Archive for December, 2005

ಇಲಿ ಹಿಡಿಯುವುದು ಮತ್ತು ಕೊಲ್ಲುವುದು

Sunday, December 11th, 2005

ಮೊನ್ನೆ ನಮ್ಮ ಮನೆಯ ಒಳಗೊಂದು ಇಲಿ ಬಂದಿತ್ತು. ಬಂದ ಮೇಲೆ ಅದನ್ನು ಸುಮ್ಮನೆ ಬಿಡಲಿಕ್ಕಾಗುತ್ತದೆಯೇ? ಸರಿ.

ಇಲಿಗಳನ್ನು ಕೊಲ್ಲುವುದು ಹೇಗೆ?

Sunday, December 11th, 2005

– ವಸುಧೇಂದ್ರ

ಪ್ರತಿಬಾರಿ ನಾನು ಇಂಗ್ಲೆಂಡಿನಿಂದ ವಾಪಸ್ಸಾಗುವಾಗ ಯಾರಾದರು ಕಳ್ಳರು ನನ್ನ ಮನೆ ದೋಚಿಕೊಂಡು ಹೋಗಿರುತ್ತಾರೇನೋ? ಎಂಬ ಅನುಮಾನದಲ್ಲಿಯೇ ನನ್ನ ಮನೆಯ ಕದವನ್ನು ತೆರೆಯುತ್ತೇನೆ. ಪುಣ್ಯಕ್ಕೆ ಇಲ್ಲಿಯವರೆಗೆ ಹಾಗಾಗಿಲ್ಲವಾದರೂ, ಈ ಬಾರಿ ಅನಿರೀಕ್ಷಿತವೊಂದು ಕಾದಿತ್ತು. ಕದ ತೆರೆದು ಒಳಗೆ ಹೆಜ್ಜೆ ಇಟ್ಟ ತಕ್ಷಣ ಮೂಗು ಮುಚ್ಚಿಕೊಳ್ಳುವಷ್ಟು ಕೆಟ್ಟ ವಾಸನೆ ಬಂತು. ಅಡಿಗೆ ಮನೆಗೆ ಕಾಲಿಟ್ಟೆನೋ ಇಲ್ಲವೋ, ದಬದಬನೆ ಹತ್ತಾರು ಸ್ಟೀಲ್ ಪಾತ್ರೆಗಳು ನೆಲಕ್ಕೆ ಬಿದ್ದು ನನ್ನ ಎದೆ ಬಡಿತವನ್ನು ನಿಲ್ಲಿಸಿಬಿಟ್ಟವು. ಬೆಳಕಿನಲ್ಲಿ ನಾನು ನಂಬದ ದೆವ್ವ-ಭೂತದ ವಿಚಾರಗಳೆಲ್ಲಾ ಮನಸ್ಸಿನಲ್ಲಿ ಮಿಂಚಿ ಮಾಯವಾಗುವದರೊಳಗೆ ದಪ್ಪನೆಯ ಇಲಿಯೊಂದು ಕಣ್ಣಿಗೆ ಬಿತ್ತು. ಇದೆಲ್ಲಿಂದ ಬಂತು? ಅಂತ ಸುತ್ತಲೂ ಕಣ್ಣಾಡಿಸಿದಾಗ ಇನ್ನೊಂದೆರಡು ಇಲಿಗಳು ಕಣ್ಣಿಗೆ ಬಿದ್ದವು. "ಒಟ್ಟಾರೆ ಮೂರು ಇಲಿ!" ಅಂತ ನಾನು ಉದ್ಗಾರ ಎತ್ತುವದರೊಳಗೆ ಕೋಣೆಯಲ್ಲಿ ಬಾಟಲಿಯೊಂದು ಬಿದ್ದ ಸದ್ದಾಯ್ತು. ಎರಡು ನುಣುಪಾದ ಬಾಲಗಳು ಅಟ್ಟದಿಂದ ನೇತು ಬಿದ್ದಿದ್ದು ಕಂಡು ಬಂದವು. ಮೈಯೆಲ್ಲೆಲ್ಲಾ ಮುಳ್ಳು ಎದ್ದಂತಾಗಿ ಅಲ್ಲಿ ನಿಲ್ಲಲಾಗದೆ ಪಡಸಾಲೆಗೆ ಬಂದು ಕುರ್ಚಿಯ ಮೇಲೆ ಕುಳಿತೆ. ಕಾಲುಗಳನ್ನು ನೆಲಕ್ಕೆ ತಾಕಿಸದೆ ಮೇಲಕ್ಕೆತ್ತಿಟ್ಟುಕೊಂಡೆ.

