ಭವಿಷ್ಯದ ಸಾರಿಗೆ | Vishva Kannada http://vishvakannada.com Thu, 26 Dec 2024 06:51:00 +0000 en-US hourly 1 https://wordpress.org/?v=7.0.7 ಜಲಜನಕ ಚಾಲಿತ ವಾಹನಗಳು http://vishvakannada.com/article/hydrogen-battery-vehicles/ http://vishvakannada.com/article/hydrogen-battery-vehicles/#respond Tue, 10 Dec 2024 15:02:15 +0000 https://gadgetloka.net/?p=879 ವಾಹನಗಳಿಗೆ ಇಂಧನ ಒದಗಿಸುವುದು ದೊಡ್ಡ ಸಮಸ್ಯೆ. ಪೆಟ್ರೋಲ್ ಮತ್ತು ಡೀಸಿಲ್ ಇಂಜಿನ್‌ಗಳ ತೊಂದರೆ ಏನು ಎಂದು ಎಲ್ಲರಿಗೂ ಗೊತ್ತು. ಅವು ವಾತಾವರಣವನ್ನು ಮಲಿನಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸಾಲದುದಕ್ಕೆ ಇವುಗಳ ನಿಕ್ಷೇಪ ಇನ್ನು ಕೆಲವೇ…

The post ಜಲಜನಕ ಚಾಲಿತ ವಾಹನಗಳು first appeared on Vishva Kannada.

]]>
ವಾಹನಗಳಿಗೆ ಇಂಧನ ಒದಗಿಸುವುದು ದೊಡ್ಡ ಸಮಸ್ಯೆ. ಪೆಟ್ರೋಲ್ ಮತ್ತು ಡೀಸಿಲ್ ಇಂಜಿನ್‌ಗಳ ತೊಂದರೆ ಏನು ಎಂದು ಎಲ್ಲರಿಗೂ ಗೊತ್ತು. ಅವು ವಾತಾವರಣವನ್ನು ಮಲಿನಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸಾಲದುದಕ್ಕೆ ಇವುಗಳ ನಿಕ್ಷೇಪ ಇನ್ನು ಕೆಲವೇ ದಶಕಗಳಲ್ಲಿ ಬಹುತೇಕ ಖಾಲಿಯಾಗುತ್ತದೆ. ಆದುದರಿಂದ ಇವುಗಳಿಗೆ ಬದಲಿ ಇಂಧನವನ್ನು ಜಗತ್ತಿನ ಎಲ್ಲ ಕಡೆ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಒಂದು ಪ್ರಮುಖ ಪರಿಹಾರ ಎಂದರೆ ವಿದ್ಯುತ್ ಚಾಲಿತ ವಾಹನಗಳು. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳ ಪ್ರಮುಖ ಸಮಸ್ಯೆ ಎಂದರೆ ಅವುಗಳಲ್ಲಿ ಬಳಸುವ ಬ್ಯಾಟರಿಗಳು. ಅವುಗಳ ಸಂಗ್ರಹ ಶಕ್ತಿಗೆ ಮಿತಿಯಿದೆ. ಅಬ್ಬಬ್ಬ ಎಂದರೆ ಸುಮಾರು 400-500 ಕಿ.ಮೀ.ಯಷ್ಟು ದೂರ ಮಾತ್ರ ಒಂದು ಸಲಕ್ಕೆ ಕ್ರಮಿಸಬಹುದು. ಇಡಿಯ ದೇಶದಲ್ಲಿ ಅಲ್ಲಲ್ಲಿ ಬ್ಯಾಟರಿ ಚಾರ್ಜಿಂಗ್ ಸ್ಟೇಶನ್‌ಗಳು ಮತ್ತು ಎಲ್ಲಿ ಬೇಕೆಂದರಲ್ಲಿ ಬದಲಿಸಬಹುದಾದ ಬ್ಯಾಟರಿಗಳು ಬಂದಾಗ ಮಾತ್ರ ವಿದ್ಯುತ್ ಚಾಲಿತ ವಾಹನಗಳು ಉಪಯೋಗಿ ಆಗಬಲ್ಲವು. ಇನ್ನೂ ಒಂದು ನಮೂನೆಯ ವಾಹನಗಳಿವೆ. ಅವು ಜಲಜನಕದಿಂದ ಚಲಿಸುವ ಇಂಜಿನ್ ಅನ್ನು ಒಳಗೊಂಡಿರುತ್ತವೆ. ಈ ಸಂಚಿಕೆಯಲ್ಲಿ ಅವುಗಳ ಬಗ್ಗೆ ತಿಳಿಯೋಣ.

