ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ

Sunday, December 15th, 2019
ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ

ಶ್ರೀನಿಧಿ ಹಂದೆಯವರ “ವಿಶ್ವ ದರ್ಶನ, ಬಜೆಟ್‌ನಲ್ಲಿ” ಪುಸ್ತಕ   ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ ವಿಭಾಗವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತಿದೆ. ಅವೆಲ್ಲಾ ಸರಿ. ಅದರೆ ಪ್ರವಾಸ ಮಾಡುವುದು ಹೇಗೆ, ಅದರಲ್ಲೂ ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಅತಿ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವುದು ಹೇಗೆ ಎಂದು ಯಾರಾದರೂ ಪುಸ್ತಕ ಬರೆದುದು ನನಗೆ […]