ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮) ರಿಯಲ್‌ಮಿ ಸಿ1

Saturday, November 24th, 2018
ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮)  ರಿಯಲ್‌ಮಿ ಸಿ1

ರಿಯಲ್‌ಮಿ ಸಿ1 ಕಡಿಮೆ ಬೆಲೆಗೆ ಉತ್ತಮ ಫೋನ್ ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು […]

ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

Tuesday, November 20th, 2018
ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮)  ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1   ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ   ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. […]

ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) – ರಿಯಲ್‌ಮಿ 2 ಪ್ರೊ

Wednesday, November 14th, 2018
ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) - ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್   ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ರಿಯಲ್‌ಮಿ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಹಲವು ಕಂಪೆನಿಗಳು ಇದೇ ರೀತಿ ಎರಡು ಹೆಸರಿನಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಹುವಾವೇ ಮತ್ತು ಹೋನರ್. ಒಪ್ಪೊ ಮತ್ತು ರಿಯಲ್‌ಮಿ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿವೆ. ರಿಯಲ್‌ಮಿ 1 ಫೊನಿನ […]

ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)

Sunday, July 15th, 2012

ಇನ್ನೊಂದಿಷ್ಟು ಕಿರುತಂತ್ರಾಂಶಗಳು   ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಜನಪಿಯವಾಗಿರುವ ಆಂಡ್ರೋಯಿಡ್ ಫೋನ್‌ಗಳಿಗೆ ಇರುವ ಲಕ್ಷಗಟ್ಟಲೆ ತಂತ್ರಾಂಶಗಳಲ್ಲಿ ಇನ್ನೊಂದಿಷ್ಟು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.   ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೋಯಿಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವು ಕಿರುತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಪ್ (app) ಎನ್ನುತ್ತಾರೆ. ಇಂತಹ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು ಮೇ ೧೭ರ ಸಂಚಿಕೆಯಲ್ಲಿ ಗಮನಿಸಿದ್ದೆವು. ಇವುಗಳನ್ನು play.google.com ಜಾಲತಾಣದಿಂದ ಅಥವಾ ಗೂಗ್ಲ್ ಪ್ಲೇ ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಸುಮಾರು ಆರು ಲಕ್ಷ ಚಿಲ್ಲರೆ […]

ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

Sunday, May 13th, 2012
ಗ್ಯಾಜೆಟ್ ಲೋಕ - ೦೧೯ (ಮೇ ೧೦, ೨೦೧೨)

ಎಚ್‌ಸಿಎಲ್ ಮಿ ಟ್ಯಾಬ್ಲೆಟ್   ತುಂಬ ದುಬಾರಿಯೂ ಅಲ್ಲದ, ಅತಿ ಅಗ್ಗದ್ದೂ ಅಲ್ಲದ ಒಂದು ಮಧ್ಯಮ ಬೆಲೆಯ ಟ್ಯಾಬ್ಲೆಟ್ HCL ME X1. ಅದರ ಗುಣಾವಗುಣಗಳನ್ನು ಸ್ವಲ್ಪ ನೋಡೋಣ.   ಅತ್ತ ಲ್ಯಾಪ್‌ಟಾಪೂ ಅಲ್ಲದ, ಇತ್ತ ದೊಡ್ಡ ಫೋನ್ ಎಂದೂ ಅನಿಸಿಕೊಳ್ಳಲಾರದ ಮಧ್ಯಮ ದರ್ಜೆಯ ಗ್ಯಾಜೆಟ್‌ಗಳೆ ಈ ಟ್ಯಾಬ್ಲೆಟ್‌ಗಳು. ಇವುಗಳನ್ನು ಬಳಸಿ ಅಂತರಜಾಲ ವೀಕ್ಷಣೆ, ಇಮೈಲ್, ಸಂಗೀತ ಆಲಿಸುವುದು, ವೀಡಿಯೋ ವೀಕ್ಷಣೆ, ಕಡತಗಳ ವೀಕ್ಷಣೆ ಹಾಗೂ ಚಿಕ್ಕಪುಟ್ಟ ಸಂಪಾದನೆ -ಎಲ್ಲ ಮಾಡಬಹುದು. ಆದರೆ ಇವು ಪೂರ್ಣಪ್ರಮಾಣದ ಗಣಕ […]