Press "Enter" to skip to content

Vishva Kannada

ಕರ್ನಾಟಕ ಸರಕಾರದ ಅಂತರಜಾಲ ತಾಣ

ಸುಮ್ಮನೆ ಕುತೂಹಲಕ್ಕೆ ಕರ್ನಾಟಕ ಸರಕಾರದ ಅಂತರಜಾಲ ತಾಣ ತೆರೆದೆ. ಅಲ್ಲಿ ಇಲ್ಲಿ ಕ್ಲಿಕ್ ಮಾಡುತ್ತ ವಿಧಾನ ಸಭೆ ಮತ್ತು ಪರಿಷತ್ತಿನ ಸದಸ್ಯರ ಪಟ್ಟಿ ತೆರೆದೆ. ಅಲ್ಲೊಂದು ಆಶ್ಚರ್ಯ ಕಾದಿತ್ತು. ವಿಧಾನ ಪರಿಷತ್ತಿನ ಸದಸ್ಯರ ಪಟ್ಟಿಯಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ಸದಸ್ಯ ಡಾ. ಎಂ. ಆರ್. ತಂಗ ಅವರ ಹೆಸರೂ ಇತ್ತು. ಹೆಸರಿನ ಮುಂದೆ ೨೧-೬-೨೦೦೬ ರಲ್ಲಿ ನಿವೃತ್ತರಾಗುತ್ತಾರೆ ಎಂದೂ ಇತ್ತು. ಏನನ್ನುತ್ತೀರಾ? ಈ ಹಿಂದೆಯೂ ಕರ್ನಾಟಕ ಸರಕಾರದ ಅಂತರಜಾಲ ತಾಣಗಳ ಬಗ್ಗೆ ಇದೇ ರೀತಿಯ ಹಲವು ದೂರುಗಳು ಬಂದಿದ್ದವು. ಈಗಲಾದರೂ ಸುಧಾರಿಸಿರಬಹುದು ಎಂದುಕೊಂಡರೆ ...

ಗೂಗ್ಲ್ ಮತ್ತು ಇಬೇ ಒಟ್ಟಾದರೆ ಏನಾಗುತ್ತದೆ?

ವಾಣಿಜ್ಯ ಕ್ಷೇತ್ರದಲ್ಲಿ ಬೇರೆ ಬೇರೆ ಕಂಪೆನಿಗಳು ಒಂದಾಗುವುದು, ಒಂದು ಕಂಪೆನಿ ಇನ್ನೊಂದನ್ನು ನುಂಗುವುದು, ಆಗಾಗ ಜರುಗುತ್ತಲೇ ಇರುತ್ತದೆ. ಉದಾಹರಣೆಗೆ ಅಡೋಬ್ ಮತ್ತು ಮಾಕ್ರೋಮೀಡಿಯಾ ಒಂದಾಗಿರುವುದು. ಇಂತಹ ಹೊಂದಾಣಿಕೆಗೆಳ ಬಗ್ಗೆಯೇ ಹಲವು ಜೋಕುಗಳೂ ಚಾಲ್ತಿಯಲ್ಲಿವೆ. ಉದಾಹರಣೆಗೆ -

ಸೇವಾ ಜನೋ ಸುಖಿನೋ ಭವಂತು

[ವಿಜಯ ಕರ್ನಾಟಕದ "ಒಂದು ಸೊನ್ನೆ" ಅಂಕಣದಲ್ಲಿ ಪ್ರಕಟವಾದ ಲೇಖನ]

[ಒಂದು ಸೊನ್ನೆ - ೨ (೨೦-೦೬-೨೦೦೩)]

