"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರು ಇದ್ದೇ ಇರುತ್ತಾರೆ". ಈ ಮಾತನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವೆಂದರೆ ಈ ಸುದ್ದಿ. ಕೊಲ್ಕತ್ತದ ಯಾರೋ ದಂಪತಿಗಳು ಚಂದ್ರನ ಮೇಲೆ ನಿವೇಶನ ಕೊಂಡುಕೊಂಡಿದ್ದಾರೆ. ಇಂತಹ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹಿಂದೊಮ್ಮೆ ಉಷಾಕಿರಣ ಪತ್ರಿಕೆಯಲ್ಲಿ ಇಂತಹದೇ ಸುದ್ದಿ ಪ್ರಕಟವಾಗಿದ್ದಾಗ ಪತ್ರಿಕೆಯ ಸಂಪಾದಕರಿಗೆ ನಾನೊಂದು ಪತ್ರ ಬರೆದಿದ್ದೆ. ಅದನ್ನು ಕೆಳಗೆ ನಕಲಿಸಿದ್ದೇನೆ.
Posts published in “Year: 2006”
- ಬೇಳೂರು ಸುದರ್ಶನ
ಅಲ್ಲಿ ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ. ಆದರೂ ಇಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದೆ!
hi everybody... it will be probable to discuss unwanted happenings related to kannada.., and also some r doing wrong on behalf of kannada... somebody as to take an action..or has to comment on such cases...
ಬೆಂಗಳೂರು, ಆಗಸ್ಟ್ ೨೦, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಇಂದು ಬೆಂಗಳೂರಿನಲ್ಲಿ ಜರುಗಿತು. ಬ್ರೈಲ್ ಲಿಪಿಯಲ್ಲಿ ಮುದ್ರಿಸಿರುವ ಅದೃಶ್ಯ ಕಾವ್ಯ ಪುಸ್ತಕವನ್ನು ಮಧು ಸಿಂಘಾಲ್ ಅವರು ಬಿಡುಗಡೆ ಮಾಡಿದರು. ಸ್ವತಃ ದೃಷ್ಟಿಸೌಲಭ್ಯ ವಂಚಿತರಾದ ಮಧು ಸಿಂಘಾಲ್ ಅವರು ವಸುಧೇಂದ್ರರ ಈ ವಿನೂತನ ಪ್ರಯತ್ನವನ್ನು ಕೊಂಡಾಡಿದರು. ಅಂಧರ ಶಾಲೆಗಳಿಗೆ ಕನ್ನಡದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಸಿಗುತ್ತಿಲ್ಲ. ಕೇವಲ ಸರಕಾರವು ಪ್ರಕಟಿಸಿರುವ ಪಠ್ಯ ಪುಸ್ತಗಳು ಮಾತ್ರವೇ ಲಭ್ಯವಿವೆ. ಕನ್ನಡ ಸಾಹಿತ್ಯ ಅತಿ ಶ್ರೀಮಂತವಾಗಿದೆ. ಆದರೆ ಅವು ಯಾವವೂ ದೃಷ್ಟಿಸೌಲಭ್ಯ ವಂಚಿತರಾದವರಿಗೆ ಸಿಗುತ್ತಿಲ್ಲ. ಈ ಕೊರತೆಯನ್ನು ನೀಗುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.
ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯ ಸಂಸ್ಥಾಪಕ ಶ್ರಿ ಎನ್.ಆರ್. ನಾರಾಯಣ ಮೂರ್ತಿಯವರು ನಾಳೆ ತಮ್ಮ ೬೦ ನೆಯ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅವರ ೫೯,೦೦೦ ಹಿಂಬಾಲಕರು ಅವರ ಶ್ರೇಯಸ್ಸಿಗೆ ನಾಳೆ ಪ್ರಪಂಚದಾದ್ಯಂತ ಶುಭಾಶಯಗಳನ್ನು ಕೋರಿ ತಮ್ಮ ನೆಚ್ಚಿನ ನಾಯಕನನ್ನು ಹರಸುತ್ತಾರೆ ! ಆ ದಿನವೆ ಅವರ ಜೊತೆಗೆ ೨೫ ವರ್ಷಕ್ಕು ಮೇಲ್ಪಟ್ತು ದುಡಿದ ಸಹೋದ್ಯೊಗಿ, ನಂದನ್ ನಿಲೆಕೆಣಿಯವರು ಮುಂದೆ ಇನ್ಫೊಸಿಸ್ ನ ಆಡಳಿತದ ಕಾರ್ಯಭಾರವನ್ನು ವಹಿಸಿಕೊಂಡು ಮುಂದೆ ನಡೆಸಿಕೊಂಡು ಹೋಗುತ್ತಾರೆ. ನಾರಾಯಣ ಮೂರ್ತಿಯವರು ಕಂಪೆನಿಯ ಕಾರ್ಯ ಚಟುವಟಿಕೆಯನ್ನು ಮೇಲಿನ ಸ್ಥರದಲ್ಲಿ ಗಮನಿಸುತ್ತಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ಸಮಯ ಸಮಯದಲ್ಲಿ ಕೊಟ್ಟು ಸಹಕರಿಸುತ್ತಾರೆ ! ಇವರೆಲ್ಲರಿಗೂ ಪ್ರೇರಣೆಯನ್ನು ನೀಡಿ ಸಹಕರಿಸಿ, ಸಂಸ್ಥೆ ಯನ್ನು ಬೆಳೆಸಲು ಸಹಾಯಮಾಡಿದ ಅತ್ಯಂತ ಸಮರ್ಥ ಕಂಪ್ಯೂಟರ್ ಇಂಜಿನಿಯರ್ ಆದಾಗ್ಯೂ ತೆರೆಯಮರೆಯಲ್ಲಿಯೇ ಇದ್ದು ತಮ್ಮ ಮಹಾನ್ ಯೊಗದಾನಮಾಡಿದ ಸುಧಾ ಮೂರ್ತಿಯವರಿಗೆ ಯಶಸ್ಸಿನ ಬಹುಪಾಲು ಹೊಗಬೇಕು. 'ಇನ್ಫೊಸಿಸ್' ನಾರಾಯಣ ಮೂರ್ತಿ ಹಾಗು ಸುಧಾಮೂರ್ತಿಯವರ ನೆಚ್ಚಿನ ಕೂಸಾಗಿದ್ದು ,ಈಗ ಪ್ರೌಢತೆಯನ್ನು ಪಡೆದಿದೆ. ಪ್ರಪಂಚದ ಪ್ರತಿಷ್ಟಿತ ಸಾಫ್ಟ್ ವೇರ ಕಂಪೆನಿಗಳಲ್ಲಿ ಒಂದಾಗಿ ಬೆಳೆದಿದೆ.
- ಆರ್. ಜಿ. ಹಳ್ಳಿ ನಾಗರಾಜ್
ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ವ್ಯವಹಾರವೆಲ್ಲ ನಡೆಯುತ್ತಿದೆಯೇನೋ ಅನ್ನುವ ಅನುಭವ, ತಿಳಿವಳಿಕೆ ಎಲ್ಲೆಲ್ಲೂ ಮನೆಮಾಡಿದೆ. ತಂತ್ರಜ್ಞಾನದ ಮೂಲಕ ಭಾರತದ ಒಂದೆರಡು ನಗರಗಳು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿವೆ. ತಂತ್ರಜ್ಞಾನದ ಪ್ರಗತಿ ವಿಜ್ಞಾನದ ದಾಪುಗಾಲಿಗೆ ಮತ್ತೊಂದು ಹೆಸರು. ಮಾಹಿತಿ ತಂತ್ರಜ್ಞಾನದ ಇವೊತ್ತಿನ ಬಹುತೇಕ ಚರ್ಚೆಯನ್ನು ಬದಿಗಿರಿಸಿ, ವಿಜ್ಞಾನದಲ್ಲಿ ಹೊಸ ಪ್ರಯೋಗ, ಸಾಧನೆ ಮಾಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಾಹ್ಯಾಕಾಶ, ಅಣುಶಕ್ತಿ ಉತ್ಪಾದನೆ, ಅದರ ಸೂಕ್ತ ಬಳಕೆ ಭಾರತದ ಸಾಧನೆ ವಿಶ್ವಗಮನ ಸೆಳೆದದ್ದು ಇತಿಹಾಸ.
