sabimana
Tuesday, May 23rd, 2006regaring language,land,river,religion your felling is most important speckout better later than never……….
regaring language,land,river,religion your felling is most important speckout better later than never……….
೦೬-೪-೨೦೦೬ – ಗುರುವಾರ – ಮಧ್ಯಾನ್ಹ ೧-೦೦ ಗಂಟೆ ಆತ್ಮೀಯ ವಿಶ್ವಕನ್ನಡ ಸ್ನೇಹಿತರೇ, ಬೇಸಿಗೆ ಬಂದಿದೆ.
೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು.
ಶ್ರೀ. ಎಚ್.ಎಸ್. ವೆಂಕಟೇಶ ಮೂರ್ತಿ.
ಎಂಟೆಲೆ ಮಾವೀನ ದಂಟೀನಾಗಿರುವೋಳೆ
ಗಂಟೆ ನಾದಾಕೆ ಬರುವೋಳೆ
ಗಂಟೆ ನಾದಾಕೆ ಬರುವೋಳೆ ಸರಸೋತಿ
ಗಂಟಾಲ ತೊಡರ ಬಿಡಿಸಮ್ಮ
ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು. ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ. ಇವುಗಳಲ್ಲಿ ಎರಡು ವಿಧ. ನೀರಿನಲ್ಲಿ ಕರಗುವ ನಾರು_ಬೇರುಗಳು, ನೀರಿನಲ್ಲಿ ಕರಗದ ನಾರು-ಬೇರುಗಳು, ಹುಳಿ ಹಣ್ಣುಗಳ ನಾರು, ಅಕ್ಕಿಯ ಮೇಲಿನ ಹೊಟ್ಟಿನ ಭಾಗ, ಸೇಬಿನ ನಾರು ಇತ್ಯಾದಿಗಳು ನೀರಿನಲ್ಲಿ ಕರಗುತ್ತವೆ. ಉಳಿದವು ನೀರಿನಲ್ಲಿ ಕರಗುವುದಿಲ್ಲ. ಶರೀರಕ್ಕೆ ಎರಡೂ ಬೇಕು. ಹೆಗ್ಗರುಳಿನ ಕ್ಯಾನ್ಸರ್(ಕೊಲೋನ್ ಕ್ಯಾನ್ಸರ್), ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಜಠರದ ಹುಣ್ಣು, ಅಧಿಕ ರಕ್ತದೊತ್ತಡ, ಅಪೆಂಡಿಸೈಟಿಸ್, ಅಧಿಕ ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಕಲ್ಲು, ಬೊಜ್ಜು, ಹೃದಯಾಘಾತ – ಏನು ಇಷ್ಟೊಂದು ದೊಡ್ಡ ಕಾಯಿಗಳ ಪಟ್ಟಿ? ಏಕೆ ಈ ಪಟ್ಟಿ? – ಇವೆಲ್ಲಕ್ಕೂ ಒಂದೇ ಕಾರಣ, ರೋಗಿಯ ಆಹಾರದಲ್ಲಿ ನಾರು-ಬೇರುಗಳ ಅಂಶ ಕಡಿಮೆ. ನಾರು-ಬೇರುಗಳು, ಮೇಲಿನ ಕಾಯಿಲೆಗಳಲ್ಲಿ ಹೇಗೆ ಸಹಾಯ ಮಾಡುತ್ತವೆ? ೧) ನಾರು-ಬೇರುಗಳು ದೊಡ್ಡಕರುಳಿನಲ್ಲಿನ ನೀರನ್ನು ಹೀರಿ ಮಲವು ಉಬ್ಬುವಂತೆ ಮಾಡುತ್ತವೆ. ಅದರ ಮೇಲೆ ಏಕಾಣುಜೀವಿಗಳು(ಬ್ಯಾಕ್ಟೀರಿಯಾ) ತಮ್ಮ ಕ್ರಿಯೆಯಿಂದ ಅದನ್ನು ಹಾಲಂದೀಕರಿಸಿ(ಎಮಲ್ಸಿಪ್ಫ಼ೈಡ್) ವಾಯುವನ್ನು ಬಿಡುಗಡೆ ಮಾದಿ ಮಲವನ್ನು ಮೃದು ಮಾಡುತ್ತವೆ. ೨) ದೊಡ್ಡಕರುಳಿನ ಮಲದಲ್ಲಿ ಕೆಲವು ಕ್ಯಾನ್ಸರ್ ಕಾರಕ ವಸ್ತುಗಳು ಕಂಡುಬಂದವು. ಅದಕ್ಕೆ ಕಾರಣ ದೊಡ್ಡಕರುಳಿನ ಕಡಿಮೆ ಆಮ್ಲೀಯತೆ. ಆಮ್ಲೀಯತೆ ಹೆಚ್ಚಾದಲ್ಲಿ ಈ ಕ್ಯಾನ್ಸರ್ ಕಾರಕಗಳು ಕಡಿಮೆಯಾದವು. ನಾರು-ಬೇರುಗಳ ಮೇಲಿನ ಏಕಾಣುಜೀವಿಗಳ ಕ್ರಿಯೆ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಏಕಾನುಜೀವಿಗಳು ವೃದ್ಧಿಯಾಗಲು ಸಾರಜನಕ ಬೇಕು. ಅವು ದೊಡ್ಡಕರುಳಿನಲ್ಲಿನ ಸಾರಜನಕವನ್ನು ಉಪಯೋಗಿಸಿಕೊಂಡರೆ ಅಮೋನಿಯಾ ಕಡಿಮೆಯಾಗುತ್ತದೆ. ಅಮೋನಿಯಾ ಹೆಚ್ಚಾಗಿದ್ದರೆ ಕ್ಯಾನ್ಸರ್ ಹೆಚ್ಚುತ್ತಿತ್ತು. ಹೀಗೆ ನಾರು-ಬೇರುಗಳು ಆಮ್ಲೀಯತೆಯನ್ನು ಹೆಚ್ಚಿಸಿ, ಅಮೋನಿಯಾವನ್ನು ತಗ್ಗಿಸಿ ಹೆಗ್ಗರುಳಿನ ಕ್ಯಾನ್ಸರನ್ನು ತಡೆಗಟ್ಟುತ್ತವೆ. ೩) ಹೆಗ್ಗರುಳಿನ ಸುತ್ತುಸರಿಕ ಕ್ರಿಯೆಗೆ(ಪೆರಿಸ್ಟಾಲ್ಟಿಕ್ ಮೋಷನ್) ನಾರು-ಬೇರುಗಳು ಸಹಾಯಮಾಡುತ್ತವೆ. ಇದು ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ೪) ನಾರು-ಬೇರುಗಳು ಸಣ್ಣಕರುಳಿನಲ್ಲಿ ಮೇದಸ್ಸನ್ನು ತಳ್ಳಿಕೊಂಡು ಹೋಗಿಬಿಡುತ್ತವೆ. ಆದ್ದರಿಂದ ರಕ್ತಕ್ಕೆ ಸೇರುವ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ, ಹೃದಯಾಘಾತ, ಮುಂತಾದವು ಕಡಿಮೆಯಾಗುತ್ತವೆ. ೫) ಸಕ್ಕರೆಯು ರಕ್ತಕ್ಕೆ ಸೇರುವ ವೇಗವನ್ನು ನಾರು-ಬೇರುಗಳು ಕಡಿಮೆಮಾಡುತ್ತವೆ. ಅಲ್ಲದೆ, ಕೆಲವು ನಾರು-ಬೇರುಗಳು ಆಹಾರದ ಜಿಗುಟುತನವನ್ನು(ವಿಸ್ಕೋಸಿಟಿ) ಹೆಚ್ಚಿಸುತ್ತವೆ. ಈ ಜಿಗುಟಿನಿಂದ ಕೂಡಿದ ಆಹಾರಕ್ಕೆ ಕಡಿಮೆ ಇನ್ಸುಲಿನ್ ಸಾಕಾಗುತ್ತದೆ. ಹಣ್ಣಂಟು ಮತ್ತು ಸಸ್ಯಗೋಂದು ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತವೆ. ರಾಗಿಯಲ್ಲಿನ ಪಿಷ್ಟ, ಅಕ್ಕಿಯಲ್ಲಿನ ಪಿಷ್ಟಕ್ಕಿಂತ ನಿಧಾನವಾಗಿ ಗ್ಲೂಕೋಸ್ ಆಗುತ್ತದೆ. ಕಾರಣ ಅದರಲ್ಲಿನ ಹೊಟ್ಟು. ಅದಕ್ಕಾಗಿಯೇ ಸಕ್ಕರೆ ರೋಗಿಗಳಿಗೆ ಅಕ್ಕಿಗಿಂತ ರಾಗಿ ಉತ್ತಮವೆನಿಸುವುದು. ಈ ಕಾರಣಗಳಿಂದ ಸಕ್ಕರೆ ರೋಗದಲ್ಲಿ ನಾರು-ಬೇರುಗಳು ಸಹಾಯಮಾಡುತ್ತವೆ. ಜೀವಕಣತಂತುಕ (ಸೆಲ್ಯೂಲೋಸ್) : ಇದು ಹಣ್ಣು, ತರಕಾರಿಗಳು, ಹೊಟ್ಟು, ಕಾಯಿಗಳಲ್ಲಿದೆ. ಇದು ನೀರಿನಲ್ಲಿ ಕರಗದ ನಾರು-ಬೇರು. ಇದು ನೀರನ್ನು ತಡೆಹಿಡಿದಿಟ್ಟುಕೊಂಡು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಏಕಾಣುಜೀವಿಯಿಂದ ಇದೇ ಮೃದುವಾಗುವುದು. ಇದು ಕರುಳಿನ ಕ್ಯಾನ್ಸರ್ ಉಂಟುಮಾಡುವ ವಿಷ ವಸ್ತುವನ್ನು ಹೊರದೂಡುತ್ತದೆ. ತೂಕವನ್ನು ಇಳಿಸುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಹಣ್ಣಂಟು (ಪೆಕ್ಟಿನ್) : ಈ ಜಾತಿಯ ನಾರು-ಬೇರು ರಕ್ತದ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹೆಗ್ಗರುಳಿನ ಏಡಿಗಂತಿ(ಕ್ಯಾನ್ಸರ್) ಮತ್ತು ಪಿತ್ತಕಲ್ಲು(ಗಾಲ್ ಸ್ಟೋನ್) ಆಗುವುದನ್ನು ತಡೆಯುತ್ತದೆ. ಇದು ಮಲ ಮೃದುವಾಗುವುದರಲ್ಲಿ ಸಹಾಯಮಾಡುವುದಿಲ್ಲ. ಆದ್ದರಿಂದ ಮಲಬದ್ಧತೆಯಲ್ಲಿ ಇದರ ಕಾರ್ಯ ಕಡಿಮೆ. ಇದು ಸೇಬು, ದ್ರಾಕ್ಷಿ, ಹುಳಿಹಣ್ಣುಗಳು, ಪಪಾಯಿ, ಸೀಬೆ, ಬಾಳೆ, ಹೊಟ್ಟು ಇವುಗಲ್ಲಿದೆ. ಗೋಂದು ಮತ್ತು ಅಂಟು
: ಡಯಾಬಿಟಿಸ್ ನಲ್ಲಿ ಸಹಾಯ ಮಾಡುತ್ತವೆ. ಹುರುಳಿ, ಓಟ್ಸ್, ತವುಡು ಇವುಗಳಲ್ಲಿವೆ. ಲೆಗ್ನಿನ್ : ಏಕದಳ, ದ್ವಿದಳ ಧಾನ್ಯಗಳ ಹೊಟ್ಟು, ಕೋಸು, ಟೊಮೇಟೋ, ಇವುಗಳಲ್ಲಿದೆ. ಇದು ಪಿತ್ತರಸವನ್ನು ಕರುಳಿನಿಂದ ಹೊರದುಡಲು ಸಹಕರಿಸುತ್ತದೆ. ನಾರಿರುವ ಆಹಾರಗಳು : ಕುಸುಬೆಬೀಜ, ನುಗ್ಗೇಕಾಯಿ, ಬಟಾಣಿ, ಸೋಯಾಬೀನ್, ಕಡ್ಲೇಕಾಳು, ಕರಿಬೇವು, ಮೆಂತೆಕಾಳು, ಹುಣಿಸೆ ಎಲೆ, ನೆಲ್ಲೀಕಾಯಿ, ಬೇಲದ ಹಣ್ಣು, ಅನಾನಸ್, ಸೀತಾಫಲ, ಸೀಬೆ, ದ್ರಾಕ್ಷಿ, ಕೊತ್ತಂಬರಿ, ಜೀರಿಗೆ, ಏಲಕ್ಕಿ, ಬಾರ್ಲಿ, ಜೋಳ, ರಾಗಿ, ಗೋಧಿ, ಉದ್ದಿನಕಾಳು, ತೊಗರೀಬೇಳೆ, ಹುಣಿಸೇಹಣ್ಣು, ಮೂಲಂಗಿ, ಆಲೂಗೆಡ್ಡೆ, ಗೆಣಸು, ಮಾವು, ಸೊಪ್ಪುಗಳು, ತರಕಾರಿಗಳು-ಕ್ಯಾರಟ್, ಬೀಟ್ ರೂಟ್, ಹುರುಳೀಕಾಯಿ, ಜವಳೆಕಾಯಿ ಇತ್ಯಾದಿ. ಪೂರ್ಣವಾಗಿ ನಾರಿಲ್ಲದ ಆಹಾರಗಳು : ಮಾಂಸ, ಮೀನು, ಮೊಟ್ಟೆ, ಹಾಲು, ಬೆಣ್ಣೆ, ಸಕ್ಕರೆಗಳು ಮಾತ್ರ. ೧೦೦ ಗ್ರಾಂ ಹೊಟ್ಟಿನಲ್ಲಿ ೧೦.೫ ರಿಂದ ೧೩.೫ ನಾರು-ಬೇರಿದೆ. ಏಕದಳ ಧಾನ್ಯದ ಹೊಟ್ಟಿನಂಶ ೧.೦೦ ರಿಂದ ೨.೦೦ ದ್ವಿದಳ ಧಾನ್ಯದ ಹೊಟ್ಟಿನಂಶ ೧.೫೦ ರಿಂದ ೧.೭೦ ಕಾಯಿಗಳಲ್ಲಿ ೨.೦೦ ರಿಂದ ೫.೦೦ ತರಕಾರಿಗಳಲ್ಲಿ ೦.೫೦ ರಿಂದ ೧.೫೦ ಹಣ್ಣುಗಳಲ್ಲಿ ೦.೫೦ ರಿಂದ ೧.೫೦ ಒಣಗಿದ ಹಣ್ಣುಗಳಲ್ಲಿ ೧.೦೦ ರಿಂದ ೩.