ತಂತ್ರಜ್ಞಾನ: ನಾಳೆಗಳ ನಿರ್ಮಾಣ

Sunday, November 20th, 2016
ತಂತ್ರಜ್ಞಾನ: ನಾಳೆಗಳ ನಿರ್ಮಾಣ

ಆಳ್ವಾಸ್ ನುಡಿಸಿರಿ – ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ ಟಿ. ಜಿ. ಶ್ರೀನಿಧಿ ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ. ೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್‌ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ […]

ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

Sunday, November 15th, 2015
ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

– ಡಾ. ಯು. ಬಿ. ಪವನಜ   ನವಂಬರ್ ಬಂದೊಡನೆ ಎಲ್ಲರಿಗೂ ನೆನಪಾಗುವುದು ಕನ್ನಡ. ದುರಾದೃಷ್ಟಕ್ಕೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಮತ್ತೊಮ್ಮೆ ನವಂಬರ್ ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಲ್ಲಿದೆ ಎಂದು ಮತ್ತೆ ಬರೆಯುವ ಅಗತ್ಯವಿಲ್ಲ. ಏನೇನು ಆಗಬೇಕಾಗಿದೆ? ಏನೆಲ್ಲ ಮಾಡುತ್ತೇವೆ ಎಂದವರೆಲ್ಲ ಏನು ಮಾಡಿದ್ದಾರೆ ಎಂದು ನೋಡೋಣ.   ಕನ್ನಡದ ಬಹುತೇಕ ಕೆಲಸಗಳು ಸರಕಾದ ಮೂಲಕವೇ ಆಗಬೇಕಾಗಿವೆ. ಸರಕಾರವು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸಿ ಅದರ ಸಲಹೆಯಂತೆ ಕೆಲವು ಕೆಲಸಗಳನ್ನು ಮಾಡಿದೆ. ಅದರ ಸಲಹೆಗಳಲ್ಲಿ […]

ಮಹಾಭಾರತ ಮತ್ತು ತಂತ್ರಾಂಶ ತಯಾರಿ

Saturday, September 5th, 2015

– ಡಾ. ಯು. ಬಿ. ಪವನಜ ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು. ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ ಸುಧನ್ವನಿಗೂ ಅರ್ಜುನನಿಗೂ ನಡೆಯುವ ಯುದ್ಧ. ಮಹಾಭಾರತದ ಯುದ್ಧದ ನಂತರ ನಡೆಯುವ ಅಶ್ವಮೇಧಯಾಗದ ಪ್ರಸಂಗದಲ್ಲಿ ಈ ಕಥೆ ಬರುತ್ತದೆ. ಸುಧನ್ವ ಮತ್ತು ಅರ್ಜುನ ಇಬ್ಬರೂ ಕೃಷ್ಣಭಕ್ತರು. ಇಬ್ಬರೂ ಕೃಷ್ಣನ ಮೇಲೆ ಆಣೆ ಇಟ್ಟು ಒಂದೊಂದು ಪ್ರತಿಜ್ಞೆ ಮಾಡುತ್ತಾರೆ. ಅರ್ಜುನ ಹೇಳುತ್ತಾನೆ – “ಇನ್ನು […]

ಕನ್ನಡದ ಮುಕ್ತ ಜ್ಞಾನಕೋಶಕ್ಕೆ ಹತ್ತು ತುಂಬಿತು

Friday, November 15th, 2013

ಡಾ| ಯು.ಬಿ. ಪವನಜ   ಯುಗಯುಗಾದಿ ಕಳೆದರೂ ನವಂಬರ್ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿಗಳ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವಂಬರ್ ತಿಂಗಳಿಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆ ಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ. ಇರಲಿ. ಈಗ ಈ ವಿಷಯದ ಕಡೆಗೆ ಸ್ವಲ್ಪ ಕಣ್ಣು ಹಾಯಿಸೋಣ.   “ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು, ಕನ್ನಡ ಉಳಿಸಬೇಕಾದರೆ?” ಎಂಬ ಮಾತು ಪ್ರತಿ ನವಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ […]

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ

Thursday, November 14th, 2013

ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮ ವಿವರ ೯:೩೦-೧೦:೦೦ ನೋಂದಣಿ ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ ಪ್ರಸ್ತಾವನೆ – ಡಾ. ಯು. ಬಿ. ಪವನಜ ಮುಖ್ಯ ಅತಿಥಿಗಳ ಮಾತು ಡಾ. ಯು. ಆರ್. ಅನಂತಮೂರ್ತಿ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ ಹತ್ತು […]

ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ

Tuesday, February 21st, 2012

ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿರುವುದುರಿಂದ ಅಲ್ಲಿಂದಲೇ ಕನ್ನಡ ಭಾಷೆಯ ಹೊಸಯುಗದ ಪ್ರಾರಂಭ ಆಗಬೇಕಾಗಿದೆ. ಫೆಬ್ರವರಿ ೨೧ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಯ ಜೊತೆ ತಂತ್ರಜ್ಞಾನದಲ್ಲೂ ಕನ್ನಡ ಹಾಸುಹೊಕ್ಕಾಗಿ ಬೆರೆಯತಕ್ಕದ್ದು. ಈ ತಂತ್ರಜ್ಞಾನದಲ್ಲಿ ಕನ್ನಡವೆಲ್ಲಿದೆ ಸ್ವಲ್ಪ ಗಮನಿಸೋಣ.   […]

ನಮ್ಮ ಭಾಷೆಗೆ e-ಭಾಷ್ಯ

Tuesday, July 19th, 2011

– ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ ಕೆಲಸದಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಭಾಷೆ ಎಲ್ಲಿದೆ? ಸ್ವಲ್ಪ ಪರಿಶೀಲಿಸೋಣ. “ರಾಮನು ರಾವಣನನ್ನು ಕೊಂದನು” “ರಮೇಶನು ಒಂದು ಹೊಸ ಕಾರನ್ನು ಕೊಂಡುಕೊಂಡನು” “ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ” ಹೀಗೆ ಹಲವಾರು ವಾಕ್ಯಗಳನ್ನು ನಾವು ಪ್ರತಿನಿತ್ಯ ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. […]

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

Friday, April 29th, 2011

ಡಾ| ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಕೆ.ಪಿ. ರಾವ್ […]