Press "Enter" to skip to content

Vishva Kannada

eಳೆ – ೨೦ (ಡಿಸೆಂಬರ್ ೧೫, ೨೦೦೨)

eಳೆ - ೨೦ (ಡಿಸೆಂಬರ್ ೧೫, ೨೦೦೨)

ಅಂತರಜಾಲಾಡಿ

ಇಂದು ಗೀತಾಜಯಂತಿ. ಭಗವದ್ಗೀತೆಯಿಂದ ಪ್ರಭಾವಿತರಾಗದವರು ವಿರಳ. ಅಂತರಜಾಲದಲ್ಲಿ ಭಗವದ್ಗೀತೆಯ ತಾಣಗಳು ಹಲವಾರಿವೆ. www.bhagavad-gita.org ತಾಣದಲ್ಲಿ ಹಿಂದಿ, ಇಂಗ್ಲಿಶ್, ಫ್ರೆಂಚ್, ಸ್ಪಾನಿಶ್, ಇತ್ಯಾದಿ ಹಲವು ಭಾಷೆಗಳಲ್ಲಿ ಗೀತೆಯ ಅನುವಾದವನ್ನು ಓದಬಹುದು. ಗೀತೆಯ ಬಹುಮಾಧ್ಯಮ ಆವೃತ್ತಿ www.malkan.com/webgita/index.shtml ತಾಣದಲ್ಲಿದೆ. ಅಡೋಬಿ ಪಿ.ಡಿ.ಎಫ್. ಮತ್ತು ಪೋಸ್ಟ್‌ಸ್ಕ್ರಿಪ್ಟ್ ವಿಧಾನದಲ್ಲಿ, ಮುದ್ರಿಸಬಲ್ಲ ಗೀತೆ www.iconsoftec.com/gita ತಾಣದಲ್ಲಿದೆ. ಇಷ್ಟೆಲ್ಲ ಇದೆ ಅನ್ನುತ್ತೀರಲ್ಲ, ಕನ್ನಡದಲ್ಲಿ ಎಲ್ಲಿದೆ ಎಂದು ಕೇಳುತ್ತಿದ್ದೀರಾ? ಇದೋ ನಿಮಗಾಗಿ www.ourkarnataka.com/religion/gita/gita.htm ತಾಣದಲ್ಲಿ ಕನ್ನಡ ಆವೃತ್ತಿ ಇದೆ. ಇದು ಇನ್ನೂ ಸಂಪೂರ್ಣವಾಗಿಲ್ಲ. ಅದನ್ನು ಪೂರ್ಣಗೊಳಿಸಲು ನೀವೂ ಸಹಾಯ ಮಾಡಬಹುದು.

eಳೆ – ೧೯ (ಡಿಸೆಂಬರ್ ೮, ೨೦೦೨)

eಳೆ - ೧೯ (ಡಿಸೆಂಬರ್ ೮, ೨೦೦೨)

ಅಂತರಜಾಲಾಡಿ

ಅಂತರಜಾಲದ ಮೂಲಕ ದೂರಶಿಕ್ಷಣ ಈಗ ಜನಪ್ರಿಯವಾಗುತ್ತಿದೆ. ಮನೆಯಲ್ಲಿಯೇ ಕುಳಿತು ನಮ್ಮ ಬಿಡುವಿನ ಸಮಯದಲ್ಲಿ ಕಲಿಯಲು ಇದು ಸಹಾಯ ಮಾಡುತ್ತದೆ. ಅಂತರಜಾಲದ ಮೂಲಕ ಶಿಕ್ಷಣ ನೀಡುವ ಹಲವಾರು ತಾಣಗಳಿವೆ. ಅಂತಹ ತಾಣಗಳ ಸೂಚಿ ಮತ್ತು ಕಲಿಕೆಯ ವಿಷಯಗಳ ವಿವರ ನೀಡುವ ಒಂದು ತಾಣ: www.worldwidelearn.com. ಇದೇ ಪ್ರಕಾರದ ಮತ್ತೊಂದು ತಾಣ: www.elearners.com. ಇನ್ನು ತಡವೇಕೆ? ಮನೆಯಲ್ಲಿ ಕುಳಿತೇ ಅಮೇರಿಕಾದ ವಿಶ್ವವಿದ್ಯಾಲಯವೊಂದರ ಡಿಗ್ರಿ ಪಡೆಯರಿ. ಸಂತೋಷಕೂಟಕ್ಕೆ ನನ್ನನ್ನೂ ಆಹ್ವಾನಿಸಿ!

eಳೆ – ೧೮ (ಡಿಸೆಂಬರ್ ೧, ೨೦೦೨)

eಳೆ - ೧೮ (ಡಿಸೆಂಬರ್ ೧, ೨೦೦೨)

ಅಂತರಜಾಲಾಡಿ

ಗಾಜೆಟ್ ಪ್ರಿಯರುಗಳಿಗೆಂದೇ ಕೆಲವು ಅಂತರಜಾಲ ತಾಣಗಳಿವೆ. ಉದಾಹರಣೆಗೆ www.technoscout.com. ಇತ್ತೀಚಿಗೆ ಮಾರುಕಟ್ಟೆಯನ್ನು ಪ್ರವೇಶಿಸಿರುವ, ಬ್ಯಾಟರಿಯೇ ಇಲ್ಲದೆ ಕೆಲಸ ಮಾಡುವ, ಟಾರ್ಚ್ ಇಲ್ಲಿ ಲಭ್ಯ. 300 ಅಡಿ ದೂರದಲ್ಲಿ ಪಿಸು ಮಾತನಾಡುತ್ತಿರುವುದನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಸಾಧನವನ್ನು ಕೊಳ್ಳಬೇಕೆ? ಹಾಗಿದ್ದಲ್ಲಿ www.gadgets.com ತಾಣಕ್ಕೆ ಭೇಟಿ ನೀಡಿ.

