ಚಿನಕುರಳಿ – ೨೨

Thursday, September 14th, 2006

– ಮರ್ಕಟ

ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ತೀವ್ರ ನಿಗಾ ವಹಿಸುವ ಸಲುವಾಗಿ ಸಾರ್ವಜನಿಕ ಕುಂದು ಕೊರತೆ ವಿಭಾಗವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸಿದೆ. ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ೧೦ ದಿನಗಳ ಒಳಗೆ ಉತ್ತರ ದೊರಕದಿದ್ದಲ್ಲಿ ಈ ಕುಂದು ಕೊರತೆಗಳ ವಿಭಾಗಕ್ಕೆ ನೇರವಾಗಿ ದೂರು ಸಲ್ಲಿಸಬಹುದು.

ಚಿನಕುರಳಿ – ೨೧

Thursday, September 14th, 2006

– ಮರ್ಕಟ

`ಸರ್ಕಾರಿ ನೌಕರರು ಅಮಾನತಿಗೆ ಒಳಗಾಗುವುದನ್ನು ಬಹಳ ಇಷ್ಟಪಡುತ್ತಾರೆ’ -ಡಾ| ಸಿದ್ಧಲಿಂಗಯ್ಯ.

ಚಿನಕುರಳಿ – ೨೦

Thursday, September 14th, 2006

– ಮರ್ಕಟ

`ನಾನು ರಾಜಕಾರಣದಿಂದ ಓಡಿ ಹೋಗುವುದಿಲ್ಲ’ -ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.

ಚಿನಕುರಳಿ – ೧೯

Thursday, September 14th, 2006

– ಮರ್ಕಟ

`ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ ರಾಜಕಾರಣಿಗಳು ಅಥವಾ ವಿಜ್ಞಾನಿಗಳಿಗೆ ಇಲ್ಲ. ಸಾಹಿತಿ ಮತ್ತು ಕಲಾವಿದರಿಂದ ಮಾತ್ರ ಮನುಷ್ಯ ಸಂಬಂಧಗಳನ್ನು ಬೆಸೆಯಲು ಸಾಧ್ಯ’ -ಮಾಜಿ ಮುಖ್ಯಮಂತ್ರಿ, ಸಾಹಿತಿ, ಎಂ. ವೀರಪ್ಪ ಮೊಯಿಲಿ.

ಚಿನಕುರಳಿ – ೧೮

Thursday, September 14th, 2006

– ಮರ್ಕಟ

ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಇಂಗ್ಲೆಂಡಿನ ಪಬ್ ಒಂದರಲ್ಲಿ ಊಟ ಮಾಡಿ ಬಿಲ್ ಪಾವತಿ ಮಾಡುವುದನ್ನು ಮರೆತಿದ್ದಾರೆ.

ಚಿನಕುರಳಿ – ೧೭

Monday, April 10th, 2006

– ಮರ್ಕಟ

`ಚೀನಾ ಸಿಂಗಾಪುರಗಳಂತೆ ಭ್ರಷ್ಟರನ್ನೆಲ್ಲ ಗಲ್ಲಿಗೆ ಏರಿಸಿ’ -ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.

ಚಿನಕುರಳಿ – ೧೬

Monday, April 10th, 2006

– ಮರ್ಕಟ

`ಬ್ರಿಟಿಷರು ನಮ್ಮ ದೇಶವನ್ನು ೨೦೦ ವರ್ಷಗಳ ಕಾಲ ಆಳಿದ್ದು ಒಳ್ಳೆಯದೇ ಆಯಿತು. ಇದರಿಂದ ನಾವು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಇಂಗ್ಲಿಷ್‌ನಲ್ಲಿ ಯೋಚಿಸಲು ಸಾಧ್ಯವಾಯಿತು’ -ಎಸ್. ಎಂ. ಕೃಷ್ಣ, ಬೆಂಗಳೂರು ಐ. ಟಿ. ಡಾಟ್ ಕಾಂ ಉದ್ಘಾಟನೆಯ ಸಂದರ್ಭದಲ್ಲಿ.

ಚಿನಕುರಳಿ – ೧೫

Monday, April 10th, 2006

– ಮರ್ಕಟ

`ಮೂಳೆಚಕ್ಕಳಗಳನ್ನು ಹೊಂದಿದ್ದ ಇಂಥೊಬ್ಬ ಮನುಷ್ಯ ನಮ್ಮ ನಡುವೆ ನಡೆದಾಡುತ್ತಿದ್ದ ಎಂಬುದನ್ನು ನಂಬಲು ಮುಂದಿನ ಜನಾಂಗಕ್ಕೆ ಕಷ್ಟವಾಗುತ್ತದೆ’ -ಅಲ್ಬರ್ಟ್ ಐನ್‌ಸ್ಟೀನ್, ಮಹಾತ್ಮಾ ಗಾಂಧಿ ಬಗ್ಗೆ.

ಚಿನಕುರಳಿ – ೧೪

Monday, April 10th, 2006

– ಮರ್ಕಟ

ಮಾಹಿತಿ ತಂತಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದ ಅನಿವಾಸಿ ಭಾರತೀಯರನ್ನು ಪ್ರಧಾನಿ ವಾಜಪೇಯಿಯವರು ಶ್ಲಾಘಿಸಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಚಿನಕುರಳಿ – ೧೩

Monday, April 10th, 2006

– ಮರ್ಕಟ

ವೀರಪ್ಪನನ್ನು ಹಿಡಿಯುವುದಿರಲಿ ಅವನು ಎಲ್ಲಿದ್ದಾನೆಂದು ಪತ್ತೆ ಹಚ್ಚಲು ಕೂಡ `ಕರ್ನಾಟಕ ಮೀಸಲು ಪಡೆ’ ಅಸಮರ್ಥವಾಗಿದೆ. ವೀರಪ್ಪನ ಥರವೇ ದೊಡ್ಡ ಮೀಸೆ ಹೊತ್ತ ನಕ್ಕೀರನ್ ಸಂಪಾದಕ ಗೋಪಾಲ್ ನಿರಾಯಾಸವಾಗಿ ವೀರಪ್ಪನ್ ಬಳಿ ಮತ್ತೆ ಮತ್ತೆ ಹೋಗಿ ಬರುತ್ತಿದ್ದಾರೆ.