- ಮರ್ಕಟ
ನಮ್ಮ ದೇಶದಲ್ಲಿ ನಿರುದ್ಯೋಗ ಎಲ್ಲ ಸಮಸ್ಯೆಗಳ ತಾಯಿಯಾದರೆ ಭ್ರಷ್ಟಾಚಾರ ತಂದೆ -ಜಾರ್ಜ್ ಫೆರ್ನಾಂಡಿಸ್
February 11, 2025
ಮಂದಹಾಸ ಮೂಡಿಸಲು ಸ್ವಲ್ಪ ಒಗ್ಗರಣೆ
ನಮ್ಮ ದೇಶದಲ್ಲಿ ನಿರುದ್ಯೋಗ ಎಲ್ಲ ಸಮಸ್ಯೆಗಳ ತಾಯಿಯಾದರೆ ಭ್ರಷ್ಟಾಚಾರ ತಂದೆ -ಜಾರ್ಜ್ ಫೆರ್ನಾಂಡಿಸ್
ವ್ಯಾಸರಾಯ ಬಲ್ಲಾಳರಿಗೆ ಅ.ನ.ಕೃ. ಪ್ರಶಸ್ತಿ.
ಗೋಪಾಲಕೃಷ್ಣ ಅಡಿಗರಿಗೆ ರಾಮಚಂದ್ರ ಶರ್ಮ ಪ್ರಶಸ್ತಿ ಕೊಟ್ಟಂತೆ ಎಂದು ಕುಹುಕಿಗಳು ಆಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಿವೆ ಎಂದು ನನಗೆ ಯುರೋಪಿನ ರಸ್ತೆಗಳನ್ನು ನೋಡಿದ ನಂತರ ಮನವರಿಕೆಯಾಗಿದೆ. -ಸಚಿವ ಅನಂತನಾಗ್.
`ನಾನು ಪೆಪ್ಸಿಯನ್ನು ಪ್ರತಿಸ್ಫರ್ಧಿ ಎಂದು ಪರಿಗಣಿಸಿಯೇ ಇಲ್ಲ. ನಮ್ಮ ನಿಜವಾದ ಪ್ರತಿಸ್ಫರ್ಧಿ ಎಂದರೆ ನೀರು' -ಕೋಕೋ ಕೋಲಾ ಕಂಪೆನಿಯ ರಿಚರ್ಡ್ ನಿಕೊಲ್ಸನ್.
`ನಾನು ಮುಟ್ಟಿದರೆ ನೀವು ಭಸ್ಮವಾಗಿ ಬಿಡುತ್ತೀರಿ' - ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರಿಗೆ.
ಭಾರತೀಯ ರೈಲುಗಳನ್ನು ಆಕರ್ಷಕಗೊಳಿಸಲು ಅವುಗಳಿಗೆ ವಿವಿಧ ಬಣ್ಣಗಳನ್ನು ಬಳಿಯಲಾಗುವುದು ಎಂದು ರೈಲು ಮಂತ್ರಿಗಳು ಹೇಳಿದ್ದಾರೆ.
ಸ್ವಾತಂತ್ರೊ ತ್ಸವದ ೫೦ನೆಯ ವರ್ಧಂತಿ.
೫೦ ವರ್ಷಗಳ ಅನಂತರವೂ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅಂದೂ ನಮ್ಮ ನಾಯಕರು ಕಾರಾಗೃಹದಲ್ಲಿದ್ದರು. ಇಂದೂ ನಮ್ಮ ಕೆಲವು ನಾಯಕರು ಕಾರಾಗೃಹದಲ್ಲಿದ್ದಾರೆ.
ಮರ್ಕಟ
ದೇವೇಗೌಡರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
ಒಂದಕ್ಕೊಂದು ವಿರೋಧಿ ಗುಣದ ಪಕ್ಷಗಳನ್ನು ಕಸಿ ಕಟ್ಟಿ ಸರಕಾರ ನಡೆಸಿದ್ದಕ್ಕೆ?
ಮರ್ಕಟ
ಬೆಂಗಳೂರು ನಗರ ಸಾರಿಗೆ ಬಸ್ಸುಗಳು ಸಮಯ ಪರಿಪಾಲನೆ ಮಾಡಲು ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಂಪ್ಯೂಟರೀಕೃತ ವಿಧಾನವನ್ನು ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಮರ್ಕಟ
ನೆನಪಿನ ಶಕ್ತಿಯನ್ನು ಹೆಚ್ಚಿಸುವ ಟಾನಿಕ್ ಮಾರುಕಟ್ಟೆಗೆ ಬಂದಿದೆ.
ಆದರೆ ಅಂಗಡಿಯಲ್ಲಿ ಹೋಗಿ ಕೇಳಲು ಅದರ ಹೆಸರೇ ಮರೆತು ಹೋಗಿದೆಯಲ್ಲ?!