ಟಾಯ್ಲೆಟ್ ಪೇಪರ್‌ನಲ್ಲಿ ಸುದ್ದಿ ಮುದ್ರಣ!

Saturday, December 10th, 2005

ತೈವಾನ್‌ನ ಕಂಪೆನಿಯೊಂದು ಟಾಯ್ಲೆಟ್ ಪೇಪರ್‌ನಲ್ಲಿ ಇತ್ತೀಚೆಗಿನ ಸುದ್ದಿಗಳನ್ನು ಮುದ್ರಿಸುವ ಮುದ್ರಕವೊಂದನ್ನು ಆವಿಷ್ಕರಿಸಿರುವುದಾಗಿ ಸುದ್ದಿ ಬಂದಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಸ್ವಾರಸ್ಯಕರವಾಗಿದೆ. ಅದರ ಪ್ರಕಾರ ಅಂತರಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ನೀಡುವ RSS ವಿಧಾನದ ಮೂಲಕ, ಅಂದರೆ RSS feedಗಳ ಮೂಲಕ ಸುದ್ದಿಗಳನ್ನು ಟಾಯ್ಲೆಟ್ ಪೇಪರ್‌ನಲ್ಲಿ ಮುದ್ರಿಸಿ ಕೊಡುವ ಕೆಲಸವನ್ನು ಈ ಮುದ್ರಕ ಮಾಡುತ್ತದೆ. ಟಾಯ್ಲೆಟ್ ಪೇಪರ್‌ನ್ನು ಬಳಸುವ ಮೊದಲು ಇದು ಮುದ್ರಿಸುತ್ತದೆ, ನಂತರ ಅಲ್ಲ :). ಕಮೋಡ್‌ನಲ್ಲಿ ಕುಳಿತವರನ್ನು ಬಯೋಮೆಟ್ರಿಕ್ಸ್ ವಿಧಾನದ ಮೂಲಕ ಪತ್ತೆಹಚ್ಚಿ ಕುಳಿತವರ ಆಸಕ್ತಿ ಪ್ರಕಾರದ ಸುದ್ದಿಗಳನ್ನೇ ಇದು ಮುದ್ರಿಸಿ ಕೊಡುತ್ತದಂತೆ. ಈಗಿನ ದಿನಗಳಲ್ಲಿ ಮುಖ್ಯವಾಹಿನಿಯ ಸುದ್ದಿ ಪತ್ರಿಕೆಗಳಲ್ಲಿ ಬಹುಜನರಿಗೆ ನಂಬಿಕೆಯೇ ಹೊರಟು ಹೋಗಿದೆ. ಕೆಲವರಂತೂ ಈ ಪತ್ರಿಕೆಗಳನ್ನು ಚಿಂದಿ ಮಾಡಲೆಂದೇ ಜಾಲತಾಣ ನಿರ್ಮಾಣ ಮಾಡಿದ್ದಾರೆ. ಇದು ಒಂದು ತಾಣದ ಉದಾಹರಣೆಯಷ್ಟೆ. ಇಂತಹ ತಾಣಗಳು ಹಲವಾರಿವೆ. ಜನರು ಪತ್ರಿಕೆಗಳ ಬಗ್ಗೆ ಎಷ್ಟು ರೋಸಿಹೋಗಿದ್ದಾರೆ ಎಂಬುದಕ್ಕೆ ಈ ತಾಣಗಳು ಸಾಕ್ಷಿ.

