ದೇವೇಗೌಡರಿಗೆ ಆಸ್ಕರ್?
Tuesday, January 24th, 2006ಬೆಂಗಳೂರು, ಜನವರಿ ೨೪, ೨೦೦೬: ಕರ್ನಾಟಕದ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ದೇವೇಗೌಡರ ನಟಿಸುವ ಸಾಮರ್ಥ್ಯ ವೇದ್ಯವಾಗಿರಬೇಕು.
ಬೆಂಗಳೂರು, ಜನವರಿ ೨೪, ೨೦೦೬: ಕರ್ನಾಟಕದ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ದೇವೇಗೌಡರ ನಟಿಸುವ ಸಾಮರ್ಥ್ಯ ವೇದ್ಯವಾಗಿರಬೇಕು.
ಜಗತ್ತಿನ ಪ್ರಮುಖ ಜಡವಸ್ತುಗಳಲ್ಲಿ “ಕನ್ನಡಿಗ” ಕೂಡ ಇದೆ ಎಂದು ಇತ್ತೀಚೆಗೆ ನಡೆಸಿದ someಶೋಧನೆಗಳಿಂದ ಪತ್ತೆಹಚ್ಚಲಾಗಿದೆ. ವಿಜ್ಞಾನಿಗಳ ಪ್ರಕಾರ ಈ ಜಡವಸ್ತು ಬಹು ವರ್ಷಗಳಿಂದಲೇ ಇತ್ತು. ಆದರೆ ಇತ್ತೀಚೆಗಷ್ಟೆ ಅದರ ಅಸ್ತಿತ್ವ ತುಂಬ ಪ್ರಭಾವಶಾಲಿಯಾಗತೊಡಗಿದೆ. ಈ ಹೊಸ ಜಡವಸ್ತುವನ್ನು ಸೇರಿಸಿದ ಪರಿಷ್ಕೃತ ಆವರ್ತಕೋಷ್ಟಕವನ್ನು (peridotic table) ಇಲ್ಲಿ ನೀಡಲಾಗಿದೆ.
ಪ್ರ: ಬ್ಯಾಂಕಿನ ಕ್ಯಾಷಿಯರ್ ನಗುವುದಿಲ್ಲವೇಕೆ?
ಉ: ಕೌಂಟರಿನ ಮೇಲೆ ಬೋರ್ಡ್ ಹಾಕಿದ್ದಾರೆ `ನಗದು’ ಎಂದು.
ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”
ಪ್ರತಿಬಾರಿ ನಾನು ಇಂಗ್ಲೆಂಡಿನಿಂದ ವಾಪಸ್ಸಾಗುವಾಗ ಯಾರಾದರು ಕಳ್ಳರು ನನ್ನ ಮನೆ ದೋಚಿಕೊಂಡು ಹೋಗಿರುತ್ತಾರೇನೋ? ಎಂಬ ಅನುಮಾನದಲ್ಲಿಯೇ ನನ್ನ ಮನೆಯ ಕದವನ್ನು ತೆರೆಯುತ್ತೇನೆ. ಪುಣ್ಯಕ್ಕೆ ಇಲ್ಲಿಯವರೆಗೆ ಹಾಗಾಗಿಲ್ಲವಾದರೂ, ಈ ಬಾರಿ ಅನಿರೀಕ್ಷಿತವೊಂದು ಕಾದಿತ್ತು. ಕದ ತೆರೆದು ಒಳಗೆ ಹೆಜ್ಜೆ ಇಟ್ಟ ತಕ್ಷಣ ಮೂಗು ಮುಚ್ಚಿಕೊಳ್ಳುವಷ್ಟು ಕೆಟ್ಟ ವಾಸನೆ ಬಂತು. ಅಡಿಗೆ ಮನೆಗೆ ಕಾಲಿಟ್ಟೆನೋ ಇಲ್ಲವೋ, ದಬದಬನೆ ಹತ್ತಾರು ಸ್ಟೀಲ್ ಪಾತ್ರೆಗಳು ನೆಲಕ್ಕೆ ಬಿದ್ದು ನನ್ನ ಎದೆ ಬಡಿತವನ್ನು ನಿಲ್ಲಿಸಿಬಿಟ್ಟವು. ಬೆಳಕಿನಲ್ಲಿ ನಾನು ನಂಬದ ದೆವ್ವ-ಭೂತದ ವಿಚಾರಗಳೆಲ್ಲಾ ಮನಸ್ಸಿನಲ್ಲಿ ಮಿಂಚಿ ಮಾಯವಾಗುವದರೊಳಗೆ ದಪ್ಪನೆಯ ಇಲಿಯೊಂದು ಕಣ್ಣಿಗೆ ಬಿತ್ತು. ಇದೆಲ್ಲಿಂದ ಬಂತು? ಅಂತ ಸುತ್ತಲೂ ಕಣ್ಣಾಡಿಸಿದಾಗ ಇನ್ನೊಂದೆರಡು ಇಲಿಗಳು ಕಣ್ಣಿಗೆ ಬಿದ್ದವು. "ಒಟ್ಟಾರೆ ಮೂರು ಇಲಿ!" ಅಂತ ನಾನು ಉದ್ಗಾರ ಎತ್ತುವದರೊಳಗೆ ಕೋಣೆಯಲ್ಲಿ ಬಾಟಲಿಯೊಂದು ಬಿದ್ದ ಸದ್ದಾಯ್ತು. ಎರಡು ನುಣುಪಾದ ಬಾಲಗಳು ಅಟ್ಟದಿಂದ ನೇತು ಬಿದ್ದಿದ್ದು ಕಂಡು ಬಂದವು. ಮೈಯೆಲ್ಲೆಲ್ಲಾ ಮುಳ್ಳು ಎದ್ದಂತಾಗಿ ಅಲ್ಲಿ ನಿಲ್ಲಲಾಗದೆ ಪಡಸಾಲೆಗೆ ಬಂದು ಕುರ್ಚಿಯ ಮೇಲೆ ಕುಳಿತೆ. ಕಾಲುಗಳನ್ನು ನೆಲಕ್ಕೆ ತಾಕಿಸದೆ ಮೇಲಕ್ಕೆತ್ತಿಟ್ಟುಕೊಂಡೆ.
ವಿಚ್ಛೇದನಕ್ಕೆ ಪ್ರಮುಖ ಕಾರಣವೇನು?
ವಿವಾಹ.
ಮದುವೆಗೆ ಮೊದಲು ಮಗು, ವಿವಾಹಕ್ಕೆ ಮೊದಲು ವಿಚ್ಛೇದನ, ಕೆಲಸಕ್ಕೆ ಮೊದಲು ಊಟ ಸಿಗುವ ಸ್ಥಳ ಯಾವುದು?
ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ.
ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.
ವಾಣಿಜ್ಯ ಕ್ಷೇತ್ರದಲ್ಲಿ ಬೇರೆ ಬೇರೆ ಕಂಪೆನಿಗಳು ಒಂದಾಗುವುದು, ಒಂದು ಕಂಪೆನಿ ಇನ್ನೊಂದನ್ನು ನುಂಗುವುದು, ಆಗಾಗ ಜರುಗುತ್ತಲೇ ಇರುತ್ತದೆ. ಉದಾಹರಣೆಗೆ ಅಡೋಬ್ ಮತ್ತು ಮಾಕ್ರೋಮೀಡಿಯಾ ಒಂದಾಗಿರುವುದು. ಇಂತಹ ಹೊಂದಾಣಿಕೆಗೆಳ ಬಗ್ಗೆಯೇ ಹಲವು ಜೋಕುಗಳೂ ಚಾಲ್ತಿಯಲ್ಲಿವೆ. ಉದಾಹರಣೆಗೆ –
[ಕಂಪ್ಯೂಟರ್ ವೃತ್ತಿಯಲ್ಲಿರುವ ಸಂಧ್ಯ ಪ್ರವೇಶಿಸುತ್ತಾಳೆ]
ಸಂಧ್ಯ : ಇವೊತ್ತಿನ ಈ ಮೈಲ್‌ಗಳು ಎಷ್ಟಿವೆ ಏನೇನಿವೆ ನೋಡೋಣ.