ಅನನ್ಯ ದಿನದರ್ಶಿಕೆ ೨೦೦೬ ಲೋಕಾರ್ಪಣೆ

ಅನನ್ಯವು ಹನ್ನೊಂದು ವರ್ಷಗಳಿಂದ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಾಧಾರಿತ ಕ್ಯಾಲೆಂಡರನ್ನು ಹೊರತರುತ್ತಿದೆ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡದ ಖ್ಯಾತ ಕವಿಗಳ ಕವನಗಳಿಗೆ ಎಸ್.ಜಿ. ವಾಸುದೇವ್ರವರ ರೇಖಾ ಚಿತ್ರಗಳು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹೆಸರಾಂತ ಕಲಾವಿದರು, ಸ್ವರಮಾಲಾ, ರಾಗಮಾಲಾ ಚಿತ್ರಗಳು, ಯಕ್ಷಗಾನ ಕಲಾವಿದರ ಚಿತ್ರಗಳು, ನೃತ್ಯ ಕ್ಷೇತ್ರದ ಪ್ರಬುದ್ಧರ ಮಾಹಿತಿಯೊಂದಿಗಿನ ಭಾವ ಚಿತ್ರಗಳು, ಹೀಗೆ ಹತ್ತು ಹಲವು ವಿಷಯಗಳನ್ನು ಆಯ್ದು ಅವುಗಳ ಬಗ್ಗೆ ವಿವರಣೆಯೊಂದಿಗೆ, ದೃಶ್ಯ ರೂಪದಲ್ಲಿಯೂ ಆಸಕ್ತರನ್ನು ತಲುಪಿಸುವ ಪ್ರಯತ್ನ ನಡೆದಿದೆ. ಕಲೆ ಹಾಗೂ ಕಲೆಯ ಸಾಂಸ್ಕೃತಿಕ ರಾಯಭಾರಿಗಳನ್ನು ಪರಿಚಯಿಸುವುದನ್ನೂ ಈ ಮೂಲಕ ಅನನ್ಯ ಮಾಡುತ್ತಿದೆ.
2006ರ ಸಾಲಿಗೆ ಭರತನಾಟ್ಯದ 'ಮುದ್ರೆ’ ಗಳನ್ನು ಒಳಗೊಂಡಿರುವ ಕಪ್ಪು-ಬಿಳುಪಿನ 16 ಪುಟದ ಕ್ಯಾಲೆಂಡರನ್ನು ಹೊರತರುತ್ತಿದ್ದು, ಇದಕ್ಕೆ ಮೂಲ ಸಾಮಗ್ರಿಯಾಗಿ ಹಿರಿಯ ಛಾಯಾಚಿತ್ರ-ಪತ್ರಕರ್ತರಾದ ಕೆ.ಎನ್. ರಾಘವೇಂದ್ರರಾಯರು ಚೆನ್ನೈನ ಕಲಾಕ್ಷೇತ್ರದಲ್ಲಿ ಸೆರೆಹಿಡಿದ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಲೋಕಾರ್ಪಣೆಯು ನವೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಕಲಾಕ್ಷೇತ್ರದ ನಿವೃತ್ತ ನಿರ್ದೇಶಕರಾದ ಶ್ರೀ ರಾಜಾರಾಂ ರವರು ಮುಖ್ಯ ಅತಿಥಿಗಳಾಗಿದ್ದು ಹಿರಿಯ ನೃತ್ಯಗುರು ಭಾನುಮತಿಯವರು ಪ್ರಥಮ ಪ್ರತಿಯನ್ನು ಸ್ವೀಕರಿಸುವರು. ಅನನ್ಯದ ಅಧ್ಯಕ್ಷರಾದ ಡಾ. ಯು. ಆರ್. ಅನಂತ ಮೂರ್ತಿಗಳು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.
ಇದೇ ಸಂದರ್ಭದಲ್ಲಿ ಡಾ. ಟಿ. ಎಸ್. ಸತ್ಯವತಿಯವರ ಮಾರ್ಗದರ್ಶನದಲ್ಲಿ ವೃಂದ ವೇಣುವಾದನ ಹಾಗೂ ಗುರು ಭಾನುಮತಿಯವರ ನಿರ್ದೇಶನದ ‘ಭರತಾಂಜಲಿ’ ಮತ್ತು ಶ್ರೀಮತಿ ಅನುರಾಧಾ ವಿಕ್ರಾಂತ್ ರವರಿಂದ ನೃತ್ಯ ಕಾರ್ಯಕ್ರಮವಿದೆ. ಕ್ಯಾಲೆಂಡರ್ನ ಮಾರಾಟದಿಂದ ಬರುವ ಸಂಪೂರ್ಣ ಹಣವನ್ನು ‘ಅನನ್ಯ ಸಂಗ್ರಹ’ದ ಅಭಿವೃದ್ಧಿಗೆ ಉಪಯೋಗಿಸಲಾಗುವುದು. ಎಲ್ಲಾ ಕಲಾರಸಿಕರಿಗೂ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ.


ಅನನ್ಯ ದಿನದರ್ಶಿಕೆ - ೨೦೦೪

ಕನ್ನಡ = ಬಡವರ ಭಾಷೆ?

-ಡಾ| ಯು.ಬಿ. ಪವನಜ ಕೆಲವು ಉದಾಹರಣೆಗಳನ್ನು ಗಮನಿಸಿ: ೧. ಮುಂಬಯಿಯಿಂದ ಬೆಂಗಳೂರಿಗೆ ಹೋಗುತ್ತಿರುವ ವಿಮಾನ. ಚಿಕ್ಕಪ್ರಾಯದ ದಂಪತಿಗಳು ಸುಮಾರು ೩ ವರ್ಷ ಪ್ರಾಯದ ಮಗುವಿನ ಜೊತೆ ಕೂತಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಗಂಡ ಓದುತ್ತಿದ್ದುದು…

Windows Starter Edition for India

It was a long pending demand from India. We need a low cost OS for India. Indians can not afford the heavily priced in US$ equivalent - converted to Indian Rs - software from Microsoft and other biggies like Adobe, Macromedia, Quark, etc. Finally, Microsoft has relaised that if it has to reach the 90% of the Indian population who do not speak English, they need to bring down the low cost versions of Windows. Microsoft announced the availability of started edition of Windows for India. Bill Gates announced 7-point formula for Indian when Dayanidhi Maran, the IT minister of India, visited Redmond, Microsoft. This is a good step. These will help the propagation of IT in India and will help in reducing the digital divide.

ಪುಸ್ತಕ ಮೇಳ

ಬೆಂಗಳೂರು ಪುಸ್ತಕೋತ್ಸವ ಮತ್ತೊಮ್ಮೆ ಬಂದಿದೆ. ಕಳೆದ ವರ್ಷದಂತೆ ಈ ಸಲವೂ ಬಹಳ ಆಸಕ್ತಿಯಿಂದ ಹೋದೆ. ದುಃಖದ ಸಂಗತಿಯೆಂದರೆ ಹೋದ ವರ್ಷದಂತೆ ಈ ವರ್ಷವೂ ನಿರಾಸೆಯಿಂದ ವಾಪಾಸು ಬಂದೆ ಎಂದೇ ಹೇಳಬಹುದು.