ಮಾಟಗಾತಿ

Wednesday, December 7th, 2005

ಆನಂದ
[ನ್ನಡ ಸಾಹಿತ್ಯ ಪರಂಪರೆಯಲ್ಲಿ ಸಣ್ಣ ಕತೆಗೊಂದು ಮಹತ್ವ ತಂದಕೊಟ್ಟವರಲ್ಲಿ ಆನಂದ ಕೂಡ ಒಬ್ಬರು. ೧೯೩೦ರ ಸಂದರ್ಭದಲ್ಲೇ ಕಥಾಲಹರಿ ಹರಿಸಿದ್ದ ಆನಂದರ ನಿಜ ಹೆಸರು ಅಜ್ಜಂಪುರದ ಸೀತಾರಾಮ. `ನಾನು ಕೊಂದ ಹುಡುಗಿ’ ಅವರ ಜನಪ್ರಿಯತೆಗೆ ಸಾಕ್ಷಿಯಾದ ಕತೆ. `ಮಾಟಗಾತಿ’ ಮತ್ತೊಂದು ಅಂಥ ಹಾದಿಯಲ್ಲಿನ ಕತೆ. ಮಾಸ್ತಿ ಅವರು ಆನಂದರನ್ನು ಕುರಿತು “—-ದೂರದ ಗುರಿಯ ಮೇಲೆ ಕಣ್ಣಿಟ್ಟು ದೊಡ್ಡ ರೀತಿಯಲ್ಲಿ ಮುಂದೆ ನಡೆಯಿರಿ—" ಎಂದಿದ್ದರು. ಅಂತೇ ದೂರದ ಗುರಿಯನ್ನು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೈ ಆಡಿಸುತ್ತ ಸಮೀಪಿಸಿದರು. ಏಳು ಕಥಾ ಸಂಕಲನ, ಮೂರು ನಾಟಕಗಳು, ಏಳು ಅನುವಾದಿತ ಕೃತಿಗಳು ಹಾಗು ಇತರ ನಾಲ್ಕು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದ ಆನಂದರು ಮುಖ್ಯವಾಗಿ ಕತೆಗಾರರಾಗಿ ನಮ್ಮ ನೆನಪಲ್ಲಿ ಉಳಿದಿದ್ದಾರೆ. ಹಿರಿ ಕತೆಗಾರರ ಅತ್ಯುತ್ತಮ ಕತೆಗಳನ್ನು ಓದುಕರು ಪ್ರಕಟಿಸಿ ಎಂದು ಕೇಳಿದ್ದಾರೆ. ಆನಂದರ `ನಾನು ಕೊಂದ ಹುಡುಗಿ’ ಸಾಕಷ್ಟು ದೀರ್ಘವಾದ ಕತೆ ಆದ್ದರಿಂದ ಅದನ್ನು ಇಲ್ಲಿ ಪ್ರಕಟಿಸದೆ ಅಷ್ಟೇ ಮಹತ್ವದ `ಮಾಟಗಾತಿ’ ಕೊಡುತ್ತಿದ್ದೇವೆ. ಇದು ನಿಮಗೆ ಪ್ರಿಯವಾಗಬಹುದೆಂದು ಭಾವಿಸುತ್ತೇವೆ. -ಸಂಪಾದಕ]

