ೠ ಟೈಪಿಸುವುದು ಹೇಗೆ?

ಅಸತ್ಯಾನ್ವೇಶಿಯವರು ತಮ್ಮ ಬ್ಲಾಗಿನ ಕಮೆಂಟಿನಲ್ಲಿ ಒಂದು ಪ್ರಶ್ನೆ ಎಸೆದರು. “ೠ” ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ “ೠ” ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. “ೠ” ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0).

ಅದೆಲ್ಲ ಪುರಾಣ ಬೇಡ, “ೠ” ಅಕ್ಷರವನ್ನು ಕೀಲಿಮಣೆಯಲ್ಲಿ ಬೆರಳಚ್ಚಿಸುವುದು ಹೇಗೆ ಎಂದು ತಿಳಿಸಿ ಸಾಕು ಎನ್ನುತ್ತೀರಾ? ಸರಿ. ಮೊದಲನೆಯದಾಗಿ ಭಾಷಾ ಇಂಡಿಯ ತಾಣದಿಂದ Kannada Indic IME ಯನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಿ. ಈ ಕೀಲಿಮಣೆಯಲ್ಲಿ KGP Keyboard (Karnataka Govt Prescribed Keyboard) ಆಯ್ಕೆ ಮಾಡಿಕೊಳ್ಳಿ (ಇದು ಮೂಲತಃ ಕೆ. ಪಿ. ರಾವ್ ಅವರ ವಿನ್ಯಾಸ). ಈಗ “ೠ” ಪಡೆಯಲು ಈ ಕೀಲಿಗಳನ್ನು ಒತ್ತಿ -RX (Shift-r followed by Shift-x). ಈ “ೠ” ಅಕ್ಷರವನ್ನು ಕುಟ್ಟುವ ಬಗೆ ಕಲಿತ ನಂತರ ಏನು ಮಾಡುತ್ತೀರಾ? ಅದು ನಿಮಗೇ ಬಿಟ್ಟದ್ದು.

Leave a Reply