ತಂಪಾಸನ !

ಚಿತ್ರವಿಚಿತ್ರ ಯುಎಸ್‌ಬಿ ಸಾಧನಗಳ ಬಗ್ಗೆ ಹಿಂದೊಮ್ಮೆ ಸುದೀರ್ಘವಾದ ಲೇಖನವನ್ನೇ ಬರೆದಿದ್ದೆ. ಈಗ ಅವುಗಳ ಸಾಲಿಗೆ ಒಂದೆರಡು ಹೊಸದು ಸೇರ್ಪಡೆಯಾಗಿವೆ. ಮೊದಲನೆಯದಾಗಿ ಹವಾನಿಯಂತ್ರಿತ ಅಂಗಿ ಅಥವಾ ಜಾಕೆಟ್. ನಿಮ್ಮ ಕಚೇರಿಯಲ್ಲಿ ಹವಾನಿಯಂತ್ರಣ ಇಲ್ಲವೇ? ಚಿಂತೆ ಮಾಡಬೇಡಿ. ಗಣಕ (ಕಂಪ್ಯೂಟರ್) ಅಂತೂ ಇದ್ದೇ ಇದೆ ತಾನೆ? ನಾಲ್ಕೈದು ವರ್ಷಗಳ ಈಚೆಗೆ ತಯಾರಾದ ಎಲ್ಲ ಗಣಕಗಳಲ್ಲಿ ಯುಎಸ್‌ಬಿ ಕಿಂಡಿ (ಪೋರ್ಟ್‌) ಇದ್ದೇ ಇದೆ. ಇನ್ನೇನಾಗಬೇಕು. ಈ ಜಾಕೆಟ್ ಕೊಂಡು ಯುಎಸ್‌ಬಿ ಕಿಂಡಿಗೆ ಲಗತ್ತಿಸಿ ತಂಪಾಗಿರಿ.

ಅಂಗಿಯೇನೋ ಸೊಂಟದ ಮೇಲ್ಭಾಗವನ್ನು ತಂಪಾಗಿಸುತ್ತದೆ. ಸೊಂಟದ ಕೆಳಗೆ, ಅಲ್ಲ ಪೀಠವನ್ನೇ ತಂಪಾಗಿಸಬೇಕಾದರೆ? ಅದಕ್ಕೂ ಬಂದಿದೆ. ಚಿತ್ರವಿಚಿತ್ರ ಗ್ಯಾಜೆಟ್‌ಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರಾದ ಜಪಾನೀಯರು ಪೀಠ ತಂಪು ಮಾಡುವ ಸಾಧನವನ್ನೂ ತಯಾರಿಸಿದ್ದಾರೆ. ಅದರ ಬಗ್ಗೆ ಇಲ್ಲಿ ಓದಬಹುದು. ಈ ಪುಟ ಜಪಾನಿ ಭಾಷೆಯಲ್ಲಿದೆ. ಅದರ ಸಾರಾಂಶ ಇಂಗ್ಲಿಶ್ ಭಾಷೆಯಲ್ಲಿ ಇಲ್ಲಿದೆ. ಇನ್ನು ಮುಂದೆ ಯಾರಾದರೂ ನನಗೆ ಮಂಡೆ (ಅಲ್ಲ, ….. ) ಬಿಸಿಯಾಗಿದೆ ಎಂದು ಹೇಳಿದರೆ ಏನು ಮಾಡಬೇಕು ಗೊತ್ತಾಯಿತಲ್ಲ!?

Leave a Reply