- ಬೇಳೂರು ಸುದರ್ಶನ
ಸಾಫ್ಟ್ವೇರ್ ತಂತ್ರಜ್ಞ ರವಿಕೃಷ್ಣಾರೆಡ್ಡಿಯವರು `ವಿಕ್ರಾಂತ ಕರ್ನಾಟಕ' ಎಂಬ ಹೊಸ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವುದರೊಂದಿಗೆ ಕನ್ನಡ ಮ್ಯಾಗಜಿನ್ ಪತ್ರಿಕೋದ್ಯಮದಲ್ಲಿ ಹೊಸ ಗಾಳಿಯನ್ನು ಬೀಸುವರೆ?
- ಬೇಳೂರು ಸುದರ್ಶನ
ಕೆಲಸಕ್ಕೆ ಸೇರುವಾಗ ಬರೀ ಸೆಕೆಂಡ್ ಪಿ ಯು ಸಿ. ; ಆಮೇಲೆ ಏಕಕಾಲಿಕವಾಗಿ ಬಿ ಎಸ್ಸಿ ಮತ್ತು ಮೆಕ್ಯಾನಿಕಲ್ ಡಿಪ್ಲೋಮಾ ಸಂಜೆ ತರಗತಿಗಳಿಗೆ ಹಾಜರು. ಜೊತೆಗೆ ಮದುವೆ ಮಕ್ಕಳು.
- ಡಾ. ಯು. ಬಿ. ಪವನಜ
| “ಕನ್ನಡ ಯುನಿಕೋಡ್ ಸರಿಯಿಲ್ಲ. ಆದುದರಿಂದ ಸದ್ಯಕ್ಕೆ ಅದನ್ನು ಕನ್ನಡ ಭಾಷೆಗೆ ಬಳಸಲು ಸಾಧ್ಯವಿಲ್ಲ” ಎಂಬುದಾಗಿ ಕೆಲವು ಮಂದಿ ಹೇಳುತ್ತ ತಿರುಗಾಡುತ್ತಿದ್ದಾರೆ. ಇಂತಹ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು ಈ ಲೇಖನದ ಉದ್ದೇಶ. |
ಮಾನ್ಯರೆ ನಮಸ್ಕಾರ ,
ನಿನ್ನೆ ಮತ್ತು ಇಂದಿನ ‘ ಉಷಾಕಿರಣ’ ದಿನಪತ್ರಿಕೆಯಲ್ಲಿ ಪ್ರಕಟವಾದ ಡಾ. ಯು.ಬಿ. ಪವನಜ ರವರ ಲೇಖನ ‘ಅಕ್ಷರದಿಂದ ಮಾಹಿತಿಯೆಡೆಗೆ’ ತುಂಬಾ ಚೆನ್ನಾಗಿದೆ. ಜನಸಾಮಾನ್ಯರಿಗೂ ಅರ್ಥವಾಗುವ ಶೈಲಿ ಮತ್ತು ಭಾಷೆಯಲ್ಲಿ ಕನ್ನಡದ ಕಂಪ್ಯೂಟರ್ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರಗಳನ್ನು ಅವರು ವಿವರಿಸಿದ್ದಾರೆ. ಹಳೆಯ ತಂತ್ರಜ್ಞಾನ (ನುಡಿ ಮತ್ತು ಬರಹ) ಮತ್ತು ಹೊಸ ತಂತ್ರಜ್ಞಾನದ (ಕನ್ನಡದ ಯುನಿಕೋಡ್) ನಡುವಣ ಕಂದಕವನ್ನು ತಿಳಿದುಕೊಳ್ಳಲು ಈ ಲೇಖನವು ಅತ್ಯಂತ ಉಪಯುಕ್ತವಾಗಿದೆ. ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸಲು ಏನೆಲ್ಲಾ ಸೌಲಭ್ಯಗಳು ಇವೆ. ಅವುಗಳನ್ನು ಹೇಗೆಲ್ಲಾ ಬಳಸಬಹುದು ಮತ್ತು ಪ್ರಸ್ತುತ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸಲು ಯಾವ ಯಾವ ಹೆಚ್ಚಿನ ಸೌಲಭ್ಯಗಳು ಅಗತ್ಯವಿದೆ ಎಂಬುದನ್ನು ವಿಷದವಾಗಿ ಅವರು ತಮ್ಮ ಮುಂದಿನ ಲೇಖನಗಳಲ್ಲಿ ವಿವರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.