ಜಲಜನಕ ಚಾಲಿತ ವಾಹನಗಳನ್ನು ಭವಿಷ್ಯದ ವಾಹನಗಳು ಎನ್ನಬಹುದು. ಇವುಗಳ ಹೆಸರೇ ಹೇಳುವಂತೆ ಈ ವಾಹನಗಳಲ್ಲಿರುವ ಇಂಜಿನ್ ಜಲಜನಕದಿಂದ ಕೆಲಸ ಮಾಡುತ್ತದೆ. ಅದು ಹೇಗೆ? ಒಂದೇ ವಾಕ್ಯದಲ್ಲಿ ಹೇಳುವುದಾದರೆ ಜಲಜನಕವು ಆಮ್ಲಜನಕದ ಜೊತೆ ಸೇರಿದರೆ ನೀರು ಮತ್ತು ಶಕ್ತಿ ದೊರೆಯುತ್ತದೆ. ಈ ಶಕ್ತಿಯನ್ನು ವಿದ್ಯುತ್ ರೂಪದಲ್ಲಿ ಪಡೆದು ಇಂಜಿನ್ ಅನ್ನು ನಡೆಸಿ ಆ ಮೂಲಕ ವಾಹನ ಚಲಾಯಿಸಿದರೆ ಅದು ಜಲಜನಕ ಚಾಲಿತ ವಾಹನ ಆಗುತ್ತದೆ. ಹೀಗೆ ಸರಳವಾಗಿ ಹೇಳಬಹುದಾದರೂ ಇದು ನಿಜವಾಗಿ ಇಷ್ಟು ಸರಳವಾಗಿ ಇಲ್ಲ. ಮೊತ್ತ ಮೊದಲನೆಯದಾಗಿ ಈ ಜಲಜನಕ ಇಂಜಿನ್‌ನ ಒಳಗೆ ಸ್ವಲ್ಪ ತಿರುಗಾಡಿ ನೋಡೋಣ.

