ರಘು ದೀಕ್ಷಿತ್ ಸಂದರ್ಶನ

Sunday, November 13th, 2011

ಸಂದರ್ಶಕರು: ಡಾ| ಯು. ಬಿ. ಪವನಜ ಪ್ರ: ನಿಮ್ಮ ಸಂಗೀತ ಯಾವ ವಿಭಾಗಕ್ಕೆ ಸೇರುತ್ತದೆ? ರಾಕ್, ಪಾಪ್, ಇಂಡಿಪಾಪ್, .. ಏನದು? ಉ: ಈ ರಾಕ್, ಪಾಪ್, ಎಂದೆಲ್ಲ ಹೇಳುವುದಕ್ಕಿಂತಲೂ ಸಮಕಾಲೀನ ಎನ್ನುವುದು ಹೆಚ್ಚು ಸೂಕ್ತ. ಇಂದಿನ ಪೀಳಿಗೆಗೆ ಅಂದರೆ ನನ್ನ ನಂತರದ ಯುವ ಜನತೆಗೆ ನನ್ನ ಹಿಂದಿನ ತಲೆಮಾರಿನ ಸಾಹಿತ್ಯವನ್ನು, ಉದಾಹರಣೆಗೆ ಶಿಶುನಾಳ ಶರೀಫ, ವಚನಗಳು, ಬೇಂದ್ರೆಯವರ ಪ್ರೇಮ ಕವಿತೆಗಳು, ನಮ್ಮ ನಾಡಿನ ಬಗ್ಗೆ ಇರುವ ಗೀತೆಗಳು, ಇವೆಲ್ಲವನ್ನು ತಲುಪಿಸುವುದು ನನ್ನ ಉದ್ದೇಶ. ಇವುಗಳು ತುಂಬ […]

ರಘು ದೀಕ್ಷಿತ್

Sunday, November 13th, 2011

ಅಂತಾರಾಷ್ಟ್ರೀಯ ಕನ್ನಡ ಸಂಗೀತಗಾರ – ಡಾ| ಯು. ಬಿ. ಪವನಜ ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಇತರೆ ಯಾವುದೇ ಸಂಗೀತಗಾರರ ಪಂಗಡಕ್ಕೆ ಅವರನ್ನು ಸೇರಿಸಲಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಇಂಡಿಪಾಪ್ ಅಂದುಕೊಂಡರೂ ಗಮನಕೊಟ್ಟು ಆಲಿಸಿದರೆ ಅವರದು ತಮ್ಮದೇ ಪ್ರತ್ಯೇಕ ವಿಭಾಗ ಅನ್ನಿಸುವುದು. ತಮ್ಮದೇ ಆದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಎಂಬ ಹೆಸರಿನಲ್ಲಿ ಸ್ಥಾಪಿಸಿ ತಮ್ಮ ಸಂಗೀತವನ್ನು ಪ್ರಪಂಚಾದ್ಯಂತ ಹಂಚಿದ್ದಾರೆ. ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. […]

ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಪೂಜಾರಿಯಾದವರು

Sunday, March 30th, 2008

– ಪ್ರಕಾಶ ಹೆಬ್ಬಾರ

ನಾಗೇಶ ಹೆಗಡೆ ಎಂದೊಡನೆ ಯಾವುದರಿಂದ ಅವರನ್ನು ಗುರುತಿಸಬೇಕು? ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತಬ್ಬಿಬ್ಬು ಆಗುತ್ತದೆ. ಮನುಷ್ಯನ ಎಲ್ಲ ಅಂಗಾಂಗಗಳೂ ಪ್ರಮಾಣಬದ್ಧವಾಗಿದ್ದು ಒಂದಕ್ಕೊಂದು ಪೂರಕವಾಗಿ ಕ್ರಿಯಾಶೀಲವಾಗಿರುವಂತೆ ಹೆಗಡೆಯವರ ಸಾಧನೆಯ ನೆಲೆ ಕೂಡ. ಅವರನ್ನು ಅವರವರ ಅಳವಿಗೆ ತಕ್ಕಂತೆ ಭೂವಿಜ್ಞಾನಿ, ಪತ್ರಕರ್ತ, ನುಡಿಚಿತ್ರಕಾರ, ಪರಿಸರವಾದಿ, ಪತ್ರಕರ್ತರ ವೃತ್ತಿಬದುಕನ್ನು ರೂಪಿಸುವಾತ, ಸಂಪಾದಕ, ವಿಜ್ಞಾನ ಸಂವಹನಕಾರ- ಏನೆಲ್ಲಾ ಅನ್ನಬಹುದು. ರೈತರನ್ನು ಪ್ರಗತಿಪರರನ್ನಾಗಿ ಮಾಡಲು ಹೊರಟ, ಸದ್ದಿಲ್ಲದ ಕೃಷಿಕ ಎಂದರೂ ಒಪ್ಪೀತು. ವಾಮನ ತ್ರಿವಿಕ್ರಮನಾಗಿ ಬೆಳೆದು, ಎಷ್ಟು ತಿಣುಕಿದರೂ ಸಮಕಾಲೀನರ ವಿಮರ್ಶೆಗೆ ಸಿಕ್ಕದ ಗಟ್ಟಿ ವ್ಯಕ್ತಿತ್ವ. ನೀವು ಅವರನ್ನು ವೃತ್ತಿಪರ ಛಾಯಾಗ್ರಾಹಕ ಎಂದು ಕರೆದರೆ ಅದಕ್ಕೂ ನ್ಯಾಯ ಒದಗೀತು. ಅವರು ತೆಗೆದ ಕಪ್ಪುಬಿಳುಪಿನ ಚಿತ್ರಗಳನ್ನು ದಿನವಿಡೀ ನೋಡುತ್ತಾ ಹೋದರೂ ಅದೊಂದು ಹೊಸ ಅನುಭವವೇ.

ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು

Sunday, August 12th, 2007

-ಪ್ರೊ. ದೇವೀಂದ್ರ ಶರ್ಮಾ

ಲಿಪಿಕಾರ: ನಾಗೇಶ ಹೆಗಡೆ

ದೇಶದ ಹೆಸರಾಂತ ಕೃಷಿ ಚಿಂತಕ ಪ್ರೊ. ದೇವೀಂದ್ರ ಶರ್ಮಾ ಈಚೆಗೆ ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಕೊಡಲಾಗುತ್ತಿದೆ. ಇದು ಶಬ್ದಶಃ ತರ್ಜುಮೆಯಲ್ಲ. ಅವರ ಭಾಷಣದ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಟಿಪ್ಪಣಿಯನ್ನು ಆಧರಿಸಿ ಅಂಕಿ ಅಂಶ ಕುರಿತು ಸಂಶಯ ಎದ್ದಾಗ ಶರ್ಮಾರ ಪ್ರಕಟಿತ ಲೇಖನಗಳನ್ನು ರೆಫರ್ ಮಾಡಿ (ಉದಾ: www.countercurrents.org/glo-crop.htm) ಸಿದ್ಧಪಡಿಸಿದ ಕನ್ನಡ ಲೇಖನ ಇದು. ಪಾಶ್ಚಾತ್ಯ ತಜ್ಞರು ಹೇಳಿದ್ದೇ ವೇದವಾಕ್ಯ ಎಂಬಂತೆ ನಮ್ಮ ತಜ್ಞರು ನಮಗೆ ಅದನ್ನೇ ಬೋಧಿಸುತ್ತ ನಮ್ಮ ರೈತರ ಹಿತವನ್ನು ಹೇಗೆ ಬಲಿಗೊಡುತ್ತಿದ್ದಾರೆ ಎಂಬ ವಿಚಾರ ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಚಿಂತನೆಗೆ ಸೂಕ್ತವಾದೀತು.

ಡಾ. ಶಿವಮೂರ್ತಿ ಸ್ವಾಮೀಜಿ

Tuesday, April 17th, 2007

– ಲೇಖನ: ಎ. ಸತ್ಯನಾರಾಯಣ. ಸಂದರ್ಶನ: ಸತ್ಯನಾರಾಯಣ ಮತ್ತು ಪವನಜ

ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಕರ್ನಾಟಕ ರಾಜ್ಯದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.

