ಕನಸು
ಮುಗ್ಧ ನಯನಗಳಲಿ ಕಲ್ಪನೆಯಾ ಸರಮಾಲೆ
ಹೃದಯ ಚಿತ್ತಾರದಲಿ ಬಣ್ಣದಾ ರಂಗೋಲೆ
ನಿದಿರೆಯ ಮಂಪರಲಿ ಹಂಬಲದಾ ಅಲೆ
February 12, 2025
ಕನಸು
ಮುಗ್ಧ ನಯನಗಳಲಿ ಕಲ್ಪನೆಯಾ ಸರಮಾಲೆ
ಹೃದಯ ಚಿತ್ತಾರದಲಿ ಬಣ್ಣದಾ ರಂಗೋಲೆ
ನಿದಿರೆಯ ಮಂಪರಲಿ ಹಂಬಲದಾ ಅಲೆ
After dragging for nearly one year, finally, the new site is up. But the contents are yet to come. As I am busy with so many things, it will take some time for all the sections to be filled up. Thanks should go to H P Nadig who did go thru so many content management servers (CMS) on the web and finally decided on Drupal. It took some time to figure out the pros and cons between different free and opensource CMSes available. Be patient and be with me while I convert and upload the old content into the new Unicode format.
ವಿಶ್ವಮಾಹಿತಿನಗರ, ಬೆಂಗಳೂರು (WIC-B) ನವಂಬರ್ ೧೪ರಿಂದ ೧೯ರ ವರೆಗೂ ವಾರಪೂರ್ತಿ ಜರಗುವ ಸಮಾವೇಶ.
ಅಬು ಧಾಬಿಯ ಕರ್ನಾಟಕ ಸಂಘವು ನವಂಬರ್ ೧೧, ೨೦೦೫ ರಂದು ಬೆಳಿಗ್ಗೆ ೧೦ ಘಂಟೆಗೆ ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಂಡಿದೆ.
ಡಾ| ಡಿ.ಕೆ. ಮಹಾಬಲರಾಜು
ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.
ಹರಿಯ ಬರಹ
ಕನಕದಾಸರು ಉಡುಪಿಯ ಕೃಷ್ಣನನ್ನು `ಬಾಗಿಲನು ತೆರೆದು ಸೇವೆಯನು ಕೊಡು' ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ, ``ಭಕ್ತರ ಮೊರೆ ಕೇಳಿ ಅವರ ನೆರವಿಗೆ ಬರಲು, `ಇದು ಸರಿಯಾದ ವೇಳೆಯೋ, ಅಲ್ಲವೋ' ಎಂದು ಯೋಚಿಸುತ್ತಾ ನೀನು ನಿಲ್ಲುವುದಿಲ್ಲ, ಕೂಡಲೇ ಆ ಆರ್ತನಾದಕ್ಕೆ ಓಗೊಡುವೆ" - ಎನ್ನುವ ಭಾವದಲ್ಲಿ, ```ಸಮಯ-ಅಸಮಯ'ವುಂಟೆ, ಭಕ್ತವತ್ಸಲ, ನಿನಗೆ?", ಎಂದು ಪ್ರಶ್ನಿಸುತ್ತಾರೆ. ಈ `ಸಮಯ' ಎಂಬುದು ನಾವೇ ಕಲ್ಪಿಸಿಕೊಂಡಿರುವ, ಆದರೆ, ಮುಟ್ಟಿ ಅನುಭವಿಸಲಾಗದ, ನಮಗೆ ಅತಿ ಆವಶ್ಯಕವಾದ, ಬಾಳಿನುದ್ದಕ್ಕೂ ಇರುವ ನಮ್ಮೊಡನಾಟದ ಒಂದು ವಿಚಿತ್ರ `ವಸ್ತು'! ಏನಿದು ಈ `ಸಮಯ'?
(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
ಚಿಂತಾಮಣಿ ಕೊಡ್ಲೆಕೆರೆ
ಹೆಂಡತಿಯ ಜೊತೆ ಜಗಳವಾಡಿದ್ದೆ. ಸಿಟ್ಟಿಗೆದ್ದು ಮೆತ್ತಿ ಹತ್ತಿ ಕೂತಿದ್ದಳು. ಮಗುವೂ ಅವಳ ಜೊತೆಸೇರಿತ್ತು. ಹಾಲ್‌ನಲ್ಲಿ ನಾನು ನೆಪಕ್ಕೆ ಪೇಪರ್ ಓದುತ್ತ ಕುಳಿತಿದ್ದೆ. ಹೊರಗಡೆ ಇಣುಕಿದರೆ ಆಕಾಶ ಕಪ್ಪು ಮೋಡಗಳಿಂದ ತುಂಬಿ ಹೊರಗೆಲ್ಲೂ ಹೋಗುವುದು ಸಾಧ್ಯವಿರಲಿಲ್ಲ. ಗುಡುಗು ಅಬ್ಬರಿಸುತ್ತಿತ್ತು. ಆಗಾಗ ಮಿಂಚೂ ಕೋರೈಸಿ ಆಟವಾಡುತ್ತಿತ್ತು. ನಿರಾಸೆಯಿಂದ ಒಳಬಂದು ಕೂರೋಣ ಎನ್ನುವಷ್ಟರಲ್ಲಿ ದೊಡ್ಡ ದೊಡ್ಡ ಮಳೆಹನಿಗಳು ಒಮ್ಮೆಲೇ ಬೀಳಲಾರಂಭಿಸಿದವು. ಮಳೆ ಸುರುವಾಗಿತ್ತು. ವರ್ಷಕಾಲದ ಬಿರುಗಾಳಿಯ ಜತೆಗಿನ ಗಾಢ ಮಳೆ ಚಳಿಯ ನಡುಕವನ್ನೂ ಹುಟ್ಟಿಸಿತು. ಒಳ ಬಂದು ಸೋಫಾದ ಮೇಲೆ ಕಣ್ಣುಮುಚ್ಚಿ ಕೂತೆ.
ಶ್ರೀ ವ್ಯಾಸರಾಯರು
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ಪೊಳೆವ ಕರ ಪಿಡಿದು