ಜಲಜನಕ ಇಂಜಿನ್‌ಗೆ ಜಲಜನಕ ಇಂಧನ ಕೋಶ (hydrogen fuel cell) ಎಂಬ ಹೆಸರಿದೆ. ಇದರಲ್ಲಿ ಜಲಜನಕ ಮತ್ತು ಆಮ್ಲಜನಕಗಳನ್ನು ಸಂಯೋಜಿಸಿ ಶಕ್ತಿಯನ್ನು ಪಡೆಯಲಾಗುತ್ತದೆ. ಈ ಇಂಧನ ಕೋಶದಲ್ಲಿ ಹಲವು ಕೊಠಡಿಗಳಿವೆ (ಚಿತ್ರ ನೋಡಿ). ಎಡಗಡೆಯಿಂದ ಮೊದಲ ಕೊಠಡಿಯಲ್ಲಿ ಜಲಜನಕ ಅನಿಲವನ್ನು ಕಳುಹಿಸಲಾಗುತ್ತದೆ. ಅದು ಅಲ್ಲಿ ಒಂದು ಕ್ಯಾಟಲಿಸ್ಟ್ ಅಂದರೆ ರಾಸಾಯನಿಕ ಕ್ರಿಯೆಯ ವೇಗವರ್ಧಕದ ಜೊತೆ ಸಂಪರ್ಕಕ್ಕೆ ಬರುತ್ತದೆ. ನಂತರ ಅದು ಆನೋಡ್ ಜೊತೆ ಸಂಪರ್ಕಕ್ಕೆ ಬರುತ್ತದೆ. ಇವೆರಡು ಸೇರಿ ಜಲಜನಕ ಪರಮಾಣುವಿನ ಏಕೈಕ ಇಲೆಕ್ಟ್ರಾನ್ ಅನ್ನು ಬಿಡುಗಡೆ ಮಾಡುತ್ತವೆ. ತನ್ಮೂಲಕ ಧನ ವಿದ್ಯುತ್ ಆವೇಶವನ್ನು ಹೊಂದಿರುವ ಜಲಜನಕದ ಪರಮಾಣು ಅರ್ಥಾತ್ ಪ್ರೊಟೋನ್ ತಯಾರಾಗುತ್ತದೆ. ಬಲಬದಿಯ ಕೊಠಡಿಯ ಮೂಲಕ ಆಮ್ಲಜನಕದ ಅಣುಗಳು ಪ್ರವೇಶಿಸುತ್ತವೆ. ಜಲಜನಕದ ಇಲೆಕ್ಟ್ರಾನ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದೆನಲ್ಲ? ಅದು ಅನೋಡ್‌ನಿಂದ ದೂರ ತಳ್ಳಲ್ಪಡುತ್ತದೆ. ಆದುದರಿಂದ ಪಕ್ಕದಲ್ಲೇ ಆಮ್ಲಜನಕವಿದ್ದರೂ ಅದು ಅಲ್ಲಿಗೆ ನೇರವಾಗಿ ಹೋಗುವಂತಿಲ್ಲ. ಮತ್ತೆ ಹೇಗೆ ಹೋಗುತ್ತದೆ? ಅದು ಆನೋಡ್‌ಗೆ ಜೋಡಿಸಲ್ಪ  ವಿದ್ಯುತ್ ತಂತಿಯ ಮೂಲಕ ಕ್ಯಾಥೋಡ್‌ಗೆ ಪ್ರವಹಿಸುತ್ತದೆ. ಇದೇ ಈ ಕೋಶದಿಂದ ತಯಾರಾಗುವ ವಿದ್ಯುತ್ ಪ್ರವಾಹ. ಈ ಪ್ರವಾಹವು ವಿದ್ಯುತ್ ಮೋಟರನ್ನು ಚಲಾಯಿಸುತ್ತದೆ. ಅದು ವಾಹನದ ಚಕ್ರಗಳಿಗೆ ಗೇರ್ ಮೂಲಕ ಜೋಡಿಸಲ್ಪಟ್ಟಿರುತ್ತದೆ. ಅಂದರೆ ವಾಹನ ಚಲಿಸುತ್ತದೆ. ಈ ಕೋಶವು ಕೆಲಸ ಮಾಡುವಾಗ ಶಕ್ತಿಯ ಜೊತೆ ನೀರು ಕೂಡ ಉತ್ಪತ್ತಿಯಾಗುತ್ತದೆ. ಆದರೆ ಅಲ್ಲಿಯ ಉಷ್ಣದಿಂದಾಗಿ ಅದು ಆವಿಯ ರೂಪದಲ್ಲಿರುತ್ತದೆ. ಪೆಟ್ರೋಲ್ ಅಥವಾ ಡೀಸಿಲ್ ಚಾಲಿತ ಇಂಜಿನ್‌ನಿಂದ ಹೊಗೆ ಹೊರಗೆ ಬರುತ್ತದೆ. ಆದರೆ ಜಲಜನಕ ಇಂಧನ ಚಾಲಿತ ಇಂಜಿನ್‌ನಿಂದ ನೀರು ಆವಿಯ ರೂಪದಲ್ಲಿ ಹೊರ ಬರುತ್ತದೆ. ಈ ಮೂಲಕ ಇದು ಪರಿಸರಕ್ಕೆ ಸ್ವಲ್ಪವೂ ಹಾನಿಯನ್ನು ಮಾಡದ ಇಂಜಿನ್ ಆಗಿರುತ್ತದೆ.

ಜಲಜನಕ ಇಂಧನ ಚಾಲಿತ ವಾಹನಗಳು ಇನ್ನೂ ಪೂರ್ಣಪ್ರಮಾಣದಲ್ಲಿ ತಯಾರಾಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಜಲಜನಕ ಅನಿಲದ ಸಮಸ್ಯೆ. ಇದು ಬೇಗನೆ ಸ್ಫೋಟಗೊಳ್ಳುತ್ತದೆ. ಇದನ್ನು ಸಂಗ್ರಹಿಸಿಡುವುದು ತುಂಬ ಎಚ್ಚರಿಕೆಯಿಂದ ಮಾಡಬೇಕಾದ ಕೆಲಸ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಸ್ಫೋಟಗೊಳ್ಳಬಹುದು. ಜಲಜನಕವನ್ನು ತಯಾರಿಸಲು ಹಲವು ವಿಧಾನಗಳಿವೆ. ಅದರಲ್ಲಿ ತುಂಬ ಸರಳವಾದುದು ನೀರನ್ನು ವಿದ್ಯುದ್ವಿಭಜನೆ (electrolysis) ಮಾಡುವುದು. ನೀರಿನಲ್ಲಿ ಜಲಜನಕದ ಒಂದು ಮತ್ತು ಆಮ್ಲಜನಕದ ಎರಡು ಪರಮಾಣುಗಳಿವೆ. ನೀರನ್ನು ವಿದ್ಯುತ್ ಹಾಯಿಸಿ ವಿಭಜನೆ ಮಾಡಿದರೆ ನಮಗೆ ಜಲಜನಕ ಮತ್ತು ಆಮ್ಲಜನಕ ದೊರೆಯುತ್ತದೆ. ಆದರೆ ಈ ವಿಧಾನವು ಅಷ್ಟು ಉತ್ತಮವಾದುದಲ್ಲ. ಈ ರೀತಿಯಲ್ಲಿ ಜಲಜನಕ ತಯಾರಿಸಲು ಹಾಕುವ ಶ್ರಮಕ್ಕೂ ತಯಾರಾಗುವ ಜಲಜನಕಕ್ಕೆ ಹೋಲಿಕೆ ಮಾಡಿದಲ್ಲಿ ಇದು ಅರ್ಥವಾಗುತ್ತದೆ. ಇನ್ನೊಂದು ವಿಧಾನದಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ದೊರೆಯುವ ನ್ಯಾಚುರಲ್ ಗ್ಯಾಸ್ (ಇದನ್ನು ಅಡುಗೆಗೆ, ವಾಹನಗಳಿಗೆ ಬಳಸಲಾಗುತ್ತದೆ) ಜೊತೆ ಜಲಜನಕವೂ ದೊರೆಯುತ್ತದೆ. ಅದನ್ನು ಪ್ರತ್ಯೇಕಿಸಿದರೆ ಆಯಿತು. ಆದರೆ ನಾವು ಪರಿಸರಕ್ಕೆ ಹಾನಿಕರಲವಲ್ಲದ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ಈ ವಿಧಾನ ಸರಿಹೊಂದುವುದಿಲ್ಲ. ಅಂದರೆ ಮೊದಲ ವಿಧಾನವೇ ಸರಿ ಎಂದಂತಾಯಿತು. ದೊಡ್ಡ ಮಟ್ಟದಲ್ಲಿ ವಿದ್ಯುದ್ವಿಭಜನೆ ಮಾಡುವ ಮೂಲಕ ಜಲಜನಕದ ತಯಾರಿ ಆಗಬೇಕಾಗಿದೆ.

ಜಲಜನಕ ಇಂಧನ ಕೋಶದಲ್ಲಿ ಒಂದು ಕ್ಯಾಟಲಿಸ್ಟ್ ಅಂದರೆ ರಾಸಾಯನಿಕ ಕ್ರಿಯೆಯ ವೇಗವರ್ಧಕ ಇದೆ. ಅದು ಸಾಮಾನ್ಯವಾಗಿ ಪ್ಲಾಟಿನಂನಿಂದ ಮಾಡಲ್ಪಟ್ಟಿರುತ್ತದೆ. ಇದು ಅತಿ ದುಬಾರಿ ಲೋಹ. ಸುಲಭದಲ್ಲಿ ದೊರೆಯುವುದಿಲ್ಲ. ಇದರ ಲಭ್ಯತೆಯೂ ಈ ಜಲಜನಕ ಇಂಧನ ಕೋಶದ ತಂತ್ರಜ್ಞಾನಕ್ಕೆ ಒಂದು ತೊಡಕಾಗಿದೆ. ಈ ಕ್ಯಾಟಲಿಸ್ಟ್‌ಗೆ ಪರ್ಯಾಯವನ್ನು ಆದಷ್ಟು ಬೇಗನೆ ಕಂಡುಹಿಡಿಯಬೇಕಾಗಿದೆ. ಆಗ ಈ ಜಲಜನಕ ಇಂಧನ ಚಾಲಿತ ವಾಹನಗಳು ಎಲ್ಲರಿಗೂ ಲಭ್ಯವಾಗಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಜಲಜನಕ ಚಾಲಿತ ವಾಹನಗಳು first appeared on Vishva Kannada.

