- ಮರ್ಕಟ
`ನಾನು ಮುಟ್ಟಿದರೆ ನೀವು ಭಸ್ಮವಾಗಿ ಬಿಡುತ್ತೀರಿ' - ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರಿಗೆ.
March 2, 2025
`ನಾನು ಮುಟ್ಟಿದರೆ ನೀವು ಭಸ್ಮವಾಗಿ ಬಿಡುತ್ತೀರಿ' - ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರಿಗೆ.
ಮೂರು ಮೊನೆಗಳುಳ್ಳ ಆಯುಧ -ತ್ರಿಶೂಲವನ್ನು ಬಲ್ಲೆವು. ಬೆಂಗಳೂರಿನದಕ್ಕೆ ಐದು ಮೊನೆಗಳು. ಆದರೆ ಇದರಿಂದ ಮನುಷ್ಯ ಸಾಯಲಿಕ್ಕಿಲ್ಲ. ಬದಲಾಗಿ ವಿಲಿವಿಲಿ ಒದ್ದಾಡುತ್ತಾನೆ. ಈ ಪಂಚಶೂಲದ ಪ್ರಹಾರವನ್ನು ನನ್ನ ಹಾಗೆ ಬೆಂಗಳೂರು ವಾಸಿಗಳೆಲ್ಲ ನಿತ್ಯ ಅನುಭವಿಸುತ್ತಿದ್ದಾರೆ. ಏನೋ, ರಾಜಧಾನಿಯಲ್ಲಿ ಜನ ಸುಖವಾಗಿದ್ದಾರೆ? ಎಂದು ಹೊರಗಿನವರು ತಿಳಿದಿರಬಹುದು. ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು, ಈ ಲೇಖ.
ಈ ವಾಕ್ಯವನ್ನು ಗಮನಿಸಿ - "ಶ್ರೀ .... ಅವರು .... ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಮೆರೆದು ತಮ್ಮ ವೈಶಿಷ್ಟ್ಯತೆಯನ್ನು ತೋರಿ ಈ ಕ್ಷೇತ್ರದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ". ಏನಿದೆ ಈ ವಾಕ್ಯದಲ್ಲಿ? ಅದೇನಪ್ಪಾ ಎಂದರೆ ಈ ವಾಕ್ಯವನ್ನು ಬಳಸಿದ ಮಹನೀಯರು ಗಳಿಸಿದ ಹೆಚ್ಚಿನ "ತೆ".
ಕೆಂಪು ಹಾಗೂ ಬಿಳಿ ಬಣ್ಣಗಳೇ ಹೆಚ್ಚು ಬಳಸಲ್ಪಟ್ಟಿರುವ ನಮ್ಮ ದೇಶದ ಬಂಡೆ-ಗುಹಾಶ್ರಯ ಚಿತ್ರಗಳಂತೆ, ಕರ್ನಾಟಕದ ಚಿತ್ರಗಳೂ ಮೂಡಿಬಂದಿವೆ. ಸಾಂಕೇತಿಕ ರೂಪಗಳನ್ನು ಗುಲ್ಬರ್ಗದ ಯಾದಗೀರ್ ಬಳಿಯ ಬಿಳಿಚಕ್ರದ ಎತ್ತರದ ಬೆಟ್ಟದ ತುದಿಯ ಬಂಡೆಯಾಶ್ರಯ, ಆನೆಗೊಂದಿಯ ಚಿತ್ರ ಸಮೂಹಗಳಲ್ಲಿ ಕಾಣಬಹುದು. ಈ ಚಿತ್ರಭಾಷೆಯ ಬಗೆಗೆ ಇಂದಿಗೂ ಆ ಹಳ್ಳಿಗಳ ಜನರಿಗೆ ಕುತೂಹಲವಿದೆ. ಈಗಾಗಲೇ ಹೇಳಿರುವ ಬಹುತೇಕ ಶಿಲಾಶ್ರಯಗಳಲ್ಲಿ ಆದಿಯ ಜನರು (ಕಲಾವಿದರು) ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರನ್ನು ಬಳಸಿದ್ದಾರೆ. ಮಣ್ಣಿನ ಮೂಲದ ಬಣ್ಣಗಳನ್ನು ದುಡಿಸಿಕೊಂಡಿದ್ದಾರೆ. ನೂತನ ಶಿಲಾಯುಗಕ್ಕಿಂತಲೂ ಸ್ವಲ್ಪ ಹಿಂದಿನ, ಬಾದಾಮಿಯ ಬಳಿಯ ಕುಟಕನ ಕೇರಿ ಹತ್ತಿರದ ಅರೆಗುಡ್ಡ ಮತ್ತು ಹಿರೇಗುಡ್ಡಗಳ ಶಿಲಾಶ್ರಯಗಳಲ್ಲಿನ ಕೆಮ್ಮಣ್ಣು ಬಣ್ಣದ ಚಿತ್ರಗಳಲ್ಲಿ ಮಾನವ ರೂಪಗಳೇ ಹೆಚ್ಚು. ಸಾಮಾನ್ಯ ಕಣ್ಣಿಗೆ ತಟಕ್ಕನೆ ಕಾಣದ, ತರಬೇತಾದ ಕಣ್ಣಿಗೆ ಕಾಣುವ ಈ ಚಿತ್ರಗಳು ಉದ್ದನೆಯ ಮುಂಡ, ಉರುಟಾದ ಕೈಕಾಲುಗಳನ್ನು ಹೊಂದಿವೆ.
