ೠ ಟೈಪಿಸುವುದು ಹೇಗೆ?
Monday, November 6th, 2006ಅಸತ್ಯಾನ್ವೇಶಿಯವರು ತಮ್ಮ ಬ್ಲಾಗಿನ ಕಮೆಂಟಿನಲ್ಲಿ ಒಂದು ಪ್ರಶ್ನೆ ಎಸೆದರು. “ೠ” ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ “ೠ” ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. “ೠ” ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0).