eಳೆ – ೧೭ (ನವಂಬರ ೨೪, ೨೦೦೨)

eಳೆ - ೧೭ (ನವಂಬರ ೨೪, ೨೦೦೨)

ಅಂತರಜಾಲಾಡಿ

ಅಂತರಜಾಲದಿಂದ ಮೊಬೈಲ್ ಫೋನ್‌ಗಳಿಗೆ ಎಸ್.ಎಂ.ಎಸ್. ಸಂದೇಶ ಕಳುಹಿಸುವ ಹಲವು ತಾಣಗಳಿವೆ. ಹಿಂದೊಮ್ಮೆ ಅಂತಹ ತಾಣವೊಂದರ ವಿಳಾಸವನ್ನು ಇದೇ ಅಂಕಣದಲ್ಲಿ ಕೊಡಲಾಗಿತ್ತು. ಆ ತಾಣದಲ್ಲಿ ಸ್ವಲ್ಪ ತೊಂದರೆಯಿದೆ. ಅದೇನೆಂದರೆ ದಿನಕ್ಕೆ ೧೦೦೦ ಸಂದೇಶಗಳನ್ನು ಮಾತ್ರ ಅಲ್ಲಿಂದ ಕಳುಹಿಸಲು ಸಾಧ್ಯ. ಇಂತಹ ಮಿತಿ ಇಲ್ಲದ ಇನ್ನೊಂದು ತಾಣದ ವಿಳಾಸ: www.sms.ac. ಇಲ್ಲಿಂದ ಪ್ರಪಂಚದ ಬಹುಪಾಲು ದೇಶಗಳ ಮೊಬೈಲ್ ಫೋನ್‌ಗಳಿಗೆ ಸಂದೇಶ ಕಳುಹಿಸಲು ಸಾಧ್ಯ.

eಳೆ – ೧೬ (ನವಂಬರ ೧೭, ೨೦೦೨)

eಳೆ - ೧೬ (ನವಂಬರ ೧೭, ೨೦೦೨)

ಅಂತರಜಾಲಾಡಿ

ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು www.solarviews.com, kids.msfc.nasa.gov, www.dustbunny.com/afk. ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.

eಳೆ – ೧೫ (ನವಂಬರ ೧೦, ೨೦೦೨)

eಳೆ - ೧೫ (ನವಂಬರ ೧೦, ೨೦೦೨)

ಅಂತರಜಾಲಾಡಿ

ಮನೆಯಲ್ಲಿ ಅಡುಗೆ ಅನಿಲ ಮುಗಿದಿದೆಯೇ? ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಮಾಡಿದರೆ ಹೇಗೆ? ಹಿಂದುಸ್ತಾನ್ ಪೆಟ್ರೋಲಿಯಮ್‌ನ ಅನಿಲ ಉಪಯೋಗಿಸುವವರಾದರೆ www.hindustanpetroleum.com/lpgsbu/Gasbook/login.asp ತಾಣಕ್ಕೆ ಭೇಟಿ ನೀಡಬಹದು. ಅಡುಗೆ ಅನಿಲಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳು ಇಲ್ಲಿ ಲಭ್ಯ. ಭಾರತ್ ಪೆಟ್ರೋಲಿಯಮ್‌ನ ಅನಿಲ ಬುಕಿಂಗ್ ತಾಣ: www.ebharatgas.com. ಇಂಡಿಯನ್ ಆಯಿಲ್‌ನವರು ಇನ್ನೂ ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಆರಂಭಿಸಿಲ್ಲ.

eಳೆ – ೧೪ (ನವಂಬರ ೩, ೨೦೦೨)

eಳೆ - ೧೪ (ನವಂಬರ ೩, ೨೦೦೨)

ಅಂತರಜಾಲಾಡಿ

ಮತ್ತೊಮ್ಮೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ನಮ್ಮ ದೇಶದ ಪ್ರಮುಖ ಹಬ್ಬ ಎಂದು ದೀಪಾವಳಿಯನ್ನು ಕರೆದರೆ ತಪ್ಪೇನಿಲ್ಲ. ದೀಪಾವಳಿ ಹಬ್ಬದ ಬಗ್ಗೆ ವಿವರ, ಶುಭಾಶಯ ಪತ್ರ, ಉಡುಗೊರೆ, ಇತ್ಯಾದಿಗಳು ದೊರೆಯುವ ತಾಣದ ವಿಳಾಸ: www.diwalimela.com. ಇಲ್ಲಿಗೆ ಭೇಟಿ ನೀಡಿ ದಿವಾಳಿಯಾದರೆ ನಾನು ಹೊಣೆಯಲ್ಲ!

Inkscape 0.43 released

Opensource scalable vector graphics package [http://www.inkscape.org|Inkscape]'s new version has been released. It is still at version 0.43. It is the opensource alternative to popular CorelDraw and Adobe Illustrator. What I liked in Inkscpae is the support for Indian languages via opentype fonts. This feature is mssing both in CorelDraw and Illustrator. At last we can use Unicode and Indian languages in a vector graphics package.