ಸುಧಾ ಪತ್ರಿಕೆಯಲ್ಲಿ ಬ್ಲಾಗ್ ಬಗ್ಗೆ ರಘುನಾಥ ಚ ಹ ಅವರ ಲೇಖನ ಪ್ರಕಟವಾಗಿತ್ತು. ಆ ಲೇಖನದ ಜೊತೆ ನನ್ನದೊಂದು ಕಿರು ಸಂದರ್ಶನ -ಬ್ಲಾಗಿಂಗ್ ಬಗ್ಗೆ - ಪ್ರಕಟವಾಗಿತ್ತು. ಅದನ್ನು ಇಲ್ಲಿ ನೀಡುತ್ತಿದ್ದೇನೆ.
Posts published in “General”
ಶೀರ್ಷಿಕೆ ನೋಡಿ ನಾನು ಅವರೆ ಎನ್ನುವ ತರಕಾರಿ (ಅಲ್ಲ ಬೇಳೆ) ಯ ಬಗ್ಗೆ ಬರೆಯುತ್ತಿದ್ದೇನೆ ಎಂದುಕೊಳ್ಳಬೇಡಿ. ಇದು ಬೇರೆಯೇ ವಿಷಯ. ಓದಿ ನೋಡಿ.
ನಾನು ಉಷಾಕಿರಣ ಪತ್ರಿಕೆಗೆ ಒಂದು ಲೇಖನ ಕೊಟ್ಟಿದ್ದೆ. ಅದರ ಶೀರ್ಷಿಕೆ "ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷಿನ ಪಿತ್ತ". ಅದನ್ನು ವಿಶ್ವ ಕನ್ನಡದಲ್ಲೂ ಓದಬಹುದು. ಉಷಾಕಿರಣ ಪತ್ರಿಕೆಯವರು ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾದ್ಯಮ ಚರ್ಚೆ ಬಗ್ಗೆ ಹಲವರಿಂದ ಲೇಖನ ತರಿಸಿ ಪ್ರಕಟಿಸಿದ್ದರು. ಆ ಮಾಲೆಯಲ್ಲಿ ನನ್ನ ಲೇಖನವೂ ಪ್ರಕಟವಾಗಿತ್ತು. ಸರಿ. ಈಗೇನು ಅಂತೀರಾ? ಎಷ್ಟೋ ಸಮಯದ ನಂತರ ಪತ್ರಿಕೆಯಿಂದ ಸಂಭಾವನೆ ಬಂತು. ಅದರ ಜೊತೆ ಪತ್ರವೂ ಇತ್ತು. ಆದರೆ ಆ ಪತ್ರ ಇಂಗ್ಲೀಷ್ ಭಾಷೆಯಲ್ಲಿ ಇತ್ತು!
ಹೊಸ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಣಕಾಸು ಮಂತ್ರಿಯವರಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಸ್ಥಳೀಯ ತಂತ್ರಾಂಶ (ಸಾಫ್ಟ್‌ವೇರ್) ಉತ್ಪನ್ನ ಮತ್ತು ಸೇವೆಗಳಿಗೆ ವಿಧಿಸಿರುವ ೧೨.೫% ಮಾರಾಟ ತೆರಿಗೆಯನ್ನು (VAT) ರದ್ದು ಮಾಡಿ. ಈ ತೆರಿಗೆಯಿಂದ ಸರಕಾರಕ್ಕೆ ಯಾವ ಲಾಭವೂ ಇಲ್ಲ. ಇದು ಕನ್ನಡಕ್ಕೆ ಮಾತ್ರ ದೊಡ್ಡ ಕಂಟಕಪ್ರಾಯವಾಗಿದೆ.
ಈ ವಾಕ್ಯವನ್ನು ಗಮನಿಸಿ - "ಶ್ರೀ .... ಅವರು .... ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಮೆರೆದು ತಮ್ಮ ವೈಶಿಷ್ಟ್ಯತೆಯನ್ನು ತೋರಿ ಈ ಕ್ಷೇತ್ರದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ". ಏನಿದೆ ಈ ವಾಕ್ಯದಲ್ಲಿ? ಅದೇನಪ್ಪಾ ಎಂದರೆ ಈ ವಾಕ್ಯವನ್ನು ಬಳಸಿದ ಮಹನೀಯರು ಗಳಿಸಿದ ಹೆಚ್ಚಿನ "ತೆ".
