ಕಾಸರಗೋಡಿನ ಸಾಂಸ್ಕೃತಿಕ ಇತಿಹಾಸ – ಒಂದು ನೋಟ

Saturday, January 22nd, 2022
ಕಾಸರಗೋಡಿನ ಸಾಂಸ್ಕೃತಿಕ  ಇತಿಹಾಸ - ಒಂದು ನೋಟ

ಕಾಸರಗೋಡು ಕನ್ನಡ ನಾಡು – ಡಾ. ವಸಂತಕುಮಾರ ಪೆರ್ಲ ಕಾಸರಗೋಡು ಅಚ್ಚಕನ್ನಡ ನಾಡು. ೧೯೫೬ ರಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿ ಪಡಬಾರದ ಪಾಡು ಪಡುತ್ತಿದೆ. ಇಂದು ಮಲಯಾಳಿಗರ ಆಕ್ರಮಣ ನೀತಿಯಿಂದಾಗಿ ಕಾಸರಗೋಡಿನ ಕನ್ನಡಿಗರು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತುಳಿತಕ್ಕೆ ಒಳಗಾಗಿದ್ದಾರೆ. ಕಾಸರಗೋಡಿನ ಸಮಸ್ಯೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ಅವಕಾಶಗಳು ಇತ್ತಿತ್ತಲಾಗಿ ಕಡಿಮೆಯಾಗುತ್ತಿದೆ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳು ತಮ್ಮದೇ ವ್ಯವಹಾರ ಮತ್ತು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಾಸರಗೋಡಿನ ಕಡೆಗೆ ಮುಖ […]

ಮುಖಗವಸುಗಳು

Thursday, November 19th, 2020

N95, N99, N100 ಮಾಸ್ಕ್ ಎಂದರೇನು?   ಕೋವಿಡ್-19 ರಿಂದಾಗಿ ಒಂದು ಹೊಸ ವಸ್ತು ನಮ್ಮ ದಿನನಿತ್ಯದ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಅದುವೇ ಮುಖಗವಸುಗಳು (mask). ಮಾರುಕಟ್ಟೆಯಲ್ಲಿ ಹಲವಾರು ನಮೂನೆಯ ಮುಖಗವಸುಗಳು ಲಭ್ಯವಿವೆ. ಹಲವು ಬಣ್ಣಗಳಲ್ಲಿ, ಹಲವು ನಮೂನೆಗಳಲ್ಲಿ, ಹಲವು ಬೆಲೆಗಳಲ್ಲಿ ಮುಖಗವಸುಗಳು ದೊರೆಯುತ್ತಿವೆ. ಕೇವಲ ಒಂದೇ  ವರ್ಷದ ಹಿಂದೆ ಈ ಮುಖಗವಸುಗಳನ್ನು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರು ಬಳಸುತ್ತಿದ್ದುದನ್ನು ಮಾತ್ರ ನಾವು ಕಂಡಿದ್ದೆವು. ಈಗ ಎಲ್ಲರೂ ಬಳಸುತ್ತಿದ್ದಾರೆ ಅಥವಾ ಬಳಸಲೇಬೇಕು ಎಂದು ಸರಕಾರವೇ ಹೇಳುತ್ತಿದೆ. […]

ಮಾಹಿತಿ ತಂತ್ರಜ್ಞಾನಾಧಾರಿತ ಕೃಷಿ ಸಂಹವನ

Friday, May 8th, 2020

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದವರು ಪ್ರಕಟಿಸಿದ ಕೃಷಿ ವಿಜ್ಞಾನಗಳ ಸ್ನಾತಕ ಪದವಿ ಎರಡನೆ ಸೆಮಿಸ್ಟರ್‌ ಕನ್ನಡ ಪಠ್ಯ ಪುಸ್ತಕದಲ್ಲಿ (೨೦೧೭) ಪ್ರಕಟವಾದ ಒಂದು ಅಧ್ಯಾಯ ಪೀಠಿಕೆ ಸಾಹಿತ್ಯವನ್ನು ಕಥನ ಸಾಹಿತ್ಯ ಮತ್ತು ಮಾಹಿತಿ ಸಾಹಿತ್ಯ ಎಂದು ವಿಭಜಿಸಬಹದು. ಕಥೆ, ಕಾದಂಬರಿ, ಕವನ, ಇತ್ಯಾದಿಗಳು ಕಥನ ಸಾಹಿತ್ಯ ಎಂದೆನಿಸಿಕೊಳ್ಳುತ್ತವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಕಾನೂನು, ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಹಿತ್ಯವನ್ನು ಮಾಹಿತಿ ಸಾಹಿತ್ಯ ಎನ್ನಬಹುದು. ಮಾಹಿತಿ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ಅದರ ಉಪಶಾಖೆಗಳಾದ […]

ವೆಲ್‌ಕ್ರೋ: ಕೊಕ್ಕೆ-ಕುಣಿಕೆಗಳ ಭಲೇ ಜೋಡಿ!

Tuesday, March 24th, 2020
ವೆಲ್‌ಕ್ರೋ: ಕೊಕ್ಕೆ-ಕುಣಿಕೆಗಳ ಭಲೇ ಜೋಡಿ!

– ಡಾ. ಯು. ಬಿ.ಪವನಜ ಮುಚ್ಚಿದ ಚೀಲವನ್ನೋ ಕಟ್ಟಿದ ಚಪ್ಪಲಿಯನ್ನೋ ತೆರೆದಾಗ ಪರ್ ಪರ್ ಧ್ವನಿ ಕೇಳುವುದು ನಮಗೆ ಗೊತ್ತು. ಅವುಗಳಲ್ಲಿ ಬಳಕೆಯಾಗುವ ವೆಲ್‌ಕ್ರೋ ಈ ಧ್ವನಿ ಹೊರಡಿಸುತ್ತದೆ ಎನ್ನುವುದೂ ನಮಗೆ ಗೊತ್ತು. ಆದರೆ ಏನಿದು ವೆಲ್‌ಕ್ರೋ? ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು ಭಾಗದಲ್ಲಿ ಕುಣಿಕೆಗಳಿರುತ್ತವೆ ಮತ್ತು ಅದರ ಮೇಲೆ ಕುಳಿತುಕೊಳ್ಳುವ ಭಾಗದಲ್ಲಿ ಕೊಕ್ಕೆಗಳಿರುತ್ತವೆ. ಕುಣಿಕೆಗೆ ಕೊಕ್ಕೆ ಸಿಕ್ಕಿಹಾಕಿಕೊಂಡಾಗ ಆ ಎರಡು ಭಾಗಗಳು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ಇವುಗಳನ್ನು ಬೇರೆ ಮಾಡಬೇಕಾದರೆ ಮೇಲಿನ ಭಾಗವನ್ನು ಒಂದು ಬದಿಯಿಂದ ಎತ್ತುತ್ತಾ […]

ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ

Wednesday, December 5th, 2018

– ಡಾ. ಯು. ಬಿ. ಪವನಜ ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು -www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.udayavani.com, www.vishvakannada.com, www.ejnana.com, kanaja.in ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ […]

ವಿಕಿಪೀಡಿಯ ಲೇಖನ ಬರಹ

Monday, July 2nd, 2018

-ಡಾ. ವಿಶ್ವನಾಥ ಬದಿಕಾನ ವಿಕಿಪೀಡಿಯ ಎಂದರೇನು?  ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಆವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ ‘ವಿಕಿಪೀಡಿಯ’.  ವಿಕಿಪೀಡಿಯ (Wikipedia)ವು ವೆಬ್ ಆಧಾರಿತ ಅಂತರಜಾಲದ (Internet) ಮೂಲಕ ಬರೆಯುವ ಉಚಿತ, ಸಹಕಾರಿ, ಬಹುಭಾಷಾ ಸ್ವತಂತ್ರ ವಿಶ್ವಕೋಶ.  ಇದೊಂದು ವಿಶ್ವಕೋಶ ಜಾಲತಾಣ (Encyclopaedia Website) ವಾಗಿದ್ದು www.wikipedia.org ಅಂತರಜಾಲದ ಮೂಲಕ ಮಾಹಿತಿ ಸೇರಿಸಬಹುದು ಅಥವಾ ಹುಡುಕಬಹುದು.  ವಿಕಿಪೀಡಿಯವು ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ಪ್ರಪಂಚದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ […]