ವ್ಯಕ್ತಿ ವಿಶಿಷ್ಟ ಸಾಧನೆಯ ಪರಮಾರಾಧಕರಂತೆ ಸೃಷ್ಟಿಸುತ್ತಿರುವ, ೨೧ನೇ ಶತಮಾನದ ಪ್ರಾರಂಭದ ಇಂದಿನ ದಿನಗಳ ಕನ್ನಡ ಸಂಸ್ಕೃತಿಯ ದೃಶ್ಯಕಲೆಯ ಕಲಾವಿದ/ ಕಲಾವಿದೆಯರ ಅಪೂರ್ಣ ವರ್ತಮಾನ, ಇತಿಹಾಸವಾಗಲಿರುವ ಭವಿಷ್ಯದಲ್ಲಿ ವಿಶಿಷ್ಟ ಆಯಾಮಗಳನ್ನು ಪಡೆದುಕೊಳ್ಳಬಹುದು. ಆದರೆ ಈ ಹಿಂದಿನ ನಮ್ಮ ದೃಶ್ಯಕಲೆಯ ಇತಿಹಾಸ ನಮಗೆ ತೆರೆದುಕೊಟ್ಟಿರುವ ಕೌತುಕದ ಕಿಟಕಿಗಳೇನೂ ಸಾಮಾನ್ಯವಲ್ಲ! ಆ ದೃಶ್ಯಕಲೆಯ ರೂಪ, ಅಂಶಗಳ ಸೃಷ್ಟಿ ಪ್ರಕ್ರಿಯೆಯ ಮೊದಲ ಹೆಜ್ಜೆಗಳು ನಿಗೂಢವೂ ಹೌದು. ಆ ಮೊದಲ ಹೆಜ್ಜೆಗಳ, ಆದಿಮಾನವನ ಕಲೆಯನ್ನು ಇತಿಹಾಸ ಪೂರ್ವಕಲೆ, ಪ್ರಾಗೈತಿಹಾಸಿಕ ಕಲೆ ಎಂದೂ ಕರೆಯಲಾಗಿದೆ.
ಸಾಪ್ತಾಹಿಕ ಪುರವಣಿಗಳು ಅಂದಕೂಡ್ಲೇ ನಮಗೆ ಸಾಮಾನ್ಯವಾಗಿ ನೆನಪಾಗೋದು ಒಂದು ಒಳ್ಳೆ ಮುಖಪುಟ ಲೇಖನ, ಒಂದು ದೊಡ್ಡ ಕಥೆ ಜೊತೆಗೆ ಒಂದು ಕವನ. ಇದೊಂಥರ ಸಿದ್ಧ ಮಾದರಿ ಅನ್ನೋ ಭಾವನೆ ಬರೋದಕ್ಕೇ ಸಾಧ್ಯವಿಲ್ಲದ ಹಾಗೆ ಈ ಸಾಪ್ತಾಹಿಕ ಪುರವಣಿಗಳನ್ನು ನಾವು ನೋಡ್ತಾ ಇದ್ದೇವೆ.
ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.
ನಿನ್ನೆ ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು.
ನಾನು ಮೊದಲೇ ಎಚ್ಚರಿಸುತ್ತೇನೆ. ನೀವು ಉಪ್ಪಿಟ್ಟು ಪ್ರಿಯರಾದರೆ ಈ ಬ್ಲಾಗನ್ನು ಓದಬೇಡಿ. ಓದಿದ ನಂತರ ಮೆಣಸು ಜಾಸ್ತಿ ಹಾಕಿದ ಉಪ್ಪಿಟ್ಟನ್ನು ತಿಂದವರಂತೆ ಮುಖ ಸಿಂಡರಿಸಿಕೊಂಡರೆ ನಾನು ಹೊಣೆಯಲ್ಲ.