ಮೊನ್ನೆಯಷ್ಟೆ ಮೈಕ್ರೋಸಾಫ್ಟ್‌ನವರ ಹೊಸ ಕಾರ್ಯಾಚರಣೆಯ ವ್ಯವಸ್ಥೆ ವಿಂಡೋಸ್ ವಿಸ್ಟದ ಅಂತಿಮ ಆವೃತ್ತಿಯನ್ನು ಅನುಸ್ಥಾಪಿಸಿದ್ದರು. ಅಂದರೆ ಅಂಗಡಿಗೆ ಹೋಗಿ ವಿಸ್ಟ ಕೊಂಡುಕೊಳ್ಳಬಹುದು ಎಂದುಕೊಳ್ಳಬೇಡಿ. ಅದು ಅಂತಿಮ ಬಳಕೆದಾರರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಮೈಕ್ರೋಸಾಫ್ಟ್‌ನವರು ಸದ್ದುಗದ್ದಲವಿಲ್ಲದೆ ಏನನ್ನೂ ಬಿಡುಗಡೆ ಮಾಡುವಿದಿಲ್ಲ ತಾನೆ? ನೀವು ಏನೂ ಸದ್ದುಗದ್ದಲ್ಲ ಕೇಳಿಲ್ಲವಾದ ಕಾರಣ ಇನ್ನೂ ಅದು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂದು ತೀರ್ಮಾನಕ್ಕೆ ಬರಬಹುದು. ವಿಸ್ಟದಲ್ಲಿ ಕನ್ನಡದ ಅಳವಡಿಕೆಯನ್ನು ನಾನು ಪರೀಕ್ಷಿಸಿದ್ದೇನೆ.
Posts published in “Tech related”
ಭಾಷೆ ಯಾರಿಗೆ ಸೇರಿದ್ದು?
ನಮ್ಮ ಭಾಷೆ ಯಾರಿಗೆ ಸೇರಿದ್ದು ಎಂದು ಯಾವೊತ್ತಾದರೂ ಸಂದೇಹಿಸಿದ್ದೀರಾ? ಇಲ್ಲ ತಾನೆ? ಅದು ನಮಗೇ ಸೇರಿದ್ದು. ಸರಿ. ಈ ನಾವು ಎಂದರೆ ಯಾರು? ಯಾಕೆ ಈ ಪ್ರಶ್ನೆಗಳು ಅನ್ನುತ್ತೀರಾ? ಇಲ್ಲೊಂದು ಸ್ವಾರಸ್ಯಕರ ಪ್ರಸಂಗದ ಉದಾಹರಣೆ ಇದೆ.
ೠ ಟೈಪಿಸುವುದು ಹೇಗೆ?
ಅಸತ್ಯಾನ್ವೇಶಿಯವರು ತಮ್ಮ ಬ್ಲಾಗಿನ ಕಮೆಂಟಿನಲ್ಲಿ ಒಂದು ಪ್ರಶ್ನೆ ಎಸೆದರು. "ೠ" ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ "ೠ" ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. "ೠ" ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0).
ಕನ್ನಡದಲ್ಲಿ ಚಾಟ್ ಮಾಡಲು GTalk ಬಳಸಿರಿ
ಅಂತರಜಾಲದ ಮೂಲಕ ಒಬ್ಬರಿಗೊಬ್ಬರು "ಮಾತನಾಡಲು" ಅಥವಾ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ chat ಮಾಡಲು ಹಲವು ತಂತ್ರಾಂಶ ಸೌಲಭ್ಯಗಳಿವೆ. ಇವುಗಳಲ್ಲಿ ತುಂಬ ಜನಪ್ರಿಯವಾದವುಗಳು - MSN (Hotmail), Yahoo Meesenger ಮತ್ತು GTalk (Google). ಇವೆಲ್ಲವುಗಳಲ್ಲೂ ಕನ್ನಡ ಯುನಿಕೋಡ್ ಬಳಸಿ ಚಾಟ್ ಮಾಡಲು ಆಗುತ್ತಿರಲಿಲ್ಲ. ಇವತ್ತು ಸತ್ಯನಾರಾಯಣ ಜೊತೆ GTalk ಬಳಸಿ ಮಾತನಾಡುತ್ತಿದ್ದಾಗ, ಅವರು ಒಂದು ಪ್ರಶ್ನೆ ಕೇಳಿದರು -"ನಾನು ಇಲ್ಲಿ ಕನ್ನಡದಲ್ಲಿ (ಯುನಿಕೋಡ್‌ನಲ್ಲಿ) ಚಾಟ್ ಮಾಡಬಹುದೇ?" ಎಂದು. ನಾನು ನನ್ನ ಹಳೆಯ ಅನುಭವದಿಂದ ಸಾದ್ಯವಿಲ್ಲ ಎಂದೆ. ಆದರೂ ನೋಡೋಣ ಎಂದು ನಾವಿಬ್ಬರು ಪ್ರಯತ್ನಿಸಿದೆವು. ಆಶ್ಚರ್ಯ! ಈಗ ಕನ್ನದಲ್ಲಿ ಚಾಟ್ ಮಾಬಹುದು. ನಾನು ಕನ್ನಡ ಮಾತ್ರವಲ್ಲ, ಹಲವು ಭಾರತೀಯ ಭಾಷೆಗಳಲ್ಲಿ ನನ್ನ ಹೆಸರನ್ನು ಬೆರಳಚ್ಚು ಮಾಡಿದೆ. ಎಲ್ಲವೂ ಸರಿಯಾಗಿಯೇ ಮೂಡಿಬಂದವು. ನಮ್ಮ ಚಾಟ್‌ನ ದಾಖಲಾತಿ ಕಿಟಿಕಿಯ ಚಿತ್ರ ಇಲ್ಲಿದೆ-
ಬರಲಿವೆ – ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು
ಕನ್ನಡ ಯುನಿಕೋಡ್ ಬಳಸುವಲ್ಲಿ ಬಹುಮುಖ್ಯವಾದ ಸಮಸ್ಯೆ ಎಂದರೆ ಓಪನ್‌ಟೈಪ್ ಫಾಂಟ್‌ಗಳ ಅಭಾವದ್ದು. ಈ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೆ (೧, ೨). ಬೇರೆಯವರೂ ಬರೆದಿದ್ದಾರೆ. ಕನ್ನಡ ಭಾಷೆಯನ್ನು ಗಣಕಗಳಲ್ಲಿ ಬಳಸುತ್ತಿರುವುದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಟ್ರೂಟೈಪ್ ಫಾಂಟ್‌ಗಳ ವಿಷಯಕ್ಕೆ ಬಮದರಂತೂ ಕನ್ನಡಕ್ಕೆ ನೂರಾರು ಟ್ರೂಟೈಪ್ ಫಾಂಟ್‌ಗಳು ಲಭ್ಯವಿವೆ. ಯುನಿಕೋಡ್ ಮತ್ತು ಓಪನ್‌ಟೈಪ್ ಫಾಂಟ್‌ಗಳು ಬಳಕೆಗೆ ಬಂದು ಐದು ವರ್ಷಗಳೇ ಸಂದವು. ಆದರೆ ಕನ್ನಡಕ್ಕೆ ಲಭ್ಯವಿರುವ ಓಪನ್‌ಟೈಪ್ ಫಾಂಟ್‌ಗಳ ಸಂಖ್ಯೆ ಐದಾರು ಇರಬಹುದೇನೋ. ಅವುಗಳೂ ಪರಿಪೂರ್ಣವೇನಲ್ಲ. ಮೈಕ್ರೊಸಾಫ್ಟ್‌ನವರು ನೀಡಿರುವ ತುಂಗ ಫಾಂಟೇ ಇರುವವುಗಳಲ್ಲಿ ಹೆಚ್ಚು ಪರಿಪೂರ್ಣವಾಗಿರುವುದು.
ಸುಧಾರಿತ ತುಂಗ ಫಾಂಟ್
Corrected opentype font Tunga for Kannada is now available at Microsoft web-site for download.