ತುಳು ವಿಕಿಪೀಡಿಯ ಈಗ ಸಿದ್ಧ

Thursday, December 8th, 2016
ತುಳು ವಿಕಿಪೀಡಿಯ ಈಗ ಸಿದ್ಧ

– ಡಾ. ಯು. ಬಿ. ಪವನಜ ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು […]

ತಂತ್ರಜ್ಞಾನ: ನಾಳೆಗಳ ನಿರ್ಮಾಣ

Sunday, November 20th, 2016
ತಂತ್ರಜ್ಞಾನ: ನಾಳೆಗಳ ನಿರ್ಮಾಣ

ಆಳ್ವಾಸ್ ನುಡಿಸಿರಿ – ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ ಟಿ. ಜಿ. ಶ್ರೀನಿಧಿ ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ. ೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್‌ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ […]

ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

Sunday, November 15th, 2015
ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

– ಡಾ. ಯು. ಬಿ. ಪವನಜ   ನವಂಬರ್ ಬಂದೊಡನೆ ಎಲ್ಲರಿಗೂ ನೆನಪಾಗುವುದು ಕನ್ನಡ. ದುರಾದೃಷ್ಟಕ್ಕೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಮತ್ತೊಮ್ಮೆ ನವಂಬರ್ ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಲ್ಲಿದೆ ಎಂದು ಮತ್ತೆ ಬರೆಯುವ ಅಗತ್ಯವಿಲ್ಲ. ಏನೇನು ಆಗಬೇಕಾಗಿದೆ? ಏನೆಲ್ಲ ಮಾಡುತ್ತೇವೆ ಎಂದವರೆಲ್ಲ ಏನು ಮಾಡಿದ್ದಾರೆ ಎಂದು ನೋಡೋಣ.   ಕನ್ನಡದ ಬಹುತೇಕ ಕೆಲಸಗಳು ಸರಕಾದ ಮೂಲಕವೇ ಆಗಬೇಕಾಗಿವೆ. ಸರಕಾರವು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸಿ ಅದರ ಸಲಹೆಯಂತೆ ಕೆಲವು ಕೆಲಸಗಳನ್ನು ಮಾಡಿದೆ. ಅದರ ಸಲಹೆಗಳಲ್ಲಿ […]

ಮಹಾಭಾರತ ಮತ್ತು ತಂತ್ರಾಂಶ ತಯಾರಿ

Saturday, September 5th, 2015

– ಡಾ. ಯು. ಬಿ. ಪವನಜ ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು. ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ ಸುಧನ್ವನಿಗೂ ಅರ್ಜುನನಿಗೂ ನಡೆಯುವ ಯುದ್ಧ. ಮಹಾಭಾರತದ ಯುದ್ಧದ ನಂತರ ನಡೆಯುವ ಅಶ್ವಮೇಧಯಾಗದ ಪ್ರಸಂಗದಲ್ಲಿ ಈ ಕಥೆ ಬರುತ್ತದೆ. ಸುಧನ್ವ ಮತ್ತು ಅರ್ಜುನ ಇಬ್ಬರೂ ಕೃಷ್ಣಭಕ್ತರು. ಇಬ್ಬರೂ ಕೃಷ್ಣನ ಮೇಲೆ ಆಣೆ ಇಟ್ಟು ಒಂದೊಂದು ಪ್ರತಿಜ್ಞೆ ಮಾಡುತ್ತಾರೆ. ಅರ್ಜುನ ಹೇಳುತ್ತಾನೆ – “ಇನ್ನು […]