ಮೊಬೈಲ್ ಫೋನುಗಳಲ್ಲಿ ಎಸ್ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.
Vishva Kannada
- ಡಾ. ಯು. ಬಿ. ಪವನಜ
ಮೋನಪ್ಪ ಬಂಗೇರ ಕರಾವಳಿಯಲ್ಲಿರುವಾತ. ಮೀನು ಹಿಡಿದು ಮಾರಿ ಜೀವನ ನಡೆಸುವವ. ಹಲವು ವರ್ಷಗಳ ಹಿಂದಿನ ಕತೆ. ಮೋನಪ್ಪನಿಗೆ ಕೆಲವೊಮ್ಮೆ ತುಂಬ ಮೀನುಗಳು ಸಿಗುವವು. ತುಂಬ ಸಂತಸದಿಂದ ಆತ ಮೀನುಗಳನ್ನು ಮಾರುಕಟ್ಟೆಗೆ ಒಯ್ದರೆ ಆ ದಿನ ಎಲ್ಲ ಬೆಸ್ತರೂ ತುಂಬ ಮೀನು ತಂದಿರುವುದರಿಂದ ಮೀನುಗಳಿಗೆ ಬೇಡಿಕೆ ಇಲ್ಲ. ಹಿಡಿದ ಮೀನುಗಳನ್ನು ದಾಸ್ತಾನು ಮಾಡಲು ಆತನಲ್ಲಿ ಶ್ಶೆತ್ಯಾಗಾರವಿಲ್ಲ. ಕೊನೆಗೆ ಸಿಕ್ಕಿದ ಬೆಲೆಗೆ ಮೀನುಗಳನ್ನು ಮಾರಬೇಕಾದ ಪರಿಸ್ಥಿತಿ. ಆತನಿರುವ ಊರಿನಿಂದ ಸುಮಾರು ಹತ್ತು ಕಿಲೋಮೀಟರು ದೂರದ ಇನ್ನೊಂದು ಊರಿನಲ್ಲಿ ಮೀನಿಗೆ ಬೇಡಿಕೆ ಇತ್ತು. ಆದರೆ ಅದು ಮೋನಪ್ಪನಿಗೆ ತಿಳಿದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ಮೋನಪ್ಪನ ಕೈಗೆ ಮೊಬೈಲ್ ಫೋನು ಬಂದಿದೆ. ಸಮುದ್ರದಲ್ಲಿ ಇರುವಾಗಲೆ ಆತ ಹತ್ತಿರದ ಎರಡು ಮೂರು ಊರುಗಳಿಗೆ ಫೋನಾಯಿಸುತ್ತಾನೆ. ಯಾವ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುತ್ತಾನೆ. ಎಷ್ಟು ಮೀನಿಗೆ ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತಾನೆ. ಮೊಬೈಲ್ ಫೋನಿನಿಂದ ಆತನಿಗೆ ತುಂಬ ಪ್ರಯೋಜನವಾಗಿದೆ. ಎಷ್ಟು ಬೇಕೋ ಅಷ್ಟೇ ಮೀನು ಹಿಡಿದು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರುತ್ತಾನೆ. ಹೆಚ್ಚಿಗೆಯಾದ ಮೀನುಗಳನ್ನು ಎಸೆಯುವ ಅಥವಾ ಅತಿ ಕಡಿಮೆ ಬೆಲೆಗೆ ಮಾರುವ ಅಗತ್ಯವಿಲ್ಲ. ಸಮಯವೂ ಉಳಿತಾಯವಾಗುತ್ತದೆ.
Q: I downloaded and installed the Kannada IME from Bhasha India web-site. Still I don't get Kannada properly in Windows XP. I see blank squares when I type using the Kannada IME. Why?
A: The Bhasha India IME will add additional keyboard layouts also known as Input Method Editor (IME) only.
- ರಘುನಾಥ ಚ. ಹ.
