Press "Enter" to skip to content

Posts published in November 2005

ಅಪರಾಧಿಗೆ ಖುಲಾಸೆ ಸಾಕ್ಷಿಗೆ ಸಜಾ

ಗೊರೂರು ರಾಮಸ್ವಾಮಿ ಅಯ್ಯಂಗಾರ್

 

 

ನಾನು ಕೆಲವು ವರುಷಗಳ ಹಿಂದೆ, ಇಂಗ್ಲೆಂಡಿನ ನ್ಯಾಯಾಲಯವೊಂದರಲ್ಲಿ ಒಂದು ಘಟನೆ ನಡೆದುದನ್ನು ಓದಿದ್ದೆ. ಯಾವುದೋ ಮೊಖದ್ದಮೆಯ ವಿಚಾರಣೆಯಾಗಿ, ಅಪರಾಧಿಗೆ ಮರಣದಂಡನೆಯಾಗಿತ್ತು. ವಿಚಾರಣೆ ನಿಷ್ಪಕ್ಷವಾಗಿ ನ್ಯಾಯಬದ್ಧವಾಗಿ ನಡೆದಿರಲಿಲ್ಲವೆಂದು ತೋರುತ್ತದೆ. ಅಪರಾಧಿಯನ್ನು ದಂಡಾಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವಾಗ, ವಿಚಾರಣೆಯನ್ನು ನಿರೀಕ್ಷಸಲು ಬಂದಿದ್ದ ಒಬ್ಬ ಸಭ್ಯ ಗೃಹಸ್ಥ ``ದೇವರ ದಯವಿಲ್ಲದಿದ್ದಲ್ಲಿ; ಅಲ್ಲಿ ಮರಣದಂಡನೆಗೆ ಹೋಗುತ್ತಿರುವವವನು ನಾನೇ ಆಗಿರಬಹುದಾಗಿತ್ತು" ಎಂದು ಉದ್ಗರಿಸಿದ.
ಈಗ ಕೆಲವು ವರುಷಗಳ ಹಿಂದೆ -ಸ್ವರಾಜ್ಯವನ್ನು ಗಳಿಸಿದ ಮೇಲೆ ನಮ್ಮೂರಿನಿಂದ ನಾಲ್ಕು ಮೈಲಿ ದೂರವಿರುವ ಹಳ್ಳಿಯೊಂದರಲ್ಲಿ, ಜಮೀನು ಒತ್ತುವರಿಯ ವಿಷಯದಲ್ಲಿ ನೆರೆಹೊರೆಯ ರೈತರಿಗೆ ಘರ್ಷಣೆಯುಂಟಾಗಿ ಇಬ್ಬರೂ ಒಬ್ಬರನ್ನೊಬ್ಬರು ಬಡಿದರು. ಒಬ್ಬ ರೈತ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಖದ್ದಮೆ ದಾಖಲುಮಾಡಿದ (ಪೋಲೀಸ್ ಕೇಸು). ನನಗೆ ಇಬ್ಬರು ರೈತರು ಆಪ್ತರು. ಇಬ್ಬರು ರೈತರಿಗೂ ರಾಜಿಮಾಡಿಸಲು ನಾನು ಬಹಳ ಪ್ರಯತ್ಮಪಟ್ಟೆ. ರಾಜಿಯಾಗುವ ಘಟ್ಟಕ್ಕೆ ಬಂದಿತ್ತು. ಆದರೆ ಒಬ್ಬ ರೈತನ ಭಾವಮೈದುನ ಪೋಲೀಸ್ ಇಲಾಖೆಯಲ್ಲಿದ್ದ. ಅವನು ``ಎದುರಾಳಿ ರೈತನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು" ಮೊಖದ್ದಮೆ ನಡೆಸಲು ತನ್ನ ಭಾವನನ್ನು ಪ್ರೋತ್ಸಾಹಿಸಿದ.
