Posts published in “ಸುದ್ದಿ ಸಮಾಚಾರ”
ಎಲ್ಲೆಲ್ಲಿ ಏನೇನು
ಬೆಂಗಳೂರು, ನವೆಂಬರ್ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ - ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಬೆಂಗಳೂರು, ಆಗಸ್ಟ್ ೨, ೨೦೦೭: ಸರಕಾರೇತರ ಸಂಸ್ಥೆ ಪರಿಸರದ ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ-೨೦೦೭ ನೀಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪ್ರಶಸ್ತಿಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಶ್ವರಪ್ರಸಾದರಿಗೆ ಈ ವರ್ಷ ಪರಿಸರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರು, ಜುಲೈ ೨೦- ‘ಮುಂಗಾರುಮಳೆ’ ೨೦೦೬-೦೭ನೇ ಸಾಲಿನ ರಾಜ್ಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ನಟಿ ಶ್ರೀಮತಿ ಎಂ.ಎನ್. ಲಕ್ಷ್ಮೀದೇವಿ ಅವರು ೨೦೦೬-೦೭ನೇ ಸಾಲಿನ ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾಗಿ’ದ್ದಾರೆ.
ಬೀದರ್‌ನಲ್ಲಿ ಆಗಸ್ಟ್ ೩ ರಿಂದ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಪ್ರಾರಂಭ
ಬೆಂಗಳೂರು, ಜುಲೈ ೧೩:- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೆಳನವನ್ನು ಬಿ.ವಿ.ಬಿ. ಮಹಾವಿದ್ಯಾಲಯ ಬೀದರ್‌ನಲ್ಲಿ ಬೀದರ್ ವಿಜ್ಞಾನ ಕೇಂದ್ರದ ಸ್ಥಳೀಯ ಸಂಘಟನೆಯಲ್ಲಿ ಆಗಸ್ಟ್ ೩ ರಿಂದ ೫ ರವರೆಗೆ ಏರ್ಪಡಿಸಲಾಗಿದೆ.
ಬೆಂಗಳೂರು ಜೂನ್ ೨೫ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯು ಸರ್ಕಾರದ ಅಧಿನಿಯಮಗಳು, ಅಧಿಸೂಚನೆಗಳು, ನಿಯಮಗಳು, ಉಪನಿಯಮಗಳು ಹಾಗೂ ಆದೇಶಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಲು, ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಮಿತಿಯಿಂದ ಪ್ರತ್ಯೇಕವಾದ ವೆಬ್‌ಸೈಟ್ ತೆರೆದಿದೆ.
ಬೆಂಗಳೂರಿನ ಮಾಹಿತಿ ಹಕ್ಕು ಹೋರಾಟ ಒಕ್ಕೂಟದವರು ಮಾಹಿತಿ ಹಕ್ಕು ಬ್ಯಾಂಕ್ ಸ್ಥಾಪಿಸಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ೨೦೦೭, ಎಪ್ರಿಲ್ ೨೧ ರಿಂದ ೨೯ರ ವರೆಗೆ ವಿಶ್ವ ಗೋ ಸಮ್ಮೇಳನ ಜರುಗಿತು. ದೇಶ ವಿದೇಶಗಳಿಂದ ಲಕ್ಷಗಟ್ಟಲೆಯಲ್ಲಿ ಜನರು ಬಂದು ಪ್ರಪಂಚದಲ್ಲೇ ಪ್ರಪ್ರಥಮ ಬಾರಿಗೆ ಜರುಗಿದ ಈ ವಿಶ್ವ ಗೋ ಸಮ್ಮೇಳನದಲ್ಲಿ ಭಾಗಿಯಾದರು. ಪ್ರತಿದಿನ ಭಜನೆ, ಕಾಮಧೇನು ತುಲಾಭಾರ, ಗೋವಿನ ವಿವಿಧ ವಿಷಯಗಳ ಬಗ್ಗೆ ಚರ್ಚೆ, ವಿಚಾರ ವಿನಿಮಯ ಗೋಷ್ಠಿಗಳು ಜರುಗಿದವು. ಹಲವು ಮಠಗಳ ಸಂತರುಗಳೂ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದ ಕೆಲವು ಛಾಯಾಚಿತ್ರಗಳು ಇಲ್ಲಿವೆ.
ಅದು ಸಂಜೆಯ ೬ ಘಂಟೆಯ ಸಮಯ, ಹಾಂಗ್ ಕಾಂಗ್ ಕನ್ನಡಿಗರಿಗೆ ಹಬ್ಬದ ವಾತಾವರಣ. "ಯುಗ ಯುಗಾದಿ ಕಳೆದರೂ ಯುಗದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ" ಎಂಬ ಕವಿವಾಣಿ ಹಾಂಗ್ ಕಾಂಗ್ ಕನ್ನಡಿಗರಿಗರಲ್ಲಿ ಹೊಸ ರೂಪ ಪಡೆದಿತ್ತು. ಹೊರನಾಡ ಕನ್ನಡಿಗರಿಂದ ದಿನಾಂಕ ೨೪ ರಂದು ಯುಗಾದಿ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು.
ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತೆನಿಸುವ ‘ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಮಾಹಿತಿ ಕಿಟ್’ ಅನ್ನು ಧಾರವಾಡದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಹೊರತಂದಿದೆ. ಪುತ್ತೂರಿನ ಅಡಿಕೆ ಪತ್ರಿಕೆ ಕಚೇರಿಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಖಂಡಿಗೆ ಶ್ರೀಕೃಷ್ಣ ಭಟ್ ಇದನ್ನು ಬಿಡುಗಡೆಮಾಡಿದರು.