೦೦ ಒಬ್ಬರಿಗೆ ಎಷ್ಟು ನಾರು-ಬೇರು ? ಈ ಬಗ್ಗೆ ಇನ್ನೂ ಪ್ರಯೋಗಗಳು ನಡೆಯುತ್ತದಿ. ಆಫ್ರಿಕಾದ ಜನರು ದಿನಕ್ಕೆ ೧೫೦ ಗ್ರಾಂ ಗಳವರೆವಿಗೂ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಗ್ಗರುಳಿನ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಲ್ಲ. ಅದೇ ಯೂರೋಪಿನ ಜನರು ದಿನಕ್ಕೆ ೨೦ ಗ್ರಾಂ ನಾರನ್ನು ಸೇವಿಸುತ್ತಾರೆ. ಇವರಲ್ಲಿ ಮೇಲಿನ ಕಾಯಿಲೆಗಳು ಹೆಚ್ಚು. ತುಂಬಾ ಹೆಚ್ಚು ನಾರಿನಂಶವನ್ನು ಸೇವಿಸಿದರೂ ತೊಂದರೆಯುಂಟಾಗುತ್ತದೆ. ಇದು ಶರೀರಕ್ಕೆ ತುಂಬಾ ಉಪಯುಕ್ತವಾದ ಖನಿಜಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಪೊಟಾಷಿಯಂ ಗಳನ್ನು ಶ್ರೀರದಿಂದ ಹೊರಕ್ಕೆ ಹಾಕಿಬಿಡುತ್ತದೆ. ಅತಿ ಹೆಚ್ಚಾದ ನಾರಿನೀಮ್ದ ಟ್ಯಾನಿನ್, ಆಕ್ಸಲೇಟ್, ಪೈಟೇಟ್ ಎಂಬ ಅಂಶಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಮಾಡುತ್ತವೆ. ಹೊಟ್ಟೆಯ ಹುಣ್ಣು, ಇರ್ರ್ಟಬಲ್ ಬೋವಲ್ ಸಿಂಡ್ರೋಮ್, ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಗ್ಯಾಸ್ ಟ್ರಬಲ್ ಇರುವವರು ಹೆಚ್ಚು ನಾರು-ಬೇರುಗಳನ್ನು ಸೇವಿಸಿದರೆ ಹೆಚ್ಚು ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆಯನೋವು ಜಾಸ್ತಿಯಾಗುತ್ತದೆ. ಡಾ. ಎಚ್.ಕ್ಯುಮಿಂಗ್, ಇಂಗ್ಲೇಂಡ್ ನ ನಾರು-ಬೇರುಗಳ ತಜ್ನರ ಪ್ರಕಾರ ಆರೋಗ್ಯಕ್ಕೆ ದಿನ ಒಂದಕ್ಕೆ ೩೦ ಗ್ರಾಂ ನಾರು-ಬೇರುಗಳ ಅವಶ್ಯಕತೆ ಇದೆ. ಬರೆದವರು : ಜಿ.ವಿ.ವಿ.ಶಾಸ್ತ್ರಿ – ತುಮಕೂರು (ಮನುಜಾ! ಏನು ನಿನ್ನ ಆಹಾರ ಪುಸ್ತಕ ಬರೆದವರು) ಸಂಗ್ರಹಿಸಿದವರು : ೧) ಸತ್ಯಪ್ರಕಾಶ್.ಹೆಚ್.ಕೆ. ೯೮೮೬೩ ೩೪೬೬೭ ೨) ಅರುಣ್. ಎಲ್. ೯೮೮೬೪ ೧೭೨೫೨
ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.
ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)
ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. ‘ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ’. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು. ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ. ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು? ಒಂದು ದಿನದ ಒಬ್ಬನ ಆಹಾರ : ೧. ಏಕದಳ ಧಾನ್ಯಗಳು ೪೬೦ ಗ್ರಾಂ ೨. ಬೇಳೆಗಳು ೪೦ ಗ್ರಾಂ ೩. ಹಸಿ ತರಕಾರಿಗಳು ೪೦ ಗ್ರಾಂ ೪. ಇತರೆ ತರಕಾರಿಗಳು ೪೦ ಗ್ರಾಂ ೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ ೬. ಹಣ್ಣುಗಳು ೩೦ ಗ್ರಾಂ ೭. ಹಾಲು ೧೫೦ ಗ್ರಾಂ ೮. ಕೊಬ್ಬು ೪೦ ಗ್ರಾಂ ೯. ಬೆಲ್ಲ ೩೦ ಗ್ರಾಂ ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ. ೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ ‘ಎ’ ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ ‘ಸಿ’ ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ ‘ಡಿ’ ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ. ೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು. ೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ. ೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು. ೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ. ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ ‘ಸಿ’ ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ. ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ ‘ಬಿ’ ಮತ್ತು ‘ಸಿ’ ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ. ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ ‘ಸೂಪ್’ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ. ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ ಕ್ಯಾಲ್ಸಿಯಂ ೧೦.೦೦ ೧೦.೦೦ ಕಬ್ಬಿಣ ೩.೨೦ ೩.೧೦ ಥಯಾಮಿನ್ ೦.೨೧ ೦.೦೬ ರಿಬೋಫ್ಲೇವಿನ್ ೦.೧೬ ೦.೦೬ ನಯಾಸಿನ್ ೩.೯೦ ೧.೯೦ ನಾರು ೦.೬೦ ೦.೨೦ ಥಯಾಮಿನ್, ನಯಾಸಿನ್ ಮುಂತಾದವು ಬಹ
I am interesting in choosing appropriate kannada, sanskrit words for vocabulary specific to mathematics.Appropriate Kannada/sanskrit words are required for translating words such as “natural number”, “numeral”, “rational number”, “imaginary number” etc.