ಒಂದು ದಿನ, ನಮ್ಮ ತಾಲ್ಲೂಕಿನ ಒಬ್ಬ ಇನಸ್ಪೆಕ್ಟರು, ನನ್ನ ಮನೆಗೆ ಬಂದು, ನನ್ನ ಸಾಹಿತ್ಯವನ್ನು ಕುರಿತು ತುಂಬ ಪ್ರಶಂಸೆ ಮಾಡಿದರು. ಸಾಹಿತಿಗಳಿರುವ ದೌರ್ಬಲ್ಯಗಳಲ್ಲಿ ಪ್ರಶಂಸೆಯ ಆಶೆ ಹೆಚ್ಚಿನದು. ಎಲ್ಲ ಕಲೆಗಾರರಿಗೂ ಹಾಗೆಯೇ. ನನಗೆ ಪೋಲೀಸಿನವರಾದರೂ ಎಷ್ಟು ಸಾಹಿತ್ಯಾಭಿಮಾನಿಗಳು ಸುಸಂಸ್ಕೃತರು ಎಂದು ಅಭಿಮಾನವುಂಟಾಯಿತು. ಅವರು ಹೀಗೆ ಎರಡು ಮೂರು ಸಲ, ಒಂದೇ ವಾರದಲ್ಲಿ ನನ್ನನ್ನು ಸಂದರ್ಶಿಸಿ, ತುಂಬ ಸ್ನೇಹವನ್ನೇ ಬೆಳೆಸಿದರು. ನಂತರ ಒಂದು ದಿನ ``ನಿಮ್ಮಂಥವರ ಸಹವಾಸ ದೊರೆತಿದ್ದು ನನ್ನ ಪುಣ್ಯ. ನಿಮ್ಮದು ಏನು ಜ್ಞಾನ, ಎಂಥ ಸಾಧನೆ, ಎಂಥ ಸೇವೆ, ಛೆ ಛೆ ಅದ್ಭುತ. ನಾನು ಒಂದೆರೆಡು ದಿನ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸಹವಾಸದಲ್ಲಿಯೇ ಇದ್ದು ನಿಮ್ಮ ನಡವಳಿಕೆ, ಜೀವನಕ್ರಮ, ಪುಸ್ತಕ ಭಂಡಾರ ಎಲ್ಲವನ್ನೂ ನೋಡಬೇಕು. ಇದು ಎಲ್ಲರಿಗೂ ದೊರೆಯುವ ಭಾಗ್ಯವಲ್ಲ" ಎಂದರು. ನನಗೆ ಹಿಗ್ಗೊ ಹಿಗ್ಗು! ಜಾನ್ಸನ್‌ಗೆ ಬಾಸ್ವೆಲ್ ಸಿಕ್ಕಿದಂತೆ ನನಗೊಬ್ಬ ಚರಿತ್ರೆಕಾರನೇ ಸಿಕ್ಕಿದ ಎಂದು ಉಬ್ಬಿದೆ. ನಾನು ``ಹಾಗೇ ಆಗಲಿ, ಬನ್ನಿ. ನಿಮಗೆ ಬೇಕಾದಾಗ ಬನ್ನಿ. ನಮ್ಮ ಮನೆಯಲ್ಲಿಯೇ ಇರಿ" ಎಂದೆ. ಎರಡು ದಿನಗಳ ನಂತರ ಸವಾರಿ, ಪೋಲೀಸ್ ಪೇದೆಯ ಕೈಯಲ್ಲಿ ``ಹೋಲ್ಡಾಲ್" ಹೊರಿಸಿಕೊಂಡು ನನ್ನ ಮನೆಯಲ್ಲಿ ಬಂದು ಇಳಿಯಿತು. ಹಳ್ಳಿಯಲ್ಲಿ ಒಬ್ಬ ಸಾಮಾನ್ಯನ ಮನೆಯಲ್ಲಿ ಸಬ್‌ಇನಸ್ಪೆಕ್ಟರರು ಬಂದು ಉಳಿದುಕೊಳ್ಳುವುದೆಂದರೆ ಆ ಮನುಷ್ಯ ಘನತೆ ತುಂಬ ಮೇಲೆ ಏರಿದಂತೆಯೆ. ಸರಿ, ಒಂದಿಲ್ಲೊಂದು