Press "Enter" to skip to content

Vishva Kannada

ಸಾಲ ನೀಡುವ ಆಪ್‌ಗಳ ಜಾಲಕ್ಕೆ ಬೀಳದಿರಿ

ಯಾವುದೇ ಕಿರುತಂತ್ರಾಂಶ (ಆಪ್) ತೆರೆದರೂ ಇದ್ದಕ್ಕಿದ್ದಂತೆ ಯಾವುದೋ ಸಾಲ ನೀಡುವ ಕಿರುತಂತ್ರಾಂಶದ ಜಾಹೀರಾತು ಕಂಡುಬರುವುದನ್ನು ನೀವು ಗಮನಿಸಿದ್ದೀರಾ? ಬಹಳ ಆಕರ್ಷಕ ಭಾಷೆಯಲ್ಲಿ ಅವು ಸೆಳೆಯುತ್ತವೆ. ಒಂದು ಜಾಹೀರಾತು ನಾನು ಗಮನಿಸಿದ್ದು ಹೀಗಿತ್ತು – ಈ…

ಘನಸ್ಥಿತಿಯ ಬ್ಯಾಟರಿ

ಭಾರಿ ಬ್ಯಾಟರಿ ಬ್ಯಾಟರಿಗಳು ಎಲ್ಲ ವಿದ್ಯುತ್ ಚಾಲಿತ ಸಾಧನಗಳಿಗೂ ಬೇಕು. ಬ್ಯಾಟರಿಗಳಲ್ಲಿ ಹಲವಾರು ನಮೂನೆಗಳಿವೆ. ಬ್ಯಾಟರಿಯನ್ನು ಬ್ಯಾಟರಿ ಸೆಲ್ ಎನ್ನುವುದೇ ಸರಿಯಾದ ವೈಜ್ಞಾನಿಕ ವಿಧಾನ. ಬ್ಯಾಟರಿ ಸೆಲ್‌ಗಳ ಜೋಡಣೆಯೇ ಬ್ಯಾಟರಿ. ಆದರೆ ಬಳಕೆಯಲ್ಲಿ ಬ್ಯಾಟರಿ…

ಸತ್ತ ಜೇಡನಿಂದ ರೋಬೋಟ್

ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ.…

ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ

ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ…

ವೇಪರ್‌ವೇರ್

ಆವಿಯಾದ ಯಂತ್ರಾಂಶ – ತಂತ್ರಾಂಶ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು…

ದುರಸ್ತಿಯ ಹಕ್ಕು

ನಿಮ್ಮಲ್ಲಿ ಐಫೋನ್ ಇದೆಯೆಂದಿಟ್ಟುಕೊಳ್ಳಿ. ಅದರ ಬ್ಯಾಟರಿಯ ಆಯುಸ್ಸು ಮುಗಿದಾಗ ಏನು ಮಾಡುತ್ತೀರಿ? ಐಫೋನ್ ಮಾತ್ರವಲ್ಲ ಈಗಿನ ಯಾವುದೇ ಫೋನಿನ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಒಂದು ಕಾಲದಲ್ಲಿ ಫೋನ್ ಬಿಚ್ಚಿ ನಾವೇ ಬ್ಯಾಟರಿ…

ಅಂತರಜಾಲದಲ್ಲೊಂದು ಕತ್ತಲ ಲೋಕ

ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು…

ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ

ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ…

ಚಾಲಕರಹಿತ ಕಾರು

ಕಾರು ಅಥವಾ ಯಾವುದೇ ವಾಹನ ಚಲಾಯಿಸಲು ಚಾಲಕನೊಬ್ಬನಿರಲೇಬೇಕಲ್ಲ? ಹಾಗೆಂದು ನೀವಂದುಕೊಂಡಿದ್ದರೆ ಅದು ಬದಲಾಗುವ ಕಾಲ ಬರುತ್ತಿದೆ ಎನ್ನಬಹುದು. ಈಗ ಚಾಲಕನಿಲ್ಲದೆಯೂ ಕಾರು ತನ್ನಷ್ಟಕ್ಕೇ ಚಲಿಸಬಲ್ಲುದು. ಅರ್ಥಾತ್ ಚಾಲಕನಿಲ್ಲದೆಯೇ ಸ್ವಯಂಚಾಲಿತವಾಗಿ ಚಲಿಸಬಲ್ಲ ಕಾರುಗಳು ತಯಾರಾಗಿವೆ. ಅವು…

ಆರು ಜನರಷ್ಟು ದೂರ ಸಿದ್ಧಾಂತ

ನಿಮಗೆ ಯಾರಿಂದಲೋ ಏನೋ ಸಹಾಯ ಆಗಬೇಕಾಗಿದೆ. ಆ ವ್ಯಕ್ತಿಯ ಪರಿಚಯ ನಿಮಗಿಲ್ಲ. ಆಗ ಏನು ಮಾಡುತ್ತೀರಿ? ಆ ವ್ಯಕ್ತಿಯ ಪರಿಚಯ ಯಾರಿಗೆ ಇರಬಹುದೋ ಅವರನ್ನು ಹುಡುಕುತ್ತೀರಿ. ನಿಮಗೆ ಪರಿಚಯವಿರುವ ಯಾವುದೋ ಒಬ್ಬ ವ್ಯಕ್ತಿಗೆ ನಿಮಗೆ…