]]>
http://vishvakannada.com/article/hydrogen-battery-vehicles/feed/ 0
ಹೈಪರ್‌ಲೂಪ್ http://vishvakannada.com/article/hyperloop/ http://vishvakannada.com/article/hyperloop/#respond Tue, 10 Dec 2024 14:32:13 +0000 https://gadgetloka.net/?p=868 ಭವಿಷ್ಯದ ಸಾರಿಗೆ ಆದಿಮಾನವನಿಗೆ ಸಾಗುವುದು ಒಂದು ಗುರಿಯಾಗಿತ್ತು. ಕಾಲ ಕಳೆದಂತೆ ವೇಗವಾಗಿ ಸಾಗುವುದು ಗುರಿಯಾಯಿತು. ಈಗಂತೂ ಎಲ್ಲವೂ ವೇಗವಾಗಿ ಆಗಬೇಕು. ವೇಗ ವೇಗ ಅತಿ ವೇಗ ಎಂಬುದೇ ಜೀವನದ ಮಂತ್ರವಾಗುತ್ತಿದೆ. ಮಾನವ ಒಂದಾನೊಂದು ಕಾಲದಲ್ಲಿ…

The post ಹೈಪರ್‌ಲೂಪ್ first appeared on Vishva Kannada.

]]>
ಭವಿಷ್ಯದ ಸಾರಿಗೆ

ಆದಿಮಾನವನಿಗೆ ಸಾಗುವುದು ಒಂದು ಗುರಿಯಾಗಿತ್ತು. ಕಾಲ ಕಳೆದಂತೆ ವೇಗವಾಗಿ ಸಾಗುವುದು ಗುರಿಯಾಯಿತು. ಈಗಂತೂ ಎಲ್ಲವೂ ವೇಗವಾಗಿ ಆಗಬೇಕು. ವೇಗ ವೇಗ ಅತಿ ವೇಗ ಎಂಬುದೇ ಜೀವನದ ಮಂತ್ರವಾಗುತ್ತಿದೆ. ಮಾನವ ಒಂದಾನೊಂದು ಕಾಲದಲ್ಲಿ ಎತ್ತಿನ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಿದ್ದ. ಒಂದೊಂದೇ ಸುಧಾರಣೆಗಳು ಆಗುತ್ತಿದ್ದಂತೆ ಸಾರಿಗೆಯಲ್ಲೂ ಸುಧಾರಣೆಗಳು ಆದವು. ಮಾನವನ ಶಕ್ತಿಯಿಂದ ಚಲಿಸುವ ಸೈಕಲು, ಯಂತ್ರಗಳಿಂದ ಸಾಗುವ ಕಾರು, ಬಸ್ಸು, ರೈಲು, ಹಡಗು, ವಿಮಾನ, ಇತ್ಯಾದಿಗಳು ಬಂದವು. ಇವುಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದುದು ವಿಮಾನ. ಇದು ಉಳಿದವುಗಳಿಂದ ತುಂಬ ಭಿನ್ನ. ಇದು ಗಾಳಿಯಲ್ಲಿ ಹಾರುತ್ತದೆ ಮಾತ್ರವಲ್ಲ ಇದು ಅತಿ ವೇಗವಾಗಿ ಸಾಗುತ್ತದೆ. ಮಂಗಳೂರಿನಿಂದ ಬೆಂಗಳೂರಿಗೆ ಕಾರು, ಬಸ್ಸು, ರೈಲುಗಳು ಸುಮಾರು 8 ಗಂಟೆಯಲ್ಲಿ ಸಾಗುತ್ತವೆ. ವಿಮಾನವಾದರೋ ಕೇವಲ 45 ನಿಮಿಷದಲ್ಲಿ ತಲುಪುತ್ತದೆ. ಜನಸಾರಿಗೆಯ ವಿಮಾನ ಸರಿಸುಮಾರು ಗಂಟೆಗೆ 1000 ಕಿ.ಮೀ. ವೇಗದಲ್ಲಿ ಸಾಗುತ್ತದೆ. ರೈಲುಗಳಲ್ಲೂ ಅತಿ ವೇಗವಾಗಿ ಸಾಗುವ ಬುಲ್ಲೆಟ್ ರೈಲುಗಳು ಕೆಲವು ದೇಶಗಳಲ್ಲಿ ಬಳಕೆಯಲ್ಲಿವೆ. ಇವು ಗಂಟೆಗೆ ಸುಮಾರು 300-350 ಕಿಮೀ. ವೇಗದಲ್ಲಿ ಚಲಿಸುತ್ತವೆ. ಈಗ ಇನ್ನೊಂದು ನಮೂನೆಯ ಸಾರಿಗೆಯ ಕಡೆಗೆ ಗಮನ ಹರಿಸೋಣ. ಅದುವೇ ಹೈಪರ್‌ಲೂಪ್.

