- ದಿನೇಶ ನೆಟ್ಟಾರ್
ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:
June 14, 2026
ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:
ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.
ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)
ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು. ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ. ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು? ಒಂದು ದಿನದ ಒಬ್ಬನ ಆಹಾರ : ೧. ಏಕದಳ ಧಾನ್ಯಗಳು ೪೬೦ ಗ್ರಾಂ ೨. ಬೇಳೆಗಳು ೪೦ ಗ್ರಾಂ ೩. ಹಸಿ ತರಕಾರಿಗಳು ೪೦ ಗ್ರಾಂ ೪. ಇತರೆ ತರಕಾರಿಗಳು ೪೦ ಗ್ರಾಂ ೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ ೬. ಹಣ್ಣುಗಳು ೩೦ ಗ್ರಾಂ ೭. ಹಾಲು ೧೫೦ ಗ್ರಾಂ ೮. ಕೊಬ್ಬು ೪೦ ಗ್ರಾಂ ೯. ಬೆಲ್ಲ ೩೦ ಗ್ರಾಂ ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ. ೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ. ೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು. ೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ. ೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು. ೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ. ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ 'ಸಿ' ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ. ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ 'ಬಿ' ಮತ್ತು 'ಸಿ' ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ. ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ 'ಸೂಪ್'ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ. ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ ಕ್ಯಾಲ್ಸಿಯಂ ೧೦.೦೦ ೧೦.೦೦ ಕಬ್ಬಿಣ ೩.೨೦ ೩.೧೦ ಥಯಾಮಿನ್ ೦.೨೧ ೦.೦೬ ರಿಬೋಫ್ಲೇವಿನ್ ೦.೧೬ ೦.೦೬ ನಯಾಸಿನ್ ೩.೯೦ ೧.೯೦ ನಾರು ೦.೬೦ ೦.೨೦ ಥಯಾಮಿನ್, ನಯಾಸಿನ್ ಮುಂತಾದವು ಬಹ
ಕ್ಷಾತ್ರ ಪರಂಪರೆ : ಪಂಪ
ಸ್ವಾಭಿಮಾನ
ಕನ್ನಡ ಸಂಸ್ಕೃತಿಯ ತಿರುಳನ್ನು ಒಂದೆರಡು ಮಾತುಗಳಲ್ಲಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಅವರಿಗೆ ನಾನು ಕೊಡುವ ಉತ್ತರ: ``ಸ್ವಾಭಿಮಾನ ಮತ್ತು ಸಮನ್ವಯ". ಸ್ವಾಭಿಮಾನವೆಂದರೆ ತನ್ನ ಬಗ್ಗೆ ಮತ್ತು ತನ್ನತನದ ಬಗ್ಗೆ ಇರುವ ಪೂರ್ಣ ಅರಿವು ಮತ್ತು ವಿಶ್ವಾಸ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಅಹಂಕಾರವು ಬಹುತೇಕ ಸ್ವಾರ್ಥಪರವೂ ಇತರ ಯಾರನ್ನೇ ಗುರುತಿಸದೆ ತನ್ನನ್ನು ಮಾತ್ರ ಎತ್ತಿ ಹಿಡಿದುಕೊಳ್ಳುವ ಸ್ವಪ್ರೇಮವೂ ಆಗಿದ್ದು ಟೊಳ್ಳುತನವನ್ನು ಬೆಳೆಸಿಕೊಂಡಿರುವ ಸ್ವಪ್ರತಿಷ್ಠೆಯ ಪ್ರತೀಕ. ಸ್ವಾಭಿಮಾನಿಯು ಬೆಳೆದ ಮತ್ತು ಬೆಳೆಯುವ ವ್ಯಕ್ತಿಯಾದುದರಿಂದ ಅವನು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ದೊಡ್ಡತನವನ್ನು ಗುರುತಿಸಲು ಸಿದ್ಧನಿರುತ್ತಾನೆ. ಸ್ವಾಭಿಮಾನವೆನ್ನುವುದು ಎರಡು ಮುಖಗಳ ನಾಣ್ಯವಿದ್ದಂತೆ - ನಾನು ಇನ್ನೊಬ್ಬನಿಗಿಂತ ಕಡಿಮೆ ಅಲ್ಲವೆಂಬ ನಂಬಿಕೆ ಇರುವಂತೆಯೇ ಇತರರೂ ತನಗಿಂತ ಕಡಮೆ ಇರಲಾರರು ಎಂಬ ನಂಬಿಕೆಯು ಅವನಿಗಿರುತ್ತದೆ. ಅವನು ಎಂದೂ ಇನ್ನೊಬ್ಬರ ನೆರಳಾಗಿರಲು ಬಯಸದೆ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಾಗಲಿ ಅಂತಹ ಸ್ವಾಭಿಮಾನಿಗಳಿಂದ ಮಾತ್ರವೇ ಮೌಲಿಕ ಕಾರ್ಯಗಳು ನಡೆಯುತ್ತವೆ.
ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ "ಕರ್ನಾಟಕ" ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ "ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ" ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು "ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ" ಎಂದು.
ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನ್ನಿಸುತ್ತದೆ. ಅವರಿಗೆ ಭಾರತ ಮಾತ್ರ ಮುಖ್ಯ ; ರಾಷ್ಟ್ರಪ್ರೇಮವೊಂದೇ ದೇಶಪ್ರೇಮ. ಕರ್ನಾಟಕ ಪ್ರೇಮ ಎಂಬ ಮಾತು ಅವರಿಗೆ ಅರ್ಥಹೀನ. ಕನ್ನಡ ನಾಡು, ಕನ್ನಡ ನುಡಿಗಳನ್ನು ಕೊಂಡಾಡುವುದು ಅವರಿಗೆ ರಾಷ್ಟ್ರದ್ರೋಹವಾಗಿಯೂ ಕಂಡಿದೆ. ಭಾರತೀಯ ಸಂಸ್ಕೃತಿಯೊಂದು ಇರುವಂತೆ ಕರ್ನಾಟಕ ಸಂಸ್ಕೃತಿಯೆಂಬುದೊಂದು ಅವರ ಪಾಲಿಗೆ ಇಲ್ಲ. ಇದು ಸರಿಯೋ? ವಿಚಾರ ಮಾಡೋಣ.
೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.