Press "Enter" to skip to content

Vishva Kannada

ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ ಬರೆದರು. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.

Winodws XP ನಲ್ಲಿ ಕನ್ನಡ – ಪ್ರಚಾರ

ಸ್ನೈಹಿತರೆ,Winodws XP ನಲ್ಲಿ ಕನ್ನಡ ಇದೆ ಅನ್ನೊ ವಿಚಾರ ಎಷ್ಡೋ ಜನರಿಗೆ ಗೊತ್ತಿಲ್ಲ!!! ಇದನ್ನು ಪ್ರಚಾರ ಮಾಡಬೆಕಾದ ಅವಶ್ಯಕತೆ ತುಂಬಾ ಇದೆ. ಇದರ ಬಗ್ಗೆ ಎಲ್ಲಾ ಜನರಿಗೆ ತಿಳಿದರೆ ಮಾತ್ರ ಎಲ್ಲರೂ ಇದನ್ನು ಬಳಸುವಂತಾಗಬಹುದು. We have to inform Govt or other private sector people and also internet and mail community people to give promote this.

ಕೃಷಿ-ಗ್ರಾಮೀಣ ಪತ್ರಿಕೋದ್ಯಮ: ಏನು – ಹೇಗೆ?

ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತೆನಿಸುವ ‘ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಮಾಹಿತಿ ಕಿಟ್’ ಅನ್ನು ಧಾರವಾಡದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಹೊರತಂದಿದೆ. ಪುತ್ತೂರಿನ ಅಡಿಕೆ ಪತ್ರಿಕೆ ಕಚೇರಿಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಖಂಡಿಗೆ ಶ್ರೀಕೃಷ್ಣ ಭಟ್ ಇದನ್ನು ಬಿಡುಗಡೆಮಾಡಿದರು.

How to develop an IME

Dear Sir,
I've been thinking about creating a program that will enable to me type in assamese in pagemaker and coreldraw using visual basic .NET (i'm just starting to learn). I'm always be grateful to u if you'll kindly tell me how to go about it. Also plz enlighten us as to how to create my own custom IME.

ಇಲ್ಲದ ಭಾಷೆಗೆ ಎಲ್ಲವೂ ಇವೆ

ಕ್ಲಿಂಗನ್ ಎಂಬ ಭಾಷೆ ಕೇಳಿದ್ದೀರಾ? ಅದು ಯಾವ ದೇಶದ್ದಿರಬಹುದು? ಈ ಭೂಮಿಯ ಮೇಲಿರುವ ಯಾವ ದೇಶದ್ದೂ ಅಲ್ಲ, ಬ್ರಹ್ಮಾಂಡದಲ್ಲಿ ಬಹುದೂರದಲ್ಲಿರುವ ಯಾವುದೋ ಕಾಲ್ಪನಿಕ ನಕ್ಷತ್ರದ ಗ್ರಹದ ಜೀವಿಗಳದ್ದು ಎಂದರೆ ನಂಬುತ್ತೀರಾ? ಯಾವುದೋ ಕಾಲ್ಪನಿಕ ಜೀವಿಗಳ ಭಾಷೆ ಹೀಗೆಯೇ ಇರುತ್ತದೆ ಎಂದು ಯಾರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ಅನ್ನುತ್ತೀರಾ? ಎಲ್ಲವೂ ಸಾಧ್ಯ ಸ್ವಾಮಿ. ಸ್ಟಾರ್ ಟ್ರೆಕ್ ಎಂಬ ಟಿ.ವಿ. ಧಾರಾವಾಹಿ ನೋಡಿದ ನೆನಪಿದೆಯೇ? ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆ ಕ್ಲಿಂಗನ್. ಇದು ಶುದ್ಧ ಕಾಲ್ಪನಿಕ ಭಾಷೆ. ಅದೃಷ್ಟವಶಾತ್ ಟಿ.ವಿ. ಧಾರಾವಾಹಿಯಲ್ಲಿ ಪಾತ್ರಗಳು ಮಾತನಾಡುತ್ತಿದ್ದದ್ದು ಇಂಗ್ಲಿಷ್ ಭಾಷೆ. ಆದರೆ ಈ ಕ್ಲಿಂಗನ್ ಎಂಬ ಕಾಲ್ಪನಿಕ ಭಾಷೆಗೂ ಒಂದು ವರ್ಣಮಾಲೆ, ವ್ಯಾಕರಣ, ಲಿಪಿ ಎಲ್ಲ ಇವೆ ಎಂದರೆ ನಂಬುತ್ತೀರಾ? ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ಓದಬಹುದು.

ಕಲಾಲೋಕದ ಅಪೂರ್ವ ರತ್ನ – ಕುಮಾರಿ ನಿವೇದಿತ

- ಲಕ್ಷ್ಮೀ ಶಿವಕುಮಾರ್

ಕುಮಾರಿ ನಿವೇದಿತ ಜನಿಸಿದ್ದು ೧೧-೨-೧೯೮೯-ಬೆಂಗಳೂರು. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗು ದೈಹಿಕವಾಗಿ ಅಸ್ವಸ್ಥಗೊಂಡು ಜೀವನ ನಡೆಸುತ್ತಿರುವ ಮುಗ್ಧೆ. ಈಕೆಗೆ ಶ್ರವಣ, ವಾಚಿಕ ಹಾಗೂ ಮಾನಸಿಕ ತೊಂದರೆಯ ಕಾರಣ “ವಿಶೇಷ ಅಗತ್ಯವುಳ್ಳ ಮಕ್ಕಳ” ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು. ನಿವೇದಿತ ಪ್ರಖ್ಯಾತ ಗಾಯಕಿ ಶ್ರೀಮತಿ ರಮಾಜಗನ್ನಾಥ್(ರಮಾ ಅವರು ಪ್ರಖ್ಯಾತ ನೃತ್ಯಕಲಾವಿದರಾದ ಮಂಜೂ ಭಾರ್ಗವಿ, ರಾಜರೆಡ್ಡಿ-ರಾಧಾ ರೆಡ್ಡಿ, ನಟರಾಜ ರಾಮಕೃಷ್ಣ, ಕಲಾ ಕೃಷ್ಣ ಮತ್ತು ವೈಜಯಂತಿ ಕಾಶಿ ಇವರನೃತ್ಯಕ್ಕೆ ಹಾಡಿದರೆ) ಹಾಗೂ ಇ.ಎಸ್.ಐ ಕೇಂದ್ರ ಕಛೇರಿಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವ ಶ್ರೀ ಜಗನ್ನಾಥ ಅವರ ಹಿರಿಯ ಹಾಗು ಹೆಮ್ಮೆಯ ಪುತ್ರಿ. ಈ ಷೋಡಶಿ ಜೆ.ಎಸ್.ಎಸ್ “ಸಹನಾ” ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾಳೆ.

ನಂ.1 ಆಗುವುದು ಹೇಗೆ?

ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.

ಭಾಷಾಇಂಡಿಯ ಕನ್ನಡದಲ್ಲಿ

ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ - http://www.bhashaindia.com/Patrons/PatronsHome.htm?lang=Kn. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ - http://bhashaindia.com/ForumV2/displaygroup.aspx?GroupID=5

ತರಲೆ ಅನುವಾದ – ೧

English : Dr. Vasanth will be delivering the speech now.
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.