ಕಲಾಲೋಕದ ಅಪೂರ್ವ ರತ್ನ – ಕುಮಾರಿ ನಿವೇದಿತ

Saturday, January 27th, 2007

ಲಕ್ಷ್ಮೀ ಶಿವಕುಮಾರ್

ಕುಮಾರಿ ನಿವೇದಿತ ಜನಿಸಿದ್ದು ೧೧-೨-೧೯೮೯-ಬೆಂಗಳೂರು. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗು ದೈಹಿಕವಾಗಿ ಅಸ್ವಸ್ಥಗೊಂಡು ಜೀವನ ನಡೆಸುತ್ತಿರುವ ಮುಗ್ಧೆ. ಈಕೆಗೆ ಶ್ರವಣ, ವಾಚಿಕ ಹಾಗೂ ಮಾನಸಿಕ ತೊಂದರೆಯ ಕಾರಣ “ವಿಶೇಷ ಅಗತ್ಯವುಳ್ಳ ಮಕ್ಕಳ” ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು. ನಿವೇದಿತ ಪ್ರಖ್ಯಾತ ಗಾಯಕಿ ಶ್ರೀಮತಿ ರಮಾಜಗನ್ನಾಥ್(ರಮಾ ಅವರು ಪ್ರಖ್ಯಾತ ನೃತ್ಯಕಲಾವಿದರಾದ ಮಂಜೂ ಭಾರ್ಗವಿ, ರಾಜರೆಡ್ಡಿ-ರಾಧಾ ರೆಡ್ಡಿ, ನಟರಾಜ ರಾಮಕೃಷ್ಣ, ಕಲಾ ಕೃಷ್ಣ ಮತ್ತು ವೈಜಯಂತಿ ಕಾಶಿ ಇವರನೃತ್ಯಕ್ಕೆ ಹಾಡಿದರೆ) ಹಾಗೂ ಇ.ಎಸ್.ಐ ಕೇಂದ್ರ ಕಛೇರಿಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವ ಶ್ರೀ ಜಗನ್ನಾಥ ಅವರ ಹಿರಿಯ ಹಾಗು ಹೆಮ್ಮೆಯ ಪುತ್ರಿ. ಈ ಷೋಡಶಿ ಜೆ.ಎಸ್.ಎಸ್ “ಸಹನಾ” ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾಳೆ.

ಶತಾವಧಾನಿ ಡಾ| ರಾ. ಗಣೇಶ

Friday, November 17th, 2006

– ವಿ. ಕೃಷ್ಣಾನಂದ




ವಿದ್ಯೆಗೆ ಅಧಿದೇವತೆ ವಿನಾಯಕ. ಅದೇ ನಾಮಧೇಯದ, ವಿನಾಯಕನ ಸಂಪೂರ್ಣ ಕೃಪಾಶೀರ್ವಾದಗಳನ್ನು ಪಡೆದಿರುವ ಡಾ| ಆರ್. ಗಣೇಶ್ ಅವಧಾನ ಕಲೆಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಇವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ಔನ್ನತ್ಯಕ್ಕೇರಿದೆ.

ಶ್ರೀ ಕೆ.ಪಿ ರಾವ್ ಅವರ – ಸಂದರ್ಶನ

Friday, November 3rd, 2006

– ಎ. ಸತ್ಯನಾರಾಯಣ ಮತ್ತು ಯು.ಬಿ. ಪವನಜ

ಆಧುನಿಕ ಮುದ್ರಣ ಮತ್ತು ಕಂಪ್ಯೂಟರ್ ಟೈಪ್ಸೆಟ್ಟಿಂಗ್ ಮತ್ತು ಫೋಟೋಕಂಪೋಸಿಂಗ್ ಕ್ಷೇತ್ರದಲ್ಲಿನ ನಿಮ್ಮ ಕೊಡುಗೆ ಮತ್ತು ಸಾಧನೆಗಳ ಮೂಲ ಪ್ರೇರಣೆ ಏನು?

