Press "Enter" to skip to content

Posts published in “Year: 2006

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೪

- ಡಾ| ಎಂ. ಚಿದಾನಂದ ಮೂರ್ತಿ

ಧರ್ಮ ಸಮನ್ವಯ

ಕರ್ನಾಟಕ ಸಂಸ್ಕೃತಿಯು ತನ್ನ ಬದುಕು, ಸಾಹಿತ್ಯ, ಕಲೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸಿರುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಸಮನ್ವಯವು ಸಂಸ್ಕೃತಿಯ ಇತರ ಶಾಖೆಗಳಲ್ಲಿ ಹೇಗೋ ಅಂತೆಯೇ ಇನ್ನೊಂದು ಪ್ರಮುಖ ಶಾಖೆಯಾದ ಧರ್ಮದಲ್ಲಿಯೂ ಕಾಣಿಸಿಕೊಂಡ ಪರಿಯೂ ಗಮನಾರ್ಹವಾಗಿದೆ. ಕರ್ನಾಟಕ ಹಲವು ವಿಭಿನ್ನ ಧರ್ಮಗಳ, ವಿಭಿನ್ನ ಆಲೋಚನೆಗಳ ನಾಡು; ಸಂತರ ನಾಡು. ಒಂದು ಶಾಸನವು ಕರ್ನಾಟಕವನ್ನು ``ಸರ್ವಧರ್ಮಧೇನುನಿವಹಕ್ಕಾಡುಂಬೊಲಂ" ಎಂದು ವರ್ಣಿಸಿದೆ. ಅದು ಎಲ್ಲ ಧರ್ಮಗಳೆಂಬ ಹಸುಗಳು ಆಡುವ ಬಯಲು ಪ್ರದೇಶ ಎಂದು ಕರ್ನಾಟಕವನ್ನು ವರ್ಣಿಸಿರುವುದು ಉಚಿತವಾಗಿದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಬಂದ ಬೌದ್ಧ ಧರ್ಮದಿಂದ ಏನಿಲ್ಲವೆಂದರೂ ಪರೋಕ್ಷವಾಗಿಯಾದರೂ ಹನ್ನೆರಡನೆಯ ಶತಮಾನದ ಬೆಡಗಿನ ವಚನಗಳು ರೂಪುಗೊಂಡವು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಜೈನಧರ್ಮವಂತೂ ಕರ್ನಾಟಕ ಸಂಸ್ಕೃತಿಗೆ ತನ್ನ ಸಾಹಿತ್ಯ, ಬೌದ್ಧಿಕಶಾಸ್ತ್ರಸಾಹಿತ್ಯ, ಶಿಲ್ಪ ವಾಸ್ತುಗಳ ಮೂಲಕ ಅಪೂರ್ವ ಕೊಡುಗೆಗಳನ್ನು ಕೊಟ್ಟಿತು. ವೀರಶೈವ ಧರ್ಮವು ವಚನ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಶ್ರೀವೈಷ್ಣವ ಧರ್ಮವು ಹಲವು ಸುಂದರ ದೇವಾಲಯಗಳಿಗೆ ಸ್ಫೂರ್ತಿಯನ್ನು ನೀಡಿತು. ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೆ ಇನ್ನೂ ಹಲವಾರು ಪಂಥಗಳು ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿದವು.

ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್'

ಸಹಕಾರ ರಂಗದ ರಚನಾತ್ಮಕ ಕಾರ್ಯಗಳ ದಾಖಲೀಕರಣ ಹಾಗೂ ಸಾಮಾಜಿಕ ಅಭಿಪ್ರಾಯ ರೂಪಿಸಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್ ಆರಂಭಿಸಿದೆ. ಈ ವಿಷಯವನ್ನು ಸಂಯುಕ್ತ ಸಹಕಾರಿ ಪುನರಾಯ್ಕೆಗೊಂಡ ಅಧ್ಯಕ್ಷ ಶ್ರೀ ಮನೋಹರ ಮಸ್ಕಿಯವರು ಪ್ರಕಟಿಸಿದ್ದಾರೆ.

