Press "Enter" to skip to content

Vishva Kannada

Kannada-English parallel text

I am doing some experiments on the computational aspects of Kannada-i.e Machine translation of Kannada. In this connection Iam  in need of Kannada-English parallel text, that is bodies of text that have the same content in both english and kannada. One such corpus is the newspaper articles published by deccan herald(with kannada news articles in prajavani @ prajavani.net) . However at this point I am only able to read the articles but I am unable to save them in a machine readable Unicode format ( say with utf-8 encoding). Any suggestions to make this happen will be welcome.

ೠ ಟೈಪಿಸುವುದು ಹೇಗೆ?

ಅಸತ್ಯಾನ್ವೇಶಿಯವರು ತಮ್ಮ ಬ್ಲಾಗಿನ ಕಮೆಂಟಿನಲ್ಲಿ ಒಂದು ಪ್ರಶ್ನೆ ಎಸೆದರು. "ೠ" ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ "ೠ" ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. "ೠ" ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0).

ಶ್ರೀ ಕೆ.ಪಿ ರಾವ್ ಅವರ – ಸಂದರ್ಶನ

- ಎ. ಸತ್ಯನಾರಾಯಣ ಮತ್ತು ಯು.ಬಿ. ಪವನಜ

ಆಧುನಿಕ ಮುದ್ರಣ ಮತ್ತು ಕಂಪ್ಯೂಟರ್ ಟೈಪ್ಸೆಟ್ಟಿಂಗ್ ಮತ್ತು ಫೋಟೋಕಂಪೋಸಿಂಗ್ ಕ್ಷೇತ್ರದಲ್ಲಿನ ನಿಮ್ಮ ಕೊಡುಗೆ ಮತ್ತು ಸಾಧನೆಗಳ ಮೂಲ ಪ್ರೇರಣೆ ಏನು?

ಭಾರತೀಯ ಭಾಷಾ ಗಣಕಲೋಕದ ಪಿತಾಮಹ – ಶ್ರೀ ಕೆ.ಪಿ ರಾವ್

- ಎ. ಸತ್ಯನಾರಾಯಣ

ಅಲ್ಪ ಸಾಧನೆಯನ್ನೇ ತಮ್ಮ ಜೀವಮಾನದ ಅತಿದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಶಸ್ತಿ-ಪುರಸ್ಕಾರಗಳನ್ನು ಬೆಂಬತ್ತಿ ಹೋಗುವವರ ನಡುವೆ ಹಲವು ವ್ಯಕ್ತಿಗಳು ಸದ್ದು-ಗದ್ದಲವಿಲ್ಲದೆ ತಮ್ಮ ಅತ್ಯುತ್ತಮ ಸಾಧನೆಗಳಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದು ತೆರೆಮರೆಯಲ್ಲಿಯೇ ಉಳಿದಿರುತ್ತಾರೆ. ಅಂತಹ ಸಾಧನೆಗಳನ್ನು ಮಾಡಿ ತೆರೆಮರೆಯಲ್ಲಿಯೇ ಉಳಿದಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ. ರಾವ್ ಸಹ ಒಬ್ಬರು.

