮಿತಿಯನ್ನು ನೇಮಿಸಿತ್ತು. ಅದು ೨೦೧೦ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸೂಚಿಸಿದ ಒಂದು ಪ್ರಮುಖ ಅಂಶವೆಂದರೆ ಕರ‍್ನಾಟಕ ಸರಕಾರವು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡದ ಬಳಕೆಯನ್ನು ಯುನಿಕೋಡ್ ಮೂಲಕವೇ ಮಾಡತಕ್ಕದ್ದು ಎಂದು ಅಧಿಸೂಚನೆ ಹೊರಡಿಸುವುದು. ಕೊನೆಗೂ ಈ ಅಧಿಸೂಚನೆ ಹೊರಟಿದೆ. ಇನ್ನು ಮುಂದೆ ಸರಕಾರದ ಎಲ್ಲ ಕೆಲಸ ಕಾರ‍್ಯಗಳಲ್ಲಿ ಕನ್ನಡ ಭಾಷೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ […]

“ಶುಕ್ರಗ್ರಹದ ಸಂಕ್ರಮ” ವಿಶೇಷ ಕಮ್ಮಟಗಳು

Wednesday, April 25th, 2012

ಬೆಂಗಳೂರು, ಏಪ್ರಿಲ್ ೨೫ (ಕರ್ನಾಟಕ ವಾರ್ತೆ) : ಜೂನ್ ೦೬ ರಂದು ನಡೆಯಲಿರುವ “ಶುಕ್ರಗ್ರಹದ ಸಂಕ್ರಮ “ ಎಂಬ   ವಿಶೇಷ ಖಗೋಳೀಯ ಘಟನೆ ಶತಮಾನಕ್ಕೆ ಒಮ್ಮೆ ನಡೆಯುವಂತಹುದು.   ಚಂದ್ರನ ಬದಲು ಶುಕ್ರಗ್ರಹ ಸೂರ್ಯನ ಮುಂದೆ  ಹಾದು ಹೋಗುವುದು.   ಮುಂದೆ ಬರಲಿರುವ ಶುಕ್ರ ಸಂಕ್ರಮ ೨೧೧೭ರಲ್ಲಿ.   ಈ ಘಟನೆಯ     ವೀಕ್ಷಣೆ ಮತ್ತು  ಇದರ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಲು ತಾರಾಲಯವು ಒಂದು ದಿನದ ವಿಶೇಷ ಕಮ್ಮಟವನ್ನು ಹಮ್ಮಿಕೊಂಡಿದೆ.  ಏಪ್ರಿಲ್ ೨೯ ಮತ್ತು ಮೇ ೧೩ ರಂದು ನಡೆಯುವ ಈ […]

ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

Tuesday, March 20th, 2012
ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ “ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು – ಹವ್ಯಕ ಪಂಗಡದಿಂದ ಬಂದವರಿದ್ದಾರೆ.   ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ನಾಲ್ಕು ವರುಷಗಳಿಂದ ತನ್ನ ಸಾಹಿತ್ಯ ಕಾರ್ಯವನ್ನು ಮಾಡುತ್ತಿದೆ. http://oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಗಿ ಸರಕಾರೀ ಮಾನ್ಯತೆ ಪಡೆದಿದೆ. […]

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

Tuesday, March 6th, 2012

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವೀಮಡೋಸ್ ಫೋನಿಗೆ ತಂತ್ರಾಂಶ ತಯಾರಿ […]

ಪರಿಸರ ಪ್ರಶಸ್ತಿಗಾಗಿ ಅರ್ಜಿ-ನಾಮನಿರ್ದೇಶನ ಆಹ್ವಾನ

Tuesday, March 6th, 2012

ಬೆಂಗಳೂರು, ಮಾರ್ಚ್ ೦೬( ಕರ್ನಾಟಕ ವಾರ್ತೆ) :  ಪರಿಸರ ಸಂರಕ್ಷಣೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಲು ೨೦೧೧-೨೦೧೨ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಆಹ್ವಾನಿಸಲಾಗಿದೆ. ಈ ಪ್ರಶಸ್ತಿ ತಲಾ ೧.೦೦ ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಈ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳ (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ ಟ್ರಸ್ಟ್‌ಗಳು ಇತರೆ), ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡಲಾಗುವುದು. […]

ಕನ್ನಡ ಬ್ಲಾಗೋತ್ತಮರ ಸಭೆ

Sunday, March 9th, 2008

ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.

ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ

Sunday, February 17th, 2008

ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ

ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು.