ವಿಶ್ವ ಮಾಹಿತಿನಗರ, ಬೆಂಗಳೂರು – ನವೆಂಬರ್ ೨೦೦೫

ವಿಶ್ವಮಾಹಿತಿನಗರ, ಬೆಂಗಳೂರು (WIC-B) ನವಂಬರ್ ೧೪ರಿಂದ ೧೯ರ ವರೆಗೂ ವಾರಪೂರ್ತಿ ಜರಗುವ ಸಮಾವೇಶ. ಈ ಸಮಾವೇಶವನ್ನು ಪರ್ಯಾಯ ಕಾನೂನು ವೇದಿಕೆ ಬೆಂಗಳೂರು, ನೆಟ್‌ಬೇಸ್ (ವಿಯನ್ನಾ), ವಾಗ್ ಸೋಸೈಟಿ (ಆಮ್ಸ್‌ಟರ್ ಡ್ಯಾಮ್) ಮತ್ತು ಸರಾಯ್- ಸಿ.ಎಸ್.ಡಿ.ಎಸ್. (ದೆಹಲಿ) ಯವರು ಜಂಟಿಯಾಗಿ ಮಾಹಿತಿ. org. (ಬೆಂಗಳೂರು) ರವರ ಸಹಯೋಗದೊಂದಿಗೆ ಪ್ರಾಯೋಜಿಸುತ್ತಿದ್ದಾರೆ. ಪ್ರದರ್ಶನ ಕಾರ್ಯಾಗಾರ ಮತ್ತು ಸಾರ್ವಜನಿಕ ಅಭಿಯಾನಗಳನ್ನೊಳಗೊಂಡ ಈ ಸಮಾವೇಶವು ವಿಶ್ವಮಾಹಿತಿ ನಗರಗಳ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದ ಮಾಹಿತಿ ಮತ್ತು ಮಾಧ್ಯಮ, ಮತ್ತು ಸಾಮಾಜಿಕ ವಿಶ್ವದೊಡನೆ ತಂತ್ರಜ್ಞಾನದ ಸಂಭಂದವನ್ನು ಧ್ಯೇಯವನ್ನಾಗಿಟ್ಟುಕೊಂಡಿದೆ. ಈ ಸಮಾವೇಶವು ಪ್ರಪಂಚದ ವಿವಿದ ಭಾಗಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವಿಶಯಗಳನ್ನು ಕುರಿತು ವಿಶ್ವದ ಪ್ರಚಲಿತ ಮಾಹಿತಿ ಸಂಸ್ಥೆಗಳ ಸಹಯೋಗದೊಂದಿಗೆ ನೆಟ್ ಬೇಸ್, ವಿಯನ್ನಾದರವು ಪ್ರಾರಂಭಿಸುವ ಸರಣಿಸಮಾವೇಶಗಳ ಒಂದು ಭಾಗವಾಗಿದೆ. ಈ ಹಿಂದಿನ ಸಮಾವೇಶಗಳು ವಿಯನ್ನಾ, ಆಮ್ಸ್‌ಟರ್ ಡ್ಯಾಮ್, ಬೆಲ್‌ಗ್ರೇಡ್ ಮತ್ತು ನೋವಿಸೋಫ್‌ಗಳಲ್ಲಿ ಜರುಗಿವೆ. ಈ ವ್ಯಾಪಕವಾದ ಕಾರ್ಯಕ್ರಮವನ್ನು ಯೂರೋಪಿನಿಂದಾಚೆಗೆ ಮೊಟ್ಟ ಮೊದಲ ಬಾರಿಗೆ ಬೆಂಗಳೂರುನಗರದಲ್ಲಿ ಆಯೋಜಿಸಲಾಗಿದೆ. ಹಲವಾರು ವರ್ಷಗಳಿಂದ ದಕ್ಷಿಣ ಏಷ್ಯಾದಲ್ಲಿ ಕಂಡುಬರುತ್ತಿರುವ ವೈವಿಧ್ಯ ಮಾಧ್ಯಮ ಸಂಸ್ಕೃತಿಗೆ ಪ್ರತಿಕ್ರಯಿಸುತ್ತಾ, ವಿಶ್ವಮಾಹಿತಿ. orgಯು, ಈ ಪ್ರದರ್ಶನ, ಸಮಾವೇಶ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಒಂದು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂತರ ಜಾಲದಲ್ಲಿನ ನೇರ ಪ್ರವಹಣೆಯು ಅಂತರ್ ರಾಷ್ಟ್ರೀಯ ಶ್ರೋತೃಗಳು ಕೂಡ ಸಮಾವೇಶದಲ್ಲಿ ಜರಗುವ ಕಲಾಪಗಳಲ್ಲಿ ಭಾಗಿಯಗಲು ಸಹಾಯಮಾಡುತ್ತದೆ. ಕಾರ್ಯಗಾರದಲ್ಲಿ ಪ್ರಖ್ಯಾತ ವಿದ್ವಾಂಸರುಗಳಾದ ಡೇವಿಡ್ ಲ್ಯಾನ್, (ಇತಿಹಾಸಕಾರ, ಕ್ವೀನ್ಸ್ ವಿಶ್ವವಿದ್ಯಾಲಯ,) ಫೆಲಿಕ್ಸ್ ಸ್ಟಾಲ್ಡ್‌ರ್, (ಕಲೆ ಮತ್ತು ಮಾದರಿ ಪ್ರೌಢ ವಿದ್ಯಾಶಾಲೆ, ವಿಯನ್ನಾ) ರವರು, ಆರುಂಧತಿ ರಾಯ್, (ಬರಹಗಾರರು,) ಮತ್ತು ಶಹೀದ್ ಅಮೀನ್, ಇತಿಹಾಸಕಾರರು ಇವರನ್ನೊಳಗೊಂಡತೆ ಇನ್ನಿತರ ಪ್ರತಿಭಾವಂತರು ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಭಾರತೀಯ ಮತ್ತು ಅಂತರ್ ರಾಷ್ಟ್ರೀಯ ಕಲಾವಿದರುಗಳಾದ ಶೀಲಾಗೌಡ, ಕ್ರಿಸ್ಟೋಫರ್ ಶೇಫರ್, ಮೆಕ್ರೊಲ್ಯಾಬ್ ಮತ್ತು ಇನ್ನಿತರರು ಈ ಒಂದು ಹೊಸ ಮಧ್ಯಮ ಮತ್ತು ಕಲಾ ಉತ್ಸವಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಈ ಸಮಾವೇಶವು ಮಾರ್ಗದರ್ಶಿಗಳನ್ನೊಳಗೊಂಡ ಯಾತ್ರೆ, ಮತ್ತು ಸಹಭಾಗೀಕಾರ್ಯಾಗಾರ ಸೌಲಭ್ಯಗಳನ್ನೊಳಗೊಂಡಿದೆ. ಕಾರ್ಯಾಗಾರ ಮತ್ತು ಪ್ರದರ್ಶನಗಳು ನವೆಂಬರ್ ೧೪ರಿಂದ ೧೯ರ ವರಗೆ ಜರುಗಲಿದೆ. ನವೆಂಬರ್ ೧೭ ಮತ್ತು ೧೮ ರಂದು ಸಮಾಲೋಚನೆ ನಡೆಯಲಿದೆ. ಮುಖ್ಯ ಸಮಾವೇಶಗಳ ಸ್ಥಳಗಳು: ಬಾಲ್ ಭವನ್ ಸಭಾಗೃಹ, ಕಬ್ಬನ್ ಪಾರ್ಕ್. ಸಿನೆಮಾ ಮತ್ತು ನಾಟಕ ಕೇಂದ್ರ, ೫ನೇ ಮಹಡಿ, ಸೋನಾ ಟವರ್‍ಸ್, ೭೧, ಮಿಲ್ಲರ್‍ಸ್ ರಸ್ತೆ. ಜಹಂಗೀರ್ ಕೋಥಾರಿ ಮೆಮೋರಿಯಲ್ ಹಾಲ್, ಕ್ವೀನ್ಸ್ ರಸ್ತೆ.

Leave a Reply