ನಾಯಿಗೂ ಮೊಬೈಲ್ ಫೋನ್

Tuesday, December 6th, 2005

ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು. ಅದರ ಪ್ರಕಾರ ನಾಯಿಗಳಿಗೆಂದೇ ವಿಶೇಷ ಮೊಬೈಲ್ ಫೋನ್ ತಯಾರಿಸುತ್ತಿದ್ದಾರೆ. ಅದರ ಯಜಮಾನ ತನ್ನ ಫೋನಿನಿಂದ ಗುಪ್ತ ಸಂಕೇತ ಕಳುಹಿಸಿದಾಗ ಅದು ಚಾಲೂ ಆಗಿ ದ್ವಿಮುಖ ಸಂಭಾಷಣೆ ಪ್ರಾರಂಭಿಸುತ್ತದೆ. ಯಜಮಾನನ ಮಾತು ನಾಯಿಗೆ ಕೇಳುತ್ತದೆ. ನಾಯಿಯ ಮಾತು(?!) ಯಜಮಾನನಿಗೆ ತಲುಪುತ್ತದೆ. ನಾಯಿ ಕಳೆದುಹೋದಾಗ ಪತ್ತೆಹಚ್ಚಲು ಈ ಸಾಧನ ಸಹಾಯಕಾರಿ. ಫೋನು ತಯಾರಕರು ಇನ್ನೂ ಮುಂದುವರೆದು ಈ ಫೋನಿಗೆ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸುತ್ತಿದ್ದಾರೆ. ಅಂದರೆ ಉಪಗ್ರಹ ಮತ್ತು ಅಂತರಜಾಲ ಮೂಲಕ ನಾಯಿ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಬಾಂಬು ಹಡುಕುವ ನಾಯಿಗಳ ಕುತ್ತಿಗೆಗೆ ಇದನ್ನು ಜೋತು ಹಾಕಿ ನಾಯಿಯನ್ನು ಕಳುಹಿಸಿ ದೂರದಿಂದಲೇ ನಿಯಂತ್ರಿಸಬಹುದು. ನಿಮ್ಮ ನಾಯಿಗೆ ಅದನ್ನು ಕೊಳ್ಳಲು ಆಲೋಚಿಸುತ್ತಿದ್ದೀರಾ? ಸ್ವಲ್ಪ ತಾಳಿ. ಈ ಫೋನು ೨೦೦೬ನೆಯ ಇಸವಿಯಲ್ಲಿ ಮಾರುಕಟ್ಟೆಗೆ ಬರಲಿದೆ. ಅಲ್ಲಿ ತನಕ ಕಾಯಬೇಕು.

ನಿಮ್ಮಿ

Tuesday, December 6th, 2005

– ಡಾ. ಯು. ಬಿ. ಪವನಜ

ಆಕೆಯ ಹೆಸರು ನಿರ್ಮಲ. ಆದರೆ ಎಲ್ಲರೂ ಕರೆಯುವುದು ನಿಮ್ಮಿ ಎಂದು. ಮನೆ ಎಂದು ಹೇಳುಕೊಳ್ಳುವಂತಹ ಮನೆಯೇನೂ ಆಕೆಗೆ ಇಲ್ಲ. ಕೊಳೆಗೇರಿಯಲ್ಲೊಂದು ಚಿಕ್ಕ ಗುಡಿಸಲು. ಅಲ್ಲಿ ಅಮ್ಮನ ಜೊತೆ ಸಂಸಾರ. ಅಮ್ಮ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಿಮ್ಮಿ ಅಮ್ಮನ ಜೊತೆ ಕೆಲವೊಮ್ಮೆ ಆ ಮನೆಗೆಳಿಗೆ ಹೋಗುವುದೂ ಇದೆ. ಅಮ್ಮ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಬೀದಿಯ ಬದಿಯಲ್ಲಿರುವ ಕಸದ ತೊಟ್ಟಿ ಜಾಲಾಡುತ್ತಿರುತ್ತಾಳೆ. ಪ್ಲಾಸ್ಟಿಕ್, ಡಬ್ಬ, ಕಾಗದ, ಇತ್ಯಾದಿಗಳೆಲ್ಲ ಸಂಗ್ರಹಿಸಿ ಪಕ್ಕದ ಬೀದಿಯ ಖಾನ್ ಸಾಹೇಬನಿಗೆ ಕೊಟ್ಟರೆ ಕೈಗೆ ಸ್ವಲ್ಪ ಚಿಲ್ಲರೆ ಕಾಸು ಬೀಳುವುದು. ಒಂದು ಹೊತ್ತಿನ ಹೊಟ್ಟೆಯ ಸಮಸ್ಯೆ ಪರಿಹಾರವಾದಂತೆ. ಕಸದ ತೊಟ್ಟಿಯಲ್ಲೇ ಅಕೆಗೆ ಕೆಲವೊಮ್ಮೆ ಉಪಯುಕ್ತ ಸಾಮಾನು ಸಿಕಿದ್ದೂ ಇದೆ. ಉದಾಹರಣೆಗೆ ಕಳೆದ ತಿಂಗಳು ಸಿಕ್ಕಿದ ಪೆನ್ನು. ಶಾಲೆಗೆ ಸರಿಯಾಗಿ ಹೋಗದಿದ್ದರೂ ಅಲ್ಪ ಸ್ವಲ್ಪ ಬರೆಯಲು ಆಕೆಗೆ ಗೊತ್ತಿದೆ. ಆ ಪೆನ್ನು ಈಗಲೂ ನಿಮ್ಮಿಯ ಬಳಿ ಇದೆ.