ಭಾರತೀಯ ಭಾಷಾ ಗಣಕಲೋಕದ ಪಿತಾಮಹ – ಶ್ರೀ ಕೆ.ಪಿ ರಾವ್

Friday, November 3rd, 2006

– ಎ. ಸತ್ಯನಾರಾಯಣ

ಅಲ್ಪ ಸಾಧನೆಯನ್ನೇ ತಮ್ಮ ಜೀವಮಾನದ ಅತಿದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಶಸ್ತಿ-ಪುರಸ್ಕಾರಗಳನ್ನು ಬೆಂಬತ್ತಿ ಹೋಗುವವರ ನಡುವೆ ಹಲವು ವ್ಯಕ್ತಿಗಳು ಸದ್ದು-ಗದ್ದಲವಿಲ್ಲದೆ ತಮ್ಮ ಅತ್ಯುತ್ತಮ ಸಾಧನೆಗಳಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದು ತೆರೆಮರೆಯಲ್ಲಿಯೇ ಉಳಿದಿರುತ್ತಾರೆ. ಅಂತಹ ಸಾಧನೆಗಳನ್ನು ಮಾಡಿ ತೆರೆಮರೆಯಲ್ಲಿಯೇ ಉಳಿದಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ. ರಾವ್ ಸಹ ಒಬ್ಬರು.

ಸಿ. ಅಶ್ವಥ್ – ಪರಿಚಯ ಮತ್ತು ಸಂದರ್ಶನ

Saturday, August 26th, 2006

ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿ ಸಿ. ಅಶ್ವಥ್ ಅವರದು ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಹಾಗೆಂದು ಅವರ ಪ್ರತಿಭೆ ಸುಗಮ ಸಂಗೀತಕ್ಕೆ ಸೀಮಿತವಾಗಿ ಉಳಿದಿಲ್ಲ. ನಾಟಕ, ಸಿನಿಮಾಗಳಿಗೂ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲ್ಲೂ ಅವರ ವೈಶಿಷ್ಟ್ಯವನ್ನು ಕಾಣಬಹುದು, ಅಲ್ಲ ಕೇಳಬಹುದು. ಸುಗಮ ಸಂಗೀತಕ್ಕೆ ಅದರದೇ ಒಂದು ಸ್ಥಾನವನ್ನು ದೊರಕಿಸಿಕೊಟ್ಟವರಲ್ಲಿ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಪ್ರಮುಖರು. ಕವಿಗಳು ಬರೆದ ಸಾಲುಗಳು ಪುಸ್ತಕಗಳಲ್ಲಿ ಅಡಗಿರುತ್ತಿದ್ದವು. ಕೆಲವು ಸಹೃದಯ ಓದುಗರ ಮನವನ್ನು ಅವು ತಲುಪಿದ್ದವು. ಜನಸಾಮಾನ್ಯರನ್ನು ಅವು ತಲುಪುವಲ್ಲಿ ಈ ಮಹನೀಯರ ಪಾಲು ದೊಡ್ಡದು.

ಸ್ವರ ಸಂಯೋಜನೆಯಲ್ಲಿ ಸಂಗೀತಕ್ಕಿಂತ ಭಾವಕ್ಕೇ ಪ್ರಾಶಸ್ತ್ಯ. ಅದಕ್ಕೆಂದೇ ಅವರು ಸಂಗೀತ ಸಂಯೋಜನೆ ಎನ್ನದೆ ಸ್ವರಸಂಯೋಜನೆ ಎನ್ನುವುದು. ಕವನದಲ್ಲಿ ಬರುವ ಪ್ರತಿ ಪ್ರಶ್ನೆ, ವಿರಾಮ, ಮೌನ -ಎಲ್ಲವುಗಳು ಅವರ ಸಂಯೋಜನೆಯಲ್ಲಿ ಮಹತ್ವ ಪಡೆಯುತ್ತವೆ. ಉದಾಹರಣೆಗೆ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯ ಸಾಲುಗಳನ್ನು ಗಮನಿಸಿ-

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ, ಬಿಡಿ ಹೂವ ಮುಡಿದಂತೆ