ನೆಪದಲ್ಲಿ ಊರವರೆಲ್ಲ ಬಂದು, ಸಬ್‌ಇನಸ್ಪೆಕ್ಟರೊಡನೆ ಪೆದ್ದ ನಗೆಯನ್ನು ನಕ್ಕು ಒಂದು ಎರಡು ಮಾತನಾಡಿ ಕೈ ಮುಗಿದು ಹೋದರು. ನಾನಂತು ಬಹುಮಟ್ಟಿಗೆ ನನ್ನ ಮಹಿಮೆಯ ವಿಷಯಕ್ಕೆ ಎಚ್ಚೆತ್ತು, ಜಗತ್ತೆಲ್ಲ ನನ್ನ ಚಲನವಲನಗಳನ್ನು ಈಕ್ಷಿಸುತ್ತಿದೆಯೋ ಎಂಬಂತೆ -ಒಬ್ಬ ನಾಟಕ ಪಾತ್ರಧಾರಿಯಂತೆ -ನನ್ನ ನಡವಳಿಕೆ ಮಾತು ಭಾವ ಎಲ್ಲವನ್ನೂ ಸಬ್‌ಇನಸ್ಟೆಕ್ಟರರ ಮನಸ್ಸಿನಲ್ಲಿ ಅಚ್ಚು ಒತ್ತುವುದಕ್ಕಾಗಿ ಹೇಗೆ ಹೇಗೋ ಆಡಿ ಬಿಟ್ಟೆ. ಸಬ್‌ಇನಸ್ಪೆಕ್ಟರು ನನ್ನ ಮನೆಯಿಂದ ಹೋದ ಕೆಲವು ದಿನಗಳ ನಂತರ, ನನಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಂದೆ ಹೇಳಿದ, ನಮ್ಮ ನೆರೆ ಹಳ್ಳಿಯ ರೈತರ ವ್ಯಾಜ್ಯದಲ್ಲಿ ನಾನು ಫಿರ್‍ಯಾದಿಯ ಪರ-ಅಂದರೆ ಪೋಲೀಸರ ಪರ-ಸಾಕ್ಷಿಯಾಗಿ ಬರಬೇಕೆಂದು ಆಜ್ಞಾಪತ್ರ ಬಂದಿತು. ಸರ್ಕಾರದ ಪರ ನಾನು ಯಾಕೆ ಸಾಕ್ಷಿ ಎಂದು ನನಗೆ ದಿಗ್ಭ ಮೆಯೇ ಆಯಿತು. ನನ್ನನ್ನು ಯಾರು ಕೇಳಲೂ ಇಲ್ಲ. ನಾನು ಒಪ್ಪಿಯೂ ಇರಲಿಲ್ಲ. ಹಾಗಾದರೆ ``ನನ್ನನ್ನು ಕೇಳದೆಯೇ ನನ್ನನ್ನು ಸಾಕ್ಷಿಯಾಗಿ ಮಾಡಬಹುದೇ?" ಎಂದು ಒಬ್ಬ ವಕೀಲರನ್ನು ನಾನು ಕೇಳಿದೆ. ಅವರು ``ಮಾಡಬಹುದು. ಪೋಲೀಸಿನವರು ಸಾಕ್ಷ್ಯಗಳನ್ನು ಸಂಗ್ರಹಿಸುವುದೇ ಹಾಗೆ. ಲೋಕಾಭಿರಾಮವಾಗಿ ನೀವು ಅವರಿಗೆ ಏನನ್ನೋ ಹೇಳಿದ್ದರೂ ಅವೆಲ್ಲ ಅಧಿಕೃತ ಸಾಕ್ಷಗಳಾಗುತ್ತವೆ" ಎಂದರು. ನಾನು ನನ್ನ ಉತ್ಸಾಹದಲ್ಲಿ ನನ್ನ ಅತಿಥಿ ಸಬ್‌ಇನಸ್ಪಕ್ಟರನ ಹತ್ತಿರ ಏನೇನು ಹೇಳಿದೆನೊ ಎಂದು ಚಿಂತಾಕ್ರಾಂತನಾದೆ. ಆ ಮೊದಲನೆಯ ವಿಚಾರಣೆಗೆ ನಾನು ಹೋಗಲಿಲ್ಲ. ಮುಂದಲ ವಿಚಾರಣಾದಿನ ಬರುವನೆಂದು ಬರೆದು ಹಾಕಿದೆ.

