ಬೆಂಗಳೂರು, ಆಗಸ್ಟ್ ೨, ೨೦೦೭: ಸರಕಾರೇತರ ಸಂಸ್ಥೆ ಪರಿಸರದ ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ-೨೦೦೭ ನೀಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪ್ರಶಸ್ತಿಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಶ್ವರಪ್ರಸಾದರಿಗೆ ಈ ವರ್ಷ ಪರಿಸರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
Vishva Kannada
ಚೀನಾದಲ್ಲಿ ಒಬ್ಬ ಲಾಯರ್ ಮೆಕ್ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು ವರದಿಯಾಗಿದೆ. ಮೆಕ್ಡೊನಾಲ್ಡ್ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.
- ಗುರುಮೂರ್ತಿ ಬಬ್ಬಿಗದ್ದೆ, ಹಾಂಗ್ ಕಾಂಗ್
ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು
ಬೆಂಗಳೂರು, ಜುಲೈ ೨೦- ‘ಮುಂಗಾರುಮಳೆ’ ೨೦೦೬-೦೭ನೇ ಸಾಲಿನ ರಾಜ್ಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ನಟಿ ಶ್ರೀಮತಿ ಎಂ.ಎನ್. ಲಕ್ಷ್ಮೀದೇವಿ ಅವರು ೨೦೦೬-೦೭ನೇ ಸಾಲಿನ ಡಾ. ರಾಜ್ಕುಮಾರ್ ಪ್ರಶಸ್ತಿಗೆ ಭಾಜನರಾಗಿ’ದ್ದಾರೆ.
ಬೀದರ್ನಲ್ಲಿ ಆಗಸ್ಟ್ ೩ ರಿಂದ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಪ್ರಾರಂಭ
ಬೆಂಗಳೂರು, ಜುಲೈ ೧೩:- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೆಳನವನ್ನು ಬಿ.ವಿ.ಬಿ. ಮಹಾವಿದ್ಯಾಲಯ ಬೀದರ್ನಲ್ಲಿ ಬೀದರ್ ವಿಜ್ಞಾನ ಕೇಂದ್ರದ ಸ್ಥಳೀಯ ಸಂಘಟನೆಯಲ್ಲಿ ಆಗಸ್ಟ್ ೩ ರಿಂದ ೫ ರವರೆಗೆ ಏರ್ಪಡಿಸಲಾಗಿದೆ.
- ನಾಗೇಶ ಹೆಗಡೆ
ಬೆಂಗಳೂರಿನಲ್ಲಿ ಒಂದು ‘ನೆನಪಿನ ವನ’ ಸೃಷ್ಟಿಯಾಗುತ್ತಿದೆ. ವಿಸ್ತೀರ್ಣದಲ್ಲಿ ಲಾಲ್ಬಾಗನ್ನೂ ಮೀರಿಸುವ ಇದು ಜನರೇ ನಿರ್ಮಿಸುವ ಉದ್ಯಾನವಾಗಲಿದೆ. ಬೆಂಗಳೂರಿನ ಪರಿಸರ ಹದಗೆಡಲು ಸಾಫ್ಟ್ವೇರ್ ಕಂಪನಿಗಳೇ ಕಾರಣ ಎಂಬ ಆಪಾದನೆಯನ್ನು ತುಸು ಮಟ್ಟಿಗಾದರೂ ತೊಡದು ಹಾಕುವ ನಿಟ್ಟಿನಲ್ಲಿ ಖ್ಯಾತ ಸಾಫ್ಟ್ವೇರ್ ಕಂಪನಿಯೊಂದರ ಉದ್ಯೋಗಿಗಳು ಸ್ವಯಂಸ್ಫೂರ್ತಿಯಿಂದ ಇಲ್ಲಿ ಗಿಡ ನೆಡಲು ಬಂದಿದ್ದಾರೆ. ಈ ಯತ್ನದ ಹಿಂದಿರುವ ಈಶ್ವರ್ ಪ್ರಸಾದ್ ಎಂಬ ಒಬ್ಬ ವ್ಯಕ್ತಿ, ಒಂದು ಶಕ್ತಿಯ ಪರಿಚಯ ಇಲ್ಲಿದೆ.
ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ ಓದಬಹುದು. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-
ಬೆಂಗಳೂರು ಜೂನ್ ೨೫ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯು ಸರ್ಕಾರದ ಅಧಿನಿಯಮಗಳು, ಅಧಿಸೂಚನೆಗಳು, ನಿಯಮಗಳು, ಉಪನಿಯಮಗಳು ಹಾಗೂ ಆದೇಶಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಲು, ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಮಿತಿಯಿಂದ ಪ್ರತ್ಯೇಕವಾದ ವೆಬ್ಸೈಟ್ ತೆರೆದಿದೆ.
