ದೆಹಲಿ ವಿಮಾನ ನಿಲ್ದಾಣದಲ್ಲಿ ಸೈಬರ್ ಕೆಫೆ ಇಲ್ಲ

ಈ ವಿಷಯದ ಬಗ್ಗೆ ಬರೆಯಬೇಕು ಎಂದು ಹಲವು ತಿಂಗಳುಗಳಿಂದ ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಈಗಷ್ಟೆ ನಾಗೇಶ ಹಗಡೆಯವರೊಡನೆ ಮಾತನಾಡುತ್ತ ಈ ವಿಷಯ ಪ್ರಸ್ತಾಪಿಸಿದೆ. ಅವರ ಸೂಚನೆಯಂತೆ ಇದನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸೈಬರ್ ಕೆಫೆ ಇಲ್ಲ. ಬೆಂಗಳೂರು ಬಸ್ ನಿಲ್ದಾಣದಲ್ಲಿ ಸೈಬರ್ ಕೆಫೆ ಇದೆ. ಬೆಂಗಳೂರು ದೇಶದ ಐ.ಟಿ. ರಾಜಧಾನಿ ಎಂದು ಹೆಸರು ಗಳಿಸಿಕೊಂಡಿರುವುದಕ್ಕೆ ಸಾರ್ಥಕ. ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಸೈಬರ್ ಕೆಫೆ ಇದೆ. ಮುಂಬಯಿಯಲ್ಲೂ ಇದೆ. ಆದರೆ ದೇಶದ ರಾಜಧಾನಿಯಲ್ಲೇ ಇಲ್ಲ! ದೆಹಲಿ ವಿಮಾನ ನಿಲ್ದಾಣದಲ್ಲಿ WiFi ಸಂಪರ್ಕ ಇದೆ. ಅಂದರೆ ನಿಮ್ಮಲ್ಲಿ WiFi ಸವಲತ್ತು ಇರುವಂತಹ ಲ್ಯಾಪ್‌ಟಾಪ್ ಇದ್ದರೆ ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಅಂತರಜಾಲವನ್ನು ವೀಕ್ಷಿಸಬಹುದು, ಈಮೈಲ್ ಓದಬಹುದು. ಲ್ಯಾಪ್‌ಟಾಪ್ ಇಲ್ಲವಾದಲ್ಲಿ ನಿಮಗೆ ಅಂತರಜಾಲ ವೀಕ್ಷಣೆ ಇಲ್ಲ.

Leave a Reply