ಮೊದಲು ಹೈಪರ್‌ಲೂಪ್ ಎಂದರೇನು ಎಂದು ತಿಳಿಯೋಣ. ಹೈಪರ್‌ಲೂಪ್ ಎಂದರೆ ಜನರನ್ನು ಮತ್ತು ಸರಕುಗಳನ್ನು ಅತಿವೇಗವಾಗಿ ಸಾಗಣೆ ಮಾಡಲು ಅನುವು ಮಾಡಿಕೊಡುವ ಒಂದು ಉದ್ದೇಶಿತ ಸಾರಿಗೆ ವ್ಯವಸ್ಥೆಯಾಗಿದೆ. ಇದು ಜಗತ್ತಿನ ಅತಿ ಶ್ರೀಮಂತ ಎಲೋನ್ ಮಸ್ಕ್ ಅವರ ಹಲವು ಯೋಜನೆ ಕನಸುಗಳಲ್ಲಿ ಒಂದಾಗಿದೆ. ಇದರ ಕಲ್ಪನೆಯ ಮೂಲ ನಿರ್ವಾತ ರೈಲಿನ ಕಲ್ಪನೆಯಲ್ಲಿದೆ. ಹೈಪರ್‌ಲೂಪ್‌ನಲ್ಲಿ ಒಂದು ಪೈಪ್‌ ಮೂಲಕ ಒಂದು ಮಾತ್ರೆಯಾಕಾರದ ಸಾರಿಗೆ ಕೊಠಡಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಈ ಕೊಠಡಿಗೆ ಅವರು ಪೋಡ್  ಎಂಬ ಹೆಸರಿಟ್ಟಿದ್ದಾರೆ. ಸ್ಲೀಪಿಂಗ್ ಪೋಡ್ ಅಂದರೆ ಮಲಗುವ ಚಿಕ್ಕ ಸ್ಥಳ ಎಂಬ ವ್ಯವಸ್ಥೆ ಹಲವು ಕಡೆ ಈಗಾಗಲೇ ಜಾರಿಯಲ್ಲಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮಲಗುವಷ್ಟೇ ಸ್ಥಳ ಇರುತ್ತದೆ. ಹೈಪರ್‌ಲೂಪ್‌ನಲ್ಲಿ ಬಳಸುವ ಪೋಡ್ ಕೂಡ ಅಂತೆಯೇ ಇರುತ್ತದೆ. ಆದರೆ ಅದರಲ್ಲಿ ಸುಮಾರು 24 ಜನ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಅದರ ಒಟ್ಟು ಆಕಾರ ಔಷಧಿಯ ಕ್ಯಾಪ್ಸೂಲ್ ಮಾದರಿಯಲ್ಲಿರುತ್ತದೆ. ಈ ಪೋಡ್ ಅನ್ನು ಒಂದು ಪೈಪ್‌ನ ಮೂಲಕ ಸಾಗಿಸಲಾಗುತ್ತದೆ. ಈ ಹೈಪರ್‌ಲೂಪ್‌ನ ವೇಗ ಸುಮಾರು ಗಂಟೆಗೆ ಸುಮಾರು 650 ರಿಂದ 750 ಕಿ.ಮೀ. ಇರುತ್ತದೆ. ಅಂದರೆ ಸಾಮಾನ್ಯ ಬುಲ್ಲೆಟ್ ರೈಲಿಗಿಂತಲೂ ಅಧಿಕ. ಕೆಲವು ಸಂದರ್ಭಗಳಲ್ಲಿ ವಿಮಾನಗಳೂ ಇದೇ ವೇಗದಲ್ಲಿ ಸಾಗುತ್ತವೆ. ಹೈಪರ್‌ಲೂಪ್ ಅಳವಡಿಸಿದರೆ ಬೆಂಗಳೂರಿನಿಂದ ಮುಂಬಯಿಗೆ 60 ರಿಂದ 75 ನಿಮಿಷಗಳಲ್ಲಿ ಪ್ರಯಾಣಿಸಬಹುದು.

