ಪಿ. ಶೇಷಾದ್ರಿಯವರ "ಬೇರು"

ನಿನ್ನೆ (ಜನವರಿ ೧, ೨೦೦೬) ಪಿ. ಶೇಷಾದ್ರಿಯವರ “ಬೇರು” ಚಲನಚಿತ್ರ ನೋಡಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ “ಚಿತ್ರ ತುಂಬ ಚೆನ್ನಾಗಿದೆ”. ಸರಕಾರಿ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಮಾಣಿಕ ಅಧಿಕಾರಿ ಹೇಗೆ ತಾನೂ ಎಲ್ಲರಂತಾಗುತ್ತಾನೆ ಎಂಬುದನ್ನು ಚಿತ್ರ ತುಂಬ ಚೆನ್ನಾಗಿ ಮೂಡಿಸಿದೆ. ಇಂತಹ ಚಿತ್ರ ಎಲ್ಲರಿಗೆ ನೋಡಲು ಚಿತ್ರ ಮಂದಿರಗಳಲ್ಲಿ ಸಿಗುವುದಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಇಂತಹ ಪರಿಸ್ಥಿತಿಗೆ ನಾವೆಲ್ಲರೂ ಕಾರಣ ಎಂಬುದನ್ನು ಚಿತ್ರದ ಕೊನೆಯಲ್ಲಿ ಸಂವಾದದಲ್ಲಿ ಭಾಗವಹಿಸಿದ ಶೇಷಾದ್ರಿಯವರು ಬಹಳ ಚೆನ್ನಾಗಿ ವಿವರಿಸಿದರು. “ತಬರನ ಕಥೆ” ಚಲನಚಿತ್ರ ಮತ್ತು “ನಮ್ಮೊಳಗೊಬ್ಬ ನಾಜೂಕಯ್ಯ” ನಾಟಕಗಳ ಪ್ರಭಾವ ಚಿತ್ರದಲ್ಲಿ ಗಾಢವಾಗಿದೆ. ಆದರೂ ಚಿತ್ರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. “ಬೇರು” ಎಂಬ ಶೀರ್ಷಿಕೆ ತುಂಬ ಸೂಕ್ತವಾಗಿದೆ. ನಮ್ಮ ಜನಜೀವನದಲ್ಲಿ ಬ್ರಷ್ಟಾಚಾರದ ಬೇರು ಎಷ್ಟು ಆಳವಾಗಿ ಇಳಿದಿದೆ, ಅದನ್ನು ಕಿತ್ತೆಸೆಯಲು ಯಾರಿಂದಲೂ ಅಸಾಧ್ಯ ಎಂಬುದನ್ನು ಇದು ಸಂಕೇತವಾಗಿ ಸೂಚಿಸುತ್ತದೆ. ಎಲ್ಲರೂ ನೋಡಲೇ ಬೇಕಾದ ಚಿತ್ರ. ಇದರ ಪ್ರದರ್ಶನವನ್ನು ಆಯೋಜಿಸಿದ “ಈಕವಿ” ಮತ್ತು ವಿಪ್ರೋ ಕನ್ನಡ ಬಳಗಕ್ಕೆ ಧನ್ಯವಾದಗಳು.

ಚಿತ್ರ ಪ್ರದರ್ಶನದ ನಂತರ ಪ್ರೇಕ್ಷಕರ ಜೊತೆ ಸಂವಾದದಲ್ಲಿ ನಿರ್ದೇಶಕ ಪಿ. ಶೇಷಾದ್ರಿ.

ಚಿತ್ರದ ಇನ್ನೊಂದು ಪ್ರದರ್ಶನ ಜನವರಿ ೮, ೨೦೦೬ರಂದು ಇದೆ. ಆಸಕ್ತರು ದೂರವಾಣಿ ಸಂಖ್ಯೆ 9880086300 ಮೂಲಕ ಅಥವಾ ಇ-ಮೈಲ್ (kts_gowda @ yahoo . com) ಮೂಲಕ ಸತೀಶ ಗೌಡರನ್ನು ಸಂಪರ್ಕಿಸಬಹುದು.

Leave a Reply