ವಿಪ್ರೊ ಕಂಪೆನಿಯಲ್ಲಿ ರಾಜ್ಯೋತ್ಸವ

Sunday, December 4th, 2005

ವಿಪ್ರೊ ಕಂಪೆನಿಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ನವಂಬರ್ ೩೦, ೨೦೦೫ ರಂದು ಎಲೆಕ್ಟ್ರೋನಿಕ್ ಸಿಟಿಯಲ್ಲಿ ಇರುವ ವಿಪ್ರೊ ಕಚೇರಿಯಲ್ಲಿ “ವಿಸ್ಮಯ” ಎಂಬ “ನಾಡು ನುಡಿ ಕಲೆ ಭಾಷೆ ಸಾಹಿತ್ಯ ಸಂಸ್ಕೃತಿ ಸಂಗೀತಗಳ ವೈವಿಧ್ಯಮಯ ರಸಸಂಜೆ” ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು ೨೫೦೦ಕ್ಕು ಹೆಚ್ಚು ಕನ್ನಡಾಭಿಮಾನಿಗಳು ಮತ್ತು ಕನ್ನಡೇತರರು ಈ ಕಾರ್ಯಕ್ರಮದ ಆನಂದವನ್ನು ಸವಿದರು.

ಎನ್. ಆರ್. ನಾರಾಯಣಮೂರ್ತಿ ಸಂದರ್ಶನ

Sunday, December 4th, 2005

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೇನೂ ಇಲ್ಲ

'ಸಾಫ್ಟ್‌ವೇರ್ ಸಂತ' ಎನ್. ಆರ್. ನಾರಾಯಣಮೂರ್ತಿ

Sunday, December 4th, 2005

– ಡಾ| ಆರ್. ಪೂರ್ಣಿಮಾ

ಇನ್‌ಪೋಸಿಸ್, ವಿಶ್ವ ಉದ್ಯಮ ಕ್ಷೇತ್ರಕ್ಕೆ ಹೊಸದಿಕ್ಕು ತೋರಿಸಿದ ಭಾರತದ ಹೆಮ್ಮೆಯ ಸಂಸ್ಥೆ. ಕನ್ನಡದ ನೆಲದಲ್ಲಿ ಅರಳಿ, ಪ್ರಪಂಚದ ಅಂಗಣದಲ್ಲಿ ದೇಶದ ವಿಜಯ ಪತಾಕೆ ಹಾರಿಸಿದ, ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸುತ್ತ ಮುನ್ನಡೆಯುತ್ತಿರುವ ಪ್ರತಿಭಾವಂತರ ಕೂಟ. ಇದರ ಜನಕ ದೇಶದ ಶ್ರೀಮಂತ ವ್ಯಕ್ತಿ, ನ್ಯಾಯಬದ್ಧ ಮಾರ್ಗದಲ್ಲಿ ಹಣದ ರಾಶಿಯನ್ನೇ ಕೂಡಿಹಾಕಿದ ಸಾಫ್ಟ್‌ವೇರ್ ಸಂತ ಎನ್. ಆರ್. ನಾರಾಯಣಮೂರ್ತಿ. ಶಾಲಾ ಮಾಸ್ತರರ ಮಗನೊಬ್ಬ ಇಂದು ಪ್ರಪಂಚದ ಗಮನಾರ್ಹ ಉದ್ಯಮಿಯಾಗಿ ಬೆಳೆದು ನಿಂತ ಯಶೋಗಾಥೆ ಇದು.