ಮೈಕ್ರೋಸಾಫ್ಟ್‌ನವರು ನೀಡಿದ ತುಂಗ ಫಾಂಟ್‌ನಲ್ಲಿ ಇದ್ದ ಸಮಸ್ಯೆ ಬಗ್ಗೆ ಗೊತ್ತಿದೆ. ಅದರ ಬಗ್ಗೆ ಇಲ್ಲಿ ಮತ್ತು ಇಲ್ಲಿ ಓದಬಹುದು. ಸುಧಾರಿತ ತುಂಗ ಫಾಂಟ್ ಈಗ ಅಂತರಜಾಲದಲ್ಲಿ ಅಧಿಕೃತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಅದನ್ನು ಪಡೆಯಬೇಕಾದರೆ ಈ ಅಪ್‌ಡೇಟನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ನೀಡಿರುವ ಅಪ್‌ಡೇಟ್ ನಿಜವಾಗಿ ಇರುವುದು ನೇಪಾಳಿ, ಪಾಶ್ತೋ, ಪಿಲಿಪಿನೋ ಮತ್ತು ಇತರೆ ಕೆಲವು ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಗೆ ಅಳವಡಿಸಲು. ಕನ್ನಡ ಭಾಷೆಯ ಸುಧಾರಿತ ತುಂಗ ಫಾಂಟ್ ಇವುಗಳ ಜೊತೆ ಸೇರಿಕೊಂಡಿದೆ ಎಂದು ತಿಳಿಯಬೇಕಾದರೆ ಈ ಡೌನ್‌ಲೋಡ್ ಬಗ್ಗೆ ಕೊಟ್ಟ ವಿವರವನ್ನು ಓದಬೇಕು. ಈ ವಿವರದಲ್ಲಿ ಕೊಟ್ಟಿರುವ ಫೈಲುಗಳ ಪಟ್ಟಿಯಲ್ಲಿ ತುಂಗ ಫಾಂಟ್ ಕೂಡ ಇದೆ.
ಯುಎಸ್‌ಬಿ ಬ್ಯಾಟರಿ
ಯಾಕೋ, ಈ ಯುಎಸ್‌ಬಿ ಸಾಧನಗಳ ಬಗ್ಗೆ ಎಷ್ಟು ಬರೆದರೂ ಸಾಲುವುದಿಲ್ಲ. ಯುಎಸ್‌ಬಿ ಸಾಧನಗಳ ಬಗ್ಗೆ ದೀರ್ಘವಾದ ಲೇಖನ ಬರೆದಿದ್ದೆ.
ತಂಪಾಸನ !
ಚಿತ್ರವಿಚಿತ್ರ ಯುಎಸ್‌ಬಿ ಸಾಧನಗಳ ಬಗ್ಗೆ ಹಿಂದೊಮ್ಮೆ ಸುದೀರ್ಘವಾದ ಲೇಖನವನ್ನೇ ಬರೆದಿದ್ದೆ. ಈಗ ಅವುಗಳ ಸಾಲಿಗೆ ಒಂದೆರಡು ಹೊಸದು ಸೇರ್ಪಡೆಯಾಗಿವೆ. ಮೊದಲನೆಯದಾಗಿ ಹವಾನಿಯಂತ್ರಿತ ಅಂಗಿ ಅಥವಾ ಜಾಕೆಟ್. ನಿಮ್ಮ ಕಚೇರಿಯಲ್ಲಿ ಹವಾನಿಯಂತ್ರಣ ಇಲ್ಲವೇ? ಚಿಂತೆ ಮಾಡಬೇಡಿ. ಗಣಕ (ಕಂಪ್ಯೂಟರ್) ಅಂತೂ ಇದ್ದೇ ಇದೆ ತಾನೆ? ನಾಲ್ಕೈದು ವರ್ಷಗಳ ಈಚೆಗೆ ತಯಾರಾದ ಎಲ್ಲ ಗಣಕಗಳಲ್ಲಿ ಯುಎಸ್‌ಬಿ ಕಿಂಡಿ (ಪೋರ್ಟ್) ಇದ್ದೇ ಇದೆ. ಇನ್ನೇನಾಗಬೇಕು. ಈ ಜಾಕೆಟ್ ಕೊಂಡು ಯುಎಸ್‌ಬಿ ಕಿಂಡಿಗೆ ಲಗತ್ತಿಸಿ ತಂಪಾಗಿರಿ.
ಲ್ಯಾಪ್‌ಟಾಪ್‌ಗೆ ಒದ್ದು ಕೆಲಸ ಮಾಡಿಸಿಕೊಳ್ಳಿ
ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಗಳ ವ್ಯತ್ಯಾಸವನ್ನು ವಿವರಿಸುವಾಗ ನಾನು ಸ್ವಲ್ಪ ಹಾಸ್ಯಮಯವಾಗಿ ಈ ರೀತಿ ಹೇಳುತ್ತಿದ್ದೆ -"ತಂತ್ರಾಂಶವೆಂದರೆ ಕಣ್ಣಿಗೆ ಕಾಣಿಸದ್ದು. ಯಂತ್ರಾಂಶವೆಂದರೆ ಕಣ್ಣಿಗೆ ಕಾಣಿಸುವಂತದ್ದು. ನಿಮಗೆ ನಿಮ್ಮ ಗಣಕದ ಮೇಲೆ ಕೋಪ ಬಂದರೆ, ಯಂತ್ರಾಂಶವನ್ನು ಅಂದರೆ ಕಣ್ಣಿಗೆ ಕಾಣಿಸುವ ಗಣಕದ ಭಾಗಗಳನ್ನು, ಸಿಟ್ಟಿನಿಂದ ಒದೆಯಬಹುದು". ಈಗ ಬಂದ ಸುದ್ದಿಯಂತೆ ಇನ್ನು ಮುಂದೆ ನೀವು ಲ್ಯಾಪ್‌ಟಾಪ್‌ಗಳನ್ನು ಒದ್ದು ಕೆಲಸ ಮಾಡಿಸಿಕೊಳ್ಳಬಹುದು. ಐಬಿಎಂನವರು ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಅದರ ಪ್ರಕಾರ ಲ್ಯಾಪ್‌ಟಾಪ್‌ಗಳನ್ನು ಕುಟ್ಟುವ ಮೂಲಕ ಅದಕ್ಕೆ ಆದೇಶ ನೀಡಬಹುದು. ಧ್ವನಿ ಮೂಲಕ ಆದೇಶ ನೀಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಕುಟ್ಟುವ ಮೂಲಕ ಆದೇಶ ನೀಡುವುದು ಹೊಸತು. ಹಾಗೆಂದು ಯಾವುದೇ ಲ್ಯಾಪ್‌ಟಾಪ್‌ನ್ನು ಕುಟ್ಟುವ ಮೂಲಕ ಆದೇಶ ನೀಡುವ ಹಾಗಿಲ್ಲ. ಮೂರು ವರ್ಷಗಳ ಈಚೆಗೆ ತಯಾರಾಗಿರುವ ಐಬಿಎಂ (ಈಗ ಲೆನೋವಾ) ಲ್ಯಾಪ್‌ಟಾಪ್‌ಗಳಲ್ಲಿ ಅಲುಗಾಡುವಿಕೆಯನ್ನು ಅರ್ಥಮಾಡಿಕೊಳ್ಳಬಲ್ಲ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರಿಯಾಗಿ ಐಬಿಎಂನವರು ಈಗ ಹೊಸದಾಗಿ ತಯಾರಿಸಿರುವ ತಂತ್ರಾಂಶವನ್ನು ಅಳವಡಿಸಕೊಳ್ಳುವ ಮೂಲಕ "ಕುಟ್ಟುವ" ಆದೇಶ ನೀಡಬಹುದು. ಒಂದು ಸಲ ಕುಟ್ಟಿದರೆ (ಒದ್ದರೆ ಎಂದು ನಾನು ಹೇಳಿದ್ದು ಉತ್ಪ್ರೇಕ್ಷೆಗಾಗಿ ಮಾತ್ರ) ಗಣಕ ಚಾಲೂ, ಎರಡು ಸಲ ಕುಟ್ಟಿದರೆ ಬಂದ್, ಹೀಗೆ ಆದೇಶಗಳನ್ನು ನೀವು ಗ್ರಾಹಕೀಯಗೊಳಿಸಿಕೊಳ್ಳಬಹುದು. ಇನ್ನು ಮುಂದೆ "ಕಂಪ್ಯೂಟರ್‌ಗೆ ಒದೆಯೋಣ ಎನ್ನುವಷ್ಟು ಸಿಟ್ಟು ಬಂತು" ಎಂದು ಹೇಳುವಾಗ ಎಚ್ಚರವಿರಲಿ.
Microsoft beats Google
People always tend to compare Google with Microsoft and pronounce that Google's technologies are always superior to that of Microsoft's. For instance, the comparison of the results from Google's search with that of search.msn.com (by Microsoft). But I have a different story to tell. A fellow MVP, [http://www.microsoft.com/india/mvp/indiamvp.aspx#VeerJiWangoo|Veer Ji Wangoo], pointed me at [http://local.live.com|local.live.com] from Microsoft. I opened it and tried to search some driving directions in Karnataka, India. I searched for the driving directions from Bangalore, India to some small towns like Subrahmanya, Tirthahalli, Karkala, etc. And lo, it gave the directions perfectly. Of course, it is not able to provide the directions for smaller towns and villages. I tried the same thing in local.google.com. It failed miserably. There is no India specific web-site from Google like local.google.co.in. The award goes to Microsoft.