ನಿನ್ನೆ ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು.
ನಾನು ಮೊದಲೇ ಎಚ್ಚರಿಸುತ್ತೇನೆ. ನೀವು ಉಪ್ಪಿಟ್ಟು ಪ್ರಿಯರಾದರೆ ಈ ಬ್ಲಾಗನ್ನು ಓದಬೇಡಿ. ಓದಿದ ನಂತರ ಮೆಣಸು ಜಾಸ್ತಿ ಹಾಕಿದ ಉಪ್ಪಿಟ್ಟನ್ನು ತಿಂದವರಂತೆ ಮುಖ ಸಿಂಡರಿಸಿಕೊಂಡರೆ ನಾನು ಹೊಣೆಯಲ್ಲ.
ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತಿದೆ. ಮತ್ತೊಮ್ಮೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಾಗುವ ಗೋಷ್ಠಿಗಳನ್ನು ವರ್ಷಗಳಿಂದ ಗಮನಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಜರುಗಿದ ಸಮ್ಮೇಳನವನ್ನು ಹೊರತುಪಡಿಸಿದರೆ ಬೇರೆ ಯಾವ ಸಮ್ಮೇಳನದಲ್ಲೂ “ವಿಷಯ ಸಾಹಿತ್ಯ”ದ ಬಗ್ಗೆ ಯಾವುದೇ ಗೋಷ್ಠಿ ಇರಲಿಲ್ಲ. ಬಹುತೇಕ ಸಾಹಿತಿಗಳು ಬಳಸುವ “ಸೃಜನೇತರ ಸಾಹಿತ್ಯ” ಎಂಬ ಪದಕ್ಕೆ ಪರ್ಯಾಯವಾಗಿ ನಾನು ಇಲ್ಲಿ ವಿಷಯ ಸಾಹಿತ್ಯ ಎಂಬ ಪದವನ್ನು ಬಳಸಿದ್ದೇನೆ. ಹಾಗೆ ನೋಡಿದರೆ ಈ ಪದ ನನ್ನದೇನೂ ಅಲ್ಲ. ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಂ ಅವರು ಈ ಪದವನ್ನು ಎಂದೋ ಬಳಸಿದ್ದಾರೆ.
ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರಿಗೆ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಭೈರಪ್ಪನವರಿಗೆ ನನ್ನ ಅಭಿನಂದನೆಗಳು. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಕನಿಷ್ಠ ಒಂದು ಬಾರಿ ಓದಿದ್ದೇನೆ. ಪರ್ವ, ಧರ್ಮಶ್ರೀ, ವಂಶವೃಕ್ಷ, ಮತ್ತು ಇನ್ನೂ ಕೆಲವನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅದು ಆದಷ್ಟು ಬೇಗನೇ ಅವರಿಗೆ ಬರಲಿ ಎಂದು ಆಶಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲದೆ ಅವರ ಆತ್ಮ ಚರಿತ್ರೆ "ಭಿತ್ತಿ"ಯನ್ನೂ ನಾನು ಓದಿದ್ದೇನೆ. ಅದರಲ್ಲಿ ಮತ್ತೆ ಮತ್ತೆ ಬರುವ ಒಂದು ಸಾಲು ನನಗೆ ಚೆನ್ನಾಗಿ ನೆನಪಿದೆ -"ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊಳ್ಳಬೇಕು". ನನಗೆ ಈ ಸಾಲು ಕೇವಲ ನೆನಪು ಮಾತ್ರವಲ್ಲ, ಒಂದು ರೀತಿಯ ಆದರ್ಶವೂ ಹೌದು. ಅವರ ಮೇರುಕೃತಿ "ಪರ್ವ"ವನ್ನು ಎಲ್ಲರೂ ಓದಬೇಕು.
ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ರಸ್ತೆ ಸುರಕ್ಷ ಸಪ್ತಾಹ ಆಚರಿಸಿದ್ದರು. ಅದರ ಅಂಗವಾಗಿ ಅವರು ವಿಜಯನಗರದಲ್ಲಿ ಹಾಕಿದ್ದ ಬ್ಯಾನರ್ ನೋಡಿ.