ಹೈಪರ್‌ಲೂಪ್‌ನಲ್ಲಿ ಬಳಸುವ ಪೋಡ್ (ಚಿತ್ರ : RichMacf)

ಈ ಹೈಪರ್‌ಲೂಪ್ ಹೇಗೆ ಕೆಲಸ ಮಾಡುತ್ತದೆ? ಇದು ಅಯಸ್ಕಾಂತ ಶಕ್ತಿಯಿಂದ ಗಾಳಿಯಲ್ಲಿ ಸ್ವಲ್ಪ ಮೇಲೇರಿ ತೇಲಿ ಚಲಿಸುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ magnetic levitation ಎನ್ನುತ್ತಾರೆ. ಅಯಸ್ಕಾಂತದ ಸಜಾತೀಯ ಧ್ರುವಗಳು ಒಂದನ್ನೊಂದು ಪರಸ್ಪರ ವಿರುದ್ಧ ದಿಕ್ಕಿಗೆ ತಳ್ಳುತ್ತವೆ ಮತ್ತು ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ. ಈ ನಿಯಮವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಶಾಶ್ವತ ಅಯಸ್ಕಾಂತ ಮತ್ತು ವಿದ್ಯುತ್ಕಾಂತೀಯ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಪೋಡ್ ಅನ್ನು ಎತ್ತುವುದು ಮತ್ತು ಮುಂದಕ್ಕೆ ತಳ್ಳುವುದು ಅಥವಾ ಎಳೆಯುವುದನ್ನು ಕಾಂತೀಯ ಶಕ್ತಿಯ ಮೂಲಕ ಮಾಡಲಾಗುತ್ತದೆ. ಪೋಡ್ ಒಂದು ಪೈಪ್ ಮೂಲಕ ಸಾಗುತ್ತದೆ. ಈ ಪೈಪ್ ಅನ್ನು ಸ್ವಲ್ಪ ನಿರ್ವಾತ ಮಾಡಿ ಒಂದು ಬದಿಯಿಂದ ಗಾಳಿಯನ್ನು ಎಳೆಯುವ ಮೂಲಕವೂ ಚಲಿಸುವ ಪೋಡ್‌ಗೆ ಇನ್ನಷ್ಟು ವೇಗವನ್ನು ನೀಡಲಾಗುತ್ತದೆ.

ಹೈಪರ್‌ಲೂಪ್ (ಚಿತ್ರ : Neuhausengroup)