ಏರ್‌ಟೆಲ್‌ನವರಿಂದ ನೆಟ್ ಎಕ್ಸ್‌ಪರ್ಟ್

ಬೆಂಗಳೂರು, ಮಾರ್ಚ್ ೩೧, ೨೦೦೬: ಏರ್‌ಟೆಲ್ ಕಂಪೆನಿ ಸಪ್ಪೋರ್ಟ್‌ಸಾಫ್ಟ್ ಕಂಪೆನಿಯೊಂದಿಗೆ ಸಹಯೋಗದಲ್ಲಿ ನೆಟ್ ಎಕ್ಸ್‌ಪರ್ಟ್ ಎಂಬ ತಂತ್ರಾಂಶವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ತಂತ್ರಾಂಶವು ಏರ್‍ಟೆಲ್‌ನವರ ಬ್ರಾಡ್‌ಬಾಂಡ್ ಅಂತರಜಾಲ ಸಂಪರ್ಕ ಹೊಂದಿದವರಿಗೆ ಉಪಯುಕ್ತವಾಗಿದೆ. ಏರ್‍ಟೆಲ್ ಗ್ರಾಹಕರಿಗೆ ಈ ತಂತ್ರಾಂಶವನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಏರ್‍ಟೆಲ್‌ನ ಬ್ರಾಡ್‌ಬಾಂಡ್ ಸಂಪರ್ಕದಲ್ಲಿ ಏನಾದರೂ ಅಡಚಣೆಯಾದರೆ ಈ ತಂತ್ರಾಂಶದ ಮೂಲಕ ಅದನ್ನು ಪತ್ತೆಹಚ್ಚಿ ದುರಸ್ತಿ ಮಾಡಬಹುದು. ಗ್ರಾಹಕ ಸೇವಾ ಅಧಿಕಾರಿ ಜೊತೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವ ಮೂಲಕವೂ ದೋಷ ಪರಿಹಾರ ಮಾಡಿಕೊಳ್ಳಬಹುದು.

ಮಾವು ನಾವು, ಬೇವು ನಾವು

- ಕೆ.ಎಸ್. ನರಸಿಂಹಸ್ವಾಮಿ

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,

ಯುಗಾದಿ

- ದ. ರಾ. ಬೇಂದ್ರೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಆರೋಗ್ಯದ ಲೇಖನಗಳು

ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು. ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ. ಇವುಗಳಲ್ಲಿ ಎರಡು ವಿಧ. ನೀರಿನಲ್ಲಿ ಕರಗುವ ನಾರು_ಬೇರುಗಳು, ನೀರಿನಲ್ಲಿ ಕರಗದ ನಾರು-ಬೇರುಗಳು, ಹುಳಿ ಹಣ್ಣುಗಳ ನಾರು, ಅಕ್ಕಿಯ ಮೇಲಿನ ಹೊಟ್ಟಿನ ಭಾಗ, ಸೇಬಿನ ನಾರು ಇತ್ಯಾದಿಗಳು ನೀರಿನಲ್ಲಿ ಕರಗುತ್ತವೆ. ಉಳಿದವು ನೀರಿನಲ್ಲಿ ಕರಗುವುದಿಲ್ಲ. ಶರೀರಕ್ಕೆ ಎರಡೂ ಬೇಕು. ಹೆಗ್ಗರುಳಿನ ಕ್ಯಾನ್ಸರ್(ಕೊಲೋನ್ ಕ್ಯಾನ್ಸರ್), ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಜಠರದ ಹುಣ್ಣು, ಅಧಿಕ ರಕ್ತದೊತ್ತಡ, ಅಪೆಂಡಿಸೈಟಿಸ್, ಅಧಿಕ ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಕಲ್ಲು, ಬೊಜ್ಜು, ಹೃದಯಾಘಾತ - ಏನು ಇಷ್ಟೊಂದು ದೊಡ್ಡ ಕಾಯಿಗಳ ಪಟ್ಟಿ? ಏಕೆ ಈ ಪಟ್ಟಿ? - ಇವೆಲ್ಲಕ್ಕೂ ಒಂದೇ ಕಾರಣ, ರೋಗಿಯ ಆಹಾರದಲ್ಲಿ ನಾರು-ಬೇರುಗಳ ಅಂಶ ಕಡಿಮೆ. ನಾರು-ಬೇರುಗಳು, ಮೇಲಿನ ಕಾಯಿಲೆಗಳಲ್ಲಿ ಹೇಗೆ ಸಹಾಯ ಮಾಡುತ್ತವೆ? ೧) ನಾರು-ಬೇರುಗಳು ದೊಡ್ಡಕರುಳಿನಲ್ಲಿನ ನೀರನ್ನು ಹೀರಿ ಮಲವು ಉಬ್ಬುವಂತೆ ಮಾಡುತ್ತವೆ. ಅದರ ಮೇಲೆ ಏಕಾಣುಜೀವಿಗಳು(ಬ್ಯಾಕ್ಟೀರಿಯಾ) ತಮ್ಮ ಕ್ರಿಯೆಯಿಂದ ಅದನ್ನು ಹಾಲಂದೀಕರಿಸಿ(ಎಮಲ್ಸಿಪ್ಫ಼ೈಡ್) ವಾಯುವನ್ನು ಬಿಡುಗಡೆ ಮಾದಿ ಮಲವನ್ನು ಮೃದು ಮಾಡುತ್ತವೆ. ೨) ದೊಡ್ಡಕರುಳಿನ ಮಲದಲ್ಲಿ ಕೆಲವು ಕ್ಯಾನ್ಸರ್ ಕಾರಕ ವಸ್ತುಗಳು ಕಂಡುಬಂದವು. ಅದಕ್ಕೆ ಕಾರಣ ದೊಡ್ಡಕರುಳಿನ ಕಡಿಮೆ ಆಮ್ಲೀಯತೆ. ಆಮ್ಲೀಯತೆ ಹೆಚ್ಚಾದಲ್ಲಿ ಈ ಕ್ಯಾನ್ಸರ್ ಕಾರಕಗಳು ಕಡಿಮೆಯಾದವು. ನಾರು-ಬೇರುಗಳ ಮೇಲಿನ ಏಕಾಣುಜೀವಿಗಳ ಕ್ರಿಯೆ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಏಕಾನುಜೀವಿಗಳು ವೃದ್ಧಿಯಾಗಲು ಸಾರಜನಕ ಬೇಕು. ಅವು ದೊಡ್ಡಕರುಳಿನಲ್ಲಿನ ಸಾರಜನಕವನ್ನು ಉಪಯೋಗಿಸಿಕೊಂಡರೆ ಅಮೋನಿಯಾ ಕಡಿಮೆಯಾಗುತ್ತದೆ. ಅಮೋನಿಯಾ ಹೆಚ್ಚಾಗಿದ್ದರೆ ಕ್ಯಾನ್ಸರ್ ಹೆಚ್ಚುತ್ತಿತ್ತು. ಹೀಗೆ ನಾರು-ಬೇರುಗಳು ಆಮ್ಲೀಯತೆಯನ್ನು ಹೆಚ್ಚಿಸಿ, ಅಮೋನಿಯಾವನ್ನು ತಗ್ಗಿಸಿ ಹೆಗ್ಗರುಳಿನ ಕ್ಯಾನ್ಸರನ್ನು ತಡೆಗಟ್ಟುತ್ತವೆ. ೩) ಹೆಗ್ಗರುಳಿನ ಸುತ್ತುಸರಿಕ ಕ್ರಿಯೆಗೆ(ಪೆರಿಸ್ಟಾಲ್ಟಿಕ್ ಮೋಷನ್) ನಾರು-ಬೇರುಗಳು ಸಹಾಯಮಾಡುತ್ತವೆ. ಇದು ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ೪) ನಾರು-ಬೇರುಗಳು ಸಣ್ಣಕರುಳಿನಲ್ಲಿ ಮೇದಸ್ಸನ್ನು ತಳ್ಳಿಕೊಂಡು ಹೋಗಿಬಿಡುತ್ತವೆ. ಆದ್ದರಿಂದ ರಕ್ತಕ್ಕೆ ಸೇರುವ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ, ಹೃದಯಾಘಾತ, ಮುಂತಾದವು ಕಡಿಮೆಯಾಗುತ್ತವೆ. ೫) ಸಕ್ಕರೆಯು ರಕ್ತಕ್ಕೆ ಸೇರುವ ವೇಗವನ್ನು ನಾರು-ಬೇರುಗಳು ಕಡಿಮೆಮಾಡುತ್ತವೆ. ಅಲ್ಲದೆ, ಕೆಲವು ನಾರು-ಬೇರುಗಳು ಆಹಾರದ ಜಿಗುಟುತನವನ್ನು(ವಿಸ್ಕೋಸಿಟಿ) ಹೆಚ್ಚಿಸುತ್ತವೆ. ಈ ಜಿಗುಟಿನಿಂದ ಕೂಡಿದ ಆಹಾರಕ್ಕೆ ಕಡಿಮೆ ಇನ್ಸುಲಿನ್ ಸಾಕಾಗುತ್ತದೆ. ಹಣ್ಣಂಟು ಮತ್ತು ಸಸ್ಯಗೋಂದು ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತವೆ. ರಾಗಿಯಲ್ಲಿನ ಪಿಷ್ಟ, ಅಕ್ಕಿಯಲ್ಲಿನ ಪಿಷ್ಟಕ್ಕಿಂತ ನಿಧಾನವಾಗಿ ಗ್ಲೂಕೋಸ್ ಆಗುತ್ತದೆ. ಕಾರಣ ಅದರಲ್ಲಿನ ಹೊಟ್ಟು. ಅದಕ್ಕಾಗಿಯೇ ಸಕ್ಕರೆ ರೋಗಿಗಳಿಗೆ ಅಕ್ಕಿಗಿಂತ ರಾಗಿ ಉತ್ತಮವೆನಿಸುವುದು. ಈ ಕಾರಣಗಳಿಂದ ಸಕ್ಕರೆ ರೋಗದಲ್ಲಿ ನಾರು-ಬೇರುಗಳು ಸಹಾಯಮಾಡುತ್ತವೆ. ಜೀವಕಣತಂತುಕ (ಸೆಲ್ಯೂಲೋಸ್) : ಇದು ಹಣ್ಣು, ತರಕಾರಿಗಳು, ಹೊಟ್ಟು, ಕಾಯಿಗಳಲ್ಲಿದೆ. ಇದು ನೀರಿನಲ್ಲಿ ಕರಗದ ನಾರು-ಬೇರು. ಇದು ನೀರನ್ನು ತಡೆಹಿಡಿದಿಟ್ಟುಕೊಂಡು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಏಕಾಣುಜೀವಿಯಿಂದ ಇದೇ ಮೃದುವಾಗುವುದು. ಇದು ಕರುಳಿನ ಕ್ಯಾನ್ಸರ್ ಉಂಟುಮಾಡುವ ವಿಷ ವಸ್ತುವನ್ನು ಹೊರದೂಡುತ್ತದೆ. ತೂಕವನ್ನು ಇಳಿಸುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಹಣ್ಣಂಟು (ಪೆಕ್ಟಿನ್) : ಈ ಜಾತಿಯ ನಾರು-ಬೇರು ರಕ್ತದ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹೆಗ್ಗರುಳಿನ ಏಡಿಗಂತಿ(ಕ್ಯಾನ್ಸರ್) ಮತ್ತು ಪಿತ್ತಕಲ್ಲು(ಗಾಲ್ ಸ್ಟೋನ್) ಆಗುವುದನ್ನು ತಡೆಯುತ್ತದೆ. ಇದು ಮಲ ಮೃದುವಾಗುವುದರಲ್ಲಿ ಸಹಾಯಮಾಡುವುದಿಲ್ಲ. ಆದ್ದರಿಂದ ಮಲಬದ್ಧತೆಯಲ್ಲಿ ಇದರ ಕಾರ್ಯ ಕಡಿಮೆ. ಇದು ಸೇಬು, ದ್ರಾಕ್ಷಿ, ಹುಳಿಹಣ್ಣುಗಳು, ಪಪಾಯಿ, ಸೀಬೆ, ಬಾಳೆ, ಹೊಟ್ಟು ಇವುಗಲ್ಲಿದೆ. ಗೋಂದು ಮತ್ತು ಅಂಟು
: ಡಯಾಬಿಟಿಸ್ ನಲ್ಲಿ ಸಹಾಯ ಮಾಡುತ್ತವೆ. ಹುರುಳಿ, ಓಟ್ಸ್, ತವುಡು ಇವುಗಳಲ್ಲಿವೆ. ಲೆಗ್ನಿನ್ : ಏಕದಳ, ದ್ವಿದಳ ಧಾನ್ಯಗಳ ಹೊಟ್ಟು, ಕೋಸು, ಟೊಮೇಟೋ, ಇವುಗಳಲ್ಲಿದೆ. ಇದು ಪಿತ್ತರಸವನ್ನು ಕರುಳಿನಿಂದ ಹೊರದುಡಲು ಸಹಕರಿಸುತ್ತದೆ. ನಾರಿರುವ ಆಹಾರಗಳು : ಕುಸುಬೆಬೀಜ, ನುಗ್ಗೇಕಾಯಿ, ಬಟಾಣಿ, ಸೋಯಾಬೀನ್, ಕಡ್ಲೇಕಾಳು, ಕರಿಬೇವು, ಮೆಂತೆಕಾಳು, ಹುಣಿಸೆ ಎಲೆ, ನೆಲ್ಲೀಕಾಯಿ, ಬೇಲದ ಹಣ್ಣು, ಅನಾನಸ್, ಸೀತಾಫಲ, ಸೀಬೆ, ದ್ರಾಕ್ಷಿ, ಕೊತ್ತಂಬರಿ, ಜೀರಿಗೆ, ಏಲಕ್ಕಿ, ಬಾರ್ಲಿ, ಜೋಳ, ರಾಗಿ, ಗೋಧಿ, ಉದ್ದಿನಕಾಳು, ತೊಗರೀಬೇಳೆ, ಹುಣಿಸೇಹಣ್ಣು, ಮೂಲಂಗಿ, ಆಲೂಗೆಡ್ಡೆ, ಗೆಣಸು, ಮಾವು, ಸೊಪ್ಪುಗಳು, ತರಕಾರಿಗಳು-ಕ್ಯಾರಟ್, ಬೀಟ್ ರೂಟ್, ಹುರುಳೀಕಾಯಿ, ಜವಳೆಕಾಯಿ ಇತ್ಯಾದಿ. ಪೂರ್ಣವಾಗಿ ನಾರಿಲ್ಲದ ಆಹಾರಗಳು : ಮಾಂಸ, ಮೀನು, ಮೊಟ್ಟೆ, ಹಾಲು, ಬೆಣ್ಣೆ, ಸಕ್ಕರೆಗಳು ಮಾತ್ರ. ೧೦೦ ಗ್ರಾಂ ಹೊಟ್ಟಿನಲ್ಲಿ ೧೦.೫ ರಿಂದ ೧೩.೫ ನಾರು-ಬೇರಿದೆ. ಏಕದಳ ಧಾನ್ಯದ ಹೊಟ್ಟಿನಂಶ ೧.೦೦ ರಿಂದ ೨.೦೦ ದ್ವಿದಳ ಧಾನ್ಯದ ಹೊಟ್ಟಿನಂಶ ೧.೫೦ ರಿಂದ ೧.೭೦ ಕಾಯಿಗಳಲ್ಲಿ ೨.೦೦ ರಿಂದ ೫.೦೦ ತರಕಾರಿಗಳಲ್ಲಿ ೦.೫೦ ರಿಂದ ೧.೫೦ ಹಣ್ಣುಗಳಲ್ಲಿ ೦.೫೦ ರಿಂದ ೧.೫೦ ಒಣಗಿದ ಹಣ್ಣುಗಳಲ್ಲಿ ೧.೦೦ ರಿಂದ ೩.೦೦ ಒಬ್ಬರಿಗೆ ಎಷ್ಟು ನಾರು-ಬೇರು ? ಈ ಬಗ್ಗೆ ಇನ್ನೂ ಪ್ರಯೋಗಗಳು ನಡೆಯುತ್ತದಿ. ಆಫ್ರಿಕಾದ ಜನರು ದಿನಕ್ಕೆ ೧೫೦ ಗ್ರಾಂ ಗಳವರೆವಿಗೂ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಗ್ಗರುಳಿನ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಲ್ಲ. ಅದೇ ಯೂರೋಪಿನ ಜನರು ದಿನಕ್ಕೆ ೨೦ ಗ್ರಾಂ ನಾರನ್ನು ಸೇವಿಸುತ್ತಾರೆ. ಇವರಲ್ಲಿ ಮೇಲಿನ ಕಾಯಿಲೆಗಳು ಹೆಚ್ಚು. ತುಂಬಾ ಹೆಚ್ಚು ನಾರಿನಂಶವನ್ನು ಸೇವಿಸಿದರೂ ತೊಂದರೆಯುಂಟಾಗುತ್ತದೆ. ಇದು ಶರೀರಕ್ಕೆ ತುಂಬಾ ಉಪಯುಕ್ತವಾದ ಖನಿಜಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಪೊಟಾಷಿಯಂ ಗಳನ್ನು ಶ್ರೀರದಿಂದ ಹೊರಕ್ಕೆ ಹಾಕಿಬಿಡುತ್ತದೆ. ಅತಿ ಹೆಚ್ಚಾದ ನಾರಿನೀಮ್ದ ಟ್ಯಾನಿನ್, ಆಕ್ಸಲೇಟ್, ಪೈಟೇಟ್ ಎಂಬ ಅಂಶಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಮಾಡುತ್ತವೆ. ಹೊಟ್ಟೆಯ ಹುಣ್ಣು, ಇರ್ರ್ಟಬಲ್ ಬೋವಲ್ ಸಿಂಡ್ರೋಮ್, ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಗ್ಯಾಸ್ ಟ್ರಬಲ್ ಇರುವವರು ಹೆಚ್ಚು ನಾರು-ಬೇರುಗಳನ್ನು ಸೇವಿಸಿದರೆ ಹೆಚ್ಚು ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆಯನೋವು ಜಾಸ್ತಿಯಾಗುತ್ತದೆ. ಡಾ. ಎಚ್.ಕ್ಯುಮಿಂಗ್, ಇಂಗ್ಲೇಂಡ್ ನ ನಾರು-ಬೇರುಗಳ ತಜ್ನರ ಪ್ರಕಾರ ಆರೋಗ್ಯಕ್ಕೆ ದಿನ ಒಂದಕ್ಕೆ ೩೦ ಗ್ರಾಂ ನಾರು-ಬೇರುಗಳ ಅವಶ್ಯಕತೆ ಇದೆ. ಬರೆದವರು : ಜಿ.ವಿ.ವಿ.ಶಾಸ್ತ್ರಿ - ತುಮಕೂರು (ಮನುಜಾ! ಏನು ನಿನ್ನ ಆಹಾರ ಪುಸ್ತಕ ಬರೆದವರು) ಸಂಗ್ರಹಿಸಿದವರು : ೧) ಸತ್ಯಪ್ರಕಾಶ್.ಹೆಚ್.ಕೆ. ೯೮೮೬೩ ೩೪೬೬೭ ೨) ಅರುಣ್. ಎಲ್. ೯೮೮೬೪ ೧೭೨೫೨

