Press "Enter" to skip to content

Posts published in “Year: 2006

ಚಿನಕುರಳಿ – ೧೬

- ಮರ್ಕಟ

`ಬ್ರಿಟಿಷರು ನಮ್ಮ ದೇಶವನ್ನು ೨೦೦ ವರ್ಷಗಳ ಕಾಲ ಆಳಿದ್ದು ಒಳ್ಳೆಯದೇ ಆಯಿತು. ಇದರಿಂದ ನಾವು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಇಂಗ್ಲಿಷ್‌ನಲ್ಲಿ ಯೋಚಿಸಲು ಸಾಧ್ಯವಾಯಿತು' -ಎಸ್. ಎಂ. ಕೃಷ್ಣ, ಬೆಂಗಳೂರು ಐ. ಟಿ. ಡಾಟ್ ಕಾಂ ಉದ್ಘಾಟನೆಯ ಸಂದರ್ಭದಲ್ಲಿ.

ಚಿನಕುರಳಿ – ೧೫

- ಮರ್ಕಟ

`ಮೂಳೆಚಕ್ಕಳಗಳನ್ನು ಹೊಂದಿದ್ದ ಇಂಥೊಬ್ಬ ಮನುಷ್ಯ ನಮ್ಮ ನಡುವೆ ನಡೆದಾಡುತ್ತಿದ್ದ ಎಂಬುದನ್ನು ನಂಬಲು ಮುಂದಿನ ಜನಾಂಗಕ್ಕೆ ಕಷ್ಟವಾಗುತ್ತದೆ' -ಅಲ್ಬರ್ಟ್ ಐನ್‌ಸ್ಟೀನ್, ಮಹಾತ್ಮಾ ಗಾಂಧಿ ಬಗ್ಗೆ.

ಚಿನಕುರಳಿ – ೧೪

- ಮರ್ಕಟ

ಮಾಹಿತಿ ತಂತಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದ ಅನಿವಾಸಿ ಭಾರತೀಯರನ್ನು ಪ್ರಧಾನಿ ವಾಜಪೇಯಿಯವರು ಶ್ಲಾಘಿಸಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಚಿನಕುರಳಿ – ೧೩

- ಮರ್ಕಟ

ವೀರಪ್ಪನನ್ನು ಹಿಡಿಯುವುದಿರಲಿ ಅವನು ಎಲ್ಲಿದ್ದಾನೆಂದು ಪತ್ತೆ ಹಚ್ಚಲು ಕೂಡ `ಕರ್ನಾಟಕ ಮೀಸಲು ಪಡೆ' ಅಸಮರ್ಥವಾಗಿದೆ. ವೀರಪ್ಪನ ಥರವೇ ದೊಡ್ಡ ಮೀಸೆ ಹೊತ್ತ ನಕ್ಕೀರನ್ ಸಂಪಾದಕ ಗೋಪಾಲ್ ನಿರಾಯಾಸವಾಗಿ ವೀರಪ್ಪನ್ ಬಳಿ ಮತ್ತೆ ಮತ್ತೆ ಹೋಗಿ ಬರುತ್ತಿದ್ದಾರೆ.

ಚಿನಕುರಳಿ – ೧೨

- ಮರ್ಕಟ

ನಮ್ಮ ದೇಶದಲ್ಲಿ ನಿರುದ್ಯೋಗ ಎಲ್ಲ ಸಮಸ್ಯೆಗಳ ತಾಯಿಯಾದರೆ ಭ್ರಷ್ಟಾಚಾರ ತಂದೆ -ಜಾರ್ಜ್ ಫೆರ್ನಾಂಡಿಸ್

ಚಿನಕುರಳಿ – ೧೧

- ಮರ್ಕಟ

ವ್ಯಾಸರಾಯ ಬಲ್ಲಾಳರಿಗೆ ಅ.ನ.ಕೃ. ಪ್ರಶಸ್ತಿ.
ಗೋಪಾಲಕೃಷ್ಣ ಅಡಿಗರಿಗೆ ರಾಮಚಂದ್ರ ಶರ್ಮ ಪ್ರಶಸ್ತಿ ಕೊಟ್ಟಂತೆ ಎಂದು ಕುಹುಕಿಗಳು ಆಡಿಕೊಳ್ಳುತ್ತಿದ್ದಾರೆ.

ಚಿನಕುರಳಿ – ೧೦

- ಮರ್ಕಟ

ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಿವೆ ಎಂದು ನನಗೆ ಯುರೋಪಿನ ರಸ್ತೆಗಳನ್ನು ನೋಡಿದ ನಂತರ ಮನವರಿಕೆಯಾಗಿದೆ. -ಸಚಿವ ಅನಂತನಾಗ್.

ಬೇಸಿಗೆ ಬಂದಿದೆ :

೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ ಆತ್ಮೀಯ ವಿಶ್ವಕನ್ನಡ ಸ್ನೇಹಿತರೇ, ಬೇಸಿಗೆ ಬಂದಿದೆ.

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೫

- ಡಾ| ಎಂ. ಚಿದಾನಂದ ಮೂರ್ತಿ

ಕರ್ನಾಟಕ - ಸಂಸ್ಕೃತಿ ಸಂಪನ್ನ ದೇಶ

ಈ ಮುಂಚಿನ ಪುಟಗಳಲ್ಲಿ ಕರ್ನಾಟಕ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು ತಿಳಿಸಿಕೊಟ್ಟಿದ್ದೇನೆ. ಭಾರತೀಯ ಅಥವಾ ವಿಶ್ವ ಸಂಸ್ಕೃತಿಗೆ ಕರ್ನಾಟಕವು ಕೊಟ್ಟಿರುವ ಮೌಲಿಕ ಕೊಡುಗೆಗಳನ್ನು ಸೂಕ್ಷ ವಾಗಿ ಪರಿಚಯಿಸಿಕೊಟ್ಟಿದ್ದೇನೆ. ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಈಗೀಗ ಕನ್ನಡ ಜನ ಹೆಚ್ಚು ಹೆಚ್ಚಾಗಿ ಕರ್ನಾಟಕದ ಬಗ್ಗೆ ತಿಳಿಯಲು ಕಾತರರಾಗುತ್ತಿದ್ದಾರೆ. ಕಾರ್ಖಾನೆ, ಕಛೇರಿ, ಸಿನಿಮಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಆ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಫೂರ್ತಿಕೇಂದ್ರವೂ ಆಗುತ್ತದೆ. ಇತಿಹಾಸದ ಅರಿವು ಅತ್ಯಂತ ಅಗತ್ಯ. ಇತಿಹಾಸದ ಅರಿವು ಮನುಷ್ಯನಿಗೆ ಮಾತ್ರ ಇದೆ -ಆ ಕಾರಣದಿಂದಲೇ ಅವನಿಗೊಂದು ಸಂಸ್ಕೃತಿ ನಾಗರಿಕತೆ ಉಂಟು. ಪ್ರಾಣಿಗಳಿಗೆ ಇತಿಹಾಸದ ಅರಿವಿಲ್ಲ -ಆ ಕಾರಣದಿಂದಲೇ ಅವುಗಳಲ್ಲಿ ಪ್ರಗತಿ ಇಲ್ಲ.