Press "Enter" to skip to content

RANGABHOOMI gaagi SATYAAGRAHA

ಪ್ರಿಯರೆ
ಜನವರಿ 5 2007 ಶುಕ್ರವಾರ ಬೆಳಿಗ್ಗೆ ಹತ್ತರಿಂದ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಕನ್ನಡದ ರಂಗಕರ್ಮಿಗಳು ಶ್ರೀ ಪ್ರಸನ್ನ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. ರಾಷ್ಟ್ರಕವಿ G.S ಶಿವರುದ್ರಪ್ಪನವರು ರಂಗಕರ್ಮಿಗಳನ್ನು ಆಶೀರ್ವದಿಸಿ ಸತ್ಯಾಗ್ರಹಕ್ಕೆ ಚಾಲನೆ ನೀಡುವವರಿದ್ದಾರೆ
ಕಾರಣ:
ರಂಗಭೂಮಿ ಹಾಗೂ ಮಾತೃಭಾಷೆಗಳದ್ದು ಜನುಮದ ಜೋಡಿ. ರಂಗಭೂಮಿ, ಮಾತೃಭಾಷೆ ಹಾಗೂ  ಪ್ರಾಥಮಿಕ ಶಿಕ್ಷಣ ಒಂದಕ್ಕೊಂದು ಪೂರಕವಾಗಿ ನಿಂತಾಗ ಮಾತ್ರ ನಮ್ಮ ಸಮಾಜವು ಆರೋಗ್ಯಕರವಾಗಿ ಬೆಳೆಯಬಲ್ಲದು. ಶಿಕ್ಷಣ ಕ್ಷೇತ್ರದ ಬೆಂಬಲವಿಲ್ಲದೆ ಮಾತೃಭಾಷಾ ರಂಗ ಚಳುವಳಿಗಳು ಬದುಕಲಾರವು. ರಂಗಕರ್ಮಿಗಳು ಟೆಲಿವಿಷನ್ ಹಾಗು ಸಿನಿಮಾದತ್ತ ಗುಳೆ ಹೋಗುತ್ತಿರುವುದನ್ನು ತಡೆಯಬೇಕಾದರೆ ಅವರಿಗೆ ರಂಗಭೂಮಿಯಲ್ಲೇ ಉದ್ಯೋಗ ದೊರಕಬೇಕು. ಅಂತಹ ಉದ್ಯೋಗ ಲಭ್ಯವಿರುವುದು ಶಿಕ್ಷಣ ರಂಗದಲ್ಲಿ ಮಾತ್ರ. ಇತ್ತಕಡೆ ಶಿಕ್ಷಣ ರಂಗದಲ್ಲಿ ರಂಗಭೂಮಿಯ ಪಾಲ್ಗೊಳ್ಳುವಿಕೆ ಇಲ್ಲದೆ ಶಾಲೆಯೆಂಬುದು ಮಗುವಿನ ಮನಸ್ಸನ್ನು ಅರಳಿಸಲಾರದು. ಯೋಚಿಸಿ! ನಿಮ್ಮ ಮಗುವು
1 ಮೂರೂ ಹೊತ್ತು ಟೆಲಿವಿಷನ್ ಪರದೆಯನ್ನು ನೋಡುತ್ತಾ ಕುಳಿತಿರಬೇಕೆ?
2. ಚಾಕು ಚೂರಿ ಸಂಸ್ಕೃತಿ , ಅಶ್ಲೀಲ ನೃತ್ಯಗಳು ಹಾಗು ಪೋಲಿ ಹಾಡುಗಳನ್ನು ಕಲಿಯಬೇಕೆ?
3.ನಿಮ್ಮ ಮಗು ತನ್ನ ಮಾತೃಭಾಷೆಯನ್ನು ಮರೆಯಬೇಕೆ
ಬೇಡ ಎನ್ನುವುದಾದರೆ ನಮ್ಮೊಡನೆ ಬನ್ನಿ, ನಮ್ಮ ಸಂಸ್ಕೃತಿಯನ್ನು ಉಳಿಸಬಲ್ಲ ಎರಡು ಸಣ್ಣ ಬೇಡಿಕೆಗಳ ಪರವಾಗಿ ಧ್ವನಿ ಎತ್ತಿ
ಬೇಡಿಕೆಗಳು
1. ಭಾರತದ ಎಲ್ಲ ರಾಷ್ಟ್ರಭಾಷೆಗಳ ರಂಗಭೂಮಿಯನ್ನು ರಾಷ್ಟ್ರೀಯ ರಂಗಭೂಮಿ ಎಂದು ಮಾನ್ಯತೆ ಮಾಡಿ
2.ಭಾರತದ ಎಲ್ಲ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣದಲ್ಲಿ ರಂಗಭೂಮಿ ಕಾರ್ಯಕ್ರಮ ಜಾರಿಗೆ ತನ್ನಿ
 

Be First to Comment

Leave a Reply

Your email address will not be published. Required fields are marked *