ಬೆಂಗಳೂರಿನಿಂದ ಮುಂಬಯಿಗೆ ಹೈಪರ್‌ಲೂಪ್ ಪೋಡ್ ಮೂಲಕ ಚಲಿಸಲು ಇಲ್ಲಿಂದ ಅಲ್ಲಿ ತನಕ ಪೈಪ್ ಹಾಕಬೇಕು. ಅದು ಸುರಕ್ಷಿತವಾಗಿರಬೇಕು. ಅದರಲ್ಲಿ ಬಿರುಕು ಇರಬಾರದು. ಪೋಡ್ ‌ಅನ್ನು ಹವಾನಿಯಂತ್ರಿತ ಮಾಡಬೇಕು. ಅದರಲ್ಲಿ ಕುಳಿತುಕೊಳ್ಳುವವರು ಅತಿವೇಗದ ಸಾರಿಗೆಗೆ ಹೊಂದಿಕೊಳ್ಳಬೇಕು. ಹೈಪರ್‌ಲೂಪ್ ವ್ಯವಸ್ಥೆಯನ್ನು ಸರಕು ಸಾಗಾಣಿಕೆಗೂ ಬಳಸಬಹುದು. ರೈಲುಹಳಿಗಳಲ್ಲಿ ಮಾಡಿದಂತೆ ಹಲವು ಪೈಪ್ ಸಾಲುಗಳು, ಕವಲುಗಳು ಎಲ್ಲ ಸಾಧ್ಯವಿವೆ. ಬೆಂಗಳೂರಿನಿಂದ ಮುಂಬಯಿಗೆ ಒಂದು, ಬೆಂಗಳೂರಿನಿಂದ ದೆಹಲಿಗೆ ಇನ್ನೊಂದು ಹೈಪರ್‌ಲೂಪ್ ಇದ್ದಲ್ಲಿ ಸುಮಾರು ಅರ್ಧ ದಾರಿಯವರೆಗೆ ಅವೆರಡೂ ಒಂದೇ ಆಗಿರುತ್ತವೆ. ಅರ್ಧ ದಾರಿಯಲ್ಲಿ ಹೈಪರ್‌ಲೂಪ್ ಎರಡಾಗಿ ಕವಲೊಡೆದು ಒಂದು ಮುಂಬಯಿಗೆ ಇನ್ನೊಂದು ದೆಹಲಿಗೆ ಹೋಗುತ್ತದೆ.

ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಅತಿ ದುಬಾರಿಯದು. ಇದನ್ನು ಕಾರ್ಯರೂಪಕ್ಕೆ ತರಲು ಬಿಲಿಯನ್‌ಗಟ್ಟಲೆ ಡಾಲರ್ ಹಣ ಬೇಕು. ಆದರೂ ಕೆಲವು ಕಂಪೆನಿಗಳು ಹೈಪರ್‌ಲೂಪ್ ಅನ್ನು ಕಾರ್ಯಗತ ಮಾಡಲು ಹುಟ್ಟಿಕೊಂಡಿವೆ. ಹಲವಾರು ಬಿಲಿಯನೈರ್‌ಗಳು ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸದ್ಯಕ್ಕೆ ಒಂದು ಹೈಪರ್‌ಲೂಪ್ ಕಂಪೆನಿ ಇದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದೆ. ಅದು 250 ಮೀ.ಗಳಷ್ಟು ದೂರವನ್ನು ಹೈಪರ್‌ಲೂಪ್ ಮೂಲಕ ಕ್ರಮಿಸಿ ತೋರಿಸಿದೆ. ಅದರಲ್ಲಿ ಬಳಸಿದ್ದು ಎರಡೇ ಜನರು ಹಿಡಿಸುವ ಚಿಕ್ಕ ಪೋಡ್. ಅದು ಗಂಟೆಗೆ ಸುಮಾರು 107 ಕಿ.ಮೀ. ವೇಗದಲ್ಲಿ ಸಾಗಿತ್ತು. ಹೈಪರ್‌ಲೂಪ್ ಸರಿಯಾಗಿ ಕಾರ್ಯನಿರ್ವಹಿಸಿ ಜನರು ಅದರಲ್ಲಿ ಓಡಾಡುವಂತಾಗಲು ಬಹುಶಃ ಇಸವಿ 2030 ಆಗಬಹುದು ಎಂಬುದು ಸದ್ಯದ ಅಂದಾಜು. ಭಾರತದಲ್ಲೂ ಕೆಲವು ನಗರಗಳ ನಡುವೆ ಇದನ್ನು ಕಾರ್ಯಗತ ಮಾಡಲು ಆಲೋಚನೆಗಳಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಹೈಪರ್‌ಲೂಪ್ first appeared on Vishva Kannada.

]]>
http://vishvakannada.com/article/hyperloop/feed/ 0