ರಘು ದೀಕ್ಷಿತ್ ಸಂದರ್ಶನ
Sunday, November 13th, 2011ಸಂದರ್ಶಕರು: ಡಾ| ಯು. ಬಿ. ಪವನಜ ಪ್ರ: ನಿಮ್ಮ ಸಂಗೀತ ಯಾವ ವಿಭಾಗಕ್ಕೆ ಸೇರುತ್ತದೆ? ರಾಕ್, ಪಾಪ್, ಇಂಡಿಪಾಪ್, .. ಏನದು? ಉ: ಈ ರಾಕ್, ಪಾಪ್, ಎಂದೆಲ್ಲ ಹೇಳುವುದಕ್ಕಿಂತಲೂ ಸಮಕಾಲೀನ ಎನ್ನುವುದು ಹೆಚ್ಚು ಸೂಕ್ತ. ಇಂದಿನ ಪೀಳಿಗೆಗೆ ಅಂದರೆ ನನ್ನ ನಂತರದ ಯುವ ಜನತೆಗೆ ನನ್ನ ಹಿಂದಿನ ತಲೆಮಾರಿನ ಸಾಹಿತ್ಯವನ್ನು, ಉದಾಹರಣೆಗೆ ಶಿಶುನಾಳ ಶರೀಫ, ವಚನಗಳು, ಬೇಂದ್ರೆಯವರ ಪ್ರೇಮ ಕವಿತೆಗಳು, ನಮ್ಮ ನಾಡಿನ ಬಗ್ಗೆ ಇರುವ ಗೀತೆಗಳು, ಇವೆಲ್ಲವನ್ನು ತಲುಪಿಸುವುದು ನನ್ನ ಉದ್ದೇಶ. ಇವುಗಳು ತುಂಬ [...]
ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಕರ್ನಾಟಕ ರಾಜ್ಯದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. 
ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿ ಸಿ. ಅಶ್ವಥ್ ಅವರದು ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಹಾಗೆಂದು ಅವರ ಪ್ರತಿಭೆ ಸುಗಮ ಸಂಗೀತಕ್ಕೆ ಸೀಮಿತವಾಗಿ ಉಳಿದಿಲ್ಲ. ನಾಟಕ, ಸಿನಿಮಾಗಳಿಗೂ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲ್ಲೂ ಅವರ ವೈಶಿಷ್ಟ್ಯವನ್ನು ಕಾಣಬಹುದು, ಅಲ್ಲ ಕೇಳಬಹುದು. ಸುಗಮ ಸಂಗೀತಕ್ಕೆ ಅದರದೇ ಒಂದು ಸ್ಥಾನವನ್ನು ದೊರಕಿಸಿಕೊಟ್ಟವರಲ್ಲಿ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಪ್ರಮುಖರು. ಕವಿಗಳು ಬರೆದ ಸಾಲುಗಳು ಪುಸ್ತಕಗಳಲ್ಲಿ ಅಡಗಿರುತ್ತಿದ್ದವು. ಕೆಲವು ಸಹೃದಯ ಓದುಗರ ಮನವನ್ನು ಅವು ತಲುಪಿದ್ದವು. ಜನಸಾಮಾನ್ಯರನ್ನು ಅವು ತಲುಪುವಲ್ಲಿ ಈ ಮಹನೀಯರ ಪಾಲು ದೊಡ್ಡದು.