ಗುರು ಸೇವಾ ಸಮಿತಿ ಬಹ್ರೈನ್ ದ್ವಿತೀಯ ವಾರ್ಷಿಕೋತ್ಸವ

Sunday, December 4th, 2005

ಬಹ್ರೈನ್: “ಗುರು ಸೇವಾ ಸಮಿತಿ”ಯ ಎರಡನೆಯ ವಾರ್ಷಿಕೋತ್ಸವು “ರಮದ ಪ್ಯಾಲೆಸ್” ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಬಹ್ರೈನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉಧ್ಘಾಟಿಸಿ, ಸಮಿತಿಯು ಹೊರ ತಂದ ಪ್ರಥಮ ಸ್ಮರಣ ಸಂಚಿಕೆ “ತುಡಾರ್ ೨೦೦೫” ಇದರ ಬಿಡುಗಡೆಗೊಳಿಸಿದರು. ಅವರು ತಮ್ಮ ಭಾಷಣದಲ್ಲಿ ಸಮಿತಿಯು ಕಳೆದೆರಡು ವರುಷಗಳಲ್ಲಿ ನಡೆಸಿದ ಸಾಧನೆ ಮತ್ತು ಚಟುವಟಿಕೆಗಳನ್ನು ಕೊಂಡಾಡಿದರು. ವಿಶೇಷ ಅತಿಥಿಗಳಾಗಿ ಆಹ್ವಾನಿತರಾದ ಖ್ಯಾತ ನಾಟಕಕಾರ, ನಿರ್ದೇಶಕ, ಶ್ರೀ ಸದಾನಂದ ಸುವರ್ಣ ಆವರು “ಶ್ರೀ ನಾರಾಯಣ ಗುರು” ಸಾಕ್ಷ್ಯ ಚಿತ್ರದ ವಿಡಿಯೊ ಕ್ಯಾಸೆಟ್ ಬಿಡುಗಡೆ ಮಾಡಿದರು. ಶ್ರೀ ಸದಾನಂದ ಸುವರ್ಣ ಅವರನ್ನು ಭಾರತದ ರಾಯಭಾರಿ ಶ್ರೀ ಶೆಟ್ಟಿಯವರು ಹಾಗು ಇನ್ನೋರ್ವ ಅತಿಥಿ ಕರ್ನಾಟಕದ ಖ್ಯಾತ ಸಾಂಸ್ಕೃತಿಕ ಮತ್ತು ಸಂಗೀತ ಕಲಾವಿದ ಶ್ರೀ ತೋನ್ಸೆ ಫುಶ್ಕಲ್ ಕುಮಾರ್ ಅವರನ್ನು ಬೆಹರಿನ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿಯ ಮುಖ್ಯಸ್ಥರಾದ ಶ್ರೀ ಎನ್. ಓ. ರಾಜನ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿಗಳು ಸಮಿತಿಯು ನಡೆಸುತ್ತಿರುವ ಕಾರ್ಯವನ್ನು ಪ್ರಶಂಶಿಸಿದರು. ಶ್ರೀ ಸುವರ್ಣ ಹಾಗು ಶ್ರೀ ಪುಶ್ಕಲ್ ಅವರನ್ನು ಶ್ರೀಮತಿ ಸುನೀತಾ ಜಯಕುಮಾರ್ ಮತ್ತು ಶ್ರೀಮತಿ ಯಶೋದ ಎಸ್. ಪೂಜಾರಿ ಅನುಕ್ರಮವಾಗಿ ಸಭೆಗೆ ಪರಿಚಯಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಿಶ್ವನಾಥ ಅಮಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಸ್ವಾಗತ ಭಾಷಣ ಮಾಡಿ, ಸಮಿತಿಯ ಏಳಿಗೆಗಾಗಿ ದುಡಿದ ಪ್ರತಿಯೊಬ್ಬ ಸದಸ್ಯರಿಗೂ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾರಂಭದ ಯಶಸ್ಸಿಗೆ ಪ್ರಾಯೋಜಕರಾಗಿ, ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಸಮಿತಿಯ ಪರವಾಗಿ ವಂದನೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಶ್ರೀ ಕೃಷ್ಣ ಸಿ. ಸುವರ್ಣ ಮುಂಬಯಿ, ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಎಸ್. ಸಾಲ್ಯನ್ ಕಲ್ಲಡ್ಕ ಉಪಸ್ಥಿತರಿದ್ದರು.