‘ನನಗೆ ಕಂಪ್ಯೂಟರ್ ಕಲಿಸಲು ನನ್ನ ಮೊಮ್ಮಗಳು ತುಂಬಾ ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ'. ಪದಗಳ ವ್ಯುತ್ಪತ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಅಳಲಿದು. ಹಾಗೆಂದು ವೆಂಕಟಸುಬ್ಬಯ್ಯನವರಿಗೆ ಕಂಪ್ಯೂಟರ್ ಕುರಿತು ಅಥವಾ ಅಂತರ್ಜಾಲವೆಂಬ ವಿಸ್ಮಯದ ಕುರಿತು ಅಲರ್ಜಿಯಿದೆ ಎಂದರ್ಥವಲ್ಲ. ಅವರು ಸಂಪಾದಿಸಿದ ನಿಘಂಟೊಂದು ಅಂತರ್ಜಾಲದಲ್ಲಿದೆ. ಬಹುಶಃ, ಮುದ್ರಣ ರೂಪದ ನಿಘಂಟಿನ ಬಳಕೆಗಿಂತಲೂ ಇಂಟರ್ನೆಟ್ನಲ್ಲಿನ ನಿಘಂಟುವಿನ ಬಳಕೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತು ವೆಂಕಟಸುಬ್ಬಯ್ಯನವರಿಗೆ ಖುಷಿಯಿದೆ. ಆದರೆ ಆ ಖುಷಿ ಕಂಪ್ಯೂಟರ್ ಕಲಿಕೆಯಾಗಿ ಮಾರ್ಪಡುತ್ತಿಲ್ಲ.
ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋ ಸಂರಕ್ಷಣೆಯ ಇನ್ನೊಂದು ಹೆಜ್ಜೆ.
ಅರಮನೆ ಮೈದಾನದಲ್ಲಿ ನ. ೧೮ಕ್ಕೆ ಲಕ್ಷ ಮಹಿಳೆಯರಿಂದ ಗೋ ಮಾತೆಗೆ ಕೋಟಿ ಆರತಿ
ಬೆಂಗಳೂರು, ನವೆಂಬರ್ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ - ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ...ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್ ಬಳಕೆಯ ಮೀಟರ್ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್ ಬಿಲ್ನಲ್ಲೂ ಅಷ್ಟೇ. ಬರೇ ರೋಮನ್ ಅಕ್ಷರಗಳು, ಇಂಗ್ಲಿಷ್ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್ಗಷ್ಟೇ ಮಣೆ. ಎಸ್ಎಂಎಸ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು.
- ಡಾ. ಯು. ಬಿ. ಪವನಜ
ಸಂಗೀತದಲ್ಲಿ ಆಸಕ್ತಿ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು. ಸಿನಿಮಾ, ಭಾವಗೀತೆ. ಶಾಸ್ತ್ರೀಯ, ವಿದೇಶೀಯ, ಹೀಗೆ ಯಾವುದಾದರೊಂದು ಬಗೆಯ ಸಂಗೀತವನ್ನು ಆಲಿಸದ ಮಂದಿಯ ಸಂಖ್ಯೆ ಅತಿ ಕಡಿಮೆ. ಹೀಗೆ ಸಂಗೀತ ಪ್ರಿಯರಿಗೆ ಸಂಗೀತ ಆಲಿಸಲು ಹಲವು ಸಲಕರಣೆಗಳು ಲಭ್ಯವಿವೆ. ಡಿಜಿಟಲ್ ಉಪಕರಣಗಳ ಆವಿಷ್ಕಾರವಾದ ಮೇಲಂತೂ ಚಿತ್ರವಿಚಿತ್ರ ಉಪಕರಣಗಳು ಮಾರುಕಟ್ಟೆಗೆ ಲಗ್ಗೆಯಿಡತೊಡಗಿವೆ. ಅವುಗಳಲ್ಲೊಂದು ಪ್ರಮುಖ ವಿಭಾಗ ಎಂಪಿ-೩ ಪ್ಲೇಯರುಗಳದು. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಹಲವಾರು ನಮೂನೆಯ ಎಂಪಿ-೩ ಪ್ಲೇಯರುಗಳು ಲಭ್ಯವಿವೆ. ಅವುಗಳಲ್ಲಿ ನಾವೀಗ ಕ್ರಿಯೇಟಿವ್ ಕಂಪೆನಿಯ ಮುವೋ ಟಿಎಕ್ಸ್ ಎಫ್ಎಂ ಮಾದರಿಯನ್ನು ಸ್ವಲ್ಪ ಪರಿಶೀಲಿಸೋಣ.
- ಡಾ. ಯು. ಬಿ. ಪವನಜ
ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು ಮತ್ತು ನಿಸ್ತಂತು. ನಿಸ್ತಂತು ಇಯರ್ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.
