Archive for March, 2006

ವಿಂಡೋಸ್‌ಗೆ ಕನ್ನಡದ ಹೊದಿಕೆ

Friday, March 17th, 2006

ವಿಂಡೋಸ್ ಎಕ್ಸ್‌ಪಿಗೆ ಕನ್ನಡದ ಹೊದಿಕೆ ಈಗ ಲಭ್ಯವಿದೆ. ಮೈಕ್ರೋಸಾಫ್ಟ್ ಕಂಪೆನಿಯವರು ಕನ್ನಡದ Language Interface Pack (Kannada LIP for Windows XP) ಬಿಡುಗಡೆ ಮಾಡಿದ್ದಾರೆ. ಇದನ್ನು ಮೈಕ್ರೋಸಾಫ್ಟ್ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾನು ಈಗಷ್ಟೆ ಇದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿದ್ದೇನೆ. ಇನ್ನೂ ಇದನ್ನು ಸರಿಯಾಗಿ ವಿಶ್ಲೇಷಿಸಿಲ್ಲ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೋಡಬಹುದು-

ವಿಂಡೋಸ್ 98ಕ್ಕೆ ಬೆಂಬಲ ಅಂತ್ಯ

Friday, March 17th, 2006

ನಮ್ಮಲ್ಲಿ ಹಲವರು ಇನ್ನೂ ವಿಂಡೋಸ್ 98 ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಅದರಲ್ಲಿ ಕನ್ನಡ ಯುನಿಕೋಡ್ ಇಲ್ಲ. ಆದರೂ ಜನರು ಇನ್ನೂ ಹಳೆಯದಕ್ಕೇ ಅಂಟಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿಯವರು ವಿಂಡೋಸ್ 98 ಮತ್ತು MEಗಳಿಗೆ ಬೆಂಬಲವನ್ನು ನಿಲ್ಲಿಸುವುದಾಗಿ ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದರು. ಆದರೂ ಹಲವು ಜನರ ಒತ್ತಾಯದ ಮೇರೆಗೆ ಜಲೈ 2006ರತನಕ ಬೆಂಬಲವನ್ನು ವಿಸ್ತರಿಸಿದ್ದರು. ಈಗ ಅಂತಿಮವಾಗಿ ಜುಲೈ 11, 2006ರ ಅನಂತರ ವಿಂಡೋಸ್ 98 ಮತ್ತು MEಗಳಿಗೆ ಬೆಂಬಲವನ್ನು ನಿಲ್ಲಿಸುವುದಾಗಿ ಮೈಕ್ರೋಸಾಫ್ಟ್ ಕಂಪೆನಿಯವರು ಘೋಷಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೩

Thursday, March 16th, 2006

ಡಾ| ಎಂ. ಚಿದಾನಂದ ಮೂರ್ತಿ

ಕ್ಷಾತ್ರ ಪರಂಪರೆ : ಪಂಪ

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨

Thursday, March 16th, 2006

– ಡಾ| ಎಂ ಚಿದಾನಂದ ಮೂರ್ತಿ

ಸ್ವಾಭಿಮಾನ

ಕನ್ನಡ ಸಂಸ್ಕೃತಿಯ ತಿರುಳನ್ನು ಒಂದೆರಡು ಮಾತುಗಳಲ್ಲಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಅವರಿಗೆ ನಾನು ಕೊಡುವ ಉತ್ತರ: “ಸ್ವಾಭಿಮಾನ ಮತ್ತು ಸಮನ್ವಯ”. ಸ್ವಾಭಿಮಾನವೆಂದರೆ ತನ್ನ ಬಗ್ಗೆ ಮತ್ತು ತನ್ನತನದ ಬಗ್ಗೆ ಇರುವ ಪೂರ್ಣ ಅರಿವು ಮತ್ತು ವಿಶ್ವಾಸ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಅಹಂಕಾರವು ಬಹುತೇಕ ಸ್ವಾರ್ಥಪರವೂ ಇತರ ಯಾರನ್ನೇ ಗುರುತಿಸದೆ ತನ್ನನ್ನು ಮಾತ್ರ ಎತ್ತಿ ಹಿಡಿದುಕೊಳ್ಳುವ ಸ್ವಪ್ರೇಮವೂ ಆಗಿದ್ದು ಟೊಳ್ಳುತನವನ್ನು ಬೆಳೆಸಿಕೊಂಡಿರುವ ಸ್ವಪ್ರತಿಷ್ಠೆಯ ಪ್ರತೀಕ. ಸ್ವಾಭಿಮಾನಿಯು ಬೆಳೆದ ಮತ್ತು ಬೆಳೆಯುವ ವ್ಯಕ್ತಿಯಾದುದರಿಂದ ಅವನು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ದೊಡ್ಡತನವನ್ನು ಗುರುತಿಸಲು ಸಿದ್ಧನಿರುತ್ತಾನೆ. ಸ್ವಾಭಿಮಾನವೆನ್ನುವುದು ಎರಡು ಮುಖಗಳ ನಾಣ್ಯವಿದ್ದಂತೆ – ನಾನು ಇನ್ನೊಬ್ಬನಿಗಿಂತ ಕಡಿಮೆ ಅಲ್ಲವೆಂಬ ನಂಬಿಕೆ ಇರುವಂತೆಯೇ ಇತರರೂ ತನಗಿಂತ ಕಡಮೆ ಇರಲಾರರು ಎಂಬ ನಂಬಿಕೆಯು ಅವನಿಗಿರುತ್ತದೆ. ಅವನು ಎಂದೂ ಇನ್ನೊಬ್ಬರ ನೆರಳಾಗಿರಲು ಬಯಸದೆ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಾಗಲಿ ಅಂತಹ ಸ್ವಾಭಿಮಾನಿಗಳಿಂದ ಮಾತ್ರವೇ ಮೌಲಿಕ ಕಾರ್ಯಗಳು ನಡೆಯುತ್ತವೆ.

ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ

Monday, March 13th, 2006

– ಸ್ವರೂಪ ಭೂಷಣ

ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ “ಕರ್ನಾಟಕ” ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ “ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ” ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು “ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ” ಎಂದು.

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧

Saturday, March 11th, 2006

– ಡಾ| ಎಂ. ಚಿದಾನಂದ ಮೂರ್ತಿ

ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನ್ನಿಸುತ್ತದೆ. ಅವರಿಗೆ ಭಾರತ ಮಾತ್ರ ಮುಖ್ಯ ; ರಾಷ್ಟ್ರಪ್ರೇಮವೊಂದೇ ದೇಶಪ್ರೇಮ. ಕರ್ನಾಟಕ ಪ್ರೇಮ ಎಂಬ ಮಾತು ಅವರಿಗೆ ಅರ್ಥಹೀನ. ಕನ್ನಡ ನಾಡು, ಕನ್ನಡ ನುಡಿಗಳನ್ನು ಕೊಂಡಾಡುವುದು ಅವರಿಗೆ ರಾಷ್ಟ್ರದ್ರೋಹವಾಗಿಯೂ ಕಂಡಿದೆ. ಭಾರತೀಯ ಸಂಸ್ಕೃತಿಯೊಂದು ಇರುವಂತೆ ಕರ್ನಾಟಕ ಸಂಸ್ಕೃತಿಯೆಂಬುದೊಂದು ಅವರ ಪಾಲಿಗೆ ಇಲ್ಲ. ಇದು ಸರಿಯೋ? ವಿಚಾರ ಮಾಡೋಣ.

ಶಾಕಾಹಾರಿಯೋ ಶಾಖಾಹಾರಿಯೋ?

Saturday, March 11th, 2006

– ಯು. ಬಿ. ಪವನಜ

೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.

ಕನ್ನಡ ಪತ್ರಿಕೆಯಿಂದ ಇಂಗ್ಲೀಷಿ‌ನಲ್ಲಿ ಪತ್ರ

Wednesday, March 1st, 2006

ನಾನು ಉಷಾಕಿರಣ ಪತ್ರಿಕೆಗೆ ಒಂದು ಲೇಖನ ಕೊಟ್ಟಿದ್ದೆ. ಅದರ ಶೀರ್ಷಿಕೆ “ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷಿ‌ನ ಪಿತ್ತ”. ಅದನ್ನು ವಿಶ್ವ ಕನ್ನಡದಲ್ಲೂ ಓದಬಹುದು. ಉಷಾಕಿರಣ ಪತ್ರಿಕೆಯವರು ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾದ್ಯಮ ಚರ್ಚೆ ಬಗ್ಗೆ ಹಲವರಿಂದ ಲೇಖನ ತರಿಸಿ ಪ್ರಕಟಿಸಿದ್ದರು. ಆ ಮಾಲೆಯಲ್ಲಿ ನನ್ನ ಲೇಖನವೂ ಪ್ರಕಟವಾಗಿತ್ತು. ಸರಿ. ಈಗೇನು ಅಂತೀರಾ? ಎಷ್ಟೋ ಸಮಯದ ನಂತರ ಪತ್ರಿಕೆಯಿಂದ ಸಂಭಾವನೆ ಬಂತು. ಅದರ ಜೊತೆ ಪತ್ರವೂ ಇತ್ತು. ಆದರೆ ಆ ಪತ್ರ ಇಂಗ್ಲೀಷ್ ಭಾಷೆಯಲ್ಲಿ ಇತ್ತು!