 

ವಾಹನಗಳಿಗೆ ಕನ್ನಡದಲ್ಲಿ ನೋಂದಣಿ ಫಲಕ

- ಡಾ| ಯು. ಬಿ. ಪವನಜ

ಇತ್ತೀಚಿಗೆ ಕನ್ನಡ ಭಾಷೆ ಮಾತನಾಡುವ ಜನರ ನಾಡಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಸಂಗತಿ ನಡೆಯಿತು. ರಾಜ್ಯದ ಬಾಷೆಯಾದ ಕನ್ನಡದಲ್ಲಿ ನೋಂದಣಿ ಫಲಕ ಬರೆಸಿದ ರಿಕ್ಷಾ ಚಾಲಕರ ವಿರುದ್ಧ ಪೋಲೀಸರು ಕ್ರಮ ಕೈಗೊಂಡರು. ನಾಡಿನ ಜನರ ಭಾಷೆಯಲ್ಲಿ ನೋಂದಣಿ ಫಲಕ ಬರೆಸಿದ್ದು ಅವರ ತಪ್ಪು. ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ನೋಂದಣಿ ಫಲಕ ನಮ್ಮ ಭಾಷೆಯ ಬದಲು ಸಹಸ್ರಾರು ಮೈಲು ದೂರವಿರುವ ಬ್ರಿಟಿಷರ ಭಾಷೆಯಲ್ಲಿರಬೇಕು! ಈ ಕಾಯಿದೆ ಮಾಡಿದವರು ಕೇಂದ್ರ ಸರಕಾರದವರು. ವಾಹನಗಳ ನೋಂದಣಿ ಫಲಕ ಇಂಗ್ಲೀಷ್ ಭಾಷೆಯಲ್ಲಿರಬೇಕು ಎಂದು ಅಧಿಕಾರಿಗಳು, ಮುಖ್ಯವಾಗಿ ಪೋಲೀಸರು ಹೇಳುವುದಕ್ಕೆ ಅವರು ಕೊಡುವ ಕಾರಣ `ಯಾವುದಾದರೂ ವಾಹನ ಅಪಘಾತ ಮಾಡಿ ತಪ್ಪಿಸಿಕೊಂಡು ಹೋದರೆ ಅದರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಇತರ ಭಾಷಿಕರಿಗೆ ಇದು ಸಹಾಯಕಾರಿಯಾಗುತ್ತದೆ'. ಮೇಲ್ನೋಟಕ್ಕೆ ಇದು ತರ್ಕಬದ್ಧವಾಗಿದೆ.

ದಿನಕ್ಕೊಂದು ಕಥೆ

- ಡಾ| ಅನುಪಮ ನಿರಂಜನ

ಮೂರ್ಖ ಮೊಸಳೆ

ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, ``ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ ``ಆಗಲಿ” ಎಂದಿತು.

ಹನಿಗವನಗಳು

ಕನಸು

ಮುಗ್ಧ ನಯನಗಳಲಿ ಕಲ್ಪನೆಯಾ ಸರಮಾಲೆ
ಹೃದಯ ಚಿತ್ತಾರದಲಿ ಬಣ್ಣದಾ ರಂಗೋಲೆ
ನಿದಿರೆಯ ಮಂಪರಲಿ ಹಂಬಲದಾ ಅಲೆ

Wrestling with Samsung ML-5200A laser printer

I bought a Samsung ML-5200A laser printer 4 years ago. In just 4 years, the printer has become outdated, obsolete and out of market. The sad part is that no toner cartridges are available in the market for that printer. I can understand new products are being introduced and production of old models being stopped. But stopping the support all together including the daily requirement like toner cartridges is un-acceptable. Compare this situation with that of HP laser printers. Toner cartridges are available in the market for very old HP laser printers like Laserjet Series II. Finally, I had to get the toner cartridge re-filled by some vendor. I am aware of the fact that I can pull-on like this only for some more time. It is not possible to re-fill the toner cartridge forever.

New site

After dragging for nearly one year, finally, the new site is up. But the contents are yet to come. As I am busy with so many things, it will take some time for all the sections to be filled up. Thanks should go to H P Nadig who did go thru so many content management servers (CMS) on the web and finally decided on Drupal. It took some time to figure out the pros and cons between different free and opensource CMSes available. Be patient and be with me while I convert and upload the old content into the new Unicode format.

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

ಡಾ| ಡಿ.ಕೆ. ಮಹಾಬಲರಾಜು

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.