ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.
Vishva Kannada
- ಪ್ರೊ| ಎಂ. ರಾಜಗೋಪಾಲಾಚಾರ್ಯ
ಕನ್ನಡದಲ್ಲಿ ಬಹಳವಾಗಿ ರೂಢಿಯಲ್ಲಿರುವ ಕೆಲವು ಸಂಸ್ಕೃತ ಪದಗಳ ಕಾಗುಣಿತದ ವ್ಯತ್ಯಾಸದಿಂದ ಅರ್ಥಭೇದವುಂಟಾಗುವುದು. ಒಂದೇ ಪದಕ್ಕೆ ಹಲವಾರು ರೂಪಗಳಿರುವುದೂ ಉಂಟು. ಆಗ ಅವುಗಳ ಕಾಗುಣಿತದಲ್ಲಿ ವ್ಯತ್ಯಾಸವಿದ್ದರೂ ಅರ್ಥಭೇದವಿಲ್ಲ. ಮುಂದಿನ ಉಲ್ಲೇಖದಲ್ಲಿ ಪ್ರಚಲಿತವಾಗಿರುವ ಅಂತಹ ಕೆಲವು ಪದಗಳನ್ನು ಕೊಟ್ಟಿದೆ. ಇದು ಸ್ಥೂಲದರ್ಶನವೇ ಹೊರತು ಎಲ್ಲ ಪದಗಳೂ ಇಲ್ಲಿ ಸೇರಿಲ್ಲ.
- ಡಾ. ಯು. ಬಿ. ಪವನಜ
ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.
"ಇಗೋ ಕನ್ನಡ" ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.
ಮರ್ಕಟ
ದೇವೇಗೌಡರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
ಒಂದಕ್ಕೊಂದು ವಿರೋಧಿ ಗುಣದ ಪಕ್ಷಗಳನ್ನು ಕಸಿ ಕಟ್ಟಿ ಸರಕಾರ ನಡೆಸಿದ್ದಕ್ಕೆ?
ಮರ್ಕಟ
ಬೆಂಗಳೂರು ನಗರ ಸಾರಿಗೆ ಬಸ್ಸುಗಳು ಸಮಯ ಪರಿಪಾಲನೆ ಮಾಡಲು ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಂಪ್ಯೂಟರೀಕೃತ ವಿಧಾನವನ್ನು ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಮರ್ಕಟ
ನೆನಪಿನ ಶಕ್ತಿಯನ್ನು ಹೆಚ್ಚಿಸುವ ಟಾನಿಕ್ ಮಾರುಕಟ್ಟೆಗೆ ಬಂದಿದೆ.
ಆದರೆ ಅಂಗಡಿಯಲ್ಲಿ ಹೋಗಿ ಕೇಳಲು ಅದರ ಹೆಸರೇ ಮರೆತು ಹೋಗಿದೆಯಲ್ಲ?!
ಕನ್ನಡ ನಾಟ್ calm !
(ಕನ್ನಡ ಚೆನ್ನುಡಿಯ ರಕ್ಷಣೆಗೆ ಎಷ್ಟೆಲ್ಲ ದೇಶಗಳಿಂದ ದನಿ ಮೊಳಗಿ ಬಂತು!)
- ಸುರಭಿ ಬೆಳ್ಳಿಪ್ಪಾಡಿ
ಚಂದಮಾಮ ಚಂದಮಾಮ
ಹುಣ್ಣಿಮೆ ದಿನದ ಚಂದಮಾಮ
ನೋಡಲು ಬಲು ಸುಂದರ
