ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)
Sunday, July 15th, 2012ಇನ್ನೊಂದಿಷ್ಟು ಕಿರುತಂತ್ರಾಂಶಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಜನಪಿಯವಾಗಿರುವ ಆಂಡ್ರೋಯಿಡ್ ಫೋನ್‌ಗಳಿಗೆ ಇರುವ ಲಕ್ಷಗಟ್ಟಲೆ ತಂತ್ರಾಂಶಗಳಲ್ಲಿ ಇನ್ನೊಂದಿಷ್ಟು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ. ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೋಯಿಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವು ಕಿರುತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಪ್ (app) ಎನ್ನುತ್ತಾರೆ. ಇಂತಹ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು ಮೇ ೧೭ರ ಸಂಚಿಕೆಯಲ್ಲಿ ಗಮನಿಸಿದ್ದೆವು. ಇವುಗಳನ್ನು play.google.com ಜಾಲತಾಣದಿಂದ ಅಥವಾ ಗೂಗ್ಲ್ ಪ್ಲೇ ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಸುಮಾರು ಆರು ಲಕ್ಷ ಚಿಲ್ಲರೆ […]