ಕನ್ನಡದಲ್ಲಿ ಚಾಟ್ ಮಾಡಲು GTalk ಬಳಸಿರಿ

ಅಂತರಜಾಲದ ಮೂಲಕ ಒಬ್ಬರಿಗೊಬ್ಬರು "ಮಾತನಾಡಲು" ಅಥವಾ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ chat ಮಾಡಲು ಹಲವು ತಂತ್ರಾಂಶ ಸೌಲಭ್ಯಗಳಿವೆ. ಇವುಗಳಲ್ಲಿ ತುಂಬ ಜನಪ್ರಿಯವಾದವುಗಳು - MSN (Hotmail), Yahoo Meesenger ಮತ್ತು GTalk (Google). ಇವೆಲ್ಲವುಗಳಲ್ಲೂ ಕನ್ನಡ ಯುನಿಕೋಡ್ ಬಳಸಿ ಚಾಟ್ ಮಾಡಲು ಆಗುತ್ತಿರಲಿಲ್ಲ. ಇವತ್ತು ಸತ್ಯನಾರಾಯಣ ಜೊತೆ GTalk ಬಳಸಿ ಮಾತನಾಡುತ್ತಿದ್ದಾಗ, ಅವರು ಒಂದು ಪ್ರಶ್ನೆ ಕೇಳಿದರು -"ನಾನು ಇಲ್ಲಿ ಕನ್ನಡದಲ್ಲಿ (ಯುನಿಕೋಡ್‌ನಲ್ಲಿ) ಚಾಟ್ ಮಾಡಬಹುದೇ?" ಎಂದು. ನಾನು ನನ್ನ ಹಳೆಯ ಅನುಭವದಿಂದ ಸಾದ್ಯವಿಲ್ಲ ಎಂದೆ. ಆದರೂ ನೋಡೋಣ ಎಂದು ನಾವಿಬ್ಬರು ಪ್ರಯತ್ನಿಸಿದೆವು. ಆಶ್ಚರ್ಯ! ಈಗ ಕನ್ನದಲ್ಲಿ ಚಾಟ್ ಮಾಬಹುದು. ನಾನು ಕನ್ನಡ ಮಾತ್ರವಲ್ಲ, ಹಲವು ಭಾರತೀಯ ಭಾಷೆಗಳಲ್ಲಿ ನನ್ನ ಹೆಸರನ್ನು ಬೆರಳಚ್ಚು ಮಾಡಿದೆ. ಎಲ್ಲವೂ ಸರಿಯಾಗಿಯೇ ಮೂಡಿಬಂದವು. ನಮ್ಮ ಚಾಟ್‌ನ ದಾಖಲಾತಿ ಕಿಟಿಕಿಯ ಚಿತ್ರ ಇಲ್ಲಿದೆ-

ಅಮೆರಿಕಾದ್ದು ಗಗನನೀತಿಯಲ್ಲ, ವಿಶ್ವಭೀತಿ !

- ಬೇಳೂರು ಸುದರ್ಶನ

ಆಕಾಶವೂ ನನ್ನದೇ ಎಂದು ಅಮೆರಿಕಾ ಈಗಷ್ಟೇ ಘೋಷಿಸಿಕೊಂಡಿದೆ. ಉತ್ತರ ಕೊರಿಯಾದ ಪರಮಾಣು ಪರೀಕ್ಷೆ, ಚೀನಾದ ತೋಳೇರಿಸುವ ಪರಿ, ಮುಸ್ಲಿಮ್ ದೇಶಗಳಲ್ಲಿ ಅಮೆರಿಕಾದ ವಿರುದ್ಧ ಎದ್ದಿರುವ ದನಿ, ಭಾರತದಂಥ ಹಲವು ಶಾಂತಿಪ್ರಿಯ ದೇಶಗಳು ವಿeನ - ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ ವೇಗವನ್ನು ನೋಡಿ ತತ್ತರಿಸಿದ ಅಮೆರಿಕಾ ಈಗ ತನ್ನ ಆಕಾಶನೀತಿಯನ್ನು ಪರಾಮರ್ಶಿಸಿಕೊಂಡು, ಆಕಾಶ ನನ್ನದೇ ಎಂದು ಘೋಷಿಸಿಕೊಂಡಿದೆ.

ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!

ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್‌) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.

ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ

- ನಾಗೇಶ ಹೆಗಡೆ

ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ ಒಂದೊಮ್ಮೆ ಪೆನ್ ಹಿಡಿದು ಬರೆದರೂ ಇಲ್ಲಿ ಕೊರಿಯರ್ ಸೇವೆ ಇಲ್ಲ. ಕಂಪ್ಯೂಟರ್ ಕೀಬೋರ್ಡ್ನಲ್ಲಿ ಬರೆಯೋಣವೆಂದರೆ ವಿದ್ಯುತ್ ಇಲ್ಲ. ಆದ್ದರಿಂದ ಲ್ಯಾಪ್ಟಾಪ್ನಲ್ಲಿ ಬ್ಯಾಟರಿ ಸಹಾಯದಿಂದ ಬರೆಯಬೇಕಿದೆ.