ಚಾಂದ್ರಮಾನ 'ಉಗಾದಿಯ' ಶುಭಾಶಯಗಳು.

 

   ಚಾಂದ್ರಮಾನ  'ಉಗಾದಿಯ'  ಶುಭಾಶಯಗಳು.

  "ಯುಗ  ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷವು ಹೊಸ ಹರುಷವ ಇನಿತು ಇನಿತು ತರುತಿದೆ."
   'ವ್ಯಯ' ಸಂವತ್ಸರವು , ನಿಮ್ಮೆಲ್ಲರ ದುಗುಡ ದುಮ್ಮಾನಗಳನ್ನು ನಿವಾರಿಸಿ, ಹೊಸ  ಚೈತನ್ಯ, ಹಾಗೂ ತ್ರುಪ್ತಿಯ ಕಡಲಲ್ಲಿ ಮೀಯಿಸಲಿ

ಅವರೆ ಕಾಳು

ಶೀರ್ಷಿಕೆ ನೋಡಿ ನಾನು ಅವರೆ ಎನ್ನುವ ತರಕಾರಿ (ಅಲ್ಲ ಬೇಳೆ) ಯ ಬಗ್ಗೆ ಬರೆಯುತ್ತಿದ್ದೇನೆ ಎಂದುಕೊಳ್ಳಬೇಡಿ. ಇದು ಬೇರೆಯೇ ವಿಷಯ. ಓದಿ ನೋಡಿ.

ಸೈಬರ್ ಸಂವಾದ

- ದಿನೇಶ ನೆಟ್ಟಾರ್

ಒಬ್ರು ಬೆಂಗಳೂರಿಗೆ ಬಸ್ಸಿನಲ್ಲಿ ಹೋದ್ರು. ಬೆಳಿಗ್ಗೆ ಬಸ್ ಸ್ಟಾಂಡಿನಲ್ಲಿ ಇಳ್ದು ಅತ್ಲಾಗಿ ಇತ್ಲಾಗಿ ನೋಡುವಾಗ ಅವರ ಹಳೆ ದೋಸ್ತಿ ಸಿಕ್ಕಿದ್ರು.