Press "Enter" to skip to content

Posts published in “ಹಾಸ್ಯ”

ನಗಿಸುವುದು ನಮ್ಮ ಧರ್ಮ. ನಗುವುದು ನಿಮ್ಮ ಧರ್ಮ. ನಗಲಾರೆ ಎಂದರೆ ಅದು ನಿಮ್ಮ ಕರ್ಮ.

ಮೊಳೆಗಳು ಸಾರ್ ಮೊಳೆಗಳು

‘ಥೋಥೋಥೋ! ಈ ವರ್ಲೆ ಕಾಟದಗೆ ಆಗ್ಲಿಲ್ಲಪ್ಪಾ’ ಅಂತ ಅಜ್ಜಿ ಆಗಾಗ ಕೂಗುತ್ತಿದ್ದಳು. ಅಜ್ಜಿಯಷ್ಟೇ ಏನು- ಅಪ್ಪ, ಅಮ್ಮ, ನಾನು -ಎಲ್ಲರೂ ಒಂದಿಲ್ಲೊಂದು ಹೊತ್ತಿನಲ್ಲಿ ವರಲೆ ಹುಳುಗಳನ್ನು ಬೈದುಕೊಂಡವರೇ. ಏಕೆಂದರೆ ವರಲೆ ಹುಳುಗಳ ಗತ್ತು-ಗಮ್ಮತ್ತು ಹಾಗಿತ್ತು…

ರಾಜ್ಯೋತ್ಸವ ರಸಪ್ರಶ್ನೆ -೨೦೦೦

(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು? (ಕ) ತಮಿಳು (ಚ) ಇಂಗ್ಲಿಷ್ (ಟ) ಕಂಗ್ಲಿಷ್ (ತ) ಕನ್ನಡ (ಪ) ಎಲ್ಲವೂ ೨.…

ವಿಜ್ಞಾನ ಹಾಸ್ಯ

ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್‌ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ…

ಅಮೆರಿಕದ ‘ಅಕ್ಕ’ನ ಬೊಗಸೆಯಲ್ಲಿ ಅಗೋಚರ ಅಪಾಯಗಳು

- ನಾಗೇಶ ಹೆಗಡೆ

ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ಏಳು ತಿಂಗಳ ಹಿಂದೆ ‘ಅಕ್ಕ’ ಸಮ್ಮೇಳನಕ್ಕೆ ಇಲ್ಲಿಂದ ದೊಡ್ಡ ದಂಡೇ ಹೋಗಿತ್ತಲ್ಲ? ಆ ದಂಡಿನಲ್ಲಿ ಕನ್ನಡ ನಾಡಿನ ಸಣ್ಣ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಯೊಬ್ಬರು ಕೂಡ ಹೋಗಿದ್ದರು. ಸಮ್ಮೇಳನ ಮುಗಿಯುತ್ತ ಬಂದಂತೆ ಒಬ್ಬೊಬ್ಬ ಗಣ್ಯ ಅತಿಥಿಯೂ ಕನ್ನಡ ಮಾಧ್ಯಮಗಳಿಗೆ ಒಂದೊಂದಿಷ್ಟು ಹೇಳಿಕೆಗಳನ್ನು ನೀಡಿದರು. ತಾನೇನು ಕಮ್ಮಿ ಎಂದು ಈ ನಮ್ಮ ಕೈಗಾರಿಕಾ ಮಿತ್ರರೂ ಹೇಳಿಕೆ ನೀಡಿದರು: ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದಿಷ್ಟು ರಾಸಾಯನಿಕ ಉದ್ಯಮಗಳನ್ನು ಆರಂಭಿಸುವಂತೆ ಅಮೆರಿಕದ ಉದ್ಯಮಿಗಳನ್ನು ನಾನು ಕೇಳಿಕೊಂಡಿದ್ದೇನೆ’ ಎಂದು.

ತರಲೆ ಅನುವಾದ – ೧

English : Dr. Vasanth will be delivering the speech now.
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.

೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ

ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ "ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ" ಎಂಬ ಹೇಳಿಕೆಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.

ತರಲೆ ಗಣಿತ

೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?
(ಕ) ೫೪
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?

ಸೈಬರ್ ಸಂವಾದ

- ದಿನೇಶ ನೆಟ್ಟಾರ್

ಒಬ್ರು ಬೆಂಗಳೂರಿಗೆ ಬಸ್ಸಿನಲ್ಲಿ ಹೋದ್ರು. ಬೆಳಿಗ್ಗೆ ಬಸ್ ಸ್ಟಾಂಡಿನಲ್ಲಿ ಇಳ್ದು ಅತ್ಲಾಗಿ ಇತ್ಲಾಗಿ ನೋಡುವಾಗ ಅವರ ಹಳೆ ದೋಸ್ತಿ ಸಿಕ್ಕಿದ್ರು.

ರಸಾಂಬಾರಾಯಣಂ

- ದಿನೇಶ ನೆಟ್ಟಾರ್

ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:

ಶಾಕಾಹಾರಿಯೋ ಶಾಖಾಹಾರಿಯೋ?

- ಯು. ಬಿ. ಪವನಜ

೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.