ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!
Sunday, October 22nd, 2006ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.